Wednesday, July 1, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಶುರುವಾಯ್ತು ಬೆಲೆ ಇಳಿಕೆ : LPG 19 ಕೆಜಿ ಬೆಲೆ ಇಳಿಸಿದ ಕೇಂದ್ರ

SpeciallU by SpeciallU
July 1, 2026
in News
Reading Time: 1 min read
0 0
0
ಶುರುವಾಯ್ತು ಬೆಲೆ ಇಳಿಕೆ : LPG 19 ಕೆಜಿ ಬೆಲೆ ಇಳಿಸಿದ ಕೇಂದ್ರ

ಬೆಲೆ ಏರಿಕೆಯನ್ನೇ ನೋಡಿ ನೋಡಿ ಕಂಗಾಲಾಗಿದ್ದ ಜನತೆಗೆ ರಿಲೀಫ್‌ ಸಿಗುವ ಸಮಯ ಬರುತ್ತಿದೆ ಎಂಬ ನಿಟ್ಟುಸಿರು ಕೇಳಿ ಬರುತ್ತಿದೆ. ದೇಶದಲ್ಲಿ ಎಲ್‌ ಪಿಜಿ ಗ್ರಾಹಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಜುಲೈ 1 ರಂದು ಬಿಡುಗಡೆಯಾದ ಹೊಸ ಬೆಲೆಗಳ ಪ್ರಕಾರ, ಎಲ್‌ ಪಿಜಿ ಸಿಲಿಂಡರ್‌ ಗಳ ಬೆಲೆಗಳಲ್ಲಿ ಭಾರೀ ಇಳಿಕೆ ಮಾಡಲಾಗಿದೆ. ಆದರೆ ಇದು ಕಮರ್ಷಿಯಲ್‌ ಗ್ಯಾಸ್‌ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯ. ಗೃಹ ಬಳಕೆ ಸಿಲಿಂಡರ್‌ಗಳಿಗೆ ಅಲ್ಲ. ಅಷ್ಟೇ ಅಲ್ಲ, ದೆಹಲಿಯಲ್ಲಿ 185.50 ಇಳಿಕೆಯಾಗಿದ್ದರೂ, ಬೆಂಗಳೂರಿನಲ್ಲಿ ಇಳಿಕೆ ಆಗಿರುವುದು 177 ರೂ. ಇದೇಕೆ..?

ಈ ವರ್ಷ ವಾಣಿಜ್ಯ ಸಿಲಿಂಡರ್ ಬೆಲೆಗಳನ್ನು ಕಡಿಮೆ ಮಾಡಿರುವುದು ಇದೇ ಮೊದಲು. ಆದ್ರೆ ಸಾಮಾನ್ಯ ಜನರು ಬಳಸುವ 14.2 ಕೆಜಿ ದೇಶೀಯ ಎಲ್‌ ಪಿಜಿ ಸಿಲಿಂಡರ್‌ ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ ನ ಬೆಲೆಯನ್ನು 183.50 ರೂ.ಗಳಷ್ಟು ಕಡಿಮೆ ಮಾಡಿವೆ.

Related posts

KPSC ನೇಮಕಾತಿ ಅಕ್ರಮ : ಅಧ್ಯಕ್ಷರ ಮಗಳು ಸುಳ್ಳು ದಾಖಲೆ ನೀಡಿದರೆ ಓಕೆನಾ..?

ಗಂಡನಿಗಿಂತ ಹೆಚ್ಚು ದುಡಿಯುವ ಹೆಂಡತಿಗೆ ಜೀವನಾಂಶ ಕೊಡಬೇಕಿಲ್ಲ : ಹೈಕೋರ್ಟ್‌

ಇತ್ತೀಚೆಗೆ ಗ್ಯಾಸ್‌ ಸಿಲಿಂಡರ್‌ ಬೆಲೆ ಗಗನಕ್ಕೇರುತ್ತಲೇ ಇತ್ತು. ಮೇ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್‌ ನ ಬೆಲೆ ದಾಖಲೆಯ ಗರಿಷ್ಠ ರೂ. 993 ಕ್ಕೆ ಏರಿತು. ನಂತರ ಜೂನ್ 1 ರಂದು ಅದು ಇನ್ನೂ ರೂ. 42 ರಷ್ಟು ಹೆಚ್ಚಾಗಿ ದೆಹಲಿಯಲ್ಲಿ 3,113.50 ಕ್ಕೆ ತಲುಪಿತು. ಇದೀಗ ಸಿಲಿಂಡರ್ ಬೆಲೆ 183.50 ಇಳಿಕೆ ಗ್ರಾಹಕರಿಗೆ ತುಸು ನೆಮ್ಮದಿ ಕೊಟ್ಟಿದೆ.

ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2,930 ರೂ. (183.50 ರೂ. ಇಳಿಕೆ). ಗೃಹಬಳಕೆ ಸಿಲಿಂಡರ್ ಬೆಲೆ 942 ರೂ. ನಲ್ಲಿ ಬದಲಾಗದೆ ಉಳಿದಿದೆ. ಲಕ್ನೋದಲ್ಲಿ, ಹೊಸ ದರಗಳ ಪ್ರಕಾರ, ಇಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 3,236 ರೂ. ನಿಂದ 3,052.50 ರೂ. ಗೆ ಇಳಿದಿದೆ. ಗೃಹಬಳಕೆ ಸಿಲಿಂಡರ್ ಬೆಲೆ 979.50 ರೂ. ಅದೇ ರೀತಿ, ಕೋಲ್ಕತ್ತಾದಲ್ಲಿ, ವಾಣಿಜ್ಯ ಸಿಲಿಂಡರ್ ಬೆಲೆ 3,255.50 ರೂ. ನಿಂದ 3,081.50 ರೂ. ಗೆ ಇಳಿದಿದೆ.

ಯಾಕೆ ಈ ಬೆಲೆ ಇಳಿಕೆ?
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆಗಳು ನಿಯಂತ್ರಣಕ್ಕೆ ಬಂದಿರುವುದರಿಂದ ಹಾಗೂ ಜಾಗತಿಕ ಹಡಗು ಸಾಗಣೆಯ ಮಾರ್ಗಗಳು ಸುಗಮಗೊಂಡಿರುವುದರಿಂದ ಈ ಕಡಿತ ಮಾಡಲಾಗಿದೆ. ಇದು ಹೋಟೆಲ್, ರೆಸ್ಟೋರೆಂಟ್ ಮತ್ತು ಸಣ್ಣ ವ್ಯಾಪಾರಿಗಳಿಗೆ ದೊಡ್ಡ ನಿರಾಳತೆ ನೀಡಿದೆ.

ತೈಲ ಕಂಪನಿಗಳು ಪರಿಷ್ಕರಿಸಿರುವ ಹೊಸ ದರಗಳ ಪ್ರಕಾರ, 19 ಕೆಜಿ ವಾಣಿಜ್ಯ (Commercial) ಸಿಲಿಂಡರ್ ಬೆಲೆ  ₹177 ಕಡಿತಗೊಂಡು ₹3,021.00 ಆಗಿತ್ತು. ತೈಲ ಕಂಪೆನಿಗಳು 185.50 ರೂ. ಇಳಿಕೆ ಮಾಡಿದ್ದರೂ ಕರ್ನಾಟಕದಲ್ಲಿ 177 ರೂ. ಇಳಿಕೆ ಹೇಗೆ ಎಂಬ ಪ್ರಶ್ನೆಗೂ ಉತ್ತರ ಇದೆ. ತೈಲ ಕಂಪನಿಗಳು ಇಡೀ ದೇಶಕ್ಕೆ ಒಂದೇ ಸಮನಾದ ಮೊತ್ತವನ್ನು ಕಡಿತಗೊಳಿಸುವುದಿಲ್ಲ. ಈ ಬಾರಿ ದೇಶದ ವಿವಿಧ ನಗರಗಳಲ್ಲಿ173 ರಿಂದ 185.50 ರೂ. ವರೆಗೆ ಇಳಿಕೆ ಮಾಡಲಾಗಿದೆ.

ಕೋಲ್ಕತ್ತಾ: ಸುಮಾರು ₹174 ಇಳಿಕೆಯಾಗಿದೆ.

ಪಾಟ್ನಾ: ₹173 ಇಳಿಕೆಯಾಗಿದೆ.

ಬೆಂಗಳೂರು: ನಮ್ಮ ಬೆಂಗಳೂರಿನಲ್ಲಿ ಸ್ಥಳೀಯ ತೆರಿಗೆಗಳ ಲೆಕ್ಕಾಚಾರದ ಅನ್ವಯ ₹177 ರಷ್ಟು ಇಳಿಕೆ ಕಂಡುಬಂದಿದೆ.

ಹೀಗಾಗಿ, ಮಾಧ್ಯಮಗಳಲ್ಲಿ ವರದಿಯಾಗುವಂತೆ “₹185,50 ಇಳಿಕೆ” ಎಂಬುದು ದೆಹಲಿಯ ಮೂಲ ಬೆಲೆಯನ್ನು ಆಧರಿಸಿರುತ್ತದೆ. ಬೆಂಗಳೂರಿಗೆ ಬರುವಷ್ಟರಲ್ಲಿ ಸ್ಥಳೀಯ ವ್ಯಾಟ್ (VAT) ಹಾಗೂ ಸಾರಿಗೆ ವೆಚ್ಚದ ಕಾರಣಕ್ಕೆ ಅದು ₹177 ರಷ್ಟು ಕಡಿತಗೊಂಡು, ಪ್ರಸ್ತುತ ಅಂತಿಮ ದರ ₹3,0212.00 ಆಗಿದೆ.

Tags: #ಗೃಹ ಬಳಕೆ ಸಿಲಿಂಡರ್‌ #ವಾಣಿಜ್ಯ ಸಿಲಿಂಡರ್ #ಬೆಲೆ ಇಳಿಕೆ #Domestic Cylinder #Commercial Cylinder #Price Reduction
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಶುರುವಾಯ್ತು ಬೆಲೆ ಇಳಿಕೆ : LPG 19 ಕೆಜಿ ಬೆಲೆ ಇಳಿಸಿದ ಕೇಂದ್ರ
  • KPSC ನೇಮಕಾತಿ ಅಕ್ರಮ : ಅಧ್ಯಕ್ಷರ ಮಗಳು ಸುಳ್ಳು ದಾಖಲೆ ನೀಡಿದರೆ ಓಕೆನಾ..?
  • ಗೃಹಜ್ಯೋತಿ ರೀವ್ಯೂ ಶುರು : ಅಧಿಕಾರಿಗಳು ಬಂದಾಗ ಈ ದಾಖಲೆ ಮರೆಯಬೇಡಿ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಶುರುವಾಯ್ತು ಬೆಲೆ ಇಳಿಕೆ : LPG 19 ಕೆಜಿ ಬೆಲೆ ಇಳಿಸಿದ ಕೇಂದ್ರ

ಶುರುವಾಯ್ತು ಬೆಲೆ ಇಳಿಕೆ : LPG 19 ಕೆಜಿ ಬೆಲೆ ಇಳಿಸಿದ ಕೇಂದ್ರ

July 1, 2026
KPSC ನೇಮಕಾತಿ ಅಕ್ರಮ : ಅಧ್ಯಕ್ಷರ ಮಗಳು ಸುಳ್ಳು ದಾಖಲೆ ನೀಡಿದರೆ ಓಕೆನಾ..?

KPSC ನೇಮಕಾತಿ ಅಕ್ರಮ : ಅಧ್ಯಕ್ಷರ ಮಗಳು ಸುಳ್ಳು ದಾಖಲೆ ನೀಡಿದರೆ ಓಕೆನಾ..?

July 1, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.