ಸಿದ್ದರಾಮಯ್ಯ ನಿರ್ಗಮನದ ನಂತರ ಸಿಎಂ ಸ್ಥಾನಕ್ಕೆ ಏರುತ್ತಿರುವ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರಿಗೆ ತದ್ವಿರುದ್ಧ. ಸಿದ್ದರಾಮಯ್ಯ ಖಾದಿ ಪಂಚೆ, ಶರಟು, ಟವೆಲ್ಲು ಧರಿಸುತ್ತಿದ್ದವರು. ಅಫ್‌ಕೋರ್ಸ್ ಸಿದ್ದರಾಮಯ್ಯ ಧರಿಸುತ್ತಿದ್ದ ವಾಚು, ಕನ್ನಡಕ, ಚಪ್ಪಲಿ, ಕಾರು, ಮನೆಯಲ್ಲಿದ್ದ ಐಷಾರಾಮಿ ವಸ್ತುಗಳು ಎಲ್ಲವೂ ದುಬಾರಿಯೇ. ಆದರೆ ಡಿಕೆ ಶಿವಕುಮಾರ್ ಹಾಗಲ್ಲ. ಅವರು ಓಪನ್ ಆಗಿಯೇ ತಾನು ಲಕ್ಷುರಿ ಬ್ರಾಂಡ್ ಅಂಬಾಸಿಡರ್ ಎಂದು ತೋರಿಸಿಕೊಂಡವರು. ಟಾಪ್ ಟು ಬಾಟಮ್ ಎಲ್ಲವೂ ದುಬಾರಿಯೇ. ದೇಶದ ಶ್ರೀಮಂತ ಶಾಸಕರಲ್ಲಿ ಒಬ್ಬರಾಗಿದ್ದು ಡಿಕೆ ಶಿವಕುಮಾರ್, ಬುಧವಾರದ ನಂತರ ದೇಶದ ಶ್ರೀಮಂತ ಸಿಎಂ ಆಗಲಿದ್ಧಾರೆ.
Gucci (ಗುಚ್ಚಿ), Louis Vuitton (ಲೂಯಿ ವುಯಿಟ್ಟನ್), Ferragamo (ಫೆರಾಗಮೋ), Burberry (ಬರ್ಬೆರಿ), Fendi (ಫೆಂಡಿ). .. ಹೀಗೆ ಧರಿಸುವ ಪ್ರತಿಯೊಂದೂ ಬ್ರಾಂಡೆಡ್. ಈ ಬ್ರಾಂಡೆಡ್ ವಸ್ತುಗಳನ್ನು ಜನಸಾಮಾನ್ಯರು ಬಳಸೋದಿಲ್ಲ.
Gucci (ಗುಚ್ಚಿ) ಬ್ರಾಂಡ್
ಶಿವಕುಮಾರ್ ಶಾಲು ಅಥವಾ ಸ್ಕಾರ್ಫ್ : ಮೊದಲಿನಿಂದ ಹೀಗಿರಲಿಲ್ಲ. ವಿಶೇಷವಾಗಿ ಕಳೆದ ಕೆಲವು ವರ್ಷಗಳಿಂದ ಡಿಕೆ ಶಿವಕುಮಾರ್ ಅವರ ಸಿಗ್ನೇಚರ್ ಸ್ಟೈಲ್ ಆಗಿರುವುದು ಅವರು ಕುತ್ತಿಗೆಗೆ ಸುತ್ತಿಕೊಳ್ಳುವ ಸ್ಕಾರ್ಫ್. ಸ್ಕಾರ್ಫ್ ಬೆಲೆ 25 ಸಾವಿರದಿಂದ ಹಿಡಿದು 80 ಸಾವಿರ ರೂ.ವರೆಗೆ ಇರುತ್ತದೆ.
ಕೂಲಿಂಗ್ ಗ್ಲಾಸ್ (Sunglasses): ಕನಿಷ್ಠ 35,000 – 50,000 ರೂ. ($500–650); ಗರಿಷ್ಠ ₹70,000+ ರೂ.ಗಳವರೆಗೆ ಇರುತ್ತದೆ.
ಶೂಸ್ : ಕನಿಷ್ಠ 60,000–80,000 ರೂ.ಗಳು ($900–1,100+), ಗರಿಷ್ಠ 1,50,000+ ಒಂದೂವರೆ ಲಕ್ಷಕ್ಕೂ ಹೆಚ್ಚು
ವಾಚ್ : ಕನಿಷ್ಠ 1,00,000+, ಗರಿಷ್ಠ high-end ಮಾಡೆಲ್‌ಗಳು ಕೋಟಿಗಟ್ಟಲೆ ದಾಟಬಹುದು. ಇಷ್ಟೇ ಎಂದು ಹೇಳೋಕೆ ಆಗಲ್ಲ.
Louis Vuitton (ಲೂಯಿ ವುಯಿಟ್ಟನ್)
ಬಟ್ಟೆಗಳು: ಕನಿಷ್ಠ ₹1,50,000+ ($2,000+); ಗರಿಷ್ಠ ₹4,00,000+
ಸ್ಕಾರ್ಫ್: ಕನಿಷ್ಠ ₹50,000–80,000 ($630–1,080); ಗರಿಷ್ಠ ₹1,00,000+
ಕೂಲಿಂಗ್ ಗ್ಲಾಸ್: ಕನಿಷ್ಠ ₹40,000–60,000 ($450–720); ಗರಿಷ್ಠ ₹80,000+
ಶೂಸ್: ಕನಿಷ್ಠ ₹1,00,000–1,50,000 ($1,400+); ಗರಿಷ್ಠ ₹3,00,000+
ವಾಚ್: ಕನಿಷ್ಠ ₹5,00,000+; ಗರಿಷ್ಠ ಕೋಟಿಗಳು (luxury complications)
Ferragamo (ಫೆರಾಗಮೋ)
ಬಟ್ಟೆಗಳು: ಕನಿಷ್ಠ ₹40,000–80,000; ಗರಿಷ್ಠ ₹2,00,000+
ಸ್ಕಾರ್ಫ್ / ಆಕ್ಸೆಸರೀಸ್: ಕನಿಷ್ಠ ₹25,000+
ಕೂಲಿಂಗ್ ಗ್ಲಾಸ್: ಕನಿಷ್ಠ ₹25,000–50,000
ಶೂಸ್ (ಇದಕ್ಕೆ ಅತ್ಯಂತ ಪ್ರಸಿದ್ಧ): ಕನಿಷ್ಠ ₹50,000–80,000 ($700–995); ಗರಿಷ್ಠ ₹1,50,000+
ವಾಚ್: ಕನಿಷ್ಠ ₹50,000–1,00,000+
ಇದು ಸಿಂಪಲ್ ಲೆಕ್ಕ ಅಷ್ಟೇ. Gucci, Louis Vuitton, Burberry, Fendi ಮತ್ತು Ferragamo ಬ್ರ್ಯಾಂಡ್‌ಗಳ ಸ್ಕಾರ್ಫ್ ಹಾಗೂ ಸ್ಟೋಲ್‌ಗಳನ್ನು ಬಳಸುತ್ತಾರೆ. ಇವುಗಳ ಬೆಲೆ ಸಾವಿರಾರು ರೂಪಾಯಿಗಳಿಂದ ಲಕ್ಷಗಳವರೆಗೆ ಇರುತ್ತದೆ. : ಇವರ ವಾಚ್ ಕಲೆಕ್ಷನ್‌ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ Rolex Cosmograph Daytona, Cartier Santos, ಮತ್ತು Hublot ನಂತಹ ವಿಶ್ವದ ಟಾಪ್ ಬ್ರ್ಯಾಂಡ್‌ಗಳ ಗಡಿಯಾರಗಳಿವೆ. : ಇವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ Louis Vuitton ನಂತಹ ದುಬಾರಿ ಡಿಸೈನರ್ ಸನ್‌ಗ್ಲಾಸ್‌ಗಳು ಮತ್ತು ಕಲೆಕ್ಟಬಲ್ ಹೈ-ಎಂಡ್ ಪೆನ್ನುಗಳನ್ನು ಬಳಸುವುದನ್ನು ಕಾಣಬಹುದು.
ಒಂದೇ ಒಂದು ಹಳೆಯ ಕಾರು: ಇಷ್ಟೊಂದು ಕೋಟಿ ಆಸ್ತಿ ಇದ್ದರೂ, ಅವರ ಹೆಸರಿನಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವುದು ಕೇವಲ ಒಂದು ಹಳೆಯ 2002 ರ ಮಾಡೆಲ್ ಟೊಯೋಟಾ ಕ್ವಾಲಿಸ್ (Toyota Qualis) ಕಾರು ಮಾತ್ರ. “ನನ್ನಿಷ್ಟದ ವಾಚ್ ಅಥವಾ ಬಟ್ಟೆ ಧರಿಸುವ ಹಕ್ಕು ನನಗಿದೆ” ಎನ್ನುವ ಡಿಕೆ ಸರಳತೆಯೇ ಜೀವನ ಎನ್ನುವವರಲ್ಲ. ಅಂದಹಾಗೆ ಬುಧವಾರದ ನಂತರ ದೇಶದ ಅತಿ ಶ್ರೀಮಂತ ಸಿಎಂ ಎಂಬ ಬ್ರಾಂಡ್ ಡಿಕೆ ಪಾಲಾಗಲಿದೆ. ಏಕೆಂದರೆ ಡಿಕೆ ಶಿವಕುಮಾರ್ ಆಸ್ತಿ 2023 ರ ಚುನಾವಣಾ ಅಫಿಡವಿಟ್ ಪ್ರಕಾರ, ಡಿ.ಕೆ. ಶಿವಕುಮಾರ್ ಮತ್ತು ಅವರ ಕುಟುಂಬದ ಒಟ್ಟು ಘೋಷಿತ ಆಸ್ತಿ ₹1,413 ಕೋಟಿಗಿಂತಲೂ ಹೆಚ್ಚಿದೆ.



