ನಟ ದರ್ಶನ್ ಮೇಲೆ ಆರೋಪಗಳು ಬರುವುದೂ ಹೊಸದಲ್ಲ. ಆರೋಪ ಮುಕ್ತರಾಗುವುದೂ ಹೊಸದಲ್ಲ. ಈಗ ಮತ್ತೊಮ್ಮೆ ಮತ್ತೊಂದು ಪ್ರಕರಣದಲ್ಲಿ ದರ್ಶನ್ ಕ್ಲೀನ್ ಚಿಟ್ ಪಡಯುವ ಹಾದಿಯಲ್ಲಿದ್ದಾರೆ. ನಟ ದರ್ಶನ್ ಅವರು ಸಾಕಿದ್ದ ನಾಯಿಗಳು ಅಮಿತಾ ಜಿಂದಾಲ್ ಎಂಬ ಮಹಿಳೆಗೆ ಕಚ್ಚಿತ್ತು. ಉದ್ದೇಶ ಪೂರ್ವಕವಾಗಿ ನಾಯಿಯನ್ನು ಛೂ ಬಿಡಲಾಗಿದೆ ಎಂದು ಮಹಿಳೆ ದೂರು ಕೊಟ್ಟಿದ್ದರು. ಪ್ರಕರಣದ ಬಗ್ಗೆ ಕೂಲಂಕುಷ ವಿಚಾರಣೆ ನಡೆಸಿದ ಪೊಲೀಸರು ಪ್ರಕರಣದಲ್ಲಿ ದರ್ಶನ್ ಪಾತ್ರ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ, ದೋಷಾರೋಪ ಪಟ್ಟಿಯಲ್ಲಿ ನಟನ ಹೆಸರು ಸೇರಿಸದೇ ಇರಲು ಪೊಲೀಸರು ನಿರ್ಧರಿಸಿದ್ದಾರೆ.
ನಾಯಿಗಳು ಅಟ್ಯಾಕ್ ಮಾಡಿದ್ದ ವೇಳೆ ದರ್ಶನ್ ಮನೆಯಲ್ಲಿ ಇರಲಿಲ್ಲ. ಗುಜರಾತಿನಲ್ಲಿ ಚಿತ್ರೀಕರಣದಲ್ಲಿದ್ದರು. ಅದಾದ ಮೇಲೆ ದರ್ಶನ್ ಕೂಡ ವಿಚಾರಣೆಗೆ ಬಂದಿದ್ದ ದರ್ಶನ್ ಪ್ರಕರಣ ನಡೆಯೋ ಸಂದರ್ಭದಲ್ಲಿ ನಾನು ಇರಲಿಲ್ಲ. ಇನ್ನು ಹೀಗೆ ಆಗದಂತೆ ನೋಡಿಕೊಳ್ಳುವೆ’ ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ ದರ್ಶನ್ ಹೆಸರು ಕೈ ಬಿಟ್ಟು ಚಾರ್ಚ್ ಶೀಟ್ ಸಲ್ಲಿಸಲು ರಾಜರಾಜೇಶ್ವರಿ ನಗರ ಪೊಲೀಸರು ಮುಂದಾಗಿದ್ದಾರೆ.
ಪ್ರಕರಣ ನಡೆದಾಗ ದರ್ಶನ್ ಮನೆಯಲ್ಲೇ ಇದ್ದರೆ ಏನಾಗುತ್ತಿತ್ತೋ ಏನೋ.. ದರ್ಶನ್ ಊರಿನಲ್ಲೇ ಇರಲಿಲ್ಲ ಎನ್ನುವುದು ದರ್ಶನ್ ಕ್ಲೀನ್ ಚಿಟ್ ಪಡೆಯುವುದಕ್ಕೆ ಕಾರಣವಾಗಿದೆ.



