Saturday, June 20, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಕೇರಳದ ಈ ಕಾಲೇಜ್‌ನಲ್ಲಿ ಲಿಪ್‌ ಸ್ಟಿಕ್‌, ಕಾಜಲ್‌ ಕಾಸ್ಮೆಟಿಕ್ಸ್‌ ಹಾಕುವಂತಿಲ್ಲ : ಏನಿದು..? ಯಾಕೆ..?

SpeciallU by SpeciallU
June 20, 2026
in News
Reading Time: 1 min read
0 0
0
ಕೇರಳದ ಈ ಕಾಲೇಜ್‌ನಲ್ಲಿ ಲಿಪ್‌ ಸ್ಟಿಕ್‌, ಕಾಜಲ್‌ ಕಾಸ್ಮೆಟಿಕ್ಸ್‌ ಹಾಕುವಂತಿಲ್ಲ : ಏನಿದು..? ಯಾಕೆ..?

ಶಾಲೆ ಕಾಲೇಜಿಗೆ ಹೋಗುವ ಮಕ್ಕಳು ಅದರಲ್ಲಿಯೂ ವಿಶೇಷವಾಗಿ ಹೆಣ್ಣು ಮಕ್ಕಳು ಸೌಂದರ್ಯವರ್ಧಕ ಬಳಸುವುದು ಸಹಜ ಸಾಮಾನ್ಯ. ಲಿಪ್‌ ಸ್ಟಿಕ್‌, ಕಾಜಲ್‌, ಮಸ್ಕರಾ ಸೇರಿದಂತೆ ವಿವಿದ ಕ್ರೀಂಗಳನ್ನು ಬಳಸೋದು ಕಾಮನ್‌ ಆಗಿ ಹೋಗಿದೆ. ಆದರೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕಾಸ್ಮೆಟಿಕ್ಸ್‌ ಧರಿಸುವಂತಿಲ್ಲ. ಹಾಕುವಂತಿಲ್ಲ.. ವಿಶೇಷವಾಗಿ ಲಿಪ್ ಸ್ಟಿಕ್‌ ಧರಿಸುವಂತೆಯೇ ಇಲ್ಲ ಎಂದು ಕೇರಳದ ಕೊಲ್ಲಂ ಕಾಲೇಜ್‌ ಆದೇಶವನ್ನೇ ಜಾರಿಗೆ ತಂದಿದೆ. ಇಂಥಾದ್ದೊಂದು ಆದೇಶ ಬಂದಿರುವುದು ಕೇರಳದಲ್ಲಿ. ಅದರಲ್ಲೂ ಕೊಲ್ಲಂನಲ್ಲಿ. ಕಾರಣ ಏನು..?

ಕೇರಳದ ಕೊಲ್ಲಂ ಜಿಲ್ಲೆಯ ಮಯ್ಯನಾಡ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಲ್ಲಿನ ಬಾಲ ಕಲ್ಯಾಣ ಸಮಿತಿ (CWC) ಕಾಸ್ಮೆಟಿಕ್ಸ್ ಮುಕ್ತ ಕ್ಯಾಂಪಸ್ (Cosmetic-Free Campus) ಅಥವಾ ಲಿಪ್‌ಸ್ಟಿಕ್ ಮುಕ್ತ ಕ್ಯಾಂಪಸ್ ಆರಂಭಿಸಿದೆ. ಶಾಲಾ-ಕಾಲೇಜುಗಳ ಆವರಣದಲ್ಲಿ ವಿದ್ಯಾರ್ಥಿಗಳು ಲಿಪ್‌ಸ್ಟಿಕ್, ಕಾಜಲ್, ಮಸ್ಕಾರಾ ಸೇರಿದಂತೆ ಇತರೆ ಸೌಂದರ್ಯವರ್ಧಕ ಉತ್ಪನ್ನಗಳನ್ನು (Cosmetics) ನಿಷೇಧಿಸುವ ಮತ್ತು ಅದರ ವಿರುದ್ಧ ಜಾಗೃತಿ ಮೂಡಿಸುವ ಒಂದು ಮಹತ್ವದ ಅಭಿಯಾನ ಇದು. ಈ ಅಭಿಯಾನದ ಅಡಿಯಲ್ಲಿ ಶಾಲೆಗಳಲ್ಲಿ ಆರೋಗ್ಯ ತಜ್ಞರ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸೌಂದರ್ಯವರ್ಧಕಗಳ ದುಷ್ಪರಿಣಾಮಗಳ ಬಗ್ಗೆ ವಿಶೇಷ ತರಗತಿ ಹಾಗೂ ಜಾಗೃತಿ ಮೂಡಿಸಲಾಗುತ್ತದೆ. ಸಂಪೂರ್ಣವಾಗಿ ಜಾಗೃತಿ ಮೂಡಿಸಿದ ಶಾಲೆಗಳನ್ನು “ಕಾಸ್ಮೆಟಿಕ್ಸ್ ಮುಕ್ತ ಕ್ಯಾಂಪಸ್” ಎಂದು ಘೋಷಿಸಿ, ಅಲ್ಲಿ ಸೌಂದರ್ಯವರ್ಧಕಗಳ ಬಳಕೆಗೆ ‘ನೋ ಎಂಟ್ರಿ’ (ನಿಷೇಧ) ಬೋರ್ಡ್‌ಗಳನ್ನು ಹಾಕಲಾಗುತ್ತದೆ.

Related posts

ರಸ್ತೆಯನ್ನೂ ಖಾತೆ ಮಾಡಿಸಿಕೊಂಡರಾ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌..?

ಅಯೋಧ್ಯೆ ರಾಮನ ಹುಂಡಿ ಕಳ್ಳರು : ರಾಮರಾಜ್ಯದಲ್ಲಿ ಆಗಿದ್ದರೆ ಶಿಕ್ಷೆ ಏನಿರುತ್ತಿತ್ತು..?

ವಿದ್ಯಾರ್ಥಿಗಳಿಗೆ ಯಾಕೆ ಬೇಡ..?

ಆರೋಗ್ಯದ ಮೇಲಿನ ಗಂಭೀರ ಪರಿಣಾಮ : ಮಾರುಕಟ್ಟೆಯಲ್ಲಿ ಸಿಗುವ ಅಗ್ಗದ ಬೆಲೆಯ (ಉದಾಹರಣೆಗೆ ₹20-₹30 ರ) ಸೌಂದರ್ಯವರ್ಧಕಗಳಲ್ಲಿ ಮರ್ಕ್ಯುರಿ (ಪಾದರಸ), ಕ್ಯಾಡ್ಮಿಯಮ್ ಮತ್ತು ಸೀಸ (Lead) ನಂತಹ ಅಪಾಯಕಾರಿ ರಾಸಾಯನಿಕ ಹಾಗೂ ಭಾರಿ ಲೋಹಗಳನ್ನು ಬಳಸಲಾಗುತ್ತದೆ. ಇವು ಮಕ್ಕಳ ಆರೋಗ್ಯಕ್ಕೆ ತೀವ್ರ ಹಾನಿಕಾರಕ.

ಮಕ್ಕಳ ಸೂಕ್ಷ್ಮ ಚರ್ಮ : ವಯಸ್ಕರಿಗೆ ಹೋಲಿಸಿದರೆ ಮಕ್ಕಳ ಚರ್ಮವು ತುಂಬಾ ತೆಳುವಾಗಿರುತ್ತದೆ. ಇದರಿಂದಾಗಿ ಈ ರಾಸಾಯನಿಕಗಳು ಚರ್ಮದ ಮೂಲಕ ದೇಹದೊಳಗೆ ಬೇಗನೆ ಹೀರಲ್ಪಡುತ್ತವೆ. ಇವು ಹಾರ್ಮೋನ್ ಅಸಮತೋಲನ, ಅಲರ್ಜಿ ಮತ್ತು ದೀರ್ಘಾವಧಿಯಲ್ಲಿ ಕ್ಯಾನ್ಸರ್ (ವಿಶೇಷವಾಗಿ ಕರುಳಿನ ಕ್ಯಾನ್ಸರ್) ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗುವ ಅಪಾಯ.

ಸಾಮಾಜಿಕ ಜಾಲತಾಣಗಳ ಪ್ರಭಾವ (Reels Culture) : ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಶಾರ್ಟ್ಸ್ ವಿಡಿಯೋಗಳ ಪ್ರಭಾವದಿಂದಾಗಿ, ವಿದ್ಯಾರ್ಥಿಗಳು ಸಣ್ಣ ವಿರಾಮ ಸಿಕ್ಕರೂ ಲಿಪ್‌ಸ್ಟಿಕ್ ತೆಗೆದು ಮೇಕಪ್ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ.

ನೈಸರ್ಗಿಕ ಸೌಂದರ್ಯದ ಮಹತ್ವ : ಪ್ರತಿಯೊಬ್ಬ ಮನುಷ್ಯನೂ ಹುಟ್ಟಿನಿಂದಲೇ ಸುಂದರವಾಗಿದ್ದು, ಬಾಹ್ಯ ಸೌಂದರ್ಯವರ್ಧಕಗಳ ಅಗತ್ಯವಿಲ್ಲ ಎಂದು ಜಾಗೃತಿ ಮೂಡಿಸುವುದು ಉದ್ದೇಶ.

ಇದು ಮಾರಲ್‌ ಪೊಲೀಸಿಂಗ್‌/ನೈತಿಕ ಪೊಲೀಸ್‌ಗಿರಿಯೇ..?

ಈ ನಿರ್ಧಾರವು ಆರಂಭದಲ್ಲಿ ಸಾರ್ವಜನಿಕವಾಗಿ ಮತ್ತು ವಿದ್ಯಾರ್ಥಿಗಳಲ್ಲಿ ಸಾಕಷ್ಟು ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿತ್ತು. ಕೆಲವು ವಲಯಗಳಲ್ಲಿ ಇದನ್ನು ಅಧಿಕಾರಿಗಳ ಮತ್ತು ಶಾಲೆಗಳ “ಮೋರಲ್ ಪೋಲಿಸಿಂಗ್” (ನೈತಿಕ ಪೋಲಿಸಿಂಗ್ / ಸ್ವಾತಂತ್ರ್ಯ ಹರಣ) ಎಂದು ಟೀಕಿಸಲಾಯಿತು. ಹದಿಹರೆಯದ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಅಲಂಕಾರ ಮತ್ತು ಸೌಂದರ್ಯದ ಹಕ್ಕನ್ನು ಶಾಲೆಗಳು ಕಿತ್ತುಕೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇವಲ ಮಕ್ಕಳ ಶಿಸ್ತಿನ ಹೆಸರಿನಲ್ಲಿ ಹಳೆಯ ಆಲೋಚನೆಗಳನ್ನು ಹೇರಲಾಗುತ್ತಿದೆ ಎಂಬ ಟೀಕೆಗಳು ಕೇಳಿಬಂದವು.

ವಿದ್ಯಾರ್ಥಿ ಮತ್ತು ಪೋಷಕರನ್ನು ಮನವೊಲಿಸಿದ್ದು ಹೇಗೆ..?

ವರದಿಗಳ ಪ್ರಕಾರ, ಬಾಲ ಕಲ್ಯಾಣ ಸಮಿತಿ (CWC) ಮತ್ತು ಆರೋಗ್ಯ ಇಲಾಖೆಗಳು ಇದು ಯಾವುದೇ ರೀತಿಯ ‘ಮೋರಲ್ ಪೋಲಿಸಿಂಗ್’ ಅಲ್ಲ, ಬದಲಿಗೆ ಇದು ಸಂಪೂರ್ಣವಾಗಿ ಮಕ್ಕಳ ಆರೋಗ್ಯದ ರಕ್ಷಣೆಗಾಗಿ ಕೈಗೊಂಡ ಕ್ರಮ ಎಂದು ಹೇಳಿದ್ದಷ್ಟೇ ಅಲ್ಲ, ಹಿಂದೆ ನಡೆಸಲಾದ ‘ಆಪರೇಷನ್ ಸೌಂದರ್ಯ’ದ ತನಿಖೆಯಲ್ಲಿ, ಶಾಲೆಗಳಲ್ಲಿ ವಶಪಡಿಸಿಕೊಳ್ಳಲಾದ ಕೆಲವು ಅಗ್ಗದ ಲಿಪ್‌ಸ್ಟಿಕ್‌ಗಳಲ್ಲಿ ಅನುಮತಿಸಲಾದ ಪ್ರಮಾಣಕ್ಕಿಂತ 12,000 ಪಟ್ಟು ಹೆಚ್ಚು ಮರ್ಕ್ಯುರಿ (ಪಾದರಸ) ಇರುವುದು ಪತ್ತೆಯಾಗಿದ್ದರ ವರದಿಯನ್ನೂ ಜನರ ಮುಂದಿಟ್ಟಿತು. ಚಿಕ್ಕ ವಯಸ್ಸಿನಲ್ಲೇ ಮೇಕಪ್‌ಗೆ ದಾಸರಾಗುವುದರಿಂದ ಮಕ್ಕಳಲ್ಲಿ ‘ಬಾಡಿ ಇಮೇಜ್’ (ತಮ್ಮ ನೈಸರ್ಗಿಕ ರೂಪದ ಬಗ್ಗೆ ಕೀಳರಿಮೆ) ಸಮಸ್ಯೆಗಳು ಉಂಟಾಗುತ್ತವೆ ಎಂಬ ಜಾಗೃತಿಯನ್ನೂ ಮೂಡಿಸಲಾಯಿತು. ಈಗ ಎಲ್ಲವೂ ಜಾರಿಗೆ ಬಂದಿದೆ.

Tags: #ಲಿಪ್‌ಸ್ಟಿಕ್ ಮುಕ್ತ ಕ್ಯಾಂಪಸ್ #ಕೇರಳ #ಬಾಲ ಕಲ್ಯಾಣ ಸಮಿತಿ #ಕಾಸ್ಮೆಟಿಕ್ಸ್ ಮುಕ್ತ ಕ್ಯಾಂಪಸ್ #Lipstick-free campus #Kerala #Child Welfare Committee #Cosmetics-free campus
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಹೊರಟ್ಟಿಗೆ ಇದ್ದ ಸಿದ್ದು ಕೃಪೆ ಅಂತ್ಯ : ಇದು ಡಿಕೆ ಟೈಂ..!
  • ʻಮೋದಿ ಮಾಡೆಲ್‌ʼ ಫಾಲೋ ಮಾಡ್ತಿದ್ಧಾರೆ ಸಿಎಂ ಡಿಕೆ ಶಿವಕುಮಾರ್..!‌
  • ಕೇರಳದ ಈ ಕಾಲೇಜ್‌ನಲ್ಲಿ ಲಿಪ್‌ ಸ್ಟಿಕ್‌, ಕಾಜಲ್‌ ಕಾಸ್ಮೆಟಿಕ್ಸ್‌ ಹಾಕುವಂತಿಲ್ಲ : ಏನಿದು..? ಯಾಕೆ..?

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಹೊರಟ್ಟಿಗೆ ಇದ್ದ ಸಿದ್ದು ಕೃಪೆ ಅಂತ್ಯ : ಇದು ಡಿಕೆ ಟೈಂ..!

ಹೊರಟ್ಟಿಗೆ ಇದ್ದ ಸಿದ್ದು ಕೃಪೆ ಅಂತ್ಯ : ಇದು ಡಿಕೆ ಟೈಂ..!

June 20, 2026
ʻಮೋದಿ ಮಾಡೆಲ್‌ʼ ಫಾಲೋ ಮಾಡ್ತಿದ್ಧಾರೆ ಸಿಎಂ ಡಿಕೆ ಶಿವಕುಮಾರ್..!‌

ʻಮೋದಿ ಮಾಡೆಲ್‌ʼ ಫಾಲೋ ಮಾಡ್ತಿದ್ಧಾರೆ ಸಿಎಂ ಡಿಕೆ ಶಿವಕುಮಾರ್..!‌

June 20, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.