ಸಿಎಂ ಸಿದ್ಧರಾಮಯ್ಯ ಅವರಿಗೆ ʻದೆಹಲಿಗೆ ಬನ್ನಿʼ ಎಂದು ಹೈಕಮಾಂಡ್ ಹೇಳಿದೆ. ಮಂಗಳವಾರ ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಬೇಕು. ಆದರೆ ಇದು ತಮಗೆ ಗೊತ್ತೇ ಇಲ್ಲ ಎನ್ನುತ್ತಿದ್ದಾರೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್. ಹೀಗಿದ್ದರೂ ತಮ್ಮ ಡಿಕೆ ಸುರೇಶ್ ಜೊತೆ, ಡಿಕೆ ಶಿವಕುಮಾರ್ ಗುಟ್ಟಾಗಿ ಸಭೆ ನಡೆಸಿದ್ದಾರೆ. ವಿಶೇಷತೆ ಏನೆಂದರೆ ಇದು ಯಾರಿಗೆ ಗುಡ್ ನ್ಯೂಸ್ ಎನ್ನುವುದು. ಏಕೆಂದರೆ ಹೈಕಮಾಂಡ್ ಎದುರು ಇರುವ ಆಯ್ಕೆಗಳಲ್ಲಿ ಖರ್ಗೆಯವರೂ ಇದ್ದಾರಂತೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ನಾಯಕತ್ವ ಬಿಕ್ಕಟ್ಟು, ಸಂಪುಟ ಪುನಾರಚನೆ ಬಗ್ಗೆ ಉಭಯ ನಾಯಕರ ಜೊತೆ ಫೈನಲ್ ಮೀಟಿಂಗ್ ನಡೆಸಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ. ಖುದ್ದು ರಾಹುಲ್ ಗಾಂಧಿಯವರಿಂದಲೇ ಮಾತುಕತೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.. ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್‌ರಿಂದ ಕರೆ ಮಾಡಿ, ಹೇಳಿದ್ದಾರಂತೆ.
ಮಲ್ಲಿಕಾರ್ಜುನ ಖರ್ಗೆ ಕಥೆ ಏನು..?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿಯವರ ಜೊತೆ ಆತ್ಮೀಯವಾಗಿದ್ದಾರೆ. ಹಿರಿಯ ನಾಯಕರಿಗೆ ಪಕ್ಷದಲ್ಲಿ ಸ್ಥಾನ ಇದೆ, ಆದರೆ ಅಧಿಕಾರ ಇಲ್ಲ. ಹೀಗಿದ್ದರೂ ಖರ್ಗೆಯವರಿಗೆ ಎಲ್ಲಿಯೂ ಅಗೌರವ ಉಂಟಾಗದಂತೆ ಅತ್ಯಂತ ಜಾಗ್ರತೆ, ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ಧಾರೆ ರಾಹುಲ್ ಗಾಂಧಿ. ಇದೀಗ ಕರ್ನಾಟಕ ಕುರ್ಚಿ ಹಂಚಿಕೆ ಬಿಕ್ಕಟ್ಟು ಸೀರಿಯಸ್ ಆಗಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಬಳಿ 3 ಆಯ್ಕೆ ಇದೆ. ಇದರ ಬಗ್ಗೆ ಇನ್-ಡೈರೆಕ್ಟ್ ಆಗಿ ಸಿಗ್ನಲ್ ಕೂಡಾ ಕೊಟ್ಟಿದ್ದಾರಂತೆ.
ಮುಂಬರುವ ರಾಜ್ಯಸಭೆ ಚುನಾವಣೆ ಬಗ್ಗೆ ಮಹತ್ವದ ಸಮಾಲೋಚನೆ ನಡೆಸೋ ಸಾಧ್ಯತೆ ಇದೆ. 3 ಸ್ಥಾನಗಳನ್ನು ರಾಜ್ಯದಿಂದ ಆಯ್ಕೆ ಮಾಡುವ ಅವಕಾಶ ಇದೆ. ಈ ಪೈಕಿ ಮೂರರಲ್ಲಿ ಒಂದು ಸ್ಥಾನ ಮಲ್ಲಿಕಾರ್ಜುನ ಖರ್ಗೆಗೆ ಫಿಕ್ಸ್ ಆದರೆ, ಅನುಮಾನವೇ ಇಲ್ಲ. ಆಗ ಖರ್ಗೆಯವರಿಗೆ ಅವಕಾಶ ಇಲ್ಲ. ರಾಜ್ಯಸಭೆಯಲ್ಲಿ ಮೇಲ್ಮನೆ ವಿರೋಧ ಪಕ್ಷದ ನಾಯಕರಾಗಿ ಮುಂದುವರಿಯುತ್ತಾರೆ.
ಅಕಸ್ಮಾತ್ ವಿಧಾನಪರಿಷತ್ ಟಿಕೆಟ್ ಕೊಟ್ಟರೆ.. ಆಗ ಖರ್ಗೆಯವರು ಕರ್ನಾಟಕಕ್ಕೆ ಬರೋದು ಫಿಕ್ಸ್. ಕರ್ನಾಟಕದ ಸಿಎಂ ಆಗುವುದೂ ಫಿಕ್ಸ್. 3ನೇ ಅವಕಾಶ ಎಂದರೆ ರಾಜ್ಯಸಭೆಯೂ ಬೇಡ ಎನ್ನುವುದು. ಹಾಗೇನಾದರೂ ಆದರೆ ಎಐಸಿಸಿ ಅಧ್ಯಕ್ಷರಾಗಿಯೇ ಮುಂದುವರಿಯಲಿ ಎನ್ನುವ ಆಯ್ಕೆ. ಮೂರರ ಬಗ್ಗೆಯೂ ಚರ್ಚೆ ಜೋರಾಗಿಯೇ ನಡೆಯುತ್ತಿದೆ.
ಇನ್ನು ದೆಹಲಿ ಭೇಟಿ ವೇಳೆ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗಲಿದ್ಯಾ ಅಥಾವ ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆ ಆಗಲಿದ್ಯಾ ಎನ್ನುವ ಪ್ರಶ್ನೆ ಇದೆ. ಸಂಪುಟ ವಿಸ್ತರಣೆಗೆ ಅವಕಾಶ ಕೊಟ್ಟರೆ ಆಗ ಸಿದ್ಧರಾಮಯ್ಯನವರೇ ಕಂಟಿನ್ಯೂ ಆಗುತ್ತಾರೆ ಎಂಬ ನಿರೀಕ್ಷೆ ಇದೆ. ಸಂಪುಟ ವಿಸ್ತರಣೆ ಬೇಡ ಎಂದು ಹೈಕಮಾಂಡ್ ನಿರ್ಧರಿಸಿದರೆ ಆಗ ಡಿಕೆ ಶಿವಕುಮಾರ್ ಕನಸು ನನಸಾಗಬಹುದು. ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಬಗ್ಗೆ ಹಲವು ತಿಂಗಳಿಂದ ಚರ್ಚೆ ನಡೆಯುತ್ತಿದೆ. ಇಂದು ನಾಳೆ ಎನ್ನುವಂತಿದ್ದ ಪರಿಸ್ಥಿತಿ ಈಗ ಬದಲಾದಂತೆ ಕಾಣ್ತಿದೆ.
ಸಿಎಂ ಸಿದ್ದರಾಮಯ್ಯ ಅವರನ್ನ ಕರೆದಿದ್ದಾರೆ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಕೆಶಿ, ಅವರನ್ನ ಯಾಕೆ ಕರೆದ್ರು ಅಂತ ನನಗೆ ಗೊತ್ತಿಲ್ಲ. ಸಿಎಂ ನನಗೆ ಏನೂ ಹೇಳಿಲ್ಲ. ಯಾವ ವಿಚಾರಕ್ಕೆ ಅಂತನೂ ನನಗೆ ಗೊತ್ತಿಲ್ಲ ಎಂದಿದ್ದಾರೆ. ಅಂದಹಾಗೆ , ಹೈಕಮಾಂಡ್ ನಾಯಕರು ನನ್ನನ್ನ ಕರೆದಿಲ್ಲ, ಕರೆದ್ರೆ ಹೋಗ್ತೀನಿ ಎಂದೂ ಹೇಳಿದ್ಧಾರೆ.



