ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ (Electricity Connection) ಕಾಯುತ್ತಿರುವವರಿಗೆ ಕೊನೆಗೂ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಒಸಿಯಿಂದ (Occupancy Certificate (OC)) ವಿನಾಯಿತಿ ನೀಡಿದೆ. ಇತ್ತೀಚೆಗಷ್ಟೇ ಸರ್ಕಾರಿ ಆದೇಶ ಹೊರಬೀಳಲಿದೆ, ಕೆಲವು ಬದಲಾವಣೆ ತಂದು ಜಿಓ ಮಾಡುತ್ತೇವೆ. ಅದು ಬಂದ ನಂತರ ಸರಿಯಾಗಿ 15 ದಿನಗಳ ಟೈಂ ಇರುತ್ತೆ. ಶಾಶ್ವತ ವಿದ್ಯುತ್ ಸಂಪರ್ಕ ಪಡೆದುಕೊಳ್ಳಿ ಎಂದು ಘೋಷಿಸಿದ್ದ ಸಿಎಂ ಡಿಕೆ ಶಿವಕುಮಾರ್, ಹೇಳಿದಂತೆಯೇ GO (government order) ಹೊರಡಿಸಿದ್ಧಾರೆ. ಇನ್ನು 15 ದಿನ ಅವಕಾಶ. ಈ ಆದೇಶ ಯಾರಿಗೆಲ್ಲ ಅನುಕೂಲ, ಲಾಭದಾಯಕ ಎಂದು ನೋಡುವುದಾದರೆ..
ಯಾರಿಗೆ ಅನ್ವಯ?: ದಿನಾಂಕ 31.05.2026ರ ಒಳಗಾಗಿ ಕಾಮಗಾರಿ ಪೂರ್ಣಗೊಂಡು, ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಅಥವಾ ತಾತ್ಕಾಲಿಕ ಸಂಪರ್ಕ ಪಡೆದಿರುವ ಮನೆಗಳಿಗೆ ಇದು ಅನ್ವಯಿಸುತ್ತದೆ.
ಕಟ್ಟಡ ನಿರ್ಮಾಣದ ಮಿತಿ: 2,400 ಚದರ ಅಡಿಗಳವರೆಗಿನ ನಿವೇಶನದಲ್ಲಿ ನಿರ್ಮಿಸಲಾಗಿರುವ ಜಿ+3 (Ground + 3) ಅಂತಸ್ತಿನ ಅಥವಾ ಸ್ಟಿಲ್ಟ್ ಪಾರ್ಕಿಂಗ್ + 4 ಮಹಡಿಗಳನ್ನು ಹೊಂದಿರುವ ವಸತಿ ಕಟ್ಟಡಗಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.
ಅರ್ಜಿ ಸಲ್ಲಿಸಲು ಕಾಲಾವಕಾಶ: ಈ ಆದೇಶ ಹೊರಬಿದ್ದ ದಿನದಿಂದ (ಜೂನ್ 22, 2026) ಮುಂದಿನ 15 ದಿನಗಳವರೆಗೆ ಮಾತ್ರ ಹೊಸದಾಗಿ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಕೊನೆಯ ಅವಕಾಶ ನೀಡಲಾಗಿದೆ. ಜೂನ್ 6ರ ಒಳಗೆ ಅರ್ಜಿ ಸಲ್ಲಿಸಬೇಕು. ಏಕೆಂದರೆ ಮಧ್ಯೆ ಬರುವ ಸರ್ಕಾರಿ ರಜಾ ದಿನಗಳನ್ನು ಈ 15 ದಿನಗಳ ಅವಧಿಯಲ್ಲಿ ಸೇರಿಸಲಾಗಿದೆಯೇ ಇಲ್ಲವೇ ಎಂಬುದು ಸ್ಪಷ್ಟವಿಲ್ಲ. ಅದನ್ನೆಲ್ಲ ಲೆಕ್ಕ ಹಾಕಿಕೊಂಡು ಯಾಮಾರಿದರೆ ಮತ್ತೆಂದೂ ಇಂತಹ ಅವಕಾಶ ಸಿಗುವುದಿಲ್ಲ.
ವ್ಯಾಪ್ತಿ: ಬೆಂಗಳೂರು (ಬೆಸ್ಕಾಂ ವ್ಯಾಪ್ತಿ) ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೂ ಇದು ಅನ್ವಯಿಸುತ್ತದೆ
ಹೊಸ ವಿದ್ಯುತ್ ಸಂಪರ್ಕ ಪಡೆಯಲು ಬೇಕಾಗುವ ಸಾಮಾನ್ಯ ದಾಖಲೆಗಳು
ಸಾಮಾನ್ಯವಾಗಿ ನಿಮ್ಮ ಭಾಗದ ವಿದ್ಯುತ್ ಸರಬರಾಜು ಕಂಪನಿ (ಉದಾಹರಣೆಗೆ: BESCOM, MESCOM, HESCOM, GESCOM, CESC) ಮೂಲಕ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಬೇಕಾಗುತ್ತವೆ.
1. ಅರ್ಜಿ ನಮೂನೆ (ನಿಗದಿತ ಫಾರ್ಮ್).
- ಮಾಲೀಕತ್ವದ ಪುರಾವೆ: ಕ್ರಯಪತ್ರ (Sale Deed), ಖಾತಾ ಪ್ರಮಾಣಪತ್ರ, ಅಥವಾ ತೆರಿಗೆ ಪಾವತಿಸಿದ ರಶೀದಿ.
- ಗುರುತಿನ ಚೀಟಿ: ಅರ್ಜಿದಾರರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಪಾಸ್‌ಪೋರ್ಟ್.
- ಕಟ್ಟಡದ ನಕ್ಷೆ (ಮಂಜೂರಾದ ಪ್ಲಾನ್).
- ವೈರಿಂಗ್ ಸರ್ಟಿಫಿಕೇಟ್: ಪರವಾನಗಿ ಪಡೆದ ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಅವರಿಂದ ಪಡೆದ ಸುರಕ್ಷತಾ ಪ್ರಮಾಣಪತ್ರ.
ವಿದ್ಯುತ್ ಸರಬರಾಜು ಕಂಪನಿಗಳ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಮೂಲಕ (ಉದಾಹರಣೆಗೆ ಬೆಸ್ಕಾಂ ಆನ್‌ಲೈನ್ ಪೋರ್ಟಲ್) ನೀವು ನಮೂನೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು. ಅರ್ಜಿ ಸಲ್ಲಿಸಿದ ಮೇಲೆ ಅಪ್ ಡೇಟ್ ಆಗಿಲ್ಲ ಎಂದರೆ ಮತ್ತೆ ಅಧಿಕಾರಿಗಳನ್ನು ಸಂಪರ್ಕ ಮಾಡುವುದು ಉತ್ತಮ. ಏಕೆಂದರೆ 15 ದಿನ ಕಳೆದ ಮೇಲೆ ಈ ಅವಕಾಶವೇ ಸಿಗುವುದಿಲ್ಲ.
ಈ ವಿನಾಯಿತಿ 31 ಮೇ 2026ರೊಳಗಾಗಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವವರು, ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿರುವವರು ಹಾಗೂ ಯಾವುದೇ ವಿದ್ಯುತ್ ಸಂಪರ್ಕ ಪಡೆಯದೇ ಕಟ್ಟಡ ಪೂರ್ಣಗೊಳಿಸಿರುವವರಿಗೆ ಮಾತ್ರ ಅನ್ವಯಿಸುತ್ತದೆ. ಇಂತಹ ಅರ್ಜಿದಾರರಿಗೆ ಆದೇಶ ಹೊರಡಿಸಿದ ದಿನಾಂಕದಿಂದ 15 ದಿನಗಳವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಒಂದು ಬಾರಿಗೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯುವುದರಿಂದ ವಿದ್ಯುತ್ ಸಂಪರ್ಕಕ್ಕೆ ವಿನಾಯಿತಿ ದೊರೆಯಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಮಹಾನಗರ ಪಾಲಿಕೆಗಳ ವ್ಯಾಪ್ತಿ ಹಾಗೂ ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿ ವ್ಯಾಪ್ತಿಗಳಿಗೆ ಈ ಆದೇಶ ಅನ್ವಯವಾಗಲಿದೆ. 2400 ಚದರ ಅಡಿಗಳವರೆಗಿನ ಅಳತೆಯ ನಿವೇಶನಗಳ ವಸತಿ ಕಟ್ಟಡಗಳು, ಜೊತೆಗೆ ಜಿ+3 ಅಥವಾ ಸ್ಟಿಲ್ಟ್ ಪಾರ್ಕಿಂಗ್+4 ಮಹಡಿಗಳ ವಸತಿ ಕಟ್ಟಡಗಳಿಗೆ ನಿಯಮ ಅನ್ವಯಿಸುತ್ತದೆ. ಗ್ರಾಮೀಣ ಭಾಗದ ರೈತರ ಮನೆ, ತೋಟದ ಮನೆ, ಕೃಷಿ ಉಪಕರಣದ ಮನೆ, ದನದ ಕೊಟ್ಟಿಗೆ ಹಾಗೂ ರೇಷ್ಮೆ ಗೂಡಿನ ಮನೆಗಳಿಗೂ ವಿನಾಯಿತಿ ನೀಡಲಾಗಿದ್ದು, 15 ದಿನಗಳ ಒಳಗೆ ಕಟ್ಟಡ ಮಾಲೀಕರು ಕಟ್ಟಡದ ಜೊತೆಗಿನ ಭಾವಚಿತ್ರ ಮತ್ತು ಜಿಪಿಎಸ್ ದಾಖಲೆಯನ್ನು ಅರ್ಜಿ ಜೊತೆಗೆ ಸಲ್ಲಿಸಬೇಕು.



