ಕಾಂತಾರ ಚಾಪ್ಟರ್ 01. ಹೊಸ ಇತಿಹಾಸವನ್ನೇ ಬರೆಯುತ್ತಿದೆ. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಹೊಂಬಾಳೆ, ವಿಜಯ್ ಕಿರಗಂದೂರು ಮಾಡಿರುವ ಮ್ಯಾಜಿಕ್ ಕೊಟ್ಟಿರೋ ಸಂದೇಶ ಒಂದೇ. ಕಂಟೆಂಟ್ ಗಟ್ಟಿ ಇದ್ರೆ.. ಜನ ಟಿಕೆಟ್ ದುಡ್ಡು ಎಷ್ಟಾದ್ರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡ್ತಾರೆ ಅನ್ನೋದು. ಬೆಂಗಳೂರು ಹೃದಯಭಾಗದಲ್ಲಿರುವ ವೀರೇಶ್ ಚಿತ್ರಮಂದಿರದ ದಾಖಲೆಯನ್ನೇ ನೋಡಿ. ಅಲ್ಲಿ ಕೇವಲ 4 ದಿನಕ್ಕೆ ಆಗಿರುವ ಕಲೆಕ್ಷನ್ 50 ಲಕ್ಷಕ್ಕೂ ಹೆಚ್ಚು. ಟಿಕೆಟ್ ರೇಟ್ ಕೂಡಾ ಮುಖ್ಯ ಅಲ್ಲ. ವಿಶೇಷ ಎಂದರೆ ರಿಲೀಸ್ ಆದ ಎರಡೇ ದಿನಕ್ಕೆ 200 ಕೋಟಿಯ ಗಡಿ ದಾಟಿದೆ.
ಈ ಲೆಕ್ಕದಲ್ಲಿ ಕಾಂತಾರ.. ಚಾಪ್ಟರ್ 01. ಕಂಡು ಕೇಳರಿಯದ ದಾಖಲೆಗಳನ್ನ ಸೃಷ್ಟಿಸ್ತಾ ಇದೆ. ವಿಶ್ವಾದ್ಯಂತದ ದಾಖಲೆಯನ್ನ ಆಮೇಲ್ ನೋಡೋಣ. ಕೇವಲ ವೀರೇಶ್ ಥಿಯೇಟರ್ ವಿಚಾರಕ್ಕೆ ಬಂದ್ರೆ.. ಅಲ್ಲಿ ಕೇವಲ 4 ದಿನಕ್ಕೆ 50 ಲಕ್ಷ ಕಲೆಕ್ಷನ್ ಮಾಡಿದೆ ಕಾಂತಾರ. ಕೇವಲ 4 ದಿನ. 4 ದಿನಕ್ಕೆ 48 ಶೋ. ಕೇವಲ 48 ಶೋಗಳಿಗೆ ವೀರೇಶ್ ಥಿಯೇಟರ್ಸ್ ಮಾಡಿರೋ ಕಲೆಕ್ಷನ್ ಬರೋಬ್ಬರಿ 50 ಲಕ್ಷಕ್ಕೂ ಜಾಸ್ತಿ. ಇದು ವೀರೇಶ್ ಥಿಯೇಟರ್ ಇತಿಹಾಸದಲ್ಲೇ ವಿಶ್ವದಾಖಲೆ. ಒಂದು ಸಿನಿಮಾದಿಂದ.. ಕೇವಲ 4 ದಿನಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಕಲೆಕ್ಷನ್ ಮಾಡಿದ ಉದಾಹರಣೆ ಚಿತ್ರರಂಗದ ಇತಿಹಾಸದಲ್ಲೇ ಇಲ್ಲ. ವೀರೇಶ್ ಥಿಯೇಟರ್ ಇತಿಹಾಸದಲ್ಲೂ ಇದು ದಾಖಲೆಯೇ.
ಇದೇ ವೀರೇಶ್ ಚಿತ್ರಮಂದಿರದ ಮಾಲೀಕರ ಇನ್ನೊಂದು ಥಿಯೇಟರ್ ವಿಕ್ಟರಿಯಲ್ಲೂ ಅಷ್ಟೇ. ವಿಕ್ಟರಿಯಲ್ಲಿ ಕಾಂತಾರದ ಕಲೆಕ್ಷನ್ 4 ದಿನಕ್ಕೆ 30 ಲಕ್ಷಕ್ಕೂ ಹೆಚ್ಚು.
ನೀವು ಹಿಂದಿಗೆ ಹೋಗಿ.. ದೆಹಲಿಯಲ್ಲಿ ಟಿಕೆಟ್ ರೇಟ್ ನೋಡಿ. ಕೇರಳಕ್ಕೆ ಹೋಗಿ ನೋಡಿ.. ಮುಂಬೈನಲ್ಲಿ ನೋಡಿ.. ಎಲ್ಲೂ ಕೂಡಾ ಟಿಕೆಟ್ ರೇಟ್ ಅನ್ನೋದು 400.. 500.. ಸಾವಿರ.. ಹೀಗೆ ಇದೆ. ಸಾವಿರಾರು ರೂಪಾಯಿ ಕೊಟ್ಟು ಜನ ಥಿಯೇಟರಿಗೆ ಬರ್ತಿದ್ದಾರೆ. ಟಿಕೆಟ್ ರೇಟ್ ಕಡಿಮೆ ಇದ್ರೆ.. ಜನ ಜಾಸ್ತಿ ಬರ್ತಾರೆ ಅನ್ನೋದು ಫೇಯ್ಲ್ ಆಗಿದೆ.
‘ಕಾಂತಾರ ಚಾಪ್ಟರ್ 1’ ಚಿತ್ರದ ಮೊದಲ ದಿನ 62 ಕೋಟಿ ರೂ. ಗಳಿಕೆ ಆಗಿದ್ದು, ಭಾಷಾವಾರು ಲೆಕ್ಕ ನೋಡುವುದಾದರೆ ಕನ್ನಡದಿಂದ 20 ಕೋಟಿ ರೂ., ತೆಲುಗಿನಿಂದ 13 ಕೋಟಿ ರೂ., ಹಿಂದಿಯಿಂದ 18.5 ಕೋಟಿ ರೂ., ತಮಿಳಿನಿಂದ 5.5 ಕೋಟಿ ರೂ. ಹಾಗೂ ಮಲಯಾಳಂನಿಂದ 5.25 ಕೋಟಿ ರೂ. ಹರಿದು ಬಂದಿದೆ. 2 ದಿನಗಲಲ್ಲಿ 100 ಕೋಟಿ ರೂ. ಕ್ಲಬ್ ಸೇರಿದೆ. ಮುಂದಿನ ದಿನಗಳಲ್ಲಿ ಈ ಸಿನಿಮಾ 300 ಕೋಟಿ ರೂ. ಕ್ಲಬ್ ಸೇರುವ ಸಾಧ್ಯತೆ ಇದೆ. ಭಾರತದಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾವಾಗಿ ಹೊರಹೊಮ್ಮಿದೆ. IMDbನಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಸಿನಿಮಾವಾಗಿದ್ದು, 9.6 ರೇಟಿಂಗ್ ಸಿಕ್ಕಿದೆ. ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾ ಇದಾಗಿದೆ.
ಇನ್ನು ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಿಂದಿ, ಬೆಂಗಾಲಿ, ಇಂಗ್ಲಿಷ್ ವರ್ಷನ್ನಲ್ಲಿ ಸಿನಿಮಾ ಬಿಡುಗಡೆ ಆಗಿದ್ದು, ವೀಕೆಂಡ್ ದಿನದ ಎಲ್ಲ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೂಡ ಭರ್ಜರಿ ಕಲೆಕ್ಷನ್ ನಿರೀಕ್ಷೆ ಹುಟ್ಟುಹಾಕಿದೆ. ಕೆಜಿಎಫ್ 2’ ಬಳಿಕ ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕ್ಲಬ್ ಸೇರಿದ ಚಿತ್ರ ಕಾಂತಾರ ಚಾಪ್ಟರ್ 01. ಕನ್ನಡದಿಂದ 20 ಕೋಟಿ ರೂಪಾಯಿ, ತೆಲುಗಿನಿಂದ 13 ಕೋಟಿ ರೂಪಾಯಿ, ಹಿಂದಿಯಿಂದ 18.5 ಕೋಟಿ ರೂಪಾಯಿ, ತಮಿಳಿನಿಂದ 5.5 ಕೋಟಿ ರೂಪಾಯಿ ಹಾಗೂ ಮಲಯಾಳಂನಿಂದ 5.25 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.



