ಒಂದು ಲೆಕ್ಕದಲ್ಲಿ ಕಳೆದೇ ಹೋಗುತ್ತಿದ್ದ ಡಾಲಿ ಧನಂಜಯ (dolly dhananjaya) ಅವರಿಗೆ ಲೈಫ್ ಕೊಟ್ಟಿದ್ದು ಟಗರು ಚಿತ್ರ. ಶಿವಣ್ಣ (Shiva rajkumar) ಎದುರು ವಿಲನ್ ಆಗಿ ಟಗರು (tagaru) ಚಿತ್ರದಲ್ಲಿನ ಡಾಲಿ ಪಾತ್ರ, ಧನಂಜಯ ಅವರ ಕೆರಿಯರ್ ಬದಲಿಸಿದ್ದು ನಿಜ. ಅದಾದ ಮೇಲೆ ಡಾಲಿ ಧನಂಜಯ ಶಿವಣ್ಣ ಜೊತೆ ಇನ್ನೊಂದು ಸಿನಿಮಾ ಮಾಡಿದರಾದರೂ, ಹಿಟ್ ಆಗಲಿಲ್ಲ. ಆದರೆ ಡಾಲಿ ಕೈಹಿಡಿದ ಅದೃಷ್ಟವೋ ಏನೋ.. ಹಿಟ್ ಮೇಲೆ ಹಿಟ್ ಸಿಕ್ಕಿ, ಪರಭಾಷೆಯಲ್ಲೂ ಮಿಂಚಿ, ಪ್ರೊಡ್ಯೂಸರ್ ಕೂಡಾ ಆದರು.
ಪ್ರೊಡ್ಯೂಸರ್ ಆದ ಮೇಲೂ ಅಷ್ಟೆ, ಹ್ಯಾಟ್ರಿಕ್ ಹೀರೋ (hat trick hero) ಸಹವಾಸ ಬಿಡಲಿಲ್ಲ. ಡಾಲಿ ಪಿಕ್ಚರ್ಸ್‌ನ್ನು ಗೀತಾ ಶಿವರಾಜಕುಮಾರ್ ಆಶೀರ್ವಾದೊಂದಿಗೆ ಆರಂಭದಿಸಿದ ಡಾಲಿ ಧನಂಜಯ, ಈಗ ಹ್ಯಾಟ್ರಿಕ್ ಪ್ರೊಡ್ಯೂಸರ್ (hat trick producer) ಆಗಿದ್ದಾರೆ.
ಮೊದಲು ಡಾಲಿ ನಿರ್ಮಾಪಕರಾಗಿ ಬಡವ ರಾಸ್ಕಲ್ (badava rascal) ಸಿನಿಮಾ ನಿರ್ಮಿಸಿದರು. ಸಿನಿಮಾ ಸೂಪರ್ ಹಿಟ್. ಅದಾದ ಮೇಲೆ ಹೆಡ್ ಬುಷ್ (head bush), ಇದೀಗ ಟಗರು ಪಲ್ಯ (tagaru palya). ಮೂರಕ್ಕೆ ಮೂರೂ ಸಿನಿಮಾಗಳು ಹಿಟ್ ಆಗಿ ಹ್ಯಾಟ್ರಿಕ್ ಪ್ರೊಡ್ಯೂಸರ್ ಎನಿಸಿಕೊಂಡಿದ್ದಾರೆ. ಟಗರುಪಲ್ಯವನ್ನು ಜನ ಮೆಚ್ಚಿಕೊಂಡಿದ್ದಾರೆ. ಡಾಲಿ ಧನಂಜಯ ಮತ್ತೊಮ್ಮೆ ನಿರ್ಮಾಪಕರಾಗಿ ಗೆದ್ದಿದ್ದಾರೆ.
ಟಗರುಪಲ್ಯದಲ್ಲಿ (tagaru palya) ನಾಗಭೂಷಣ್ (nagabhushan) ಅವರನ್ನ ಹೀರೋ ಆಗಿಯೂ ಒಪ್ಪಿಕೊಂಡಿರುವ ಪ್ರೇಕ್ಷಕರು, ನಟ ಪ್ರೇಮ್ (nenapirali prem) ಮಗಳನ್ನು ನಾಯಕಿಯಾಗಿ ಅಮೃತ ಪ್ರೇಮ್ ರನ್ನು (actress amrutha prem) ವೆಲ್ʻಕಂ ಮಾಡಿದ್ಧಾರೆ. ರಂಗಾಯಣ ರಘು (rangayana raghu), ತಾರಾ (thara anuradha) ಅವರ ಅಭಿನಯಕ್ಕೆ ಬಹುಪರಾಕ್ ಬಹುಪರಾಕ್. ಇದೆಲ್ಲದರ ಪರಿಣಾಮ ಥಿಯೇಟರುಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಡೈರೆಕ್ಟರ್ ಆಗಿ ಮೊದಲ ಚಿತ್ರದಲ್ಲೇ ಉಮೇಶ್ ಗೆಲುವು ಕಂಡಿದ್ಧಾರೆ.
ಅಕ್ಟೋಬರ್ 27 ರಂದು ಟಗರು ಪಲ್ಯ (tagaru palya) 175 ಥಿಯೇಟರ್ಗಳಲ್ಲಿ ಬಿಡುಗಡೆಯಾಗಿತ್ತು. ಸಿನಿಮಾವನ್ನು ಜನ ಮೆಚ್ಚಿದ್ದರು. ಮೊದಲ ದಿನದ ನಂತರ ಇವುಗಳಿಗೆ ಮತ್ತೆ 50ಕ್ಕೂ ಹೆಚ್ಚು ಶೋಗಳು ಸೇರ್ಪಡೆಯಾಗಿವೆ. ಇದು ಇನ್ನಷ್ಟು ಹೆಚ್ಚುವ ನಿರೀಕ್ಷೆಗಳೂ ಇವೆ. ಟಗರು ಪಲ್ಯ ಕನ್ನಡ ಪ್ರೇಕ್ಷಕರನ್ನು ಮಾತ್ರವಲ್ಲದೆ ಪರ ಭಾಷೆಯ ಪ್ರೇಕ್ಷಕರನ್ನು ಸೆಳೆದಿದ್ದು, ಚಿತ್ರದ ರಿಮೇಕ್ ರೈಟ್ಸ್ಗೆ ಭಾರಿ ಡಿಮ್ಯಾಂಡ್ ಶುರುವಾಗಿದೆ. ರಿಮೇಕ್ ಬಗ್ಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.
ಟಗರು ಪಲ್ಯ ಅಪ್ಪಟ ದೇಸಿ ಸೊಗಡನ್ನು ಕನ್ನಡಿಗರಿಗೆ ಉಣಬಡಿಸಿದ್ದು, ಸಿನಿ ಪ್ರೇಕ್ಷಕರು ಚಪ್ಪರಿಸಿಕೊಂಡು ಸವಿದಿದ್ದಾರೆ. ಕುಟುಂಬ ಸಮೇತ ಸಿನಿಮಾ ಮಂದಿರಗಳಲ್ಲಿ ಜನ ಸೇರುತ್ತಿದ್ದು, ಚಿತ್ರಮಂದಿರಗಳು ಫುಲ್ ಆಗುತ್ತಿವೆ. ಸಂಬಂಧ, ಪ್ರೀತಿ, ನಗು, ಅಳು.. ಸೇರಿ ಒಂದೊಳ್ಳೆ ಫ್ಯಾಮಿಲಿ ಡ್ರಾಮಾ ಎನಿಸಿಕೊಂಡಿರುವ ಟಗರು ಪಲ್ಯ ಸಿನಿಮಾ ಬಗ್ಗೆ ಪ್ರೇಕ್ಷಕ ಮುಕ್ತ ಕಂಠದಿಂದ ಹೊಗಳುತ್ತಿದ್ದು, ವಿಮರ್ಶಕರು ಕೂಡ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿನಿಮಾ ರಿಲೀಸ್ ಆಗುವುದಕ್ಕೂ ಮೊದಲೇ ಲಾಭದಲ್ಲಿದ್ದ ಡಾಲಿ ಧನಂಜಯ, ಈಗ ಥಿಯೇಟರ್ ಮೂಲಕ ಭರಪೂರ ಲಾಭವನ್ನೇ ಎದುರು ನೋಡುತ್ತಿದ್ಧಾರೆ. ಅಂದಹಾಗೆ ಈ ಚಿತ್ರದಲ್ಲಿ ಡಾಲಿ ನಿರ್ಮಾಪಕರಷ್ಟೇ, ನಟಿಸಿಲ್ಲ. ಬೇರೊಬ್ಬರನ್ನು ಹೀರೋ ಮಾಡಿ, ಹೊಸಬ ನಿರ್ದೇಶಕರಿಗೆ ಅವಕಾಶ ಕೊಟ್ಟು, ಹೊಸ ನಾಯಕಿಯನ್ನೂ ಪರಿಚಯಿಸಿ ತೆಗೆದುಕೊಂಡ ರಿಸ್ಕ್ʻಗೆ ಭರ್ಜರಿ ಬೆಳೆಯನ್ನೇ ತೆಗೆದಿದ್ದಾರೆ ಡಾಲಿ ಧನಂಜಯ.



