ಆಕೆಯ ಹೆಸರು ಹೆಲ್ಲೆ ಲಿಂಗ್. ಆಕೆ ಪ್ರಧಾನಿ ಮೋದಿವರಿಗೆ ಒಂದು ಪ್ರಶ್ನೆ ಕೇಳ್ತಾರೆ. ಮೋದಿ ಉತ್ತರ ಕೊಡಲ್ಲ. ಮತ್ತೆ ಲಿಫ್ಟ್ ಬಳಿ ಹೋಗ್ತಿದ್ಧಾಗ.. ಹಿಂಬಾಲಿಸಿ ಬಂದು ಇನ್ನೊಮ್ಮೆ ಪ್ರಶ್ನೆ ಕೇಳ್ತಾರೆ. ಮೋದಿ ಆಗಲೂ ಉತ್ತರ ಕೊಡೋದಿಲ್ಲ. ಮೋದಿಗೆ ಪತ್ರಕರ್ತರು ಅಂದ್ರೆ ಭಯಾನಾ..? ಆಕೆ ಕೇಳಿದ್ದು ಏನು..? ಹೀಗೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಲೇ ಇದೆ. ಇಷ್ಟಕ್ಕೂ ಈಕೆ ಯಾರು..? ಆಕೆಯ ಹಿನ್ನೆಲೆ ಏನು..? ಹುಡುಕಿದೆ ಇಂಟ್ರೆಸ್ಟಿಂಗ್ ಮಾಹಿತಿಗಳೇ ಹೊರಬಿದ್ದಿವೆ.
ಮೊದಲನೇ ಪ್ರಶ್ನೆ ಬಂದಿದ್ದು 12 ಒಪ್ಪಂದಗಳ ವಿವರವನ್ನು ಪತ್ರಕರ್ತರ ಎದುರು ಹೇಳಿ.. ಹೊರನಡೆಯುವಾಗ.. ಸ್ಥಳ : ಜಂಟಿ ಸುದ್ದಿಗೋಷ್ಟಿಯಲ್ಲಿ. ಹೆಲ್ಲೆ ಲಿಂಗ್, ಮೊದಲ ಪ್ರಶ್ನೆ ʻʻಪ್ರಧಾನಿ ಮೋದಿ, ಪ್ರಪಂಚದ ಅತ್ಯಂತ ಸ್ವತಂತ್ರ ಪತ್ರಿಕೋದ್ಯಮದಿಂದ ಪ್ರಶ್ನೆಗಳನ್ನೇಕೆ ತೆಗೆದುಕೊಳ್ಳುವುದಿಲ್ಲ..?ʼʼ ಎನ್ನುವುದು. ಹೆಲ್ಲೆ ವಿಂಗ್ ಅನ್ನೋ ಪತ್ರಕರ್ತೆಗೆ ಮೋದಿ ಉತ್ತರ ಕೊಡೋದಿಲ್ಲ. ಆಕ್ಚುವಲಿ.. ಮೋದಿ ಈ ಸ್ಥಳದಿಂದ ಆಚೆ ಹೋಗುವಾಗ ಕೇಳಿದ ಪ್ರಶ್ನೆ ಮೋದಿಗೆ ಕೇಳಿಸಿತ್ತೊ.. ಇಲ್ಲವೋ.. ಗೊತ್ತಿಲ್ಲ. ಆದರೆ ಹೆಲ್ಲೆ ವಿಂಗ್ ಬಿಡೋದಿಲ್ಲ. ಮತ್ತೆ ಲಿಫ್ಟ್ ಬಳಿ ಹೋಗ್ತಾರೆ. ಲಿಫ್ಟ್ ಹತ್ತುವಾಗ 2ನೇ ಪ್ರಶ್ನೆ ಬರುತ್ತೆ. ಮಿಸ್ಟರ್ ಮೋದಿ.. ನಾವು ನಿಮ್ಮನ್ನು ಏಕೆ ನಂಬಬೇಕು? ಎಂದು ಕೇಳ್ತಾರೆ. ಈ ಪ್ರಶ್ನೆ ಕೇಳುವಾಗ ಮೋದಿ ವಿಡಿಯೋದಲ್ಲಿ ಕಾಣುವುದೇ ಇಲ್ಲ. ಆದರೂ.. ಪ್ರಶ್ನೆಯನ್ನಂತೂ ಕೇಳ್ತಾರೆ.. ನಾರ್ವೆ ಸಚಿವಾಲಯದ ಸಿಬ್ಬಂದಿ ಆಕೆಯನ್ನು ಹೊರಗೆ ಕಳಿಸ್ತಾರೆ. ಇಷ್ಟಕ್ಕೇ ಹೆಲ್ಲೆ ವಿಂಗ್ ನಿಲ್ಲೋದಿಲ್ಲ. ಅದಾದ ನಂತರ ಭಾರತದ ವಿದೇಶಾಂಗ ಸಚಿವಾಲಯ ಸುದ್ದಿಗೋಷ್ಟಿ ಮಾಡುತ್ತೆ. ಅಲ್ಲಿ ಮತ್ತೊಮ್ಮೆ ಪ್ರಶ್ನೆ ರೈಸ್ ಮಾಡ್ತಾರೆ ಹೆಲ್ಲೆ ವಿಂಗ್. ಅಲ್ಲಿ ನಡೆಯೋದು ಇನ್ನೊಂದು ಡ್ರಾಮಾ. ಪ್ರಶ್ನೆ ಕೇಳ್ತಾರೆ. ಉತ್ತರ ಹೇಳ್ತಾ ಇರೋವಾಗ್ಲೇ ವಾಕ್ ಔಟ್ ಮಾಡ್ತಾರೆ.
ಇಷ್ಟೆಲ್ಲ ಆದ ಮೇಲೆ ಈ ಹೆಲ್ಲೆ ಲಿಂಗ್ ಯಾರು..?
ಈಕೆಯ ವಯಸ್ಸು : 28 ವರ್ಷ, ಪತ್ರಕರ್ತೆ. ಓಸ್ಲೋ ಮೂಲದ ‘ಡಾಗ್ಸ್‌ಅವಿಸೆನ್’ (Dagsavisen) ಪತ್ರಿಕೆಯಲ್ಲಿ ಕೆಲಸ ಮಾಡ್ತಾರೆ. ಈ ಪತ್ರಿಕೆಯ ಪ್ರಸಾರ ಸಂಖ್ಯೆ 10 ಸಾವಿರಕ್ಕಿಂತಲೂ ಕಡಿಮೆ. ಈಕೆ ಆರ್ಥಿಕತೆ, ಅಂತಾರಾಷ್ಟ್ರೀಯ ಸಂಬಂಧ ಬಗ್ಗೆ ಬರೆಯುತ್ತಾರೆ. ಡೊನಾಲ್ಡ್ ಟ್ರಂಪ್ ಅವರನ್ನು ಟೀಕೆ ಮಾಡ್ತಾರೆ. ಚೀನಾದ ಕ್ಸಿ ಜೆಂಪಿಂಗ್ ಅವರನ್ನು ಹೊಗಳುತ್ತಾರೆ. ಆಸ್ಟ್ರೇಲಿಯಾ, ಈಕ್ವೆಡಾರ್, ಮೆಕ್ಸಿಕೋ, ಸ್ಪೇನ್ನಲ್ಲಿ ಶಿಕ್ಷಣ ಪಡೆದಿದ್ದಾರೆ. “ಪೇ ಪರ್ ಸ್ಟೋರಿ”ನಲ್ಲಿ ಟಿಕ್ಟಾಕ್ ಪತ್ರಕರ್ತೆಯಾಗಿ ಕೆಲಸ ಮಾಡಿದ್ದಾರಂತೆ.
2024ರ ಏಪ್ರಿಲ್ 10ರ ನಂತರ ಮೋದಿಯದ್ದೇ ಟ್ವೀಟ್..!
ಈಕೆಯ ಎಕ್ಸ್ ಖಾತೆ ಈಕೆಯ ಹೆಸರಿನಲ್ಲೇ ಇದೆ. 2024ರ ಏಪ್ರಿಲ್ 10ರಂದು ಮಾಡಿದ್ದ ಒಂದೇ ಟ್ವೀಟ್ ಬಿಟ್ಟರೆ.. ಈಕೆ ಎಕ್ಸ್ ಖಾತೆಯಲ್ಲಿ ಮತ್ತೆ ಆಕ್ಟಿವ್ ಆಗಿದ್ದು ಮೋದಿಯ ವಿಷಯಕ್ಕೇ. ಮೋದಿಯವರಿಗೆ ಪ್ರಶ್ನೆ ಕೇಳೋಕೆ ತಯಾರಾಗಿದ್ದಾರೆ ಅನ್ನೋದು ಗೊತ್ತಾಗಿತ್ತು. ಅದಕ್ಕೆ ಮೊದಲು ಈಕೆ ಮಾಡ್ತಾ ಇದ್ದದ್ದು ಹೆಚ್ಚಿನ ಬಾರಿ ರೀ-ಟ್ವೀಟ್. ಅದಕ್ಕೂ ಕೂಡಾ ಒಂದು ಲೈಕ್ಸ್ ಕೂಡಾ ಇರ್ತಾ ಇರಲಿಲ್ಲ.
ಮೋದಿ ವಿರುದ್ಧ ಕಿಡಿಕಾರುವುದಕ್ಕೂ ಮುನ್ನ, ಕಾಂಟ್ರವರ್ಸಿಗೂ ಮುನ್ನ ಜಸ್ಟ್ ಕೇವಲ 800 ಜನರಷ್ಟೇ ಫಾಲೋ ಮಾಡ್ತಾ ಇದ್ರು. ಈಗ ಆ ಸಂಖ್ಯೆ 70 ಸಾವಿರದ ಆಸುಪಾಸು ಇದೆ. ಅದೂ ಕೇವಲ 24 ಗಂಟೆಗಳಲ್ಲಿ. ಹಾಗೆ ಟ್ವೀಟ್ ಮಾಡೋಕೂ ಮೊದಲು ಹಣ ಪಾವತಿ ಮಾಡಿ.. ಬ್ಲೂಟಿಕ್ ಪಡೆದುಕೊಂಡಿದ್ದಾರೆ. ಟ್ವೀಟ್ ಮಾಡಿದ ನಂತರ.. ಈಕೆಯ ವಿಡಿಯೋ, ಟ್ವೀಟ್ನ್ನ ಭಾರತದ ಹಲವು ಕಾಂಗ್ರೆಸ್ಸಿಗರು ರೀ-ಟ್ವೀಟ್ ಮಾಡಿದ್ದಾರೆ. ಹೆಲ್ಲೆ ಲಿಂಗ್ ಅವರು ಪ್ರೊಪಗಾಂಡ ಪತ್ರಕರ್ತೆನಾ..?
ಹೆಲ್ಲೆ ಲಿಂಗ್ ಫೇಸ್ ಬುಕ್, ಇನ್ಸ್ಟಾಗ್ರಾಂ ಅಕೌಂಟ್ ಬ್ಲಾಕ್ ಆಗಿದ್ಯಂತೆ. ಇದು ಮೆಟಾದವರು ತಗೊಂಡಿರೋ ಆಕ್ಷನ್ ಅಂತಿದ್ದಾರೆ ಹೆಲ್ಲೆ ಲಿಂಗ್. ಅಂದಹಾಗೆ ಅವರ ಅಕೌಂಟ್ ಫಾಲೋ ಮಾಡ್ತಿರೋದು ಕಾಂಗ್ರೆಸ್ ಪಕ್ಷ ಹಾಗೂ ಕೆಲವು ನಾಯಕರು ಮಾತ್ರ.
ಖ್ಯಾತ ಪತ್ರಕರ್ತೆಯೂ ಅಲ್ಲದ.. ಏನೇನೂ ಅಲ್ಲದ.. ಸೈಲೆಂಟ್ ಆಗಿದ್ದ ಒಬ್ಬ ಜರ್ನಲಿಸ್ಟ್.. ಇದ್ದಕ್ಕಿದ್ದಂತೆ ಪ್ರಶ್ನೆ ಕೇಳೋದು.. ಅದು ವೈರಲ್ ಆಗೋದು.. ನ್ಯಾಚುರಲ್ ಆಗಿ ಕಾಣಿಸ್ತಾ ಇಲ್ಲ. ಆ ಆದರೆ.. ಆದರೆ.. ಅದಕ್ಕೆಲ್ಲ ಹೆಲ್ಲೆ ಲಿಂಗ್ ಕೊಡೋ ಉತ್ತರ ʻʻನಾನು ಯಾವುದೇ ದೇಶದ ಗೂಢಚಾರಿಣಿ ಅಲ್ಲ. ಯಾವುದೇ ವಿದೇಶಿ ಸಂಸ್ಥೆ ನನಗೆ ಹಣ ನೀಡಿಲ್ಲ. ನನ್ನ ಕೆಲಸ ಜರ್ನಲಿಸಂ. ಜರ್ನಲಿಸಂ ಎಂದರೆ ಪ್ರಶ್ನೆ ಮಾಡೋದು. ನಾನು ಭಾರತದಲ್ಲಿ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಪ್ರಶ್ನೆ ಕೇಳಿದ್ದೆ. ಆದರೆ ಅವರು ಯೋಗ, ಕೋವಿಡ್ ಸರ್ವಿಸ್ ಬಗ್ಗೆ ಹೇಳಿದರು. ನನಗೆ ಉತ್ತರ ಸಿಗಲಿಲ್ಲʼʼ ಎನ್ನುವುದು. ಒಂದಂತೂ ಸತ್ಯ. ದಟ್ ವಾಸ್ ನಾಟ್ ನಾರ್ಮಲ್.



