ಕೇಂದ್ರ ಸರ್ಕಾರ ಈಗ ಮಾಡಿರೋ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಜಸ್ಟ್ ಆರಂಭ ಅಷ್ಟೇ. ಇಂತಹ ದರ ಏರಿಕೆ ಸುದ್ದಿಗಳು ಇನ್ನು ಮುಂದೆ ಬರ್ತಾನೇ ಇರುತ್ತೆ. ರೇಟ್ ಜಾಸ್ತಿ ಆಯ್ತಂತೆ.. ಇವರು ಜಾಸ್ತಿ ಮಾಡಿದ್ರಂತೆ. ಒಂದಕ್ಕೊಂದು ಚೈನ್ ಲಿಂಕ್ ಆಗಿ.. ಹೆಂಗೆಲ್ಲ ರೇಟು ದುಬಾರಿಯಾಗುತ್ತೆ ಅಂದ್ರೆ.. ಬದುಕೋಕೆ ಆಗಲ್ಲ. ಹಾಗಂತ ಹಿಂಗೇ ಇರೋಕೂ ಆಗಲ್ಲ. ಈ ನಡುವೆಯೇ ಕಾಂಗ್ರೆಸ್ ನಾಯಕರು ಮೋದಿಗೆ ʻಮನಮೋಹನ್ ಸಿಂಗ್ ಮಾಡೆಲ್ʼ ಸೂತ್ರ ಮುಂದಿಟ್ಟಿದ್ದಾರೆ. ಇದನ್ನು ಫಾಲೋ ಮಾಡಿದರೆ ಬೆಲೆ ಏರಿಕೆಯಿಂದ ಜನರನ್ನು ತಪ್ಪಿಸಬಹುದು ಎನ್ನುವುದು ಅವರ ನಂಬಿಕೆ. ಇಷ್ಟಕ್ಕೂ ಏನಿದು ಮನಮೋಹನ್ ಸಿಂಗ್ ಸೂತ್ರ..?
ಏಕೆಂದರೆ ಈಗ ಒಂದು ಲೀ ಪೆಟ್ರೋಲ್, ಡೀಸೆಲ್‌ಗೆ 140 ರೂಪಾಯಿ ಖರ್ಚು ಆಗುತ್ತಿದೆ. ಅದನ್ನ 106 ರ್ರುಪಾಯಿಗೆ ಕೊಟ್ರೆ ಲಾಸ್ ಆಗೋದು ಗ್ಯಾರಂಟಿ. ಇದಕ್ಕೆಲ್ಲ ಪರಿಹಾರ ಯುಪಿಎ ಮಾಡೆಲ್ ಫಾಲೋ ಮಾಡಬಹುದಾ..? ಅಂದ್ರೆ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಮಾಡಿದ್ದ ಆಯಿಲ್ ಬಾಂಡ್ಸ್ ಲೆಕ್ಕಾಚಾರವನ್ನ ಮತ್ತೆ ತಂದ್ರೆ ಜನರನ್ನು ಹೊರೆಯಿಂದ ಬಚಾವ್ ಮಾಡಬಹುದು ಎಂದು ಚರ್ಚೆಯಾಗುತ್ತಿವೆ.
UPA ಮಾಡೆಲ್ನಲ್ಲಿ ದರ ನಿಯಂತ್ರಣ ಸಾಧ್ಯವೇ..?
ಸಬ್ಸಿಡಿ ಕೊಡೋದ್ರಿಂದ ಗ್ರಾಹಕರಿಗೆ ಹೊರೆ ಕಡಿಮೆ ಮಾಡಬಹುದಾ..? ಇದು ಈಗಿನ ಪ್ರಶ್ನೆ. ಹಿಂದಿನ ಯುಪಿಎ ಸರ್ಕಾರದಲ್ಲಿ ಇನ್ನೂ ಒಂದು ಮಾಡೆಲ್ ಇತ್ತು. ಅದು ಬಾಂಡ್. ಆಯಿಲ್ ಬಾಂಡ್. ಅದು ಮನಮೋಹನ್ ಸಿಂಗ್ ಸರ್ಕಾರ 2005ರಿಂದ 2014ವರೆಗೆ ಆಯಿಲ್ ಬಾಂಡ್ಸ್ ಕೊಟ್ಟಿತ್ತು. ಆ ಮೂಲಕ ಬೆಲೆ ನಿಯಂತ್ರಿಸುವ ಸಾಹಸ ಮಾಡಿತ್ತು.
ಆಯಿಲ್ ಬಾಂಡ್ ಎಂದರೆ..
ಆಯಿಲ್ ಬಾಂಡ್ಸ್ ಎಂದರೆ ಸರ್ಕಾರವು ತೈಲ ಮಾರಾಟ ಕಂಪೆನಿಗಳಿಗೆ ನೀಡುವ ವಿಶೇಷ ಬಾಂಡ್ಗಳು. ನಗದು ಸಬ್ಸಿಡಿ ಬದಲು ಕೊಡುವ ಒಂದು ರೀತಿಯ ಕಡ್ಡಾಯ ಸಾಲ ಅಥವಾ ಭರವಸೆ ಪತ್ರ. ವಿಷ್ಯದಲ್ಲಿ ತಿರುಗಿಸಬೇಕಾದ ಸಾಲ ಪತ್ರ. ಈ ಬಾಂಡ್ಗಳ ಬಡ್ಡಿ ಮತ್ತು ಅಸಲು ಮೊತ್ತವನ್ನು ಮುಂದಿನ ಸರ್ಕಾರಗಳು ತೀರಿಸಬೇಕು.
ಇದನ್ನೇ ಮನಮೋಹನ್ ಸಿಂಗ್ ಸರ್ಕಾರ ಕೊಟ್ಟಿತ್ತು. ಹಾಗಂತ ಇದನ್ನ ತೀರಿಸಿದ್ದು ಹೇಗೆ.. ಹೇಗೆ ಎಂದರೆ ಮುಂದೆ ಬಂದ ಬಿಜೆಪಿ ಅಥವಾ ಎನ್‌ಡಿಎ ಸರ್ಕಾರ.. ಅದನ್ನ ತೀರಿಸಬೇಕು. ತೀರಿಸಲೇಬೇಕು.
ಮನಮೋಹನ್ ಸಿಂಗ್ ಆಯಿಲ್ಸ್ ಬಾಂಡ್ಸ್ ಮೌಲ್ಯ 1.53 ಲಕ್ಷ ಕೋಟಿ..!
ಮೋದಿ ಸರ್ಕಾರದಿಂದ ವಾಪಸ್ ಕೊಟ್ಟ 3.23 ಲಕ್ಷ ಕೋಟಿ..!
ಮನಮೋಹನ್ ಸಿಂಗ್ ಮಾಡಿದ್ದ ಆಯಿಲ್ ಬಾಂಡ್ಸ್ ತೀರಿಸಿದ್ದು ಮೋದಿ ಸರ್ಕಾರ. ಕೊಟ್ಟಿದ್ದ ಆಯಿಲ್ ಬಾಂಡ್ಸ್ ಮೌಲ್ಯ 1.53 ಲಕ್ಷ ಕೋಟಿ ಆದರೆ, ಮೋದಿ ಸರ್ಕಾರ ವಾಪಸ್ ಕೊಟ್ಟಿದ್ದು 3.23 ಲಕ್ಷ ಕೋಟಿ.
ಆಯಿಲ್ ಬಾಂಡ್ಸ್ ಅಂದ್ರೆ ಹಾಗೆ.. ನಾವು ಬ್ಯಾಂಕಿನಲ್ಲಿ ಹೋಮ್ ಲೋನ್ ಅಥವಾ ಪರ್ಸನಲ್ ಲೋನ್ ತಗೊಂಡು ಕಟ್ತೀವಲ್ಲ.. ಹಾಗೆ ಯುಪಿಎ ಸರ್ಕಾರ ಆಯಿಲ್ ಕಂಪೆನಿಗಳಿಂದ ಸಾಲ ತಗೊಂಡಿತ್ತು. ಆಮೇಲೆ ಅದನ್ನ ಇಎಂಐ ಲೆಕ್ಕದಲ್ಲಿ, ಬಡ್ಡಿ ಚಕ್ರಬಡ್ಡಿ ಸಮೇತ ವಾಪಸ್ ಕೊಡ್ತು. ಅಂದ್ರೆ.. ಬಾಂಡ್ ಪೇಪರ್ ಕೊಟ್ಟು, ಅದನ್ನ ಬಡ್ಡಿ ಸಮೇತ ಕೊಡೋದು. ಸಿಂಪಲ್ ಆಗ್ ಹೇಳ್ಬೇಕಂದ್ರೆ.. ಪೋಸ್ಟ್ ಪೋನ್ ಮಾಡೋದು. ಇದನ್ನ ಮತ್ತೆ ಜಾರಿಗೆ ತರೋದು ಒಳ್ಳೇದಾ.. ಆರ್ಥಿಕ ತಜ್ಞರೇ ಹೇಳಬೇಕು.
ಪೊಲಿಟಿಕಲ್ ಟೀಕೆಗಳೇನೇ ಇರಲಿ.. ಜನಸಾಮಾನ್ಯರಿಗೆ ಬೇಕಿರೋದು ನಾರ್ಮಲ್ ಜೀವನ. ಅಷ್ಟೇ. ಸರ್ಕಾರ ಆಯಿಲ್ ಬಾಂಡ್ ಕೊಡೋದ್ರ ಬದಲಿಗೆ ಟ್ಯಾಕ್ಸ್ ಕಡಿಮೆ ಮಾಡಿದ್ರೆ.. ಗ್ರಾಹಕರಿಗೆ ಲಾಭ ಆಗುತ್ತದೆ, ಅಷ್ಟೇ ಅಲ್ಲ.. ದೇಶದ ಎಕಾನಮಿಯೂ ಒಂದು ಲೆವೆಲ್ಲಿಗೆ ಕಂಟ್ರೋಲಿನಲ್ಲಿರುತ್ತದೆ. ಅದನ್ನ ಸರ್ಕಾರ ಅರ್ಥ ಮಾಡ್ಕೋಬೇಕು. ಅಷ್ಟೇ.



