ಚಾಲೆಂಜಿಂಗ್ ಸ್ಟಾರ್, ಬಾಕ್ಸಾಫೀಸ್ ಸುಲ್ತಾನ್ ಡಿ ಬಾಸ್ ಎಂದೆಲ್ಲ ಕರೆಸಿಕೊಳ್ತಾ ಇದ್ದ ದರ್ಶನ್ ಇನ್ನು ಮುಂದೆ ಭೂಮಿ ಪುತ್ರ ಎಂದೂ ಕರೆಸಿಕೊಳ್ಳಲಿದ್ದಾರೆ. ನಟ ದರ್ಶನ್ ಅವರ ಹೊಸ ಬಿರುದು ಭೂಮಿಪುತ್ರ. ನೀಡಿರುವುದು ರಾಜ್ಯ ರೈತ ಸಂಘ. ಇದುವರೆಗೆ ಅದಕ್ಕೆ ಕಾರಣವಾಗಿರುವುದು ಕಾಟೇರ ಸಿನಿಮಾ ಎನ್ನುವುದು ವಿಶೇಷ.
ಕಾಟೇರ’ ಸಿನಿಮಾ ಸಕ್ಸಸ್ ಆಗಿರುವ ಖುಷಿಯನ್ನು ಪಾಂಡವಪುರದಲ್ಲಿ ಆಚರಿಸಲಾಗಿದೆ. ರೈತರ ಕುರಿತು ‘ಕಾಟೇರ’ ಚಿತ್ರದ ಮೂಲಕ ತಿಳಿಸಿದಕ್ಕೆ ದರ್ಶನ್‌ಗೆ ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ‘ಭೂಮಿ ಪುತ್ರ’ ಎಂದು ಬಿರುದು ನೀಡಿದ್ದಾರೆ.
ಈ ಸಮಾರಂಭದಲ್ಲಿ ದರ್ಶನ್ ಜೊತೆ ರೈತ ಮುಖಂಡ ಕೆ.ಎಸ್ ಪುಟ್ಟಣ್ಣಯ್ಯ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಟಿ ಆರಾಧನಾ ರಾಮ್ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತುಂಬಿದ್ದು, `ಬಿಗ್ ಬಾಸ್’ ಖ್ಯಾತಿಯ ನಮ್ರತಾ ಗೌಡ, ಮಾನ್ವಿತಾ ಕಾಮತ್, ಹರ್ಷಿಕಾ ಪೂಣಚ್ಚ ಅವರ ನೃತ್ಯ.
ಇದರ ನಡುವೆಯೇ ಕಾಟೇರ ಚಿತ್ರ ಯಶಸ್ವಿ ೫ನೇ ವಾರಕ್ಕೆ ಕಾಲಿಟ್ಟಿದ್ದು, ಭರ್ಜರಿ ಪ್ರದರ್ಶನ ಮುಂದುವರೆದಿದೆ.



