Friday, June 5, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ರಾಜ್ಯ ಬಿಜೆಪಿಯಲ್ಲಿ ಬದಲಾವಣೆಗೆ ಹೈಕಮಾಂಡ್‌ ರೆಡಿ : ಡೇಟ್ ಫಿಕ್ಸ್‌

SpeciallU by SpeciallU
May 20, 2026
in News, Politics
Reading Time: 1 min read
0 0
0
ರಾಜ್ಯ ಬಿಜೆಪಿಯಲ್ಲಿ ಬದಲಾವಣೆಗೆ ಹೈಕಮಾಂಡ್‌ ರೆಡಿ : ಡೇಟ್ ಫಿಕ್ಸ್‌

ರಾಜ್ಯ ಬಿಜೆಪಿಯಲ್ಲಿ ಗೇಮ್‌ ಚೇಂಜ್‌ ಆಗುತ್ತಿದೆಯಾ.. ನಾಯಕತ್ವ ಬದಲಾಗುತ್ತಿದೆಯಾ.. ಅಥವಾ ಸಂಘಟನೆಯ ಸ್ವರೂಪವೇ ಬದಲಾಗುತ್ತಿದೆಯಾ.. ಸೂಚನೆಗಳಂತೂ ಬರೋಕೆ ಶುರುವಾಗಿವೆ. ಮೇ 25 ರ ನಂತರ ಮಹತ್ವದ ಬೆಳವಣಿಗೆಗಳಾಗುವ ಸಾಧ್ಯತೆ ಇದೆ. ಪಕ್ಷದ ರಾಷ್ಟ್ರೀಯ ನಾಯಕರು ಸಾಲು ಸಾಲಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಕುತೂಹಲ ಎಂದರೆ ವಿಜಯೇಂದ್ರ ಬದಲಾಗುತ್ತಾರಾ ಎನ್ನುವುದು..

ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಬಿಎಸ್ ಯಡಿಯೂರಪ್ಪ ಅವರ 50 ವರ್ಷಗಳ ಸಾರ್ವಜನಿಕ ಜೀವನದ ‘ಅಭಿಮಾನೋತ್ಸವ’ ಕಾರ್ಯಕ್ರಮದಲ್ಲಿ ಇಡೀ ರಾಜ್ಯದ ಮಠಾಧಿಪತಿಗಳು ಬಂದಿದ್ದರು. ವೀರಶೈವ ಲಿಂಗಾಯತ ಅಷ್ಟೇ ಅಲ್ಲ, ಒಕ್ಕಲಿಗ, ವಾಲ್ಮೀಕಿ, ಬೋವಿ, ಕುರುಬ, ಬಣಜಿಗ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಬ್ರಾಹ್ಮಣ, ಜೈನ.. ಹೀಗೆ ವಿವಿಧ ಸಮುದಾಯಗಳ ಸ್ವಾಮೀಜಿಗಳು ಒಂದೇ ವೇದಿಕೆಯಲ್ಲಿದ್ದರು. ಇದನ್ನು ನೋಡಿದ ಅಮಿತ್‌ ಶಾ ಅವರಿಗೆ ಯಡಿಯೂರಪ್ಪನವರ ಶಕ್ತಿಯ ಅರಿವಾಗಿದೆ.
ಇಡೀ ರಾಜ್ಯದ ಮಠಾಧಿಪತಿಗಳು ಒಂದೇ ವೇದಿಕೆಗೆ ಬರಲು ಬಿಎಸ್​ವೈ ಅವರೇ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದು, ಇದು ಪರೋಕ್ಷವಾಗಿ ವಿಜಯೇಂದ್ರ ಅವರಿಗೆ ನೈತಿಕವಾಗಿ ದೊಡ್ಡ ಶಕ್ತಿ ತುಂಬಿದೆ. ಚಿತ್ರದುರ್ಗದ ಸಮಾವೇಶವು ಕೇವಲ ಬಿಎಸ್​ವೈ ಅಭಿಮಾನೋತ್ಸವ ಆಗಿರಲಿಲ್ಲ, ಯಡಿಯೂರಪ್ಪ ಅವರ ಭಾರಿ ಶಕ್ತಿ ಪ್ರದರ್ಶನ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಈ ಅಭೂತಪೂರ್ವ ಯಶಸ್ಸಿನ ಬಳಿಕ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಹೈಕಮಾಂಡ್ ಜೊತೆಗೆ ಸಂಘ ಪರಿವಾರದಲ್ಲೂ (RSS) ಸಾಫ್ಟ್ ಕಾರ್ನರ್ ಮೂಡಿದೆ. ಹೈಕಮಾಂಡ್ ಮೂಲಗಳ ಪ್ರಕಾರ ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ (BY Vijayendra) ಅವರನ್ನೇ ಈ ಸ್ಥಾನದಲ್ಲಿ ಮುಂದುವರಿಸುವ ಸಾಧ್ಯತೆಗಳು ಹೆಚ್ಚಾಗಿವೆ.

Related posts

ಪಡೆದಿದ್ದ ಲಂಚ ವಾಪಸ್‌ ಕೊಟ್ಟ ನಾಯಕರು : ಪ.ಬಂಗಾಳದಲ್ಲಿ ವಿಚಿತ್ರ ರಾಜಕೀಯ..!

ಮಂತ್ರಿಯಾದ ಯತೀಂದ್ರ.. ಆಪ್ತರಿಗೆ ಮಿಸ್‌ : ಸಿದ್ದು ಆಪ್ತರಲ್ಲಿ ಅತೃಪ್ತಿ

ಹೈಕಮಾಂಡ್‌ ನಾಯಕರು ಬೆಂಗಳೂರಿಗೆ : ಆಂತರಿಕ ವಿದ್ಯಮಾನಗಳಿಗೆ ಸಂಬಂಧಿಸಿದಂತೆ, ಮೇ 25 ರ ನಂತರ ಮಹತ್ವದ ಬೆಳವಣಿಗೆಗಳಾಗುವ ಸಾಧ್ಯತೆ ಇದೆ. ಪಕ್ಷದ ರಾಷ್ಟ್ರೀಯ ನಾಯಕರು ಸಾಲು ಸಾಲಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ಧಾರೆ. ಮೇ 23 ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಬೆಂಗಳೂರಿಗೆ ಬರುತ್ತಿದ್ಧಾರೆ. ಮೇ 24 ರಂದು ಕೋರ್ ಕಮಿಟಿ ಸೇರಿದಂತೆ ಪ್ರಮುಖ ಸಭೆಗಳ ನಡೆಯಲಿವೆ. ಮೇ 25 ರಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಬೆಂಗಳೂರಿಗೆ ಭೇಟಿ ನೀಡುತ್ತಾರೆ. ರಾಜ್ಯ ಬಿಜೆಪಿಯ ನಿರ್ಣಾಯಕ ಸಮಿತಿಯಾದ ಕೋರ್ ಕಮಿಟಿ ಶೀಘ್ರದಲ್ಲೇ ಪುನಾರಚನೆಗೊಳ್ಳಲಿದ್ದು, ಹಾಲಿ ಇರುವ ಇಬ್ಬರು ಪ್ರಮುಖ ಸದಸ್ಯರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮನ್ನಣೆ ನೀಡುವ ಸಾಧ್ಯತೆ ಇದೆ.

ಪುನಾರಚನೆಗೊಳ್ಳಲಿರುವ ಕೋರ್ ಕಮಿಟಿ ಸೇರಲು ಬಿಜೆಪಿಯ ಹಿರಿಯ ನಾಯಕರು ಭಾರಿ ಕಸರತ್ತು ನಡೆಸುತ್ತಿದ್ದು, ಸಂಸದ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ವಿ. ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ , ಶಾಸಕ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ ಸಮಿತಿಯ ಸದಸ್ಯರಾಗಲು ತೀವ್ರ ಉತ್ಸಾಹ ತೋರಿಸುತ್ತಿದ್ಧಾರೆ. ವಿಧಾನಸಭೆ ನಾಯಕರ ಬಗ್ಗೆ ಹೈಕಮಾಂಡ್‌ ನಿರುತ್ಸಾಹದಲ್ಲಿದೆ ಎನ್ನಲಾಗಿದೆ.

Tags: #ರಾಜ್ಯ ಬಿಜೆಪಿ #ಬದಲಾವಣೆ #ಹೈಕಮಾಂಡ್‌ #ಯಡಿಯೂರಪ್ಪ #ಅಮಿತ್‌ ಶಾ #ವಿಜಯೇಂದ್ರ #State BJP #Change #High Command #Yadiyoorappa #Amit Shah #Vijayendra
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪಡೆದಿದ್ದ ಲಂಚ ವಾಪಸ್‌ ಕೊಟ್ಟ ನಾಯಕರು : ಪ.ಬಂಗಾಳದಲ್ಲಿ ವಿಚಿತ್ರ ರಾಜಕೀಯ..!
  • ಮಂತ್ರಿಯಾದ ಯತೀಂದ್ರ.. ಆಪ್ತರಿಗೆ ಮಿಸ್‌ : ಸಿದ್ದು ಆಪ್ತರಲ್ಲಿ ಅತೃಪ್ತಿ
  • ಕರಡಿಗೆಯಲ್ಲಿನ ಶಿವಲಿಂಗ ʻಭಿನ್ನʼವಾಗಿದ್ದರೆ ಪೂಜೆ ಮಾಡಬೇಕಾ.. ಬೇಡವಾ..?

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪಡೆದಿದ್ದ ಲಂಚ ವಾಪಸ್‌ ಕೊಟ್ಟ ನಾಯಕರು : ಪ.ಬಂಗಾಳದಲ್ಲಿ ವಿಚಿತ್ರ ರಾಜಕೀಯ..!

ಪಡೆದಿದ್ದ ಲಂಚ ವಾಪಸ್‌ ಕೊಟ್ಟ ನಾಯಕರು : ಪ.ಬಂಗಾಳದಲ್ಲಿ ವಿಚಿತ್ರ ರಾಜಕೀಯ..!

June 4, 2026
ಮಂತ್ರಿಯಾದ ಯತೀಂದ್ರ.. ಆಪ್ತರಿಗೆ ಮಿಸ್‌ : ಸಿದ್ದು ಆಪ್ತರಲ್ಲಿ ಅತೃಪ್ತಿ

ಮಂತ್ರಿಯಾದ ಯತೀಂದ್ರ.. ಆಪ್ತರಿಗೆ ಮಿಸ್‌ : ಸಿದ್ದು ಆಪ್ತರಲ್ಲಿ ಅತೃಪ್ತಿ

June 4, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.