ಗೃಹ ಜ್ಯೋತಿಗೆ (Gruha Jyothi) ಅರ್ಜಿ ಹಾಕುವುದಕ್ಕೆ ಅಂತಿಮ ದಿನಾಂಕ ಎಂದು ಇಲ್ಲ. ಪ್ರತಿ ತಿಂಗಳ 27ನೇ ತಾರೀಕು ಲಾಸ್ಟ್ ಡೇಟ್. ಆನಂತರ ಅರ್ಜಿ ಹಾಕಿದವರಿಗೆ ಆ ತಿಂಗಳಿಂದಲೇ ಗೃಹ ಜ್ಯೋತಿ ಕೌಂಟ್ ಆಗಲ್ಲ. ಈಗಾಗಲೇ ಅರ್ಜಿ ಹಾಕಿರುವವರು ಅಂದರೆ ಜುಲೈ 27ರ ಒಳಗೆ ಅರ್ಜಿ ಹಾಕಿದವರಿಗೆಲ್ಲ ಗೃಹಜ್ಯೋತಿ (Gruha Jyothi) ಸ್ಕೀಮ್ ಲಾಭ ಸಿಗಲಿದೆ. ಬಳಕೆಯ ಯುನಿಟ್ 200 ಯುನಿಟ್`ಗಿಂತ ಕಡಿಮೆ ಅನ್ನುವುದಕ್ಕಿಂತ ಸರ್ಕಾರ ನಿಗಧಿ ಪಡಿಸಿದ ಮಿತಿಯ ಒಳಗೆ ಇದ್ದರೆ ಬಿಲ್ ಕಟ್ಟಬೇಕಾಗಿಲ್ಲ. ಓಕೆ, ಆದರೆ ಇಲ್ಲೊಂದು ಟ್ವಿಸ್ಟ್ ಇದೆ.
ಹೌದು, ಸರ್ಕಾರ ಗೃಹಜ್ಯೋತಿ (Gruha Jyothi) ಯೋಜನೆ ಲಾಭ ಪಡೆಯಲು ಗ್ರಾಹಕರು ವಿದ್ಯುತ್ ಬಿಲ್ನ ಹಿಂಬಾಕಿ ಉಳಿಸಿಕೊಂಡಿದ್ದರೂ ಗೃಹ ಜ್ಯೋತಿ ಯೋಜನೆ ಯೋಜನ ಪಡೆಯಬಹುದಾಗಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮಾಧ್ಯಮ ಪ್ರಕಟಣೆಯಲ್ಲಿ (Bescom) ತಿಳಿಸಿದೆ. ಜುಲೈ 25ರೊಳಗೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದರೆ, ಆಗಸ್ಟ್ ಬಿಲ್ನಲ್ಲಿ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಜುಲೈ 25ರಿಂದ ಆಗಸ್ಟ್ 25ರೊಳಗೆ ಯೋಜನೆಗೆ ಅರ್ಜಿ ಸಲ್ಲಿಸಿದರೆ, ಸೆಪ್ಟೆಂಬರ್ ಬಿಲ್ನಲ್ಲಿ ಯೋಜನೆಯ ಪ್ರಯೋಜನ ದೊರೆಯಲಿದೆ. ಯೋಜನೆಗೆ ಅರ್ಹರಾಗಲು ಸರಾಸರಿ 200 ಯೂನಿಟ್ (200 unit) ಮೀರಬಾರದು ಎಂದು ಬೆಸ್ಕಾಂ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಸೆಪ್ಟೆಂಬರ್ 30ರೊಳಗೆ ವಿದ್ಯುತ್ ಬಾಕಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಈ ಅವಧಿಯಲ್ಲಿ ಬಾಕಿ ಬಿಲ್ ಪಾವತಿಸದಿದ್ದರೆ ಗೃಹಜ್ಯೋತಿ ಯೋಜನೆ ಅನ್ವಯ ಆಗುವುದಿಲ್ಲ.
ಅಂದರೆ ಅರ್ಥ ನೀವು ಝೀರೋ ಬಿಲ್ (Zero Bill) ಗೃಹ ಜ್ಯೋತಿ ಭಾಗ್ಯಕ್ಕೆ ಸೆಲೆಕ್ಟ್ ಆಗಿರುತ್ತೀರಿ. ಝೀರೋ ಬಿಲ್ ಕೂಡಾ ಬರುತ್ತೆ. ಆದರೆ ಹಳೆಯ ಬಾಕಿಯನ್ನು ಸೆಪ್ಟೆಂಬರ್ 30ರ ಒಳಗೆ ಕಟ್ಟದೇ ಇದ್ದರೆ, ಹಳೆಯ ಝೀರೋ ಬ್ಯಾಲೆನ್ಸ್ ಲೆಕ್ಕವೂ ಸೇರಿ ಎಲ್ಲವೂ ಒಟ್ಟಿಗೇ ಬರುತ್ತೆ. ಇನ್ನೂ ಒಂದು ತಿಂಗಳು ಕಾಲಾವಕಾಶ ಇದೆ. ನೀವು ಜುಲೈ 25 ರೊಳಗೆ ಯೋಜನೆಗೆ ನೋಂದಾಯಿಸಿಕೊಂಡಲ್ಲಿ, ಆಗಸ್ಟ್ ತಿಂಗಳ ಬಿಲ್ನಲ್ಲಿ ಯೋಜನೆಯ ಪ್ರಯೋಜನ ದೊರಕಲಿದೆ. ಹಾಗೆಯೇ, ಜುಲೈ 25 ರಿಂದ ಆಗಸ್ಟ್ 25 ರೊಳಗೆ ನೋಂದಾಯಿಸಿಕೊಂಡಲ್ಲಿ, ಸೆಪ್ಟೆಂಬರ್ ತಿಂಗಳ ಬಿಲ್ನಲ್ಲಿ ಯೋಜನೆಯ ಪ್ರಯೋಜನ ದೊರೆಯಲಿದೆ (ಬಿಲ್ಲಿಂಗ್ ಅವಧಿ ಪ್ರತಿ ತಿಂಗಳ 25 ನೇ ತಾರೀಖಿನಿಂದ ಮುಂದಿನ ತಿಂಗಳ 25 ತಾರೀಖಿನವರೆಗೆ ಅನ್ವಯ). ಈ ಪ್ರಯೋಜನ ಪಡೆಯಲು ನಿಮ್ಮ ವಿದ್ಯುತ್ ಬಳಕೆಯ ಸರಾಸರಿ 200 ಯೂನಿಟ್ ಮೀರಿರಬಾರದು. ಆದರೆ, ಸೆಪ್ಟಂಬರ್ ತಿಂಗಳ ಮುಕ್ತಾಯದೊಳಗೆ ಹಿಂಬಾಕಿ ಉಳಿಸಿಕೊಂಡಿರುವ ಎಲ್ಲ ಬಿಲ್ನ ಮೊತ್ತವನ್ನು ಪಾವತಿಸಬೇಕು. ಇಲ್ಲವಾದಲ್ಲಿ ಗೃಹಜ್ಯೋತಿ ಅನ್ವಯ ಆಗದೇ ಪುನಃ ಬಿಲ್ ಪಾವತಿ ಮಾಡಬೇಕಾಗುತ್ತದೆ.
ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಗೆ ಜೂ.18ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಈವರೆಗೆ ಸುಮಾರು 1.43 ಕೋಟಿಗೂ ಅಧಿಕ ಗ್ರಾಹಕರು ನೋಂದಣಿ ಮಾಡಿಸಿಕೊಂಡಿದ್ದಾರೆ.
ಈವರೆಗೆ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಿಕೊಂಡಿಲ್ಲ ಎಂದಾದಲ್ಲಿ
ಲಿಂಕ್ ಮೇಲೆ ಕ್ಲಿಕ್ ಮಾಡಿ ಸುಲಭವಾಗಿ ನೋಂದಣಿ ಮಾಡಬಹುದು. ಇನ್ನು ಗೃಹಜ್ಯೋತಿ ಯೋಜನೆ ಅರ್ಜಿ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ತಿಳಿಯಲು
https://sevasindhu.karnataka.gov.in/StatucTrack/Track_Status
ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಪರಿಶೀಲನೆ ಮಾಡಿಕೊಳ್ಳಬಹುದು.



