ನಮ್ಮ ತಾಯಿ ಯಾಕೆ ಹೀಗೆ ಮಾಡ್ತಿದ್ದಾಳೋ ಗೊತ್ತಿಲ್ಲಾ ಅಂತ ದೀಪಾ ಹೇಳಿದ್ದಾಳೆ. ನಮ್ಮ ಹೆತ್ತವರಿಗೆ ಮೈಂಡ್ ವಾಶ್ ಮಾಡಿದ್ದಾರೆ. ಅವರ ಮೂಲಕ ಏನೇನೋ ಸುಳ್ಳು ಹೇಳಿಸುತ್ತಿದ್ದಾರೆ. ನನ್ನ ಮೈಂಡ್ ವಾಶ್ ಮಾಡಿ ಕರೆದುಕೊಂಡು ಹೋಗಿದ್ದಾನೆ ಅಂತ ಹೇಳ್ತಾರೆ. ಆದ್ರೆ ನಾನೇ ಸ್ವ ಇಚ್ಚೆಯಿಂದ ಅವರ ಜೊತೆ ಬಂದಿದ್ದೇನೆ. ವಿಚಿತ್ರ ಎಂದರೆ ಜಯ ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಕೇಳಿ ಬರುತ್ತಿರುವುದು. ಯತ್ನಾಳ್ ಸಂಘ ಮಾಡಿದ್ದಕ್ಕೆ ಸ್ವಾಮೀಜಿ, ಪೀಠವನ್ನೇ ಕಳೆದುಕೊಂಡರು ಎಂಬ ಮಾತು ಕೇಳಿ ಬರುತ್ತಿದೆ.
ಕಾಶಪ್ಪನವರ್ ಅವರು ʻʻಸ್ವಾಮೀಜಿ ಬಸವತತ್ವಕ್ಕೆ ವಿರುದ್ಧ ಮಾತನಾಡಿದ್ದಾರೆ. ಬಸವತತ್ವ ನಾವು ಯಾವತ್ತೂ ಹಿಂದೂ ಎನ್ನುವುದಿಲ್ಲ. ಹಿಂದೂ ಧರ್ಮದ ವಿರುದ್ಧವೇ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೆ. ಅವರು ಒಂದು ಪಕ್ಷ ಅಥವಾ ವ್ಯಕ್ತಿಗೆ ಮಾರಿಕೊಂಡಿದ್ದಾರೆʼʼ ಎಂದು ದೂರಿದ್ದಾರೆ. ಈ ವೇಳೆ ಸಹಜವಾಗಿಯೇ ಯತ್ನಾಳ್ ವಿಷಯ ಪ್ರಸ್ತಾಪವಾಗಿದ್ದು ಅದಕ್ಕೂ ಇದಕ್ಕೂ ಸಂಬಂಧ ಎಂದಿದ್ದಾರೆ.
ಕಾಶಪ್ಪನವರ್ ಪ್ರಕಾರ..
ಸ್ವಾಮೀಜಿ ಹಿಂದಿನಿಂದಲೂ ವಿನಾಕಾರಣ ಹೆದರಿಸೋಕೆ ನೋಡ್ತಿದ್ರಂತೆ. ಅವರು ಸದಾ ತಪ್ಪು ಹೆಜ್ಜೆ ಇಡುತ್ತಾ ಬಂದಿದ್ರು. ಈ ಬಗ್ಗೆ ಸಾಕಷ್ಟು ಬಾರಿ ನೋಟಿಸ್ ಕೊಟ್ರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಟ್ರಸ್ಟ್ ಈ ನಿರ್ಣಯ ಕೈಗೊಂಡಿದೆ. ಈ ಕ್ಷಣದಿಂದ ಸ್ವಾಮೀಜಿಗೂ ಕೂಡಲಸಂಗಮ ಪೀಠಕ್ಕೆ ಸಂಬಂಧವಿಲ್ಲ. ಇದು ನನ್ನ ವೈಯಕ್ತಿಕ ನಿರ್ಣವಲ್ಲ ಎಂದಿದ್ದಾರೆ. ಅಲ್ಲದೆ ಸ್ವಾಮೀಜಿ ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ಅವರಿಂದ ಪಂಚಮಸಾಲಿಗಳಿಗೆ ಯಾವುದೇ ಲಾಭವೂ ಇಲ್ಲ.
ಸ್ವಾಮೀಜಿ ಪ್ರಕಾರ..
ವಿವಾದ ಶುರುವಾಗಿದ್ದು ಯತ್ನಾಳ್ ವಿಷಯಕ್ಕೆ ಅಲ್ಲ. ಪಂಚಮಸಾಲಿಗಳಿಗೆ ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡಿದ್ದೆವು. ಆ ಹೋರಾಟದಿಂದಲೇ ರಾಜ್ಯದಲ್ಲಿ ಪಂಚಮಸಾಲಿಗಳು ಕಾಂಗ್ರೆಸ್ ಪರ ಹಕ್ಕು ಹಾಕಿದ್ದರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅದನ್ನು ಮರೆತೇಬಿಟ್ಟರು. ರಾಜಕಾರಣಿಯಾಗಿ ಅವರು ಮರೆಯಬಹುದು, ಆದರೆ ಸಮಾಜದವರಾಗಿ ನಾವು ಹಾಗೆ ಇರೋದಕ್ಕೆ ಆಗಲಿಲ್ಲ. ಹೋರಾಟ ಮಾಡಿದಾಗ ಇದೇ ಸರ್ಕಾರ ಪಂಚಮಸಾಲಿಗಳ ಮೇಲೆ ಲಾಠಿ ಪ್ರಹಾರ ಮಾಡಿತ್ತು. ಆಗ ಶುರುವಾದ ಭಿನ್ನಮತ ಮುಗಿಯಲೇ ಇಲ್ಲ.
ಇನ್ನು ಇತ್ತೀಚೆಗೆ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ನಮ್ಮ ಮಕ್ಕಳ ಕೈಗೆ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟವನ್ನು ಕೈ ಬಿಡಬಾರದು. ಜಾತಿ ಜನಗಣತಿಯಲ್ಲಿ ನೀವು ಪಂಚಮಸಾಲಿಗಳೆಂದು ನಮೂದಿಸಿ. ಹಿಂದೂ ಧರ್ಮವನ್ನೇ ಪರಿಗಣಿಸಿ ಎಂದು ಹೇಳಿದ್ದರು. ಇದೂ ಕೂಡಾ ಕಾಂಗ್ರೆಸ್ ನಿಲುವಿಗೆ ವಿರುದ್ಧವಾಗಿತ್ತು.
ಮುಂದೇನು..?
ಬಹುಶಃ ಕೂಡಲಸಂಗಮ ಪೀಠದ ಶ್ರೀಗಳು ಹೊಸ ಮಠ ಸ್ಥಾಪನೆ ಮಾಡಬಹುದು. ಆಗ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೊಸ ಮಠಕ್ಕೆ ಜಾಗ ಕೊಡಬಹುದು. ಒಟ್ಟಿನಲ್ಲಿ ಪಂಚಮಸಾಲಿಗಳು ಇಬ್ಭಾಗವಾಗಿದ್ದು, ಮಠದಿಂದ ಸ್ವಾಮಿಗಳೇ ಹೊರಹೋಗುತ್ತಿದ್ದಾರೆ.



