ಕಾಂಗ್ರೆಸ್ ಮಟ್ಟಿಗೆ ನಂಬಿಕಸ್ತ ಮತದಾರರೆಂದರೆ ಮುಸ್ಲಿಮರೇ. ದಲಿತರು, ಹಿಂದುಳಿದವರು ಇದ್ದರೂ.. ಮುಸ್ಲಿಮರಷ್ಟು 100% ಗ್ಯಾರಂಟಿ ಮತದಾರರಲ್ಲ. ಹೀಗಿರುವಾಗಲೇ ದಾವಣಗೆರೆ ದಕ್ಷಿಣ ಕ್ಷೇತ್ರದ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ಎಡವಟ್ಟು ಮಾಡಿಕೊಂಡಿದೆ. ಜಬ್ಬಾರ್, ನಸೀರ್ ಅವರ ವಿರುದ್ಧ ಆಕ್ಷನ್ ತೆಗೆದುಕೊಂಡು, ಸೈಲೆಂಟ್ ಆಗಿದ್ದರೆ ಆಗುತ್ತಿತ್ತೇನೋ.. ಆದರೆ ಜಮೀರ್ ಅಹ್ಮದ್ ಹೆಸರನ್ನು ಆಚೆಗೆ ತಂದು ರಂಪ ಮಾಡಿಕೊಂಡಿದೆ.
‘ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಎಸ್‌ಡಿಪಿಐ ಅಭ್ಯರ್ಥಿಗೆ ಹಣಕಾಸು ಸಹಾಯ ಮಾಡಿದ್ದಕ್ಕೆ ದಾಖಲೆಗಳಿವೆ. ಈ ದಾಖಲೆಯನ್ನು ಕೆಪಿಸಿಸಿ ಅಧ್ಯಕ್ಷರಿಗೆ ನೀಡಿ ನಂತರ ಬಹಿರಂಗಪಡಿಸುತ್ತೇವೆ’ ಎಂದು ಕಾಂಗ್ರೆಸ್ ಮುಸ್ಲಿಂ ಪದಾಧಿಕಾರಿಗಳು ಘೋಷಿಸಿದ್ದಾರೆ. ಜತೆಗೆ, ‘ಜಬ್ಬಾರ್ ಅವರು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ. ಅದು ಪರೋಕ್ಷವಾಗಿ ಜಮೀರ್ ಅಹ್ಮದ್ ಅವರನ್ನೂ ಕೆಣಕುತ್ತಿದೆ. ಇದು ಕಾಂಗ್ರೆಸ್ ಮುಸ್ಲಿಂ ನಾಯಕರ ಆಕ್ರೋಶ. ಬಹಿರಂಗವಾಗಿ ಜಬ್ಬಾರ್, ನಸೀರ್ ವಿರುದ್ಧ ಮಾತನಾಡ್ತಿದ್ದರೂ, ಜಮೀರ್ ಅಹ್ಮದ್ ಪರೋಕ್ಷ ಟಾರ್ಗೆಟ್.
ಜಬ್ಬಾರ್, ನಸೀರ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡೆಗೆ ರಾಜ್ಯವ್ಯಾಪಿ ಮುಸ್ಲಿಂ ಸಮುದಾಯ ದುಃಖದಲ್ಲಿದೆ. ಉಲ್ಮಾ (ಮುಸ್ಲಿಂ ಧರ್ಮಗುರು)ಗಳು ಕಾಂಗ್ರೆಸ್ಸಿನ ಕ್ರಮವನ್ನು ಖಂಡಿಸುತ್ತಿದ್ದಾರೆ. ರಾಜ್ಯದಲ್ಲಿ 135ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವಲ್ಲಿ ಅಬ್ದುಲ್ ಜಬ್ಬಾರ್, ಜಮೀರ್ ಅಹ್ಮದ್, ನಸೀರ್ ಅಹ್ಮದ್ ಪಾತ್ರ ಅತ್ಯಂತ ಮಹತ್ವದ್ದು, 8 ವರ್ಷದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿದ್ದವರು ಜಬ್ಬಾರ್. ಜಮೀರ್ ಉತ್ಸವ ಮೂರ್ತಿಯಾದರೆ, ಜಬ್ಬಾರ್ ಪಟ್ಟದಲ್ಲಿದ್ದ ರಾಜ. ಜಬ್ಬಾರ್, ನಸೀರ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡೆಗೆ ರಾಜ್ಯವ್ಯಾಪಿ ಮುಸ್ಲಿಂ ಸಮುದಾಯ ದುಃಖದಲ್ಲಿದೆ. ಉಲ್ಮಾ (ಮುಸ್ಲಿಂ ಧರ್ಮಗುರು)ಗಳು ಕಾಂಗ್ರೆಸ್ಸಿನ ಕ್ರಮವನ್ನು ಖಂಡಿಸುತ್ತಿದ್ದಾರೆ. ಸರಳವಾಗಿ ಹೇಳಬೇಕೆಂದರೆ ಮುಸ್ಲಿಂ ಸಂಘಟನೆಗಳು ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಳ್ತಿದ್ಧಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಸ್ಲಿಂ ಸಮುದಾಯದ ಒಗ್ಗಟ್ಟಿನ ಬೆಂಬಲವೇ ಪ್ರಮುಖ ಕಾರಣ. ಆದರೆ ಅಧಿಕಾರಕ್ಕೆ ಬಂದ ಮೇಲೆ ಸಮುದಾಯಕ್ಕೆ ರಾಜಕೀಯ ನೇಮಕಾತಿ ಹಾಗೂ ಅಧಿಕಾರಶಾಹಿಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದೆ ಅವಮಾನಿಸಲಾಗುತ್ತಿದೆ ಎಂದು ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಮುಸ್ಲಿಮರು ಪ್ರಾತಿನಿಧ್ಯ ಕೇಳಿದ್ದೇ ತಪ್ಪು ಎಂಬಂತೆ ಕಾಂಗ್ರೆಸ್ ನಲ್ಲಿ ಬಿಂಬಿಸಲಾಗುತ್ತಿದೆ. ನ್ಯಾಯಯುತವಾಗಿ ನೀಡಲೇಬೇಕಿದ್ದ ಟಿಕೆಟ್ ನೀಡದೆ ಪಕ್ಷದ ಪರವಾಗಿ ಪ್ರಚಾರ ಮಾಡಲು ಹೇಳಿ, ನಂತರ ಕ್ಷುಲ್ಲಕ ಕಾರಣಗಳನ್ನು ನೀಡಿ ಶಿಸ್ತು ಕ್ರಮ ಕೈಗೊಳ್ಳುವುದು ನ್ಯಾಯಸಮ್ಮತವಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲೆಂದೇ ಮುಸ್ಲಿಮರು ಕಾಂಗ್ರೆಸ್ಸಿಗೆ ಮತ ನೀಡಿದ್ಧಾರೆ. ಆದರೆ ಅದನ್ನೇ ಮುಸ್ಲಿಮರ ದೌರ್ಬಲ್ಯ, ಅವರಿಗೆ ಬೇರೆ ಆಯ್ಕೆಗಳೇ ಇಲ್ಲ ಎಂದು ಕಾಂಗ್ರೆಸ್ ತಿಳಿದುಕೊಂಡರೆ ಅದು ಮುಂದಿನ ದಿನಗಳಲ್ಲಿ ಆ ಪಕ್ಷಕ್ಕೆ ರಾಜಕೀಯವಾಗಿ ಬಹಳ ದುಬಾರಿಯಾಗಲಿದೆ ಎಂದು ಎಚ್ಚರಿಕೆ ನೀಡಿವೆ.
ಅಂದಹಾಗೆ ಸಂಘಟನೆಗಳು, ಉಲ್ಮಾಗಳ ಪಟ್ಟಿ ದೊಡ್ಡದಾಗಿಯೇ ಇದೆ.
ಮೌಲಾನಾ ಸೈಯದ್ ತನ್ವೀರ್ ಹಾಶ್ಮಿ, ಅಧ್ಯಕ್ಷರು, ಮುಸ್ಲಿಮ್ ಮುತ್ತಹಿದಾ ಕೌನ್ಸಿಲ್, ವಿಜಯಪುರ.
ಅಬ್ದುಲ್ ಖದೀರ್ ಸಾಹೇಬ್, ಅಧ್ಯಕ್ಷರು, ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳು, ಬೀದರ್.
ಮೌಲಾನಾ ಶಬ್ಬೀರ್ ಅಹ್ಮದ್ ನದ್ವಿ, ಅಧ್ಯಕ್ಷರು, ವೆಲ್ಫೇರ್ ಆಫ್ ಹ್ಯುಮಾನಿಟಿ ಫೌಂಡೇಶನ್, ಬೆಂಗಳೂರು.
ಕೆ ಎಸ್ ಮೊಹಮ್ಮದ್ ಮಸೂದ್, ಅಧ್ಯಕ್ಷರು, ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ, ಮಾಜಿ ಅಧ್ಯಕ್ಷರು, ರಾಜ್ಯ ಅಲ್ಪಸಂಖ್ಯಾತ ಆಯೋಗ, ಮಾಜಿ ಮುಖ್ಯ ಸಚೇತಕರು, ವಿಧಾನ ಪರಿಷತ್.
ಹಾಜಿ ಮೊಹಮ್ಮದ್ ಹನೀಫ್, ಪ್ರಧಾನ ಕಾರ್ಯದರ್ಶಿ, ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ.
ಮುಹಮ್ಮದ್ ಮೌಲಾ, ಅಧ್ಯಕ್ಷರು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ.
ಯಾಸೀನ್ ಮಲ್ಪೆ, ನಿಕಟಪೂರ್ವ ಅಧ್ಯಕ್ಷರು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ.
ಮೌಲಾನಾ ಅಬ್ದುರ್ರಕೀಬ್ ನದ್ವಿ, ಪ್ರಧಾನ ಕಾರ್ಯದರ್ಶಿ, ಮಜ್ಲಿಸ್ ಎ ಇಸ್ಲಾಹ್ ವ ತಂಝೀಮ್, ಭಟ್ಕಳ.
ಅಶ್ರಫ್ ಅಲಿ ಬಶೀರ್, ಸಂಚಾಲಕರು, ಮುಸ್ಲಿಮ್ ವಾಯ್ಸ್ ಆಫ್ ಕರ್ನಾಟಕ. ಹುಬ್ಬಳ್ಳಿ.
ಡಾ. ಅಬ್ದುಲ್ ಕರೀಂ, ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ. ಹುಬ್ಬಳ್ಳಿ.
ಕೆ. ಅಶ್ರಫ್ ಅಧ್ಯಕ್ಷರು, ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ..
ಮುಹಮ್ಮದ್ ಹನೀಫ್, ಕಾರ್ಯದರ್ಶಿ, ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.
ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ.
ಮುಖಂಡರು, ಸುನ್ನಿ ಯುವಜನ ಸಂಘ ಕರ್ನಾಟಕ.
ಹಾಜಿ ಅಬೂಬಕರ್ ನೇಜಾರ್.ಜಿಲ್ಲಾಧ್ಯಕ್ಷರು,ಸುನ್ನಿ ಸಂಯುಕ್ತ ಜಮಾತ್,ಉಡುಪಿ ಜಿಲ್ಲೆ.
ಮೊಹಮ್ಮದ್ ರಫೀಕ್ಜಿ ಜಿಲ್ಲಾಧ್ಯಕ್ಷರು ಕರ್ನಾಟಕ ಮುಸ್ಲಿಂ ಜಮಾತ್ಉ ಡುಪಿ ಜಿಲ್ಲೆ
ರಫಿವುದ್ದೀನ್ ಕುದ್ರೋಳಿ, ಅಧ್ಯಕ್ಷರು, ಯುನಿವೆಫ್ ಮಂಗಳೂರು.
ಕಾಸಿಮ್ ಶುಐಬುರ್ರಹ್ಮಾನ್ ಖುರೇಷಿ, ಅಧ್ಯಕ್ಷರು, ಅಖಿಲ ಭಾರತ ಜಮೀಯತುಲ್ ಖುರೇಷಿ, ಕರ್ನಾಟಕ.
ಅಫ್ಝಲ ಮಹ್ಮೂದ್, ಕಾರ್ಯದರ್ಶಿ, ಕರ್ನಾಟಕ ಮುಸ್ಲಿಮ್ ಪೊಲಿಟಿಕಲ್ ಫೋರಮ್. ಗುಲ್ಬರ್ಗ.
ಜಬ್ಬಾರ್ ಕಲಬುರ್ಗಿ, ಅಧ್ಯಕ್ಷರು, ಕರ್ನಾಟಕ ಮುಸ್ಲಿಂ ಯುನಿಟಿ. ಬಾಗಲಕೋಟೆ.
ನಿಸಾರ್ ಅಹಮದ್, ರಾಜ್ಯ ಸಂಯೋಜಕರು, ಎದ್ದೇಳು ಕರ್ನಾಟಕ. ಮಂಗಳೂರು.
ನಕ್ವಾ ಯಾಹ್ಯ ಮಲ್ಪೆ ಅಧ್ಯಕ್ಷರು, ನಮ್ಮ ನಾಡ ಒಕ್ಕೂಟ, ಉಡುಪಿ ಜಿಲ್ಲೆ.
ಅಫ್ಸರ್, ಅಧ್ಯಕ್ಷರು, ಕರ್ನಾಟಕ ಸೌಹಾರ್ದ ಒಕ್ಕೂಟ. ರಿ. ಮಂಡ್ಯ.
ಅಡ್ವೋಕೇಟ್ ಅಬ್ದುಲ್ ಜಬ್ಬಾರ್ ಗೋಲ, ಉಪಾಧ್ಯಕ್ಷರು, ಜೋಯ್ಂಟ್ ಆಕ್ಷನ್ ಕಮಿಟಿ, ಗುಲ್ಬರ್ಗ..
ಅಡ್ವೋಕೇಟ್ ಅನ್ ಷಾದ್ ಪಾಳ್ಯ, ರಾಜ್ಯ ಸಮಿತಿ ಸದಸ್ಯರು, ಅಖಿಲ ಭಾರತ ವಕೀಲರ ಒಕ್ಕೂಟ, ಕರ್ನಾಟಕ. ಹಾಗೂ ಮುಖಂಡರು ಹಾಸನ ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ.
ಹಾಜಿ ಸುಲೇಮಾನ್ ಸಾಹೇಬ್ ಅಧ್ಯಕ್ಷರು. ತೀರ್ಥಹಳ್ಳಿ ತಾಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟ.
ಮುಜಾಹಿದ್ ಪಾಷ, ಅಲ್ ಜಮಾತುಲ್ ಖುರೈಷ್ ಟ್ರಸ್ಟ್, ಬಸವಕಲ್ಯಾಣ.
ಇನ್ನೂ ಕೆಲವರು ಮಾತನಾಡ್ತಿಲ್ಲ. ಆದರೆ ತಿರುಗಿ ಬೀಳುವ ಎಲ್ಲ ಸೂಚನೆಗಳೂ ಇವೆ.



