ಕರ್ನಾಟಕದ ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ವಿರುದ್ಧ ವಾಗ್ದಾಳಿ ನಡೆಸುವುದು ಹೊಸದಲ್ಲ. ಅದರಲ್ಲಿಯೂ ಹೋಂ ಮಿನಿಸ್ಟರ್ ಆದ ಮೇಲೆ ವಾಗ್ದಾಳಿಗಳು ಹೆಚ್ಚಾಗಿಯೇ ಇವೆ. ಪ್ರತಿದಿನ ಹೆಡ್ ಲೈನ್ ಆಗುತ್ತಿರುವ ಕುರಿತಂತೆ ನಡೆಯುತ್ತಿರುವ ದಾಳಿಗಳು ಕಾನೂನಿನ ವ್ಯಾಪ್ತಿಗೆ ಬರುತ್ತಿಲ್ಲ. ಈ ನಡುವೆ ಆರ್‌ಎಸ್‌ಎಸ್ ನಾಯಕರು ರಾಜ್ಯ ಬಿಜೆಪಿ ನಾಯಕರಿಗೆ ಒಂದಿಷ್ಟು ಕಿವಿ ಮಾತು ಹೇಳಿದ್ಧಾರೆ. ಅದರಲ್ಲಿ ಮೊದಲ ಮಾತೇ ಡೋಂಟ್ ರಿಯಾಕ್ಟ್ ಟು ಪ್ರಿಯಾಂಕ್ ಖರ್ಗೆ.. ಎನ್ನುವುದು. ಏಕೆಂದರೆ ಪ್ರಿಯಾಂಕ್ ಖರ್ಗೆ ಅವರ ಪದೇ ಪದೇ ಹೇಳಿಕೆಯ ಹಿಂದಿನ ತಂತ್ರ ಆರ್‌ಎಸ್‌ಎಸ್ ನಾಯಕರಿಗೆ ಗೊತ್ತಾಗಿದೆ.
ಆರ್‌ಎಸ್‌ಎಸ್ ತನ್ನ 100ನೇ ವರ್ಷದ ಸಂಭ್ರಮದಲ್ಲಿದ್ದರೂ, ಅದು ಅಧಿಕೃತವಾಗಿ ಎಲ್ಲೂ ನೋಂದಣಿಯಾಗಿಲ್ಲ. ಇದನ್ನೇ ಪ್ರಿಯಾಂಕ್ ಖರ್ಗೆ ಅಸ್ತ್ರ ಮಾಡಿಕೊಂಡಿದ್ದಾರೆ. “ನಾನು ಗೃಹ ಸಚಿವನಾಗಿ ಇರುವವರೆಗೂ ರಾಜ್ಯದಲ್ಲಿ ಆರ್‌ಎಸ್‌ಎಸ್ ಅಥವಾ ಯಾವುದೇ ಸಂಘಟನೆ ಬೀದಿಗೆ ಇಳಿದು ಪಥಸಂಚಲನ ಅಥವಾ ಕಾರ್ಯಕ್ರಮ ನಡೆಸಬೇಕಾದರೆ ಪೊಲೀಸರ ಅನುಮತಿ ಪಡೆಯುವುದು ಕಡ್ಡಾಯ” ಎನ್ನುತ್ತಿದ್ಧಾರೆ. ಎಲ್ಲ ಓಕೆ, ಪ್ರಿಯಾಂಕ್ ಖರ್ಗೆ ಪದೇ ಪದೇ ಈ ರೀತಿ ಹೇಳಿಕೆ ಕೊಡುತ್ತಿರುವುದು ಏಕೆ..?
ಪ್ರಿಯಾಂಕ್ ಖರ್ಗೆ ಅಜೆಂಡಾನೇ ಬೇರೆ..!
ಸಂಘ ಪರಿವಾರದ ನಾಯಕರು ಬಿಜೆಪಿಯನ್ನು ಬೆಂಬಲಿಸಿದರೂ, ಬಹಿರಂಗವಾಗಿ ಯಾವತ್ತೂ ಕಾಣಿಸಿಕೊಂಡೇ ಇಲ್ಲ. ಹಾಗೆ ನೋಡಿದರೆ ಕಾಂಗ್ರೆಸ್, ಜೆಡಿಎಸ್‌ನ ಕೆಲವು ನಾಯಕರು ಆರ್‌ಎಸ್‌ಎಸ್ ಜೊತೆ ಸಂಪರ್ಕದಲ್ಲಿರುತ್ತಾರೆ. ರಾಷ್ಟ್ರೀಯ ಮಟ್ಟದಲ್ಲೂ ಅಷ್ಟೇ. ಬೇರೆ ಬೇರೆ ಪಕ್ಷಗಳ ನಾಯಕರು ಆರ್‌ಎಸ್‌ಎಸ್ ಜೊತೆಯಲ್ಲಿದ್ದಾರೆ. ಆರ್‌ಎಸ್‌ಎಸ್ ಹಿಂದುತ್ವಕ್ಕೆ ಬೆಂಬಲ ನೀಡುವವರನ್ನು ಬೆಂಬಲಿಸುತ್ತದೆ. ಬೇರೆ ಬೇರೆ ಪಕ್ಷಗಳ ನಾಯಕರ ಕುಟುಂಬದವರೂ ಆರ್‌ಎಸ್‌ಎಸ್ ಸದಸ್ಯರು. ಆದರೆ ಖರ್ಗೆ ಅವರ ಈ ಮಾತುಗಳ ಹಿಂದಿನ ಅಜೆಂಡಾ ಏನು ಗೊತ್ತೇ..
ಆರ್‌ಎಸ್‌ಎಸ್‌ನ್ನು ಓಪನ್ ರಾಜಕೀಯಕ್ಕೆ ಎಳೆದು ತರುವುದು ಹಾಗೂ ಆರ್‌ಎಸ್‌ಎಸ್ ಕೇವಲ ಹಿಂದೂ ಸಂಘಟನೆ ಅಲ್ಲ, ಅದೊಂದು ಪೊಲಿಟಿಕಲ್ ಪಾರ್ಟಿ ಎಂದು ಸಾಬೀತು ಪಡಿಸುವುದು. ಇದನ್ನು ಮೊದಲು ಅರ್ಥ ಮಾಡಿಕೊಂಡಿದ್ದೇ ಆರ್‌ಎಸ್‌ಎಸ್. ಹೀಗಾಗಿಯೇ ಆರ್‌ಎಸ್‌ಎಸ್ ರಾಜ್ಯ ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಅವರಿಗೆ ರಿಯಾಕ್ಟ್ ಮಾಡಬೇಡಿ ಎಂದು ಸಂದೇಶ ರವಾನಿಸಿದೆ.
ಆರ್‌ಎಸ್‌ಎಸ್‌ನ್ನು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿದಿನ ಟೀಕೆ ಮಾಡ್ತಿದ್ಧಾರೆ. ಅದಕ್ಕೆ ಬಿಜೆಪಿಯವರು ರಿಯಾಕ್ಟ್ ಮಾಡ್ತಿದ್ಧಾರೆ. ಆದರೆ ಆ ಮೂಲಕ ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಆರೆಸ್ಸೆಸ್ ಅನ್ನು ರಾಜಕೀಯದ ರಣಾಂಗಣಕ್ಕೆ ಎಳೆ ತರುವಲ್ಲಿ ಬಿಕೆ-ಪಿಕೆ ಜೋಡಿ ಯಶಸ್ವಿಯಾಗುತ್ತಿದೆ. ಡೋಂಟ್ ರಿಯಾಕ್ಟ್..
ಆರೆಸ್ಸೆಸ್ ವಿರುದ್ಧ ಅವರು ಆರ್ಭಟಿಸಿದರು ಅಂತ ನೀವು ಆರೆಸ್ಸೆಸ್ ಪರವಾಗಿ ಹೋರಾಟಕ್ಕಿಳಿಯಬೇಡಿ. ಹಾಗಾದಾಗ ಬಿಕೆ-ಪಿಕೆ ಜೋಡಿ ತುಂಬ ಕಾಲ ಆರೆಸ್ಸೆಸ್ ವಿರುದ್ಧ ಮಾತ ನಾಡುತ್ತಾ ಕೂರಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಅವರ ಮಾತಿಗೆ ಜವಾಬು ಕೊಡುತ್ತೀರೋ? ಅಲ್ಲಿಯವರೆಗೆ ಇದು ಮುಂದುವರಿಯುತ್ತದೆ. ಮಾತು ನಿಲ್ಲಿಸಿದರೆ ಲೈಮ್ ಲೈಟಿನಿಂದ ಹಿಂದೆ ಸರಿಯುತ್ತದೆ ಎಂಬುದು ಆರೆಸ್ಸೆಸ್ ನಾಯಕರ ಮಾತು.
ಅಲ್ಲಿಗೆ ಇನ್ನು ಮುಂದೆ ರಾಜ್ಯ ಬಿಜೆಪಿ ನಾಯಕರು ಪಿಕೆ-ಬಿಕೆ ಮಾತುಗಳಿಗೆ ಸೈಲೆಂಟ್ ಆಗುತ್ತಾರಾ.. ಗೊತ್ತಿಲ್ಲ. ಹಾಗಂತ ರಿಯಾಕ್ಟ್ ಮಾಡದೇ ಇರುವುದಕ್ಕೆ ಆಗಲ್ಲ. ಕಾನೂನಾತ್ಮಕ ಸತ್ಯವನ್ನು ಕಾಂಗ್ರೆಸ್ ನಾಯಕರಿಗೆ ಮತ್ತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವಲ್ಲಿ ಬಿಜೆಪಿ ವಿಫಲವಾಗುತ್ತಿರುವುದೂ ಕೂಡಾ ಆರ್‌ಎಸ್‌ಎಸ್ ಈ ನಿಲುವಿಗೆ ಬರಲು ಕಾರಣ ಎನ್ನಲಾಗಿದೆ.



