Wednesday, June 17, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಗಿಲ್ಲಿ ನಟ ಹೀರೋ : ಪ್ಯಾನ್‌ ಕರ್ನಾಟಕ ಸಿನಿಮಾದಲ್ಲಿ ʻಟವೆಲ್‌ ವ್ಯಾಪಾರʼ ಏಕೆ..?

SpeciallU by SpeciallU
June 17, 2026
in Cinema
Reading Time: 1 min read
0 0
0
ಗಿಲ್ಲಿ ನಟ ಹೀರೋ : ಪ್ಯಾನ್‌ ಕರ್ನಾಟಕ ಸಿನಿಮಾದಲ್ಲಿ ʻಟವೆಲ್‌ ವ್ಯಾಪಾರʼ ಏಕೆ..?

ಬಿಗ್‌ ಬಾಸ್‌ ಗೆದ್ದ ಮೇಲೆ ಗಿಲ್ಲಿ ನಟನ ಕ್ರೇಜ್‌, ಖದರ್‌, ಇಮೇಜ್‌ ಎಲ್ಲವೂ ಬದಲಾಗಿದೆ ಹೋಗಿದೆ. ಅವರೀಗ ಕನ್ನಡ ಸಿನಿಮಾವೊಂದರಲ್ಲಿ ಹೀರೋ ಆಗಿ ಎಂಟ್ರಿ ಕೊಡ್ತಿದ್ಧಾರೆ. ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಈ ಹೊಸ ಚಿತ್ರವನ್ನು ಅರ್ಪಿಸುತ್ತಿದೆ. ನಿರ್ಮಾಣ ಬೇರೆಯವರದ್ದು. ಹೀರೋಯಿನ್‌ ಶ್ರೀಲೀಲಾ ಎಂದು ತೋರಿಸಿದ್ದಾರೆ. ಆದರೆ ಚೇಂಜ್‌ ಆಗಿದೆ. ವಿಶೇಷ ಎಂದರೆ ಇದು ಪ್ಯಾನ್‌ ಕರ್ನಾಟಕ ಸಿನಿಮಾ. ಜೊತೆಗೆ ಇಲ್ಲಿ ʻಟವೆಲ್‌ ಒಳಗೆ ದನದ ವ್ಯಾಪಾರʼವೂ ನಡೆದಿದೆ. ಗ್ರಾಮೀಣ ಭಾಗದ ದನದ ಸಂತೆಗಳಲ್ಲಿ ನಡೆಯುವ ಈ ಟವೆಲ್‌ ವ್ಯಾಪಾರ, ಇಲ್ಲಿ ಸೀರಿಯಸ್‌ ಆಗಿ ನಡೆದಿದೆ.

ಗಿಲ್ಲಿ ನಟ ನಟಿಸುತ್ತಿರುವ ಹೊಸ ಸಿನಿಮಾಗೆ ಡೈರೆಕ್ಟರ್‌ ಚಂದ್ರಮೋಹನ್. ಕೆವಿಎನ್ ಪ್ರೊಡಕ್ಷನ್ಸ್‌ನ ಕಾರ್ಯಕಾರಿ ನಿರ್ಮಾಪಕರಾದ ನವೀನ್ ಮತ್ತು ಹರೀಶ್ ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಲಿದ್ದಾರೆ. ಈ ಚಿತ್ರದ ಅಧಿಕೃತ ಮುಹೂರ್ತ ಸಮಾರಂಭವು ಜೂನ್ 21, 2026 ರಂದು ಅದ್ಧೂರಿಯಾಗಿ ನೆರವೇರಲಿದೆ.

Related posts

ಮಜಾಭಾರತ ನಟ ಸಿದ್ಧಾರ್ಥ ಸಾವು ಸಹಜ ಸಾವಲ್ಲ..!

ರಾಘವೇಂದ್ರ ಸ್ವಾಮಿಗಳ ಪಾತ್ರಕ್ಕೆ 16 ವರ್ಷಗಳ ನಂತರ ಮತ್ತೆ ಪ್ರವೇಶ ಮಾಡಿದ ನಟ

ಇಲ್ಲಿಯವರೆಗೆ ಕಾಮಿಡಿ ಕಿಲಾಡಿಗಳು ಮತ್ತು ಬಿಗ್ ಬಾಸ್ ಮೂಲಕ ಹಾಸ್ಯ ನಟನಾಗಿ ಪ್ರಸಿದ್ಧಿ ಪಡೆದಿದ್ದ ಗಿಲ್ಲಿ ನಟ, ಈ ಚಿತ್ರದ ಮೂಲಕ ಮಾಸ್ ಹಾಗೂ ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು ನಟಿಸಿರುವ ಗ್ರಾಮೀಣ ಹಿನ್ನೆಲೆಯ ‘ಸರ್ವೇ ನಂಬರ್ 45’ ಚಿತ್ರದ ಅಪ್‌ಡೇಟ್‌ಗಳು ಸಹ ಹೊರಬಂದಿವೆ.

ಅಂದಹಾಗೆ ವಿಡಿಯೋದಲ್ಲಿ ಗಿಲ್ಲಿ ನಟನಿಗೆ ಶ್ರೀಲೀಲಾ ನಾಯಕಿ ಎಂದು ಡೈರೆಕ್ಟರ್‌ ತೋರಿಸ್ತಾರೆ. ಗಿಲ್ಲಿ ನಟ ಒಂದಲ್ಲ..ಎರಡಲ್ಲ.. ಹಲವು ಬಾರಿ ಕೇಳಿ ಕೇಳಿ ಕನ್ಫರ್ಮ್‌ ಮಾಡಿಕೊಂಡ ಮೇಲೆ ಕನಸು ಕಾಣೋಕೆ ಶುರು ಮಾಡಿದಾಗ ಹೀರೋಯಿನ್‌ ಚೇಂಜ್‌ ಅಂತಾರೆ. ಯಾರು ಅನ್ನೋದನ್ನ ಹೇಳೋದಿಲ್ಲ. ಇದರ ನಡುವೆ ಗಮನ ಸೆಳೆಯೋದು ಟವೆಲ್‌ ವ್ಯಾಪಾರ.

ಸಂತೆಗಳಲ್ಲಿ ಎಮ್ಮೆ, ಆಕಳು ಹಾಗೂ ಎತ್ತುಗಳ ಮಾರಾಟದ ವೇಳೆ ದಲ್ಲಾಳಿಗಳು ಮತ್ತು ಮಾಲೀಕರು ಅಥವಾ ಗ್ರಾಹಕರು ಟವಲ್ ಒಳಗೆ ಕೈ ಮುಚ್ಚಿಟ್ಟುಕೊಂಡು ಬೆಲೆ ಚೌಕಾಸಿ ಮಾಡ್ತಾರೆ. ದಲ್ಲಾಳಿ ಮತ್ತು ಮಾರಾಟಗಾರ (ಅಥವಾ ಕೊಳ್ಳುವವನು) ಇಬ್ಬರೂ ತಮ್ಮ ಕೈಗಳನ್ನು ಒಂದು ಟವಲ್, ಲುಂಗಿ ಅಥವಾ ಶಾಲಿನ ಒಳಗೆ ಚಾಚುತ್ತಾರೆ. : ಟವಲ್ ಒಳಗಡೆ ಒಬ್ಬರ ಕೈಯನ್ನು ಮತ್ತೊಬ್ಬರು ಸ್ಪರ್ಶಿಸುತ್ತಾ ಬೆರಳುಗಳ ಮೂಲಕ ಬೆಲೆಯನ್ನು ಸಂಕೇತಿಸುತ್ತಾರೆ. ಉದಾಹರಣೆಗೆ ಒಂದು ಬೆರಳನ್ನು ಒತ್ತಿದರೆ ₹10,000 ಅಥವಾ ₹1,000 (ಅಲ್ಲಿನ ಮಾರುಕಟ್ಟೆಯ ಮೌಲ್ಯಕ್ಕೆ ತಕ್ಕಂತೆ) ಎಂದರ್ಥ. ಬೆರಳುಗಳನ್ನು ಮಡಚುವುದು, ಬಿಡುವುದು ಅಥವಾ ಹಸ್ತವನ್ನು ಹಿಡಿಯುವ ಮೂಲಕ ಎಷ್ಟು ಸಾವಿರ ಅಥವಾ ಎಷ್ಟು ಲಕ್ಷಕ್ಕೆ ವ್ಯಾಪಾರ ಕುದುರಿಸಬೇಕು ಎಂಬುದನ್ನು ಪರಸ್ಪರ ಸಂವಹನ ನಡೆಸುತ್ತಾರೆ.

ವಿಡಿಯೋದಲ್ಲಿಯೂ ಗಿಲ್ಲಿ ನಟ ಮತ್ತು ಪ್ರೊಡ್ಯೂಸರ್‌ ಮಧ್ಯೆ ಇಂಥದ್ದೇ ಮಾತುಕತೆ ನಡೆಯುತ್ತದೆ. ಅಂದಹಾಗೆ ಇದು ಪ್ಯಾನ್‌ ಇಂಡಿಯಾ ಅಲ್ಲ, ಪ್ಯಾನ್‌ ಕರ್ನಾಟಕ ಸಿನಿಮಾ ಅಂತೆ. ಉತ್ತರ ಕರ್ನಾಟಕದ ಶೈಲಿಗೆ ಒಂದು, ಮೈಸೂರು-ಮಂಡ್ಯ ಭಾಗದ ಕನ್ನಡಕ್ಕೆ ಒಂದು ಹಾಗೂ ಕರಾವಳಿ ಶೈಲಿಗೆ ಒಂದು.. ಹೀಗೆ ಕನ್ನಡದಲ್ಲಿಯೇ ವಿವಿಧ ರೀತಿಯ ಭಾಷೆಗೆ ತಕ್ಕಂತೆ ಸಿನಿಮಾ ಮಾಡೋಣ ಎಂದು ಗಿಲ್ಲಿ ನಟ ಹೇಳ್ತಾರೆ. ಒಟ್ಟಿನಲ್ಲಿ ಗಿಲ್ಲಿ ನಟನ ಹೀರೋಯಿನ್‌ ಫಿಕ್ಸ್‌ ಆಗಿಲ್ಲ, ಆದರೆ ಸಂಚಲನವಂತೂ ಸೃಷ್ಟಿಯಾಗಿದೆ.

Tags: #ಕೆವಿಎನ್ ಪ್ರೊಡಕ್ಷನ್ಸ್‌ #ಕಾಮಿಡಿ ಕಿಲಾಡಿಗಳು #ಗಿಲ್ಲಿ ನಟ #ಡೈರೆಕ್ಟರ್‌ ಚಂದ್ರಮೋಹನ್ #KVN Productions #Comedy Khiladigalu #Ghilli Nata #Director Chandramohan
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ವೈಭವ್‌ ಸೂರ್ಯವಂಶಿ ರೊಚ್ಚಿಗೇಳುವುದಕ್ಕೆ ಕಾರಣವಾದ ಬೈಗುಳ ಏನು..?
  • ಗಿಲ್ಲಿ ನಟ ಹೀರೋ : ಪ್ಯಾನ್‌ ಕರ್ನಾಟಕ ಸಿನಿಮಾದಲ್ಲಿ ʻಟವೆಲ್‌ ವ್ಯಾಪಾರʼ ಏಕೆ..?
  • ಸಿಎಂ ಡಿಕೆ, ಹೆಚ್‌ಡಿಕೆ ಮಧ್ಯೆ ಬಿಡದಿ ಟೌನ್‌ ಶಿಪ್‌ ಗುದ್ದಾಟ : ರೈತರ ಪರ ನಿಲ್ಲೋದು ನಾಟಕನಾ..?

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ವೈಭವ್‌ ಸೂರ್ಯವಂಶಿ ರೊಚ್ಚಿಗೇಳುವುದಕ್ಕೆ ಕಾರಣವಾದ ಬೈಗುಳ ಏನು..?

ವೈಭವ್‌ ಸೂರ್ಯವಂಶಿ ರೊಚ್ಚಿಗೇಳುವುದಕ್ಕೆ ಕಾರಣವಾದ ಬೈಗುಳ ಏನು..?

June 17, 2026
ಗಿಲ್ಲಿ ನಟ ಹೀರೋ : ಪ್ಯಾನ್‌ ಕರ್ನಾಟಕ ಸಿನಿಮಾದಲ್ಲಿ ʻಟವೆಲ್‌ ವ್ಯಾಪಾರʼ ಏಕೆ..?

ಗಿಲ್ಲಿ ನಟ ಹೀರೋ : ಪ್ಯಾನ್‌ ಕರ್ನಾಟಕ ಸಿನಿಮಾದಲ್ಲಿ ʻಟವೆಲ್‌ ವ್ಯಾಪಾರʼ ಏಕೆ..?

June 17, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.