Tuesday, June 16, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಮಜಾಭಾರತ ನಟ ಸಿದ್ಧಾರ್ಥ ಸಾವು ಸಹಜ ಸಾವಲ್ಲ..!

SpeciallU by SpeciallU
June 16, 2026
in Cinema
Reading Time: 1 min read
0 0
0
ಮಜಾಭಾರತ ನಟ ಸಿದ್ಧಾರ್ಥ ಸಾವು ಸಹಜ ಸಾವಲ್ಲ..!

ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದ ಸಿದ್ದು ಪರಸನೂರು ಮೃತಪಟ್ಟಿದ್ಧಾರೆ. ಈ ನಟನ ವೊರಿಜಿನಲ್‌ ಹೆಸರು ಸಿದ್ಧಾರ್ಥ ಆದರೂ, ಸಿದ್ದು ಎಂದೇ ಫೇಮಸ್‌ ಆಗಿದ್ದ ಕಲಾವಿದ. ಬೀದರ್‌ನ ಹುಮ್ನಾಬಾದ್ ಹೊರವಲಯದಲ್ಲಿ ಅವರ ಶವ ಪತ್ತೆಯಾಗಿದೆ. ಈತನ ಸಾವು ಸಹಜ ಸಾವಲ್ಲ. ಆಕಸ್ಮಿಕವೋ.. ಕೊಲೆಯೋ.. ಆತ್ಮಹತ್ಯೆಯೋ.. ಯಾವುದೂ ಗೊತ್ತಾಗಿಲ್ಲ. ಪ್ರಶ್ನೆಗಳು ಹಾಗೆಯೇ ಇವೆ. ಪ್ರಾಥಮಿಕ ತನಿಖೆಯ  ಪ್ರಕಾರ ಸಾವಿಗೆ ಕಾಣುತ್ತಿರುವ ಅಂಶಗಳೇ ಬೇರೆ.

ಹುಮ್ನಾಬಾದ್ ನಗರದ ಟೀಚರ್ಸ್ ಕಾಲೊನಿ‌ಯಲ್ಲಿ ವಾಸವಿದ್ದ ಸಿದ್ದಾರ್ಥ ಪರಶನೂರ ಅವರಿಗೆ 36 ವರ್ಷ. ಜೂನ್ 13 ರಂದು ಸ್ನೇಹಿತರೊಂದಿಗೆ ಮನೆಯಿಂದ ಹೋಗಿದ್ದ ಸಿದ್ದು 3 ದಿನಗಳ ಬಳಿಕ ಶವವಾಗಿ ಸಿಕ್ಕಿದ್ದಾರೆ. 3 ದಿನವಾದರೂ ಮನೆಗೆ ಬಾರದ ಸಿದ್ದಾರ್ಥ ಅವರ ಬಗ್ಗೆ ಸೋಮವಾರ ಬೆಳಗ್ಗೆಯಷ್ಟೇ ಕುಟುಂಬಸ್ಥರು ಮಿಸ್ಸಿಂಗ್‌ ದೂರು ದಾಖಲಿಸಿದ್ದರು. ಮೊಬೈಲ್ ಟವರ್ ಲೊಕೆಶನ್‌ ಆಧರಿಸಿ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಬಳಿಕ ಶವ ಪರೀಕ್ಷೆಗಾಗಿ ಬ್ರಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹ ರವಾನೆ ಮಾಡಿದ್ದಾರೆ. ಸಾವಿಗೆ ನಿಖರ ಕಾರಣ‌ ಇನ್ನೂ ತಿಳಿದುಬಂದಿಲ್ಲ.

Related posts

ರಾಘವೇಂದ್ರ ಸ್ವಾಮಿಗಳ ಪಾತ್ರಕ್ಕೆ 16 ವರ್ಷಗಳ ನಂತರ ಮತ್ತೆ ಪ್ರವೇಶ ಮಾಡಿದ ನಟ

ನೆಪೋಟಿಸಂ ಬಗ್ಗೆ ದೊಡ್ಮನೆಯವರನ್ನ ಕೇಳಿ : ಸುದೀಪ್‌

ಸಿದ್ದು ಅವರಿಗೆ ಮಜಾಭಾರತ ರಿಯಾಲಿಟಿ ಶೋ ಭಾರೀ ಖ್ಯಾತಿ ತಂದುಕೊಟ್ಟಿತ್ತು. ನಂತರ ಕಾಮಿಡಿ ಕಿಲಾಡಿಗಳು ಶೋನಲ್ಲಿ ಕಾಣಿಸಿಕೊಂಡಿದ್ದರು. ‘ಕುಲದಲ್ಲಿ ಕೀಳ್ಯಾವುದೋ ಸಿನಿಮಾದಲ್ಲಿಯೂ ಸಿದ್ದು ನಟಿಸಿದ್ದಾರೆ. ವಿಭಿನ್ನ ಹಾಗೂ ಸಹಜವಾದ ಹಾಸ್ಯ ಶೈಲಿಗೆ ಹೆಸರಾಗಿದ್ದ ಸಿದ್ದು ಅವರಿಗೆ ತಮ್ಮದೇ ಆದ ಅಭಿಮಾನಿ ಬಳಗ ಇತ್ತು. ಬ್ರಹ್ಮಗಂಟು ಸೀರಿಯಲ್‌ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ನಟನಾಗಿ ಗುರುತಿಸಿಕೊಂಡಿದ್ದಾರೆ. ಹಾಸ್ಯಕ್ಕೆ ಸಂಬಂಧಪಟ್ಟ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಅದುಲ್ಲದೇ ಸೋಶಿಯಲ್‌ ಮೀಡಿಯಾ ಮೂಲಕ ಜನರನ್ನ ನಗಿಸುವ ಕಾಯಕ ಮಾಡುತ್ತಿದ್ದರು. ಬೀದರ್ ಜಿಲ್ಲೆಯ ಹುಮನಾಬಾದ್ ಮೂಲದವರಾದ ಇವರು, ಅಲ್ಲಿನ ಟೀಚರ್ಸ್‌ ಕಾಲೋನಿನಲ್ಲಿ ವಾಸ ಮಾಡುತ್ತಿದ್ದರು.

ಮೃತದೇಹವು ಬೀದರ್‌ ಜಿಲ್ಲೆಯ ಹುಮನಾಬಾದ್‌ನ ಹನುಕುಣಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಸಿದ್ದಾರ್ಥ ಪರಸನೂರು ಅವರ ಮೃತ ದೇಹವನ್ನು ಗಮನಿಸಿದರೆ ಇದು ಸಹಜ ಸಾವಲ್ಲ ಎಂಬ ಅಭಿಪ್ರಾಯ ಮೇಲ್ನೋಟಕ್ಕೆ ಮೂಡುತ್ತದೆ. ಕರೆಂಟ್ ಹಿಡಿದು ಮೃತಪಟ್ಟಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಸಿದ್ದಾರ್ಥ ಸಾ*ವಿನ ಬಗ್ಗೆ ಕುಟುಂಬಸ್ಥರು ಕೊ*ಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಹುಮ್ನಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅತ್ಯಂತ ಕಷ್ಟದ ಹಿನ್ನೆಲೆಯಿಂದ ಬಂದು, ತಮ್ಮ ವಿಶಿಷ್ಟ ಉತ್ತರ ಕರ್ನಾಟಕ ಶೈಲಿಯ ಹಾಸ್ಯ ಮತ್ತು ಅತ್ಯುತ್ತಮ ಟೈಮಿಂಗ್ ಮೂಲಕ ಎಲ್ಲರನ್ನೂ ನಗಿಸುತ್ತಿದ್ದ ಸಿದ್ದಾರ್ಥ್, ಸೋಶಿಯಲ್ ಮೀಡಿಯಾದಲ್ಲೂ ಸಾಕಷ್ಟು ಸಕ್ರಿಯರಾಗಿದ್ದರು. ಎಲ್ಲರನ್ನ ನಕ್ಕು ನಲಿಸುತ್ತಾ, ಕೊಟ್ಟ ಪಾತ್ರಗಳಿಗೆ ಕಾಮಿಡಿ ಟಚ್‌ ಕೊಟ್ಟು ಹಾಸ್ಯದ ಸವಿ ನೀಡುತ್ತಿದ್ದ ನಟ, ಅನಾಥ ಶವದಂತೆ ಕಾಡಿನಲ್ಲಿ ಪತ್ತೆಯಾದ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿದೆ. ಕನ್ನಡ ಕಿರುತೆರೆಯ ಈ ಉದಯೋನ್ಮುಖ ಪ್ರತಿಭೆಯ ಸಾವು ನಿಜಕ್ಕೂ ತುಂಬಲಾರದ ನಷ್ಟ. ಈ ಘಟನೆಗೆ ಸಂಬಂಧಿಸಿದಂತೆ ಸದ್ಯ ಪೊಲೀಸ್ ತನಿಖೆ ಮುಂದುವರಿದಿದೆ.

Tags: #ಮಜಾಭಾರತ # ಸಿದ್ಧಾರ್ಥಪರಸನೂರು #ಸಾವು #MajaBharat #SiddharthaParasanur #Death
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಅಯೋಧ್ಯೆ ರಾಮನ ಹುಂಡಿ ಕಳ್ಳರು : ರಾಮರಾಜ್ಯದಲ್ಲಿ ಆಗಿದ್ದರೆ ಶಿಕ್ಷೆ ಏನಿರುತ್ತಿತ್ತು..?
  • ಸೈನಿಕ ಪತಿಗೆ ಆಸ್ಪತ್ರೆಯಲ್ಲೇ ವಿಷ ಹಾಕಿದ್ದ ಹೆಂಡತಿ : ಪೊಲೀಸರು ಬಯಲಿಗೆಳೆದದ್ದೇ ರೋಚಕ..!
  • ಮಜಾಭಾರತ ನಟ ಸಿದ್ಧಾರ್ಥ ಸಾವು ಸಹಜ ಸಾವಲ್ಲ..!

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಅಯೋಧ್ಯೆ ರಾಮನ ಹುಂಡಿ ಕಳ್ಳರು : ರಾಮರಾಜ್ಯದಲ್ಲಿ ಆಗಿದ್ದರೆ ಶಿಕ್ಷೆ ಏನಿರುತ್ತಿತ್ತು..?

ಅಯೋಧ್ಯೆ ರಾಮನ ಹುಂಡಿ ಕಳ್ಳರು : ರಾಮರಾಜ್ಯದಲ್ಲಿ ಆಗಿದ್ದರೆ ಶಿಕ್ಷೆ ಏನಿರುತ್ತಿತ್ತು..?

June 16, 2026
ಸೈನಿಕ ಪತಿಗೆ ಆಸ್ಪತ್ರೆಯಲ್ಲೇ ವಿಷ ಹಾಕಿದ್ದ ಹೆಂಡತಿ : ಪೊಲೀಸರು ಬಯಲಿಗೆಳೆದದ್ದೇ ರೋಚಕ..!

ಸೈನಿಕ ಪತಿಗೆ ಆಸ್ಪತ್ರೆಯಲ್ಲೇ ವಿಷ ಹಾಕಿದ್ದ ಹೆಂಡತಿ : ಪೊಲೀಸರು ಬಯಲಿಗೆಳೆದದ್ದೇ ರೋಚಕ..!

June 16, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.