ತಮಿಳು ಸ್ಟಾರ್ ನಟ ಜಯಂ ರವಿ ಹೆಚ್ಚೂ ಕಡಿಮೆ ಅತ್ತಿದ್ದಾರೆ. ಅಳುಮುಂಜಿಯಂತೆ ಆಕ್ರೋಶಗೊಂಡಿದ್ಧಾರೆ. ಪತ್ನಿ ಆರತಿ ದೂರವಾಗಿದ್ಧಾರೆ. ಮಕ್ಕಳನ್ನೂ ಹತ್ತಿರಕ್ಕೆ ಸೇರಿಸುತ್ತಿಲ್ಲ. ಜೊತೆಗೆ ಡಿವೋರ್ಸ್ ಅರ್ಜಿಯೂ ಇತ್ಯರ್ಥವಾಗಿಲ್ಲ. ಇದೆಲ್ಲದರ ಮಧ್ಯೆ ರವಿಯವರ ಪ್ರೇಯಸಿ ಎನ್ನಲಾಗಿದ್ದ ಗಾಯಕಿ ಕೆನೀಶಾ ಫ್ರಾನ್ಸಿಸ್ ದೂರವಾಗಿದ್ಧಾರೆ. ಈ ಮಧ್ಯೆ ಜಯಂ ರವಿ ಅವರು ಹಿರಿಯ ನಟಿಯೊಬ್ಬರನ್ನು ʻಇಡ್ಲಿ ಬ್ಯೂಟಿʼ ಎಂದು ಕರೆದಿದ್ದಾರೆ. ಆ ಇಡ್ಲಿ ಸುಂದರಿ ಖುಷ್ ಬೂನೇ ಎನ್ನುವುದು ತಮಿಳು ಸೋಷಿಯಲ್ ಮೀಡಿಯಾ ವಾದಿಗಳ ಡೌಟು. ಅದಕ್ಕೆ ಕಾರಣಗಳೂ ಇವೆ.
ಮೂರು ಅಕ್ಷರದ ಹೆಸರಿನ ನಟಿಯೊಬ್ಬಳು ಇದ್ದಾಳೆ, ಇಡ್ಲಿ ನಟಿ, ಅದನ್ನು ಹೇಳಿಬಿಡ್ತೀನಿ ಎಂದ ಜಯಂ ರವಿ ಹೆಸರು ಹೇಳಿಲ್ಲ. “ಅವರ ತಲೆಮಾರಿನ ಮೂವರು ಹಿರಿಯ ನಟರ ಜೊತೆ ಸೇರಿ ನನ್ನ ಸಂಸಾರ ಹಾಳು ಮಾಡಲು ನೋಡಿದ್ಲು. ಮೂವರ ಜೀವನ ಹಾಳು ಮಾಡಲು ಹೊರಟ ಆ ಹೆಂಗಸು, ನನ್ನ ಜೀವನದ ಬಗ್ಗೆ ಮಾತನಾಡುತ್ತಾಳೆ. ಬೇರೆ ಯಾವುದಾದರೂ ವಿಚಾರ ಬಂದಾಗ ಫೆಮಿನಿಸಂ, ಅದು ಇದು ಅಂತಾಳೆ. ನನ್ನ ಬಗ್ಗೆ ಮಾತನಾಡಲು ನಿನಗೆ ಮಾನ ಮರ್ಯಾದೆ ಇದ್ಯಾ? ನನಗಿಂತ ಚೆನ್ನಾಗಿ ನಟಿಸ್ತೀಯಾ ನಟಿಸು, ನಾನೇ ನಿನ್ನ ಕಾಲಿಗೆ ಬೀಳ್ತೀನಿ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡಬೇಡ” ಎಂದು ಆಕ್ರೋಶಭರಿತರಾಗಿದ್ದಾರೆ.
ಅಂದಹಾಗೆ ಜಯಂ ರವಿ ಆರೋಪಿಸುತ್ತಿರುವ ಇಡ್ಲಿ ನಟಿ ಖುಷ್ ಬೂ ಸುಂದರ್ ಇರಬಹುದೇ.. ಅದಕ್ಕೆ ಕಾರಣ ʻಇಡ್ಲಿ ಬ್ಯೂಟಿʼ ಎಂದು ಹೆಸರು ಹೇಳಿರೋದು. 90ರ ದಶಕದಲ್ಲಿ ಖುಷ್ ಬೂ ತಮಿಳುನಾಡಿನಲ್ಲಿ ಜನಪ್ರಿಯತೆ ಹೇಗಿತ್ತು ಎಂದರೆ ಖುಷ್ ಬೂಗಾಗಿ ದೇವಸ್ಥಾನವನ್ನೇ ಕಟ್ಟಿಸಿದ್ದರು. ಪೂಜೆಯನ್ನೂ ಮಾಡುತ್ತಿದ್ದರು. ಅವರು ಇಡ್ಲಿ ಬ್ಯೂಟಿ ಎಂದು ಕರೆಯುತ್ತಿದ್ದರು. ಕಾರಣ ಇಷ್ಟೇ.. ಖುಷ್ ಬೂ ಸಖತ್ ವೈಟ್. ಮುಖದ ಕಳೆ, ಗುಂಡನೆಯ ಚಹರೆ ಮತ್ತು ಬಿಳಿ ಬಣ್ಣ ಇದೆಲ್ಲವನ್ನೂ ನೋಡಿದ ಜನ ಅತ್ಯಂತ ಮೃದುವಾದ ಇಡ್ಲಿಗಳನ್ನು “ಖುಷ್ ಬೂ ಇಡ್ಲಿ” ಎಂದೇ ಕರೆಯಲು ಪ್ರಾರಂಭಿಸಿದರು ಮತ್ತು ಅದು ಇಂದಿಗೂ ಪ್ರಸಿದ್ಧವಾಗಿದೆ. ದಕ್ಷಿಣ ಭಾರತದ ಖ್ಯಾತ ನಟಿ ಖುಷ್ ಬೂ ಅವರನ್ನು ಇಂದಿಗೂ “ಇಡ್ಲಿ ಬ್ಯೂಟಿ” (Idli Beauty) ಎಂದು ಕರೆಯಲಾಗುತ್ತದೆ.
ಇನ್ನು ಜಯಂ ರವಿ ಮೋಹನ್ ಪತ್ನಿ ಆರತಿ ಹಾಗೂ ನಟಿ ಖುಷ್ಬೂ ಸುಂದರ್ ಒಳ್ಳೆಯ ಸ್ನೇಹಿತರು ಡಿವೋರ್ಸ್ ವಿಚಾರ ಬೆಳಕಿಗೆ ಬಂದಾಗ ಖುಷ್ಬೂ ಪರೋಕ್ಷವಾಗಿ ರವಿ ಮೋಹನ್ ಬಗ್ಗೆ ಕಾಮೆಂಟ್ ಮಾಡಿದ್ದರು. ರವಿ ಪತ್ನಿ ಆರತಿ ಅವರನ್ನು “ತನ್ನ ಸಿಂಹದ ಮರಿಗಳೊಂದಿಗೆ ಇರುವ ಸಿಂಹಿಣಿ” ಎಂದು ಬಣ್ಣಿಸಿದ್ದರು ಇದೀಗ ರವಿ ಮೋಹನ್ ಸುದ್ದಿಗೋಷ್ಠಿ ಬೆನ್ನಲ್ಲೇ ಮಾರ್ಮಿಕವಾಗಿ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಇದನ್ನೆಲ್ಲಾ ನೋಡಿ ರವಿ ಮೋಹನ್ ಹೇಳಿದ ಇಡ್ಲಿ ನಟಿ ಇದೇ ಖುಷ್ಬೂ ಎಂದು ಚರ್ಚೆಯಾಗ್ತಾ ಇದೆ.
ಒಂದು ಇಡೀ ಟೀಮ್ ನನ್ನ ಮುಗಿಸೋಕೆ ಹೊರಟಿದೆ. ನಾನು ಬದುಕಬಾರದು, ಅದು ಅವರ ಗುರಿ . ಅದು ಖಂಡಿತ ಆಗುತ್ತದೆ. ಆದರೆ ಎಲ್ಲರನ್ನೂ ಮುಗಿಸಿದ ನಂತರ ನಾನು ಹೋಗುತ್ತೇನೆ, ಸಂತೋಷದಿಂದ, ನಗುತ್ತಾ ಹೋಗುತ್ತೇನೆ ಎಂದೂ ಹೇಳಿದ್ದಾರೆ.



