ನವದೆಹಲಿಯ ಇಂದಿರಾ ಭವನದಲ್ಲಿ ಸುಮಾರು 6 ಗಂಟೆಗೂ ಹೆಚ್ಚು ಕಾಲ ನಡೆದ ಮ್ಯಾರಥಾನ್ ಮೀಟಿಂಗ್‌ನ ಅಂತಿಮ ಫಲಿತಾಂಶ ಸಂಜೆಯ 6 ಗಂಟೆ ಸುಮಾರಿಗೆ ಗೊತ್ತಾಯ್ತು. ಸಿದ್ದು, ಡಿಕೆಶಿ ಜೊತೆ ಹೊರಬಂದ ಸುರ್ಜೇವಾಲ, ಕೆಸಿ ವೇಣುಗೋಪಾಲ್ ಮಾತ್ರ ಮಾತನಾಡಿದ್ರು. ಸುರ್ಜೇವಾಲ ಸುದ್ದಿಗೋಷ್ಟಿಗೆ ಇಂಟ್ರೊಡಕ್ಷನ್ ಕೊಟ್ಟರೆ, ಕೆಸಿ ವೇಣುಗೋಪಾಲ್ ನಿಮ್ಮ ಊಹಾಪೋಹಗಳೆಲ್ಲ ಸುಳ್ಳು ಎಂದು ಹೇಳಿ ಸೈಲೆಂಟ್ ಆಗಿ ಹೊರಟು ಬಿಟ್ಟರು. ಡಿಕೆ, ಸಿದ್ದು ಇಬ್ಬರೂ ಯಾವುದೇ ಕನ್ನಡ ಅಥವಾ ನ್ಯಾಷನಲ್ ಚಾನೆಲ್‌ಗಳ ಜೊತೆ ಮಾತನಾಡಲಿಲ್ಲ. ಅದಾದ ಸ್ವಲ್ಪ ಹೊತ್ತಿಗೆ ಇಂಡಿಯಾ ಟುಡೇ ಸಿದ್ದು ರಾಜೀನಾಮೆ ಖಚಿತ ಎಂದು ಬ್ರೇಕಿಂಗ್ ನ್ಯೂಸ್ ಹಾಕಿತು. ಅದಾದ ನಂತರ NDTV ಕೂಡಾ ಬ್ರೇಕಿಂಗ್ ಹಾಕ್ತು. ಇಂಡಿಯಾ ಟುಡೇ 2-3 ದಿನಗಳಲ್ಲಿ ರಾಜೀನಾಮೆ ಎಂದರೆ NDTV ಇನ್ನೊಂದು ವಾರ ಎಂದು ಹೇಳಿತು. ಈ ಎರಡನ್ನೂ ಹಾಕಿ ಬ್ರೇಕ್ ಮಾಡಿದ್ದು ಟೈಮ್ಸ್ ನೌ. ಕನ್ನಡದ ಚಾನೆಲ್‌ಗಳು ಅದನ್ನೇ ಕಾಪಿ ಮಾಡೋಕೆ ಶುರು ಮಾಡಿದವು. ಇಷ್ಟಕ್ಕೂ ಕನ್ನಡದವರಿಗೆ ಸಿಕ್ಕದ ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ಸುದ್ದಿ ಮಾಧ್ಯಮಗಳಿಗೆ ಸಿಕ್ಕಿದ್ದು ಹೇಗೆ..?
ಮಂಗಳವಾರ ದೆಹಲಿಯಲ್ಲಿ ನಡೆದ ಹೈಕಮಾಂಡ್ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಜೊತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇದ್ರು. ರಾಷ್ಟೃೀಯ ವಾಹಿನಿಗಳ ಪ್ರಕಾರ ರಾಹುಲ್ ಗಾಂಧಿ ಅವರೇ ಸಿದ್ದರಾಮಯ್ಯ ಅವರೊಂದಿಗೆ ನಡೆಸಿದ ಪ್ರತ್ಯೇಕ ಸಭೆಯಲ್ಲಿ ಪಕ್ಷದ ಹಿತದೃಷ್ಟಿಯಿಂದ ಹಾಗೂ ಮುಂಬರುವ ಚುನಾವಣೆಗಳನ್ನು ಎದುರಿಸಲು ನಾಯಕತ್ವ ಬದಲಾವಣೆ ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಜೊತೆಗೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಒಂದು ಡಿಸಿಎಂ ಪೋಸ್ಟ್ ಕೂಡಾ ನೀಡುವುದಾಗಿ ಆಫರ್ ಕೊಟ್ಟರಂತೆ. ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ರಾಜ್ಯಸಭಾ ಸ್ಥಾನದ ಆಫರ್ ಕೊಟ್ಟು, ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಹೇಳಿದರಂತೆ.
ಆದರೆ ಇದಾವುದೂ ಕನ್ನಡ ಸುದ್ದಿ ವಾಹಿನಿಗಳಿಗೆ ಗೊತ್ತಾಗಲಿಲ್ಲ. ಏಕೆಂದರೆ ಸಿದ್ದು ಜೊತೆಗಿದ್ದವರೇ ಆಗಲಿ, ಡಿಕೆ ಜೊತೆಗಿದ್ದವರೇ ಆಗಲಿ ಅವರಿಗೆ ಸುದ್ದಿ ಬರುವುದು ಸಿದ್ದು-ಡಿಕೆಯಿಂದ. ಇನ್ನುಳಿದಂತೆ ಕೆಸಿ ವೇಣು ಅಥವಾ ಸುರ್ಜೇವಾಲ ಇವತ್ತಿಗೂ ಕರ್ನಾಟಕದ ಪತ್ರಕರ್ತರ ಜೊತೆ ಒಂದು ಬಾಂಧವ್ಯವನ್ನೇ ಇಟ್ಟುಕೊಂಡಿಲ್ಲ. ಅವರು ಇವತ್ತಿಗೂ ಮಾತನಾಡುವುದು ನ್ಯಾಷನಲ್ ಚಾನೆಲ್ ವರದಿಗಾರರ ಜೊತೆ ಮಾತ್ರ. ಜೊತೆಗೆ ದೆಹಲಿ ರಿಪೋರ್ಟಿಂಗ್‌ನ್ನು ಕನ್ನಡ ಸುದ್ದಿವಾಹಿನಿಗಳೂ ಕೂಡಾ ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಹೀಗಾಗಿ ದೆಹಲಿ ಸೋರ್ಸ್ ಕನ್ನಡದವರಿಗೆ ಮಿಸ್ ಆಗಿದೆ. ಆಗುತ್ತಲೇ ಇದೆ. ಸಿದ್ದರಾಮಯ್ಯ ರಾಜೀನಾಮೆ ವಿಷಯದಲ್ಲೂ ಅದೇ ಆಗಿದೆ. ಅಷ್ಟೆ.
ಇನ್ನು ಹೈಕಮಾಂಡ್ ಸಭೆ ಮುಗಿದ ನಂತರ ತಕ್ಷಣವೇ ಸಿಎಂ ಸಿದ್ದರಾಮಯ್ಯ ದೆಹಲಿಯ ಖಾಸಗಿ ಸ್ಥಳದಲ್ಲಿ ಆಪ್ತ ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್ ಹಾಗೂ ಭೈರತಿ ಸುರೇಶ್ ಅವರೊಂದಿಗೆ ತುರ್ತು ಸಭೆ ನಡೆಸಿ ಹೈಕಮಾಂಡ್ ನಿರ್ಧಾರವನ್ನು ಹೇಳಿದರಂತೆ. ಈ ವೇಳೆ ಆಪ್ತ ಸಚಿವರು, ‘ಯಾವುದೇ ಕಾರಣಕ್ಕೂ ನೀವು ರಾಜೀನಾಮೆ ಕೊಡಬೇಡಿ, ನಿಮ್ಮ ಪರವಾಗಿ ನಾವೇ ಹೈಕಮಾಂಡ್ ಜೊತೆ ಮತ್ತೊಮ್ಮೆ ಮಾತನಾಡುತ್ತೇವೆ’ ಎಂದು ಭಾವುಕರಾಗಿ ಒತ್ತಡ ಹೇರಿದ್ದಾರೆ. ಆದರೆ ಸಚಿವರ ಮನವಿಗೆ ಉತ್ತರಿಸಿದ ಸಿದ್ದರಾಮಯ್ಯ, ‘ರಾಹುಲ್ ಗಾಂಧಿ ಅವರ ಮಾತನ್ನು ನಿರಾಕರಿಸಲು ನನ್ನಿಂದ ಸಾಧ್ಯವಿಲ್ಲ. ಕೊಟ್ಟ ಮಾತಿನಂತೆ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಾಗಿದ್ದೇನೆ’ ಎಂದು ಹೇಳುವ ಮೂಲಕ ಆಪ್ತರ ಒತ್ತಡಕ್ಕೆ ಬ್ರೇಕ್ ಹಾಕಿದ್ದಾರಂತೆ.
ಜೂನ್ 2026 ರ ಹೊತ್ತಿಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಸುಗಮವಾಗಿ ಮುಗಿಸಲು ಎಐಸಿಸಿ ನಾಯಕರಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರೂ ಸಹ ಬೆಂಗಳೂರಿಗೆ ಬರಲಿದ್ದಾರಂತೆ. ಶಾಸಕಾಂಗ ಪಕ್ಷದ (CLP) ಸಭೆ ನಡೆಸಿ ಮುಂದಿನ ಸಿಎಂ ಆಯ್ಕೆಯ ಪ್ರಕ್ರಿಯೆ ಮುಗಿಸಲಿದ್ದಾರಂತೆ. ಆದರೆ.. ಇದೂವರೆಗೆ ಡಿಕೆ ಶಿವಕುಮಾರ್ ಅವರೇ ಸಿಎಂ ಆಗುತ್ತಾರೆ ಎಂದು ಹೇಳುವ ಪ್ರಯತ್ನ ಆಗಿಲ್ಲ.



