ಸಿದ್ದರಾಮಯ್ಯ ಎಂದರೆ ಖಡಕ್. ನಂಬಿದ್ದವರಿಗೆ ಗೆಳೆಯ. ರಕ್ಷಕ. ಎದುರಾಳಿಗಳ ಜೊತೆ ದೋಸ್ತಿಯ ಮಾತೇ ಇಲ್ಲ. ಹೀಗಿದ್ದ ಸಿದ್ದರಾಮಯ್ಯ ಈಗ ಬದಲಾಗಿದ್ಧಾರೆ. ಈ ಮಾತನ್ನು ಎದುರಾಳಿಗಳು ಹೇಳಿದ್ದರೆ ಯೋಚನೆ ಇರಲಿಲ್ಲ. ಅವರ ಜೊತೆಗಿದ್ದವರೇ ಈ ಮಾತು ಹೇಳ್ತಿದ್ಧಾರೆ. ಈಗಲೂ ಜೊತೆಗಿರುವ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಅವರ ಮಾತಿನಲ್ಲೂ ಅದೇ ಧ್ವನಿ ಎದ್ದು ಕಾಣುತ್ತಿದೆ.
ಎಲ್ಲ ಟೈಮ್‌ನಲ್ಲೂ ಒಂದೇ ರೀತಿ ಬಿಗಿಯಾಗಿ ರಾಜಕಾರಣ ಮಾಡಲು ಆಗಲ್ಲ. ಕಾಂಪ್ರಮೈಸ್ ಅನಿವಾರ್ಯ. ರಾಜಕೀಯದಲ್ಲಿ ಕೆಲವೊಮ್ಮೆ ವೀಕ್ ಆಗಿರಬೇಕಾಗುತ್ತದೆ, ಮತ್ತೆ ಕೆಲವೊಮ್ಮೆ ಸ್ಟ್ರಾಂಗ್ ಕೂಡ ಆಗಬೇಕಾಗುತ್ತದೆ. ಎಲ್ಲವೂ ಸಮಯ-ಸಂದರ್ಭಕ್ಕೆ ತಕ್ಕಂತೆ ಇರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಕಾಂಪ್ರಮೈಸ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಕಾಂಪ್ರಮೈಸ್ ಪಾಲಿಟಿಕ್ಸ್ ಈಗ ಅನಿವಾರ್ಯವಾಗಿದೆ ಎಂದಿದ್ಧಾರೆ. ಜಾರಕಿಹೊಳಿ ಮಾತಿನಲ್ಲಿ ಸಮರ್ಥನೆಯೂ ಇದೆ ಎನ್ನಬಹುದಾದರೂ, ಸಿದ್ದರಾಮಯ್ಯ ಮೊದಲಿನ ಹಾಗೆ ಇಲ್ಲ ಎನ್ನುವುದು ಅವರ ಮಾತಿನಲ್ಲಿ ಎದ್ದು ಕಾಣುತ್ತಿದೆ.
ಬೆಂಬಲಿಗರನ್ನು ಕಾಪಾಡುವ ವಿಚಾರದಲ್ಲಿ ಸಿದ್ದರಾಮಯ್ಯ ವೀಕ್ ಆಗಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸತೀಶ್ ಸಿದ್ದರಾಮಯ್ಯ ಈಗ ಕಾಂಪ್ರಾಮೈಸ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಈಗ ಅವರಿಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯವಾಗಿದೆ. ಎಲ್ಲಾ ಸಮಯದಲ್ಲೂ ಒಂದೇ ರೀತಿ ರಾಜಕಾರಣ ಮಾಡಲಾಗಲ್ಲ. ಕಾಂಪ್ರಾಮೈಸ್ ಅನಿವಾರ್ಯ ಎಂದು ಹೇಳಿದ್ದಾರೆ.
ಇನ್ನು ಸಚಿವ ಜಮೀರ್ ಅಹ್ಮದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಗರು. ಅವರು ಮೊದಲು ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ಟಗರು ಎಂದಿಗೂ ಟಗರೇ. ಅವರು ಸೈಲೆಂಟ್ ಆಗಿರಬಹುದು, ಅವರು ಮಾತನಾಡಿದರೆ ಬೇರೆ ರೀತಿಯೇ ಸೌಂಡ್ ಆಗುತ್ತದೆ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತರ ಮೇಲೆ ಕ್ರಮವಾಗುತ್ತಿದ್ದರೂ ಅಸಹಾಯಕರಾಗಿದ್ದಾರೆ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಅವರಿಗೆ ಎಲ್ಲರೂ ಆಪ್ತರೇ. ಅವರು ನಮ್ಮ ಮುಖ್ಯಮಂತ್ರಿಗಳು, ಅವರು ಈಗ ಸೈಲೆಂಟ್ ಆಗಿರಬಹುದು. ಆದರೆ ಅವರು ಮಾತನಾಡಿದರೆ ಬೇರೆ ರೀತಿಯೇ ಸೌಂಡ್ ಬರುತ್ತದೆ. ಸದ್ಯ ಅವರು ಮಾತನಾಡುವ ಅಗತ್ಯವಿಲ್ಲ ಎಂದಿದ್ದಾರೆ.
ಇನ್ನು ಸಿದ್ದು ಬಣದಲ್ಲಿದ್ದು ಸರ್ಕಾರದಿಂದ ಹೊರದಬ್ಬಿಸಿಕೊಂಡಿದ್ದ ಪರಮಾಪ್ತ ಮಾಜಿ ಸಚಿವ ಕೆಎನ್ ರಾಜಣ್ಣ ಅವರ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಷ್ಟೊಂದು ಅಸಹಾಯಕ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದರೆ ಯಾರೋ ಮಾಟ, ಮಂತ್ರ ಮಾಡಿಸಿರಬಹುದು. ಇದರ ಬಗ್ಗೆ ತನಿಖೆ ಮಾಡಿಸುತ್ತಿದ್ದೇನೆ ಎಂದಿದ್ದಾರೆ.
‘ನನ್ನ ಅನುಭವದ ಪ್ರಕಾರ ನಾನು ಸಿಎಂ ಸಿದ್ದರಾಮಯ್ಯ ಅವರು ಅಸಹಾಯಕರಾಗಿದ್ದಾರೆ ಎಂದು ಹೇಳಿದ್ದೇನೆ. ಅಗಾಧ ಶಕ್ತಿ ಹೊಂದಿರುವ ಸಿಎಂ ಇಷ್ಟೊಂದು ಅಸಹಾಯಕರಾಗಿರುವುದನ್ನು ಎಂದೂ ನೋಡಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ, ಜೆಡಿಎಸ್‌ನ ಬಹುತೇಕ ನಾಯಕರು ಇದೇ ಮಾತು ಹೇಳ್ತಿದ್ಧಾರೆ. ಆರ್ ಅಶೋಕ್, ವಿಜಯೇಂದ್ರ, ನಿಖಿಲ್ ಕುಮಾರಸ್ವಾಮಿ, ಸುರೇಶ್ ಕುಮಾರ್, ಸುನಿಲ್ ಕುಮಾರ್ ಸೇರಿದಂತೆ ಹಲವರು ಹೇಳ್ತಿರೋದು ಇದೇ ಮಾತು. ಕಾಂಗ್ರೆಸ್ಸಿನಲ್ಲಿರುವ ರಾಯರೆಡ್ಡಿ, ಹಳೆಯ ಮಿತ್ರ ಹೆಚ್ ವಿಶ್ವನಾಥ್, ಸಿಎಂ ಇಬ್ರಾಹಿಂ ಮೊದಲಾದವರು ಹೇಳುತ್ತಿರುವುದೂ ಇದೇ ಮಾತು. ಸಿದ್ದರಾಮಯ್ಯ ಬದಲಾಗಿದ್ದಾರಾ..?



