ವಿಧಾನಸಬೆಯಲ್ಲಿ ವಿರೊಧಿಗಳಾಗಿರೋ ವಿಜಯ್ ಹಾಗು ಉದಯನಿಧಿ ಸ್ಟಾಲಿನ್ ಒಂದೇ ಕಾಲೇಜಿನಲ್ಲಿ ಓದಿದ್ದ ಹಳೇ ಸ್ನೇಹಿತರು. ರಾಜಕೀಯ ಅಂದ ಮೇಲೆ ಸ್ನೇಹಿತರು ಶತ್ರುಗಳಾಗ್ತಾರೆ. ಬದ್ಧ ಶತ್ರುಗಳು ಸ್ನೇಹಿತರೂ ಆಗುತ್ತಾರೆ. ವಿಜಯ್ ಮುಖ್ಯಮಂತ್ರಿ ಆಗಿದ್ದೇ ತಡ. ಈಗ ದ್ರಾವಿಡರ ನಾಡಿನಾಧ್ಯಂತ ದಳಪತಿ ಸ್ನೇಹ ಮತ್ತು ವೈರತ್ವದ ಕತೆಯೊಂದು ದೊಡ್ಡ ಚರ್ಚೆ ಹುಟ್ಟುಹಾಕಿದೆ. ಕರುಣಾನಿಧಿ ಮೊಮ್ಮಗ, MK ಸ್ಟಾಲಿನ್ ಮಗ ಉದಯನಿಧಿ ಸ್ಟಾಲಿನ್ ಹಿಂದಿನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಆಗಿದ್ದವರು. ಈಗ ವಿಜಯ್ ಎದುರು ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿದ್ದಾರೆ. ವಿಶೇಷ ಎಂದರೆ ಉದಯನಿಧಿ ಸ್ಟಾಲಿನ್ ಪ್ರೊಡಕ್ಷನ್ ಹೌಸ್‌ನಲ್ಲಿ ನಿರ್ಮಾಣವಾದ ಮೊದಲ ಸಿನಿಮಾಗೆ ವಿಜಯ್ ಹೀರೋ. ತ್ರಿಷಾ ಹೀರೋಯಿನ್.
ಇಬ್ಬರೂ ಚೆನ್ನೈನ ಲೋಯೋಲಾ ಕಾಲೇಜ್ನಲ್ಲಿ ಒಟ್ಟಿಗೆ ಓದಿದ್ದರು. ವಿಜಯ್ ಸುಲಭವಾಗಿ ಗೆಳೆಯರನ್ನು ಮಾಡಿಕೊಳ್ಳುವುದಿಲ್ಲ ಎಂದು ಉದಯನಿಧಿ ಹೇಳಿದ್ದಾರೆ. ಆದರೆ ವಿಜಯ್‌ನೊಂದಿಗೆ ಅವರು ತುಂಬಾ ಆತ್ಮೀಯರಾಗಿದ್ದರು. ಕಾಲೇಜಿನಲ್ಲಿ ವಿಜಯ್ ಸೀನಿಯರ್. ಆದರೆ ರಾಜಕೀಯದಲ್ಲಿ ಉದಯನಿಧಿ ಸೀನಿಯರ್. ʻʻ ಇವತ್ತು ಮುಖ್ಯಮಂತ್ರಿ ಆಗಿರುವವರು ಹಾಗೂ ವಿರೋಧ ಪಕ್ಷದಲ್ಲಿ ಕೂತಿರುವ ನಾನು ಒಂದೇ ಕಾಲೇಜಿನ ಹಳೆಯ ವಿದ್ಯಾರ್ಥಿಗಳು” ಆದರೆ ಸರ್ಕಾರ ನಡೆಸುವುದರಲ್ಲಿ ಡಿಎಂಕೆ ಸೀನಿಯರ್ ಬ್ಯಾಚ್ ಎನ್ನುವುದು ನಿಮಗೆಲ್ಲಾ ಗೊತ್ತಿದೆ.. 1965ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಿತ್ತು. ಹಾಗಾಗಿ ನಾವೇ ಸೀನಿಯರ್ಸ್.. ಆ ಲೆಕ್ಕದಲ್ಲಿ ನಮ್ಮ ಜ್ಞಾನ ಹಾಗೂ ಅನುಭವ ಹಂಚಿಕೊಳ್ಳಲು ಸಿದ್ಧರಿದ್ದೇವೆ. ಅದನ್ನು ಸ್ವೀಕರಿಸಲು ನೀವು ಸಿದ್ಧವಾಗಿರಿʼʼ ಎಂದಾಗ ವಿಜಯ್ ನಕ್ಕು ಕೈ ಮುಗಿದಿದ್ರು.
ಉದಯನಿಧಿ ಸ್ಟಾಲಿನ್ ಕೂಡಾ ಸಿನಿಮಾ ಹಿನ್ನೆಲೆಯವರೇ. ತಮಿಳಿನಲ್ಲಿ ಹಲವು ಸಿನಿಮಾಗಳಲ್ಲಿ ಹೀರೋ ಆಗಿದ್ದ ಉದಯನಿಧಿ, ಇತ್ತೀಚೆಗೆ ಆಕ್ಟಿಂಗ್ ಬಿಟ್ಟಿದ್ದಾರೆ. ಆದರೆ ಸಿನಿಮಾ ನಿರ್ಮಾಣದಲ್ಲಿ ಆಕ್ಟಿವ್ ಆಗಿದ್ಧಾರೆ. 18 ವರ್ಷಗಳ ಹಿಂದೆ ರೆಡ್ ಜೈಂಟ್ಸ್ ಪ್ರೊಡಕ್ಷನ್ಸ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಉದಯನಿಧಿ ಸ್ಟಾಲಿನ್ ಹುಟ್ಟುಹಾಕಿದ್ರು. ಆ ಸಂಸ್ಥೆಯ ಮೊದಲ ಸಿನಿಮಾ ಕುರುವಿ. ಈ ಚಿತ್ರದಲ್ಲಿ ಹೀರೋ ದಳಪತಿ ವಿಜಯ್ ನಾಯಕಿ ತ್ರಿಷಾ..
ಕುರುವಿ ಚಿತ್ರ ಬಿಡುಗಡೆಯ ನಂತರ ಕೆಲವು ಜನರು ಅವರ ನಡುವೆ ತಪ್ಪು ತಿಳುವಳಿಕೆ ಮೂಡಿಸಿದ್ದರಂತೆ. ಇದರಿಂದ ಗೆಳೆತನದಲ್ಲಿ ಸ್ವಲ್ಪ ಬಿರುಕು ಬಿತ್ತು ಎಂದು ಉದಯನಿಧಿ ಹೇಳಿದ್ದಾರೆ. ಇನ್ನು ನಟಿ ತ್ರಿಷಾ ಅವರೊಂದಿಗೆ ಉದಯನಿಧಿ ಸ್ಟಾಲಿನ್ ರೊಮ್ಯಾನ್ಸ್ ಗಾಸಿಪ್ ಕೂಡ ಇತ್ತು. ಕರುಣಾನಿಧಿ ಒಪ್ಪಿಕೊಂಡಿದ್ದರೆ ತ್ರಿಷಾ-ಉದಯ್ ಮದುವೆಯಾಗುತ್ತಿದ್ದರು ಎಂದು ಸಿಂಗರ್ ಸುಚಿತ್ರಾ ಹೇಳಿದ್ದರು.
ತ್ರಿಷಾ ಉದಯನಿಧಿ ಸ್ಟಾಲಿನ್ ಮೇಲೆ ಪ್ರೀತಿ ಇಟ್ಟಿದ್ದಳು. ಅವರು ಸ್ಟಾಲಿನ್ ಕುಟುಂಬದ ಮರು-ಮಗಳಾಗಬೇಕಿತ್ತು ಅಂದರೆ ಸೊಸೆಯಾಗಬೇಕಿತ್ತು. ಇದು ಅಮಿತಾಬ್-ರೇಖಾ ರೀತಿಯ ಸಂಬಂಧ” ಎಂದು ಹೇಳಿದ್ದರು ಸುಚಿತ್ರಾ. ಹೀಗಾಗಿ ಉದಯನಿಧಿ ಸ್ಟಾಲಿನ್ ಅವರ ಈ ಮಾತು ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.



