ಸುದೀಪ್ (Kichcha Sudeep) ಹೆಸರಲ್ಲಿ ಅಭಿಮಾನಿಗಳು ಹಚ್ಚೆ ಹಾಕಿಸಿಕೊಳ್ತಾರೆ. ಸುದೀಪ್ ಅದೆಷ್ಟು ಬಾರಿ ಬೇಡ ಎಂದು ಬುದ್ದಿ ಹೇಳಿದರೂ ಹಚ್ಚೆ ಹಾಕಿಸಿಕೊಂಡು ಅಣ್ಣಾ ನೋಡು ಅಂತಾ ಬರ್ತಾರೆ. ತಮ್ಮ ತಮ್ಮ ಆಟೋ, ಕಾರುಗಳ ಮೇಲೆ ಸುದೀಪ್ (Kichcha Sudeep) ಹೆಸರು ಪ್ರಿಂಟ್ ಹಾಕ್ತಾರೆ. ಫೋಟೋ ಇಟ್ಟುಕೊಂಡು ಪೂಜೆ ಮಾಡುವವರಿದ್ದಾರೆ. ದೇವಸ್ಥಾನ ಕಟ್ಟಿಸುತ್ತಿರುವವರೂ ಇದ್ದಾರೆ. ಇನ್ನೂ ಕೆಲವರು ಸುದೀಪ್ ಹೆಸರಲ್ಲಿ ಸಮಾಜ ಸೇವೆ ಮಾಡ್ತಾರೆ. ಕೇವಲ ಅಭಿಮಾನಕ್ಕಾಗಿ.. ಸುದೀಪ್ ಸಿನಿಮಾಗಳಿಂದ ಸಿಗುವ ಮನರಂಜನೆ, ಆತ್ಮತೃಪ್ತಿಗಾಗಿ.. ಏಕೆಂದರೆ.. ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್. ಈ ಸ್ಟಾರ್ ನಟನ ಹೆಸರನ್ನು ಅವಳಿ ನಕ್ಷತ್ರಗಳಿಗೆ ನಾಮಕರಣ ಮಾಡಿ ಹೊಸ ಸ್ಟಾರ್ ಸೃಷ್ಟಿಸಿದ್ದಾರೆ ಫ್ಯಾನ್ಸ್.
ಇದು ಆಕಾಶದ ನಕ್ಷತ್ರಗಳಿಗೆ ನೆಚ್ಚಿನ ನಕ್ಷತ್ರದ ಹೆಸರಿಟ್ಟು.. ನಕ್ಷತ್ರವನ್ನು ಅಜರಾಮಜರವಾಗಿಸುವ ಪ್ಲಾನ್. ಸೆಪ್ಟೆಂಬರ್ 2 ರಂದು ಕಿಚ್ಚ ಸುದೀಪ್ ಹಾಫ್ ಸೆಂಚುರಿ ಬಾರಿಸುತ್ತಿದ್ದಾರೆ. 50ನೇ ಹುಟ್ಟುಹಬ್ಬ.
ತಮ್ಮ 50ನೇ ಜನುಮದಿನವನ್ನ ಅಭಿಮಾನಿಗಳೊಂದಿಗೆ ಆಚರಿಸಲು ಕಿಚ್ಚ ಸುದೀಪ್ ಮನಸ್ಸು ಮಾಡಿದ್ದಾರೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ (Nandi links ground) ಅಭಿಮಾನಿಗಳ ಜೊತೆಗೆ ಕಿಚ್ಚ ಸುದೀಪ್ ತಮ್ಮ ಹುಟ್ಟಿದ ಹಬ್ಬವನ್ನ ಸಂಭ್ರಮಿಸಲಿದ್ದಾರೆ.
ಹರೀಶ್ ಅರಸು (Hareesh Arasu)ತಮ್ಮದೇ ಆದ ಅರಸು ಕ್ರಿಯೇಷನ್ಸ್ ಅಡಿಯಲ್ಲಿ ಕಿಚ್ಚ ಸುದೀಪ್ ಅವರ ಹುಟ್ಟಹಬ್ಬಕ್ಕೆ ಪ್ರೀತಿಯ ಉಡುಗೊರೆ ನೀಡಿದ್ದಾರೆ. ಆಕಾಶದ ನಕ್ಷತ್ರಕ್ಕೆ ಕಿಚ್ಚ ಸುದೀಪ್ (Kichcha Sudeep) ಎಂದು ನಾಮಕರಣ ಮಾಡಿದ್ದಾರೆ. ಕನ್ಯಾರಾಶಿ ನಕ್ಷತ್ರಪುಂಜದ ಅವಳಿ ನಕ್ಷತ್ರಗಳಿಗೆ ‘ಕಿಚ್ಚ ಸುದೀಪ್’ ಎಂದು ಹೆಸರಿಟ್ಟಿದ್ದಾರೆ. ಡೆಡಿಕೇಟೆಡ್ ಸ್ಟಾರ್ಸ್.ಕಾಮ್ (Dedicatedstars.com) ಮೂಲಕ ಅವಳಿ ನಕ್ಷತ್ರಗಳಿಗೆ ‘ಕಿಚ್ಚ ಸುದೀಪ್’ ಎಂದು ಹೆಸರಿಡುವುದರ ಜೊತೆಗೆ ನೋಂದಣಿ ಕೂಡ ಮಾಡಿಸಿದ್ದಾರೆ.
ಜೊತೆಗೆ ಸುದೀಪ್ ಅವರ ಕೆ46 ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗುತ್ತಿದೆ. ಇನ್ನೊಂದು ಕಡೆ ಕೆಆರ್‍ಜಿ (KRG Studios) ಸ್ಟುಡಿಯೋದವರ ಜೊತೆ ಸುದೀಪ್ ಅವರ 47ನೇ ಸಿನಿಮಾ ಅನೌನ್ಸ್ ಆಗಲಿದೆ. ಒಟ್ಟಿನಲ್ಲಿ ಈ ಬಾರಿ ಸುದೀಪ್ ಅಭಿಮಾನಿಗಳು ಹೊಸ ಇತಿಹಾಸವನ್ನೇ ಬರೆಯುತ್ತಿದ್ದಾರೆ. ತಮ್ಮ ಅಭಿಮಾನದ ನಕ್ಷತ್ರವನ್ನು ಹೃದಯದಲ್ಲಲ್ಲ.. ಆಕಾಶಕ್ಕೇ ಏರಿಸಿ ಚರಿತ್ರೆ ಬರೆದಿದ್ದಾರೆ. ಸುದೀಪ್ ಅಭಿಮಾನಿಗಳು ಇರೋದೇ ಹಾಗೆ..



