ಜಸ್ಟಿಸ್ ಫಾರ್ ಸೌಜನ್ಯ. ಸೌಜನ್ಯಂಗೆ ನ್ಯಾಯ ಕೊಡಿ ಅಂತಾರೆ. ಆದರೆ.. ಮೆಸೇಜ್ ಮಾಡೋದ್ ಮಾತ್ರ.. ಹಿಂಗೇ.. ನಾಚಿಕೆ ಆಗಲ್ವಾ..?
ರೇಣುಕಾಸ್ವಾಮಿನೂ ಕೆಟ್ಟ ಕೆಟ್ಟ ಮೆಸೇಜ್ ಕಳಿಸಿದ್ದ.. ಅದಕ್ಕೇ ಕೊಲೆಯಾದ ಅಂತೀರಲ್ಲ. ನೀವು ಎಂಥ ಮೆಸೇಜ್ ಮಾಡ್ತಿದ್ದೀರಿ.. ನಿಮಗೂ.. ಅವನಿಗೂ ಏನ್ ವ್ಯತ್ಯಾಸ..?
ಇಷ್ಟು ಕೆಟ್ಟ ಕೊಳು ಮೆಸೇಜ್ ಮಾಡಿ.. ಸೌಜನ್ಯ ಕೇಸ್ನಲ್ಲಿ ನ್ಯಾಯ ಬೇಕು ಅಂತಾ ಕೇಳ್ತೀರಲ್ಲ.. ಜೋಕ್ ಅನ್ನಿಸಲ್ವಾ..?
ದರ್ಶನ್ ಅಭಿಮಾನಿಗಳಿಂದ ಸಮಾಜಕ್ಕೆ ಎಂಥ ಮೆಸೇಜ್ ಹೋಗುತ್ತಿದೆ. ಇದು ದರ್ಶನ್‌ಗೆ ಗೊತ್ತಿಲ್ಲ ಅನ್ನೋ ಹಾಗಿಲ್ಲ. ಗೊತ್ತಿದೆ.. ಆದರೂ ಅವರು ಏನೂ ಹೇಳಲ್ಲ. ಇಂಥ ಕೊಳಕರನ್ನ ಎನ್ʻಕರೇಜ್ ಮಾಡ್ತಾರೆ..
ನಾನು ಸಾಮಾಜಿಕ ಜೀವನದಲ್ಲಿ ಇರೋವ್ಳು. ನಮಗೇ ಹೀಗೆ ಮೆಸೇಜ್ ಮಾಡ್ತಾರೆ ಅಂದ್ರೆ, ಇನ್ನು ಸಾಮಾನ್ಯ ಹೆಣ್ಣುಮಕ್ಕಳ ಗತಿಯೇನು?
ಅವ್ರೇನು ನನ್ನ ‘ರೇ*ಪ್ ಮಾಡ್ತಾರಾ? ಕೊಲೆ ಮಾಡ್ತಾರಾ? ನನಗೆ ಅನ್ನಿಸಿದ್ದನ್ನು ನೇರವಾಗಿ ಹೇಳುತ್ತೇನೆ..
ನೀವೂ ಕೂಡಾ ರೇಣುಕಾಸ್ವಾಮಿ ತರಾನೇ ಆಡ್ತಿದ್ದೀರಿ. ನಿಮ್ಮನ್ನ ಯಾಕೆ ಕೊಲ್ಲಿಸಬಾರದು..?
ರಮ್ಯಾ ಕೇಳ್ತಿರೋ ಪ್ರಶ್ನೆಗಳಿಗೆ ದರ್ಶನ್ ಫ್ಯಾನ್ಸ್ ಬಳಿ ಉತ್ತರ ಇಲ್ಲ. ಸಿಗೋದೂ ಇಲ್ಲ. ರೇಣುಕಾಸ್ವಾಮಿ, ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ್ದ ಕಾರಣಕ್ಕೇ ಕೊಲೆಯಾದ. ಸರಿ. ನೀವೇನ್ ಮಾಡ್ತಿದ್ದೀರಿ.. ಇದು ದರ್ಶನ್ ಅಭಿಮಾನಿಗಳಿಗೆ ರಮ್ಯಾ ಕೇಳ್ತಿರೋ ಪ್ರಶ್ನೆ.
ಅಂದಹಾಗೆ ರಮ್ಯಾ ನಟಿಯಷ್ಟೇ ಅಲ್ಲ, ಮಾಜಿ ಸಂಸದೆಯೂ ಹೌದು. ರಾಹುಲ್ ಗಾಂಧಿ, ಪ್ರಿಯಾಂಕಾ ಸೇರಿದಂತೆ ದೊಡ್ಡ ದೊಡ್ಡ ನಾಯಕರ ಜೊತೆ ಕಾಂಟ್ಯಾಕ್ಟಿನಲ್ಲಿರುವ ನಾಯಕಿ. ರಾಜಕೀಯ ಬಿಟ್ಟಿದ್ದರೂ, ಖ್ಯಾತಿ ಮಾತ್ರ ಹಾಗೆಯೇ ಇದೆ. ಸ್ಟಾರ್ ಹೀರೋಯಿನ್. ಕನ್ನಡದಲ್ಲಿ ಇವತ್ತಿಗೂ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಾಯಕಿ ಎಂದರೆ.. ಅದು ರಮ್ಯಾ. 2ನೇ ಆಯ್ಕೆ ಇನ್ನೂ ಸಿಕ್ಕಿಲ್ಲ. ಅಂತಹವರಿಗೆ ರೇಪ್ ಮಾಡ್ತೀನಿ ಅಂತಾ ಮೆಸೇಜ್ ಹಾಕ್ತಾರೆ.. ಅಂದ್ರೆ..
ಅಂದಹಾಗೆ ರಮ್ಯಾ ಅವರನ್ನು ದರ್ಶನ್ ಅಭಿಮಾನಿಗಳು ಕೆಣಕಬಾರದಿತ್ತು. ರಮ್ಯಾ ಅವರು ಸುಪ್ರೀಂಕೋರ್ಟ್ ವಿಚಾರಣೆ ಕುರಿತಂತೆ ಹಾಕಿದ್ದ ಒಂದು ಪೋಸ್ಟಿಗೆ ದರ್ಶನ್ ಅಭಿಮಾನಿಗಳು.. ತಮ್ಮ ಎಂದಿನ ವರ್ತನೆಯಂತೆ ರಿಯಾಕ್ಟ್ ಆಗಬಾರದಿತ್ತು. ಬಯ್ಯುವುದಿರಲಿ.. ಸಭ್ಯಸ್ಥರು ನೋಡಲೂ ಆಗದಂತೆ ಕೆಟ್ಟ ಕೊಳಕು ಭಾಷೆಯಲ್ಲಿ ಕಮೆಂಟ್ ಹಾಕಿದ್ದ, ಕೆಲವು ದರ್ಶನ್ ಅಭಿಮಾನಿಗಳಿಗೆ ತಾವು ಕಮೆಂಟ್ ಹಾಕ್ತಿರೋದು ರಮ್ಯಾ ಬಗ್ಗೆ ಅನ್ನೋದು ಗೊತ್ತಿರಲಿಲ್ಲ. ರಮ್ಯಾ ಆಗಲೇ ಸೈಬರ್ ಕ್ರೈಂಗೆ ಹೋಗುವ ಸುಳಿವು ಕೊಟ್ಟಿದ್ದಾರೆ.
ರಮ್ಯಾ ಈ ಹಿಂದೆ ನಟ ಜಗ್ಗೇಶ್ ಅವರ ವರ್ತನೆಗೆ ಗರಂ ಆಗಿದ್ದವರು. ಸುದೀಪ್ ಅವರ ಜೊತೆಯಲ್ಲೂ ಜಗಳ ಮಾಡಿದ್ದವರು. ಅಷ್ಟೇ ಏಕೆ, ಸಂಭಾವನೆ ವಿಚಾರದಲ್ಲಿ ದೊಡ್ಮನೆಯವರನ್ನೂ ಬಿಟ್ಟಿರಲಿಲ್ಲ. ಪತ್ರಕರ್ತರನ್ನೂ ಬಿಟ್ಟಿಲ್ಲ. ಕನ್ನಡದ ನ್ಯೂಸ್ ಚಾನೆಲ್ ಒಂದು ರಮ್ಯಾ ಅವರ ಜೊತೆ ರಾಜಿಗೆ ದುಂಬಾಲು ಬೀಳುತ್ತಿದೆ. ರಮ್ಯಾ ಬಗ್ಗುತ್ತಿಲ್ಲ. ನಟಿ ರಮ್ಯಾ ಅವರ ಕುರಿತಂತೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ತಮ್ಮನ್ನು ಕೆಣಕಿದ ಯಾರೊಬ್ಬರನ್ನೂ ರಮ್ಯಾ ಸುಮ್ಮನೆ ಬಿಟ್ಟವರಲ್ಲ.
ಇಂಥಹವರನ್ನು ಧೈರ್ಯವಾಗಿ ಎದುರಿಸಲು ಹೆಣ್ಣು ಮಕ್ಕಳು ಹೆದರಿಸಬೇಕು. ನಾವು ಒಟ್ಟಾಗಿ ಫೈಟ್ ಮಾಡದೇ ಹೋದರೆ.. ಇಂತಹವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದಿದ್ದಾರೆ ರಮ್ಯಾ. ಈಗ ದರ್ಶನ್ ಅಭಿಮಾನಿಗಳ ಸರದಿ.



