Wednesday, July 29, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

1998, 1999, 2001, 2004, 2011, 2024-25, 2026 ನೇಮಕಾತಿ : KPSC ಅಕ್ರಮಗಳ ಹಿಸ್ಟರಿ

SpeciallU by SpeciallU
July 29, 2026
in News
Reading Time: 1 min read
0 0
0
1998, 1999, 2001, 2004, 2011, 2024-25, 2026 ನೇಮಕಾತಿ : KPSC ಅಕ್ರಮಗಳ ಹಿಸ್ಟರಿ

KPSC. ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದ (KPSC) ನೇಮಕಾತಿ ಅಕ್ರಮಗಳು ಹಾಗೂ ಅಮಾನತುಗಳಿಗೆ ದೊಡ್ಡ ಹಿಸ್ಟರಿಯೇ ಇದೆ. ಇದೇನು ಈಗ ಆಗಿರುವ ಕಥೆ ಅಲ್ಲ. 1998ರಿಂದಲೂ ಇದೆ. ಹಾಗಂತ ಅದಕ್ಕೆ ಮೊದಲು ಇರಲಿಲ್ಲ ಎಂದಲ್ಲ.. ಬಹಿರಂಗವಾಗಿದ್ದು 1998ರಲ್ಲಿ. ಹಾಗೆ ಬಹಿರಂಗವಾದ ಮೇಲೂ ನೇಮಕಾತಿಯಲ್ಲಿ ಅಕ್ರಮಗಳಾಗಿವೆ. ಬಹಿರಂಗವೂ ಆಗಿವೆ. ಆದರೆ.. ಶಿಕ್ಷೆಯ ಪ್ರಮಾಣ ನೋಡಿದರೆ.. ನಾಚಿಕೆಯಾಗುವಂತಿದೆ. ನಾಚಿಕೆಯಾಗುವುದು ನೋಡಿದವರಿಗೆ ಮಾತ್ರ.. ಅಕ್ರಮ ಮಾಡಿದವರಿಗೆ ಅಲ್ಲ. ಏಕೆಂದರೆ ಅವರು ಕಾನೂನು ಪ್ರಕಾರ ನಿರಪರಾಧಿಗಳು. ಕೋರ್ಟು ಅವರನ್ನು ವಿಚಾರಣೆ ನಡೆಸುವಾಗ ಬೈದಿತು, ಟೀಕಿಸಿತು ಎನ್ನುವುದಷ್ಟೇ ಸಮಾಧಾನದ ವಿಷಯ. ಅಂದಹಾಗೆ ಕೆಪಿಎಸ್‌ಸಿ ನೇಮಕಾತಿಯ ಅಕ್ರಮಗಳ ಹಿಸ್ಟರಿ ಇಲ್ಲಿದೆ.

1998, 1999 ಮತ್ತು 2004ರ ಕೆಎಎಸ್ (KAS) ಹಗರಣ
ಗೆಜೆಟೆಡ್ ಪ್ರೊಬೇಷನರ್ಸ್ (ಗ್ರೂಪ್ ಎ ಮತ್ತು ಬಿ) ಹುದ್ದೆಗಳ ನೇಮಕಾತಿಯಲ್ಲಿ ವ್ಯಾಪಕ ನಕಲಿ ದಾಖಲೆ ಸೃಷ್ಟಿ, ನಕಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಬಳಕೆ ಹಾಗೂ ಮೌಲ್ಯಮಾಪನದಲ್ಲಿ ಭಾರಿ ಅಕ್ರಮ ನಡೆದಿತ್ತು. ಈ ಹಗರಣ ಇಡೀ ರಾಜ್ಯವನ್ನೇ ನಡುಗಿಸಿತ್ತು. ಹೈಕೋರ್ಟ್ ಆದೇಶದ ಮೇರೆಗೆ ಸಿಐಡಿ (CID) ತನಿಖೆ ನಡೆದು, ಮಾಜಿ ಅಧ್ಯಕ್ಷ ಎಚ್.ಎನ್. ಕೃಷ್ಣ ಸೇರಿದಂತೆ ಹಲವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. ಆದರೆ ಈ ಪ್ರಕರಣದಲ್ಲಿ ನ್ಯಾಯಾಲಯವು ದಶಕಗಳ ಬಳಿಕ ತಾಂತ್ರಿಕ ಆಧಾರದ ಮೇಲೆ ಕೆಲವರನ್ನು ಖುಲಾಸೆಗೊಳಿಸಿತ್ತು. ನೇಮಕಾತಿಯಲ್ಲಿ ಅಕ್ರಮ ಆಗಿದ್ದು ಸತ್ಯ. ಆದರೆ ಯಾರೂ ಹೊಣೆಗಾರರಲ್ಲ.

Related posts

ಮೂವರು ಅಕ್ಕ-ತಂಗಿಯರಿಗೆ ಒಬ್ಬನೇ ಗಂಡ : ಸುದ್ದಿಯೇ ಸುಳ್ಳು

ಗೃಹಜ್ಯೋತಿ ಟೆನ್ಷನ್‌ ಬೇಡ : ಆಗಸ್ಟ್‌ನಲ್ಲೂ ಪರಿಶೀಲನೆ

2001ರ ‘Frontline’ ಇತಿಹಾಸ ಪತ್ರಿಕೆ ಹಗರಣ
2001ರ ಪರೀಕ್ಷೆಯಲ್ಲಿ ಒಂದೇ ಕೊಠಡಿಯಲ್ಲಿ ಕುಳಿತಿದ್ದ ನಾಲ್ವರು ಅಭ್ಯರ್ಥಿಗಳ ‘ಇತಿಹಾಸ’ ಐಚ್ಛಿಕ ಪತ್ರಿಕೆಯ ಉತ್ತರಗಳು ಅಕ್ಷರಶಃ ಒಂದೇ ಆಗಿದ್ದವು. ತನಿಖೆಯ ವೇಳೆ ಇನ್ವಿಜಿಲೇಟರ್ ಸಹಿಯಿಲ್ಲದ ಹೆಚ್ಚುವರಿ ಉತ್ತರ ಪತ್ರಿಕೆಗಳನ್ನು ತಂದು ಸೇರಿಸಿರುವುದು ಪತ್ತೆಯಾಯಿತು. ಮುಖ್ಯ ಮೌಲ್ಯಮಾಪಕರು ಹಾಗೂ ಕೆಪಿಎಸ್‌ಸಿ ಕಾರ್ಯದರ್ಶಿ ಶಾಮೀಲಾಗಿ ಅಂಕ ಹೆಚ್ಚಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಡಿಬಾರ್ ಮಾಡಲಾಯಿತು. ಆದರೆ ಮುಂದೇನಾಯ್ತು ಎಂಬ ಬಗ್ಗೆ ಇವತ್ತಿಗೂ ಮಾಹಿತಿ ಇಲ್ಲ.

2011ರ ಕೆಎಎಸ್ ಮಹಾ ಹಗರಣ (ಡಾ. ಮೈತ್ರಿ ವಿವಾದ)
2013ರಲ್ಲಿ ಮಾಧ್ಯಮಗಳು ನಡೆಸಿದ ಸ್ಟಿಂಗ್ ಆಪರೇಷನ್ ಮೂಲಕ “ಹಣ ಕೊಟ್ಟರೆ ಮಾತ್ರ ಹುದ್ದೆ” ಎಂಬ ಕೆಪಿಎಸ್‌ಸಿಯ ಕರಾಳ ಮುಖ ಬಯಲಿಗೆ ಬಂದಿತು. ಅಭ್ಯರ್ಥಿ ಡಾ. ಮೈತ್ರಿ ಅವರಿಗೆ ಕೆಪಿಎಸ್‌ಸಿ ಸದಸ್ಯರೊಬ್ಬರು ತಮಗೆ ತಹಶೀಲ್ದಾರ್ ಹುದ್ದೆ ಬೇಕಾದರೆ ದುಡ್ಡು ಕೊಡಬೇಕೆಂದು ಡಿಮ್ಯಾಂಡ್‌ ಇಟ್ಟಿದ್ದರು. ನಂತರ ನಡೆದ ಸಿಐಡಿ ತನಿಖೆಯಲ್ಲಿ ಸಂದರ್ಶನದಲ್ಲಿ ತಾರತಮ್ಯ ಎಸಗಿರುವುದು, ಉತ್ತರ ಪತ್ರಿಕೆ ತಿದ್ದಿರುವುದು ದೃಢಪಟ್ಟಿತು. ಪರಿಣಾಮ: ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಇಡೀ 2011ರ ಬ್ಯಾಚ್‌ನ 362 ಅಭ್ಯರ್ಥಿಗಳ ನೇಮಕಾತಿ ಪಟ್ಟಿಯನ್ನೇ ರದ್ದುಗೊಳಿಸಿತು, ಅಷ್ಟೇ ಹೊರತು ಮತ್ತೇನೂ ಆಗಲಿಲ್ಲ.

2024-25ರ ಎಇಇ (AEE) ಒಎಂಆರ್ ಶೀಟ್ ತಿದ್ದುಪಡಿ
ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ಹುದ್ದೆಗಳ ನೇಮಕಾತಿಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿ ಮಹತ್ವದ ಅಕ್ರಮವನ್ನು ಬಯಲಿಗೆಳೆಯಿತು. ಪರೀಕ್ಷೆ ಮುಗಿದ ನಂತರ ಆಯ್ದ 10 ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ತಿದ್ದಿ ಅಂಕ ಹೆಚ್ಚಿಸಿರುವುದು ತನಿಖಾ ಸಮಿತಿಯ 500 ಪುಟಗಳ ವರದಿಯಲ್ಲಿ ಸಾಬೀತಾಯಿತು. ಮುಂದೇನಾಯ್ತು.. ಮಾಹಿತಿ ಇಲ್ಲ.

2026ರ ಪಶುವೈದ್ಯಾಧಿಕಾರಿ ಹಾಗೂ ಸ್ವಜನಪಕ್ಷಪಾತ ಹಗರಣ
ಇದು ಈಗಿನದ್ದು. ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರು ತಮ್ಮ ಇಬ್ಬರು ಪುತ್ರಿಯರ ನೇಮಕಾತಿಗಾಗಿ ₹40,000 ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಿ ಒಬಿಸಿ ಮೀಸಲಾತಿ ಪಡೆದ ಆರೋಪ ಮತ್ತು 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ತಲಾ ₹80 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋ ಕ್ಲಿಪ್‌ಗಳು ಮತ್ತು ಒಎಂಆರ್ ತಿದ್ದುಪಡಿ ಆರೋಪ. ರಾಜ್ಯಪಾಲರು ಕೆಪಿಎಸ್‌ಸಿ ಅಧ್ಯಕ್ಷರನ್ನು ಅಮಾನತುಗೊಳಿಸಿದ್ದು, ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಸಂಪೂರ್ಣವಾಗಿ ಮುಂದೇನಾಗಬಹುದು..?
ಐದೋ ಹತ್ತೋ ವರ್ಷಗಳ ವಿಚಾರಣೆ ನಡೆಯುತ್ತದೆ. ಕೊನೆಗೆ ಶಿವಶಂಕರಪ್ಪ ವಿರುದ್ಧ ಸಾಕ್ಷಿಗಳಿಲ್ಲ ಎಂದೋ.. ನೇಮಕವಾಗಿರುವವರು ಇಷ್ಟು ವರ್ಷ ಈಗಾಗಲೇ ಸೇವೆ ಸಲ್ಲಿಸಿದ್ದಾರೆ ಎಂದೋ.. ಏನೋ ಒಂದು ಆಗಿ ಖುಲಾಸೆಯಾಗುತ್ತಾರೆ. ಶಿಕ್ಷೆಯಾಗುವುದಿಲ್ಲ ಎನ್ನುವುದಂತೂ ಸತ್ಯ.

Tags: #ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ #ನೇಮಕಾತಿ ಅಕ್ರಮ #Karnataka Public Service Commission #Recruitment Irregularities
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಮೂವರು ಅಕ್ಕ-ತಂಗಿಯರಿಗೆ ಒಬ್ಬನೇ ಗಂಡ : ಸುದ್ದಿಯೇ ಸುಳ್ಳು
  • 1998, 1999, 2001, 2004, 2011, 2024-25, 2026 ನೇಮಕಾತಿ : KPSC ಅಕ್ರಮಗಳ ಹಿಸ್ಟರಿ
  • ಗೃಹಜ್ಯೋತಿ ಟೆನ್ಷನ್‌ ಬೇಡ : ಆಗಸ್ಟ್‌ನಲ್ಲೂ ಪರಿಶೀಲನೆ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಮೂವರು ಅಕ್ಕ-ತಂಗಿಯರಿಗೆ ಒಬ್ಬನೇ ಗಂಡ : ಸುದ್ದಿಯೇ ಸುಳ್ಳು

July 29, 2026
1998, 1999, 2001, 2004, 2011, 2024-25, 2026 ನೇಮಕಾತಿ : KPSC ಅಕ್ರಮಗಳ ಹಿಸ್ಟರಿ

1998, 1999, 2001, 2004, 2011, 2024-25, 2026 ನೇಮಕಾತಿ : KPSC ಅಕ್ರಮಗಳ ಹಿಸ್ಟರಿ

July 29, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.