ಕರ್ನಾಟಕ ಬಿಜೆಪಿಯಲ್ಲಿ ಆಂತರಿಕ ಭಿನ್ನಮತಕ್ಕೆ ದೊಡ್ಡ ಇತಿಹಾಸವೇ ಇದೆ. ಅದು ಯಡಿಯೂರಪ್ಪ, ಅನಂತ್ ಕುಮಾರ್ ಅವಧಿಯಲ್ಲೂ ಇತ್ತು. ಇದೀಗ ವಿಜಯೇಂದ್ರ ಅಧ್ಯಕ್ಷರಾಗಿದ್ದರೂ, ಅವರ ಗೆಲುವಿನ ಸರಪಳಿಗೆ 2029ರ ಲೋಕಸಭೆಗೆ ಕೊನೆಯಾಗಿದೆ. ಒಂದೇ ಒಂದು ಬೈ-ಎಲೆಕ್ಷನ್ ಗೆದ್ದಿಲ್ಲ. ಈಗ ಅದು ರಾಷ್ಟ್ರೀಯ ಬಿಜೆಪಿಗೂ ಒಕ್ಕರಿಸಿದೆ. ಹೌದು, ಇತ್ತೀಚೆಗೆ Gen-Z ಎದುರು ನರೇಂದ್ರ ಮೋದಿ ಬಗ್ಗಿದ್ದರು. ಇದೀಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ನಡುಬಗ್ಗಿಸಿದ್ದಾರೆ. ಯುಪಿಎ-02 ಪತನ ಆರಂಭವಾಗಿದ್ದು ಕೂಡಾ ಹೀಗೆಯೇ..
ಆ ಕಾರಣದಿಂದಾಗಿಯೇ ಬಿಜೆಪಿ ಎರಡು ಬಾರಿ ಬಹುಮತದ ಹತ್ತಿರ ಬಂದು ಮುಗ್ಗರಿಸಿತ್ತು. ಹಾಗೆ ಎಡವಿ ಬಿದ್ದು, ಎರಡೂ ಬಾರಿ ಆಪರೇಷನ್ ಕಮಲದಂತಹ ಕೆಟ್ಟ ಚಾಳಿಗೆ ಕೈಹಾಕಿ ಅಧಿಕಾರ ಹಿಡಿದಿತ್ತು. ಅಷ್ಟೇ ಅಲ್ಲ, ವಿಜಯೇಂದ್ರ ಅಧ್ಯಕ್ಷರಾದ ನಂತರ ವಿಜಯೇಂದ್ರರನ್ನು ವಿರೋಧಿಸುವ ಕಾರಣಕ್ಕಾಗಿ ಪಕ್ಷ ಛಿದ್ರವಾಗುತ್ತಿದೆ. ಹಾಗೆಂದು ಬೇರೆ ನಾಯಕರನ್ನು ಆ ಸ್ಥಾನದಲ್ಲಿ ಕೂರಿಸಿದರೆ ʻಭಿನ್ನಮತ ಮುಗಿದು ಒಗ್ಗಟ್ಟು ಮೂಡುವʼ ಯಾವ ವಿಶ್ವಾಸವೂ ಇಲ್ಲ. ಅಂಥದ್ದೇ ಪರಿಸ್ಥಿತಿ ರಾಷ್ಟ್ರೀಯ ಮಟ್ಟದಲ್ಲೂ ಶುರುವಾಗಿದೆ.
ಅಚ್ಚರಿಯ ಬೆಳವಣಿಗೆಯಲ್ಲಿ ಬಿಹಾರದ ಬಂಕೀಪುರ ವಿಧಾನಸಭಾ ಉಪಚುನಾವಣೆ(Bankipur assembly by-election in Bihar)ಯಲ್ಲಿ ಚುನಾವಣಾ ರಣತಂತ್ರಗಾರ, ಜನ ಸುರಾಜ್ ಪಕ್ಷದ ಅಧ್ಯಕ್ಷ ಪ್ರಶಾಂತ್ ಕಿಶೋರ್(Prashant Kishor) ಬಿಜೆಪಿಯ ಎದುರಾಳಿ ವಿರುದ್ಧ 19000 ಮತಗಳ ಭರ್ಜರಿ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ವಿಶೇಷವೆಂದರೆ, ಕೆಲ ತಿಂಗಳ ಹಿಂದಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ನಿತಿನ್ ನವೀನ್(Nitin Nabin) ಸತತ 20 ವರ್ಷಗಳಿಂದ ಗೆಲ್ಲುತ್ತಾ ಬಂದಿದ್ದ ಕ್ಷೇತ್ರ ಇದೀಗ ಪಕ್ಷದ ಕೈತಪ್ಪಿದ್ದು ಕಮಲದ ಪಕ್ಷಕ್ಕೆ ಇರುಸುಮುರಸು ಉಂಟಾಗಿದೆ. ಜೊತೆಗೆ 35 ವರ್ಷಗಳ ಬಳಿಕ ಕ್ಷೇತ್ರ ಬಿಜೆಪಿ ಕೈತಪ್ಪಿದಂತೆ ಆಗಿದೆ.
ರಾಜ್ಯಸಭೆಗೆ ಆಯ್ಕೆಯಾದ ನಿತಿನ್ ನವೀನ್ ರಾಜೀನಾಮೆಯಿಂದ ತೆರವಾಗಿದ್ದ ಬಂಕೀಪುರ ಕ್ಷೇತ್ರಕ್ಕೆ ಜು.29ರಂದು ನಡೆದಿದ್ದ ಉಪಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಪ್ರಶಾಂತ್ ಕಿಶೋರ್ 6415 ಮತಗಳನ್ನು ಪಡೆದರೆ, ಬಿಜೆಪಿಯ ನೀರಜ್ ಕುಮಾರ್ 44827 ಮತಗಳನ್ನು ಗಳಿಸಿ ಸೋತಿದ್ದಾರೆ.
2024ರ ಅ.2ರಂದು ಜನ ಸುರಾಜ್ ಪಕ್ಷ ಸ್ಥಾಪನೆಯಾಗಿತ್ತು. ಕಳೆದ ವರ್ಷದ ಬಿಹಾರ ಚುನಾವಣೆಯಲ್ಲಿ ಪಕ್ಷ 238 ಕಡೆ ಸ್ಪರ್ಧಿಸಿದರೂ ಒಂದೂ ಸ್ಥಾನ ಗೆದ್ದಿರಲಿಲ್ಲ. ಆಗ ಪ್ರಶಾಂತ್ ಕಿಶೋರ್ ಸ್ಪರ್ಧಿಸಿರಲಿಲ್ಲ. ಈ ನಡುವೆ ನಿತಿನ್ ನವೀನ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಣಕ್ಕೆ ಇಳಿಯುವ ಮೂಲಕ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಚುನಾವಣಾ ರಣತಂತ್ರಗಾರನಿಗೆ ಮೊದಲ ಅವಕಾಶದಲ್ಲೇ ಜಯ ಸಿಕ್ಕಿದೆ.
ಅತ್ತ ಮಧ್ಯ ಪ್ರದೇಶದಲ್ಲೂ ಅಷ್ಟೇ.. ಮಧ್ಯಪ್ರದೇಶದ ದತಿಯಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಘನಶ್ಯಾಮ್ ಸಿಂಗ್ ಅವರು ಬಿಜೆಪಿಯ ಅಶುತೋಷ್ ತಿವಾರಿ ಅವರು 6016 ಮತಗಳ ಅಂತರದಿಂದ ಸೋತಿದ್ದಾರೆ. ಹಾಲಿ ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರ್ತಿ ಅವರು ವಂಚನೆ ಕೇಸಲ್ಲಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಸ್ಥಾನ ಕಳೆದುಕೊಂಡ ಕಾರಣ ಉಪಚುನಾವಣೆ ನಡೆದಿತ್ತು. ಹೀಗಿದ್ದರೂ ಅಲ್ಲಿ ಬಿಜೆಪಿ ಸೋತಿದೆ.
ಗುಜರಾತ್‌ನ ಮಂಜಾಲ್‌ಪುರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಸತೀಶ್ ಗೋವಿಂದಭಾಯ್ ಗೆದ್ದಿರುವುದಷ್ಟೇ ಶುಭ ಸುದ್ದಿ.
ಆತಂಕ ಏನು..?
ಯುಪಿಎ-02 ಅವಧಿಯಲ್ಲಿ ಕಾಂಗ್ರೆಸ್ ಕುಸಿತವೂ ಹೀಗೆಯೇ ಶುರುವಾಗಿತ್ತು. ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಗೆದ್ದ ನಂತರ ರಾಷ್ಟ್ರೀಯ ಪಕ್ಷ ಬಿಜೆಪಿ, ಚುನಾವಣೆಗಳನ್ನು ಲಘುವಾಗಿ ಕಾಣುತ್ತಿದೆ. ಅಷ್ಟೇ ಅಲ್ಲ, ಜನರ ಸಮಸ್ಯೆಗಳಿಗೆ, ಸವಾಲುಗಳಿಗೆ ಉತ್ತರವನ್ನು ಕೊಡುವ ಗೋಜಿಗೂ ಹೋಗುತ್ತಿಲ್ಲ. ಇದು ಬೈ-ಎಲೆಕ್ಷನ್ ಚುನಾವಣೆಯ ಫಲಿತಾಂಶದಲ್ಲಿ ಪ್ರತಿಫಲನವಾಗುತ್ತಿದೆ. ಇದು ಆರಂಭ ಎಂದು ರಾಜಕೀಯ ತಜ್ಞರು ಎಚ್ಚರಿಕೆ ನೀಡುತ್ತಿದೆ.
ಆದರೆ ಬಂಕೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ನಿಂತಿದ್ದ ಅಭ್ಯರ್ಥಿಗೆ ಠೇವಣಿಯೂ ಸಿಕ್ಕಿಲ್ಲ. ಅದನ್ನೂ ಗಮನಿಸಬೇಕು. ರ್‌ಜೆಡಿ ಅಭ್ಯರ್ಥಿ ಕೇವಲ 14,273 ಮತಗಳನ್ನು ಪಡೆದರು, ಇದು ಒಟ್ಟು ಮತಗಳಲ್ಲಿ ಕೇವಲ 11% ಪಡೆದಿದ್ಧಾರೆ. ನವೆಂಬರ್ 2025 ರ ವಿಧಾನಸಭಾ ಚುನಾವಣೆಯಲ್ಲಿ, ಬಂಕೀಪುರ ಸ್ಥಾನದಲ್ಲಿ ಆರ್‌ಜೆಡಿ 30% ಅಂದರೆ 46,000 ಮತಗಳನ್ನು ಪಡೆದಿತ್ತು. ಕೇವಲ 10 ತಿಂಗಳಲ್ಲಿ ಮಿತ್ರಪಕ್ಷಗಳು ಅರ್ಧಕ್ಕರ್ಧ ವೋಟು ಕಳೆದುಕೊಂಡಿರುವುದು ಆ ಪಕ್ಷಗಳಿಗೂ ಅಂದರೆ ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಅವರಿಗೂ ಅಪಾಯದ ಸೂಚನೆ.



