ಕಾಂತಾರ ಬಂದಾಗಲೂ ಇಂಥದ್ದು ಆಗಿತ್ತು. ಮೊದಲಿಗೆ ಯಾರ ಗಮನಕ್ಕೂ ಬರದೇ ಇದ್ದ ಕಾಂತಾರ.. ಯಾವಾಗ ಬ್ಲಾಕ್ ಬಸ್ಟರ್ ಆಯ್ತೋ.. ಒಂದಿಷ್ಟು ಜನ ನಾ ಮುಂದು ತಾ ಮುಂದು.. ಎಂದು ಚಿತ್ರದ ವಿರುದ್ಧ ದಾಳಿ ಮಾಡೋಕೆ ಶುರು ಮಾಡಿದ್ದರು. ಈಗಲೂ ಅಷ್ಟೇ.. ಕಾಂತಾರದ ವಿಷ ಕಾರುವ ತಂಡವೇ ಹುಟ್ಟಿಕೊಂಡಿದೆ.
ಕಾಂತಾರ ಚಾಪ್ಟರ್ 01.
ಎರಡು ವಾರಕ್ಕೆ 717 ಕೋಟಿ ಕೋಟಿ ಗಳಿಸಿ.. ಮುನ್ನುಗ್ಗುತ್ತಿದೆ. ಚಿತ್ರವನ್ನು 1 ಕೋಟಿಗೂ ಹೆಚ್ಚು ಪ್ರೇಕ್ಷಕರು ನೋಡಿದ್ದಾರೆ. ಮೆಚ್ಚಿದ್ದಾರೆ. ಈ ಮಧ್ಯೆ ಕಾಂತಾರದ ಬಗ್ಗೆ ವಿಷ ಕಾರುವವರೂ ಇದ್ದಾರೆ. ಚಿತ್ರದ ಕುರಿತು ಅಪಪ್ರಚಾರ, ಸುಳ್ಳು ಸುದ್ದಿ, ಕಾಲ್ಪನಿಕ ಕಥೆ ಹರಡುವ ವ್ಯವಸ್ಥಿತ ಪ್ರಚಾರ ನಡೆಯುತ್ತಿದೆ.
ಕಾಂತಾರ ವಿರುದ್ಧ ಅಪಪ್ರಚಾರ 01
ಟ್ರೇಲರ್ ರಿಲೀಸ್ ಆಗುವ ಮೊದಲೇ ʻಕಾಂತಾರ ನೋಡುವುದಕ್ಕೆ ಬರುವವರು ಕುಡಿದು ಬರಬೇಡಿ. ಮಾಂಸ ತಿಂದು ಬರಬೇಡಿʼ ಎಂದೆಲ್ಲ ಚಿತ್ರತಂಡವೇ ಹೇಳಿದೆ ಎಂದು ಸುದ್ದಿ ಹಬ್ಬಿಸಲಾಯ್ತು. ಕಾಂತಾರ ಚಿತ್ರತಂಡದ ಪೋಸ್ಟರ್ ಬಳಸಿ.. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಯ್ತು. ಅದು ಚಿತ್ರತಂಡಕ್ಕೇ ಗೊತ್ತಿರಲಿಲ್ಲ. ಅದನ್ನು ರಿಷಬ್ ಶೆಟ್ಟಿ, ಘನತೆಯಿಂದ ನಿಭಾಯಿಸಿದರು.. ಆ ಮಾತು ಬೇರೆ..
ಕಾಂತಾರ ವಿರುದ್ಧ ಅಪಪ್ರಚಾರ 02
ದೈವನರ್ತಕರ ಆಕ್ರೋಶಗೊಂಡರು ಎಂಬ ಸುದ್ದಿ, ಕೆಲವು ದೈವನರ್ತಕರು ಮತ್ತು ದೈವಾರಾಧಕರು ಟಿವಿಗಳಲ್ಲಿ, ಯೂಟ್ಯೂಬುಗಳಲ್ಲಿ ಮಾತನಾಡಿದರು. ಕಾಂತಾರದ ವಿರುದ್ಧ ವಿಷ ಕಾರಿದರು. ಸಮರ್ಥಿಸುವವರೂ ಇದ್ದರು. ಆ ವಿಷಯ ಬೇರೆ.. ಆದರೆ.. ಸಮರ್ಥಕರಿಗಿಂತ ವಿಷ ಕಾರುವವರ ಭಾಷಣವೇ ವೈರಲ್ ಆಯ್ತು.
ಕಾಂತಾರ ವಿರುದ್ಧ ಅಪಪ್ರಚಾರ 03
ದೈವವೇ ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದೆ ಎಂಬ ಸುಳ್ಳು ಸುದ್ದಿ. ವಾರದ ನಂತರ ಕೊನೆಗೆ ಅದು ಸುಳ್ಳು ಎಂಬ ಸತ್ಯ ಹೊರಬಿತ್ತು. ನೇಮೋತ್ಸವದಲ್ಲಿ ದೈವ ಎಚ್ಚರಿಕೆ ನೀಡಿದ್ದೇ ಸುಳ್ಳು ಎಂದು ಗೊತ್ತಾಯ್ತು.
ಕಾಂತಾರ ವಿರುದ್ಧ ಅಪಪ್ರಚಾರ 04
ಚಿತ್ರದ ಕೆಲವು ದೃಶ್ಯಗಳನ್ನು ಹಾಲಿವುಡ್ ಚಿತ್ರಗಳಿಂದ ಕದಿಯಲಾಗಿದೆ ಎಂಬ ಕಥೆ. ವಾಸ್ತವಲ್ಲಿ ಹಾಗೆ ಇರಲಿಲ್ಲ.
ಕಾಂತಾರ ವಿರುದ್ಧ ಅಪಪ್ರಚಾರ 05
ಚಿತ್ರದ ಕಥೆಯನ್ನು ಅದ್ಯಾವುದೋ ತಮಿಳು ಚಿತ್ರದಿಂದ ಕದಿಯಲಾಗಿದೆ ಎಂಬ ಕಥೆ ಬೇರೆ.. ಆ ಚಿತ್ರವನ್ನು ಟೀಕೆ ಮಾಡಿದವರಷ್ಟೇ ನೋಡಿದ್ದಾರೆ ಎನ್ನುವುದು ವಿಶೇಷ. ಅಂದಹಾಗೆ ಟೀಕಾಕಾರರು ಹೇಳಿದ್ದು ತಮಿಳಿನ ಯಾತಿಸೈ ಅನ್ನೋ ಸಿನಿಮಾವನ್ನ. ಹೀಗೊಂದು ಕಥೆ ಹುಟ್ಟಿಕೊಂಡ ಮೇಲಷ್ಟೇ ಯಾತಿಸೈ ಅನ್ನೋ ಸಿನಿಮಾ ಬಂದಿದ್ದ ಜನರಿಗೂ ಗೊತ್ತಾಯ್ತು.
ಕಾಂತಾರ ವಿರುದ್ಧ ಅಪಪ್ರಚಾರ 06
ದೈವ ಆಕ್ರೋಶಗೊಂಡಿದೆ. ಹೀಗಾಗಿಯೇ ಚಿತ್ರತಂಡಕ್ಕೆ ಅವಘಡಗಳು ಎದುರಾಗಿವೆ ಎಂದೆಲ್ಲ ಆರೋಪ ಬಂತು. ಒಂದು ಸಿನಿಮಾ ಎಂದ ಮೇಲೆ.. ಎಲ್ಲವೂ ಹೂ ಎತ್ತಿ ಇಟ್ಟಂತೆ ಸುಲಭವಾಗಿ ಆಗುವುದಿಲ್ಲ.
ಕಾಂತಾರ ವಿರುದ್ಧ ಅಪಪ್ರಚಾರ 08
ವಾಟರ್ ಕ್ಯಾನ್ ವಿಚಾರ ಬಿಡಿ.. ಅದಕ್ಕಿಂತ ದೊಡ್ಡ ತಮಾಷೆಯ ವಿಚಾರ ಇನ್ನೊಂದಿಲ್ಲ. ಇದ್ದದ್ದು ಸತ್ಯ. ಮಿಸ್ ಆಗಿ ಕಾಣಿಸಿಕೊಂಡಿದ್ದೂ ಸತ್ಯ. ಮರೆಯಬಹುದಾದ ಮಿಸ್ಟೇಕ್.
ಕೊನೆಯದಾಗಿ.. ಚಿತ್ರ ನೋಡಿದವರು ಮೆಚ್ಚಿದ್ದಾರೆ. ದೈವ, ಭೂತಕೋಲದ ಪರಿಚಯವೇ ಇಲ್ಲದ ಉತ್ತರ ಕರ್ನಾಟಕ, ಬಯಲುಸೀಮೆಯಲ್ಲಿಯೂ ಚಿತ್ರ ಜನಮೆಚ್ಚುಗೆ ಗಳಿಸಿದೆ. ಎಲ್ಲರೂ ಮೆಚ್ಚಿದ್ದರಲ್ಲಿ ಕೊಂಕು ಹುಡುಕುವುದೂ ಒಂದು ಕಾಯಿಲೆಯಾ ಹೇಗೆ..? ಕನ್ನಡ ಚಿತ್ರವೊಂದು.. ಈ ನೆಲದ ಮಣ್ಣಿನ ಕಥೆಯ ಚಿತ್ರವೊಂದು ಗೆದ್ದಾಗ ಸಂಭ್ರಮಿಸಿ. ಏಕೆಂದರೆ ಈ ಕಾಂತಾರ.. ಈ ಬಾರಿಯೂ ಕನ್ನಡದ ನೆಲದ ಕಥೆಯನ್ನು ಜಗತ್ತಿಗೆ ಹೇಳುತ್ತಿದೆ.



