ಘೋಸ್ಟ್ (Ghost). ಈ ವರ್ಷದಲ್ಲಿ ರಿಲೀಸ್ ಆದ ಶಿವಣ್ಣ (Shiva rajkumar) ಹೀರೋ ಆಗಿ ನಟಿಸಿದ ಮೊದಲ ಸಿನಿಮಾ. ಕಬ್ಜ (kkabza) ಮತ್ತು ತಮಿಳಿನ ಜೈಲರ್ (Jailer) ರಿಲೀಸ್ ಆಯಿತಾದರೂ, ಆ ಎರಡೂ ಚಿತ್ರದಲ್ಲಿ ಶಿವಣ್ಣರದ್ದು(Shiva rajkumar) ಗೆಸ್ಟ್ ಅಪಿಯರೆನ್ಸ್, ಅಷ್ಟೆ. ಹೀಗಾಗಿ ಘೋಸ್ಟ್ (Ghost) ಮೇಲೆ ಭಾರಿ ನಿರೀಕ್ಷೆಗಳಿದ್ದವು. ನಿರೀಕ್ಷೆಗೆ ತಕ್ಕಂತೆಯೇ ಶಿವಣ್ಣ (Shiva rajkumar) ಅಭಿನಯದ ಸೂಪರ್ ಹಿಟ್ ಅಯ್ತು. ಆಗಿದೆ. ಚಿತ್ರದ ಕಥೆ ವಿಭಿನ್ನವಾಗಿದ್ದು, ಶ್ರೀನಿ ತಮ್ಮದೇ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ‘ಘೋಸ್ಟ್’ (Ghost) ಕತೆ ಹೇಳಿದ್ದರು. ಮುಂದಿನ ಸಿನಿಮಾಗಳಿಗೂ ಈ ಕತೆಯಲ್ಲಿ ಲಿಂಕ್ ಕೊಟ್ಟಿದ್ದಾರೆ. . ಸೆಂಟ್ರಲ್ ಜೈಲ್ ಒಂದನ್ನು ಹೈಜಾಕ್ ಮಾಡುವುದರ ಸುತ್ತಾ ಸುತ್ತುವ ‘ಘೋಸ್ಟ್’ ಕತೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಶಿವಣ್ಣನ ಅಭಿಮಾನಿಯೂ ಆಗಿರುವ ಶ್ರೀನಿ (shreeni) ತನ್ನ ನೆಚ್ಚಿನ ನಟನನ್ನು ಬಿಗ್ ಡ್ಯಾಡಿಯಾಗಿ (big daddy) ತೋರಿಸಿ ಗೆದ್ದಿದ್ಧಾರೆ.
ಘೋಸ್ಟ್’ ಸಿನಿಮಾ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಿಗೂ ಡಬ್ ಆಗಿ ರಿಲೀಸ್ ಆಗಿತ್ತು. ಕನ್ನಡ ಜೊತೆಗೆ ತೆಲುಗು ವರ್ಷನ್ ನವೆಂಬರ್ 17ಕ್ಕೆ ಓಟಿಟಿಗೆ ಬರುತ್ತೆ ಎನ್ನಲಾಗ್ತಿದೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ತಿಂಗಳಿಗೂ ಮೊದ್ಲೆ ಓಟಿಟಿಗೆ ಬರ್ತಿವೆ. ಅಕ್ಟೋಬರ್ 19ಕ್ಕೆ ರಿಲೀಸ್ ಆಗಿದ್ದ ‘ಘೋಸ್ಟ್’ ತಿಂಗಳಿಗೂ ಮೊದ್ಲೆ ಅಂದರೆ ನವೆಂಬರ್ 17ಕ್ಕೆ ಓಟಿಟಿಗೆ ಬಂದಂತಾಗುತ್ತಿದೆ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ಘೋಸ್ಟ್’ ಚಿತ್ರದಲ್ಲಿ ಮಲಯಾಳಂನ ಜಯರಾಂ ಹಾಗೂ ಬಾಲಿವುಡ್ ಅನುಪಮ್ ಕೇರ್ (Anupam kher) ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ದ್ವಿಪಾತ್ರದಲ್ಲಿ ಶಿವಣ್ಣನ ಆರ್ಭಟ ನೋಡಿದ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದರು. ಎಸಿಪಿ ಚೆಂಗಪ್ಪ (ACP Chengappa) ಹಾಗೂ ದಳವಾಯಿ ಮುದ್ದಣ್ಣ (Dalavayi muddanna) ನಡುವಿನ ಹಾವು ಏಣಿ ಆಟವಂತೂ ಸಖತ್ ಕಿಕ್ ಕೊಟ್ಟಿತ್ತು. ಪರಭಾಷೆಯ 3 ದೊಡ್ಡ ಸಿನಿಮಾಗಳ ನಡುವೆ ‘ಘೋಸ್ಟ್’ ಸಿನಿಮಾ ತೆರೆಕಂಡಿತ್ತು. ತಮಿಳಿನ ‘ಲಿಯೋ’, ತೆಲುಗಿನ ‘ಭಗವಂತ್ ಕೇಸರಿ’ ಹಾಗೂ ‘ಟೈಗರ್ ನಾಗೇಶ್ವರರಾವ್’ ಸಿನಿಮಾಗಳ ಜೊತೆ ಬಂದಿದ್ದ ‘ಘೋಸ್ಟ್’ ಕರ್ನಾಟಕದಲ್ಲಿ ಗೆದ್ದಿತ್ತು. 3 ಚಿತ್ರಗಳ ಪೈಪೋಟಿ ನಡುವೆಯೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು.
ನವೆಂಬರ್ 17ಕ್ಕೆ ಘೋಸ್ಟ್ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಝೀ5 (Zee 5) ಸಿನಿಮಾ ಪ್ರಸಾರವಾಗಲಿದೆ. ಅಂದಹಾಗೆ ಇದು ಅಧಿಕೃತ ಘೋಷಣೆಯೇನೂ ಅಲ್ಲ. ಆದರೆ ಸುದ್ದಿ ಪಕ್ಕಾ.



