ಒಬ್ಬ ತಹಸೀಲ್ದಾರ್ ಮನೆಗೆ ನುಗ್ಗಿ ಕೆಲವು ದುಷ್ಕರ್ಮಿಗಳು ಹಲ್ಲೆ ಮಾಡಿದ್ಧಾರೆ. ಬಟ್ಟೆ ಬಿಚ್ಚಿದ್ಧಾರೆ. ಅಸಹಜವಾಗಿ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಆದರೆ ಪ್ರಕರಣದಲ್ಲಿ ಅವಮಾನ ಎದುರಿಸಿದ್ದ ತಹಸೀಲ್ದಾರ್ ಮೇಲೆಯೇ ಅನುಮಾನ ಬಂದಿದೆ. ಅದಕ್ಕೆ ಕಾರಣಗಳೂ ಇವೆ. ಏಕೆಂದರೆ ತಹಸೀಲ್ದಾರ್ ಮೇಲೆ ಹಲ್ಲೆ ಆಗಿದ್ದು, ಬಟ್ಟೆ ಬಿಚ್ಚಿದ್ದು ಎಲ್ಲಿಯೋ ಅಲ್ಲ, ಆತನದ್ದೇ ಮನೆಯಲ್ಲಿ. ಒಂದು ಬಿಂದಾಸ್ ಪಾರ್ಟಿ ಮಾಡಿದ ನಂತರ.
ಚನ್ನಪಟ್ಟಣ ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರಿಗೆ ಕಿರುಕುಳ ನೀಡಿದ್ದು, ಆರೋಪಿಯನ್ನು ಮೈಸೂರು ಮೂಲದ ಅನುಶ್ ಎಂದು ಗುರುತಿಸಲಾಗಿದೆ. ಅನೂಶ್ ಫೇಸ್‌ಬುಕ್ ಮೂಲಕ ತಹಶೀಲ್ದಾರ್ ಗಿರೀಶ್‌ಗೆ ಪರಿಚಯವಾಗಿದ್ದ. ಜೂನ್ 28ರಂದು ರಾತ್ರಿ ಅನುಶ್ ತಹಸೀಲ್ದಾರ್ ಮನೆಗೆ ಬಂದಿದ್ದ. ಜೊತೆಗೆ ತನ್ನ ಸ್ನೇಹಿತರಾದ ಶೋಭರಾಜನ್ ಮತ್ತು ನವೀನ್ ಎಂಬುವವರನ್ನೂ ಕರೆದು ತಂದಿದ್ದ. ಚನ್ನಪಟ್ಟಣದಲ್ಲಿರುವ ತಹಶೀಲ್ದಾರ್ ಅವರ ಸರ್ಕಾರಿ ನಿವಾಸದಲ್ಲಿಯೇ ಹಲ್ಲೆ ಆಗಿತ್ತು.
ಹಲ್ಲೆಗೆ ಮುನ್ನ ತಹಶೀಲ್ದಾರ್ ಅವರಿಗೆ ಜ್ಯೂಸ್‌ನಲ್ಲಿ ಮತ್ತು ಬರುವ ಮಾತ್ರೆ ಹಾಕಿ, ಪ್ರಜ್ಞೆ ತಪ್ಪಿಸಿದ್ದನಂತೆ. ಆಮೇಲೆ ಚಿನ್ನದ ಉಂಗುರ ಹಾಗೂ ಚೈನ್ ಕಸಿದುಕೊಂಡಿದ್ದಾನಂತೆ . ಅಷ್ಟೇ ಅಲ್ಲದೆ, 10 ಲಕ್ಷ ರೂ. ಹಣ ನೀಡುವಂತೆ ಒತ್ತಾಯಿಸಿದನಂತೆ. ಹಣ ನೀಡಲು ನಿರಾಕರಿಸಿದಾಗ ಕೊಲೆಗೆ ಯತ್ನಿಸಿದ್ದಾರೆ. ಬಳಿಕ ವಿವಸ್ತ್ರಗೊಳಿಸಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರಂತೆ. ಇದನ್ನು ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡೋದಾಗಿ ಬ್ಲಾಕ್‌ಮೇಲ್ ಮಾಡಿದ್ದಾರೆ. ಈ ಸಂಬಂಧ ಗಿರೀಶ್ ಅವರು ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಎಫ್‌ಐಆರ್ ದಾಖಲಾಗಿದ್ದು, ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಎ1 ಅನುಶ್‌ನನ್ನು ಬಂಧಿಸಿರೋದಾಗಿ ಬೆಂಗಳೂರು ದಕ್ಷಿಣ ವಿಭಾಗದ ಎಸ್‌ಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಅನುಮಾನ ಏಕೆಂದರೆ ಘಟನೆ ನಡೆದಿದ್ದು ತಹಸೀಲ್ದಾರ್ ಮನೆಯಲ್ಲೇ. ಹಲ್ಲೆ ನಡೆದಿರುವುದು ಮಧ್ಯರಾತ್ರಿಯಲ್ಲಿ. ಮಧ್ಯರಾತ್ರಿಯಲ್ಲಿ ತಮ್ಮದೇ ಮನೆಯಲ್ಲಿ ʻಜ್ಯೂಸ್ ಪಾರ್ಟಿʼ ಕೊಡುವಷ್ಟು ಆರೋಪಿಗಳು ಆತ್ಮೀಯರಾಗಿದ್ದರೇ..? ಅಪರಿಚಿತರಿಗೆ ಯೂಟ್ಯೂಬರ್ ಅಥವಾ ಯಾವುದೇ ಸಂಘಟನೆಯ ವ್ಯಕ್ತಿ ಆಗಿರಲಿ.. ಮಧ್ಯರಾತ್ರಿ ಆಗತಾನೇ ಪರಿಚಯವಾದವರಿಗೆ ಡ್ರಿಂಕ್ಸ್ ಪಾರ್ಟಿ ಕೊಡುವಷ್ಟು ಆತ್ಮೀಯತೆ ಸಾಧ್ಯವೇ.. ಮಧ್ಯರಾತ್ರಿ ಹೊತ್ತಿನಲ್ಲಿ ಏನೇನಾಯ್ತು ಎಂಬ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ.
ಮಧ್ಯರಾತ್ರಿ ತಮ್ಮ ಸರ್ಕಾರಿ ನಿವಾಸಕ್ಕೆ ಬರಲು ಅವಕಾಶ ಮಾಡಿಕೊಟ್ಟಿದ್ದು ಹಾಗೂ ಅವರಿಗೆ ಮದ್ಯ ಮತ್ತು ಡ್ರೈಫ್ರೂಟ್ಸ್ ನೀಡಿ ಆತಿಥ್ಯ ವಹಿಸಿದದ್ದು ಸಹಜ ಎನಿಸಿಲ್ಲ. ಜೂನ್ 28ರ ಮಧ್ಯರಾತ್ರಿ. ಆದರೆ, ತಹಶೀಲ್ದಾರ್ ಅವರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದು ಜುಲೈ 1ರಂದು. ಅಂದರೆ, ಘಟನೆ ನಡೆದು ಸುಮಾರು 3 ದಿನಗಳ ಕಾಲ ದೂರು ನೀಡದೆ ಸುಮ್ಮನಿದ್ದಿದ್ದು ಏಕೆ ಎಂಬ ಅನುಮಾನವೂ ಇದೆ. ಆರೋಪಿ ಅನೂಶ್ ಶಿವಪ್ಪ, ಒಬ್ಬ ರೌಡಿ ಶೀಟರ್. ಆತನ ಜೊತೆ ಒಬ್ಬ ತಹಸೀಲ್ದಾರ್ ಪಾರ್ಟಿ ಮಾಡುವಷ್ಟ ಆತ್ಮೀಯನೇ.. ಗೊತ್ತಿಲ್ಲ. ಅನುಮಾನಗಳಂತೂ ಇವೆ.
ಕೇವಲ ₹10 ಲಕ್ಷ ಹಣಕ್ಕಾಗಿ ಇಷ್ಟೊಂದು ವ್ಯವಸ್ಥಿತವಾಗಿ ಯೋಜನೆ ರೂಪಿಸಿ, ಸರ್ಕಾರಿ ಅಧಿಕಾರಿಯ ವಸತಿ ಗೃಹಕ್ಕೆ ನುಗ್ಗಿ, ಅಸಹಜ ಲೈಂಗಿಕ ದೌರ್ಜನ್ಯ ಎಸಗಿ ವೀಡಿಯೊ ಚಿತ್ರೀಕರಿಸಿಕೊಳ್ಳುವ ವಿಕೃತಿ ಮೆರೆದಿರುವುದರ ಹಿಂದೆ ಬೇರೆನಾದರೂ ಹಳೇ ದ್ವೇಷ ಅಥವಾ ಇಲಾಖೆಗೆ ಸಂಬಂಧಿಸಿದ ಹನಿಟ್ರ್ಯಾಪ್ ಸಂಚು ಅಡಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಅನೂಶ್ ಪೊಲೀಸ್ ಕಸ್ಟಡಿಯಲ್ಲಿದ್ಧಾನೆ.



