ಇತ್ತೀಚೆಗೆ ನ್ಯೂಸ್ ಓದಿರುತ್ತೀರಿ. ಅಥವಾ ನೋಡಿರುತ್ತೀರಿ. ಉತ್ತರ ಪ್ರದೇಶದ (Uttar Pradesh) ವಾರಣಸಿಯ (Varanasi) ತರಕಾರಿ ವ್ಯಾಪಾರಿ ಅಜಯ್ ಫೌಜಿ ಟೊಮೆಟೊ (tomatto) ಕಾಯಲು ಇಬ್ಬರು ಬೌನ್ಸರ್ (Bouncer) ನೇಮಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಟೊಮೆಟೊ (tomatto) ಬೆಲೆ ಗಗನಕ್ಕೇರಿದೆ. ಹಲವೆಡೆ ಟೊಮೆಟೊಗಾಗಿ ಹಲ್ಲೆ, ಹೊಡೆದಾಟ ನಡೆದಿದೆ. ಕೆಲವೆಡೆ ಟೊಮೊಟೊ(tomatto) ಕಳ್ಳತನ ನಡೆದ ಘಟನೆಗಳು ನಡೆದಿದೆ. ಹೀಗಾಗಿ ಈ ಸಮಸ್ಯೆ ಇಲ್ಲಿ ಆಗಬಾರದು ಎಂದು ಇಬ್ಬರು ಬೌನ್ಸರ್ ನೇಮಕ ಮಾಡಿದ್ದೇನೆ ಎಂದು ಅಂಗಡಿ ಮಾಲೀಕ ಅಜಯ್ ಫೌಜಿ ಹೇಳಿಕೊಂಡಿದ್ದ. ಆದರೆ ಈತನೀಗ ಅರೆಸ್ಟ್ ಆಗಿದ್ದಾನೆ. ಬೌನ್ಸರ್ ನೇಮಕದ ಹಿಂದೆ ಟೊಮ್ಯಾಟೋ ರಕ್ಷಣೆಗಿಂತ ಹೆಚ್ಚಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ, ಸಿಎಂ ಯೋಗಿ ಆದಿತ್ಯನಾಥ್ (Yogi Adithyanath) ಅವರಿಗೆ ಕೆಟ್ಟ ಹೆಸರು ತರುವ ಹುನ್ನಾರ ನಡೆಸುತ್ತಿದ್ದಾನೆ ಎಂದು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಫೌಜಿ ತನ್ನ ಅಂಗಡಿಗೆ ಇಬ್ಬರು ಬೌನ್ಸರ್ ಇಟ್ಟುಕೊಂಡು, ಬಂದ ಗ್ರಾಹಕರಿಗೆ ವಾರ್ನಿಂಗ್ ಕೊಡುತ್ತಿರುವ ದೃಶ್ಯಗಳು ವೈರಲ್ ಆಗಿದ್ದವು. ಟೊಮೆಟೊ ಮುಟ್ಟಲು ಈ ಬೌನ್ಸರ್ ಬಿಡುತ್ತಿಲ್ಲ. ನಿಮಗೆ ಎಷ್ಟು ಟೊಮೆಟೊ ಬೇಕು ಅಷ್ಟನ್ನು ಮಾಲೀಕರ ಬಳಿ ಕೇಳಿ. ಅವರು ಕೊಡುತ್ತಾರೆ. ಸುಖಾಸುಮ್ಮನ ಟೊಮೆಟೊ ಮುಟ್ಟಿ ಹಾಳುಮಾಡಬೇಡಿ ಎಂದು ಬೌನ್ಸರ್ ಗದರಿಸುತ್ತಿರುವ ದೃಶ್ಯಗಳು ಗಂಭೀರ ಎನಿಸಿದ್ದವು. ಆದರೆ ಇಷ್ಟಕ್ಕೇ ಅಜಯ್ ಫೌಜಿ ಅರೆಸ್ಟ್ ಆಗಿಲ್ಲ.
ರಾಜ್ಯ ಸರ್ಕಾರಕ್ಕೆ ಕೆಟ್ಟಹೆಸರು ತರಲೆಂದೇ ಟೊಮೆಟೋ ಅಂಗಡಿಯ ಈ ಇಬ್ಬರು ಬೌನ್ಸರ್ಗಳನ್ನು ನೇಮಿಸಿಕೊಂಡಿದ್ದಾಗಿ ಮಾಲೀಕ ಅಜಯ್ ಮಾಹಿತಿ ನೀಡಿದ್ದ. ಈ ವಿಷಯ ಭಾರೀ ವೈರಲ್ ಆಗಿತ್ತು. ಇದನ್ನು ಸ್ವತಃ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಟ್ವೀಟರ್ನಲ್ಲಿ ಹಂಚಿಕೊಂಡಿದ್ದರು. ಬಳಿಕ ವಿಚಾರಣೆ ವೇಳೆ, ಫೌಜಿ, ಸಮಾಜವಾದಿ ಪಕ್ಷದ ಕಾರ್ಯಕರ್ತ. ಸರ್ಕಾರಕ್ಕೆ ಕೆಟ್ಟಹೆಸರು ತರಲೆಂದೇ ಆತ ಬೌನ್ಸರ್ ನೇಮಕದ ಕುರಿತ ಯೋಜನೆ ರೂಪಿಸಿದ್ದ ಎಂಬ ವಿಷಯ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಾರಾಯಣ್ ಮತ್ತು ವಿಕಾಸ್ನನ್ನು ಐಪಿಸಿ ಸೆಕ್ಷನ್ 153 ಗಲಭೆಗೆ ಪ್ರಚೋದನೆ, 291 (ತಪ್ಪು ಪುನರಾವರ್ತನೆ) ಹಾಗೂ 505 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಬಳಿಕ ಫೌಜಿ ನಾಪತ್ತೆಯಾಗಿದ್ದಾನೆ. ತರಕಾರಿ ಅಂಗಡಿಗೆ ಟೊಮೆಟೋಗಳನ್ನು ರಕ್ಷಿಸಿಕೊಳ್ಳಲು ಬೌನ್ಸರ್ಗಳನ್ನು ನೇಮಿಸಿದ್ದ ಅಂಗಡಿ ನೌಕರ ನಾರಾಯಣವ್ ಯಾದವ್ ಹಾಗೂ ಆತನ ಮಗ ವಿಕಾಸ್ನನ್ನು ಪೊಲೀಸರು ಬಂಧಿಸಿದ್ದಾರೆ.



