RSS. RSS. RSS. ಈಗ ಕಾಂಗ್ರೆಸ್ ನಾಯಕರ ಉಸಿರು ಉಸಿರಿನಲ್ಲೂ RSS ಇದೆ. ಊಟದಲ್ಲೂ RSS ಇದೆ. ಕುಡಿಯುವ ನೀರಿನಲ್ಲೂ RSS ಇದೆ. RSS ವಿರುದ್ಧ ಪ್ರತಿದಿನ ಹೇಳಿಕೆ ನೀಡುತ್ತಿರುವ ನಾಯಕರ ಪಟ್ಟಿ ಬೆಳೆಯುತ್ತಲೇ ಇದೆ. ಆ ಪಟ್ಟಿಗೀಗ ಯತೀಂದ್ರ ಸಿದ್ಧರಾಮಯ್ಯ ಅವರೂ ಸೇರಿಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಈ ವಿಷಯದಲ್ಲಿ ಒಂಟಿಯೇನಲ್ಲ. ಆ ಪಟ್ಟಿಯಲ್ಲಿ ಸೇರಿಕೊಳ್ಳುವ ನಾಯಕರ ಪಟ್ಟಿ ಬೆಳೆಯುತ್ತಲೇ ಇದೆ.
ಪ್ರಿಯಾಂಕ್ ಖರ್ಗೆ : ದೊಡ್ಡದಾಗಿ ಹೇಳಬೇಕೆಂದರೆ ಈ ಪಟ್ಟಿಯ ಅಗ್ರಗಣ್ಯ ನಾಯಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ. ಟೀಕೆ ಮಾಡುವುದಷ್ಟೇ ಅಲ್ಲ, ಒಂದಿಷ್ಟು ಅಧ್ಯಯನವನ್ನೂ ಮಾಡಿಕೊಂಡಿರುವ ಖರ್ಗೆ ಜೂನಿಯರ್, RSSನ್ನು ಬ್ಯಾನ್ ಮಾಡುವ ಹಾದಿಯಲ್ಲಿದ್ಧಾರೆ. ಆದರೆ ಪ್ರಿಯಾಂಕ್ ಅವರ ಉದ್ದೇಶ RSS ಬ್ಯಾನ್ ಅಲ್ಲ. ಹೇಗಾದರೂ ಮಾಡಿ RSSನ್ನು ರಿಜಿಸ್ಟ್ರಾರ್ ಮಾಡಿಸಬೇಕು, ಆ ಮೂಲಕ RSSನ್ನು ಕಾನೂನು ವ್ಯಾಪ್ತಿಗೆ ತರಬೇಕು ಎನ್ನುವುದು. ಅವರೀಗ ಗೃಹ ಸಚಿವರೂ ಹೌದು.
ಪ್ರತಿ ಬಾರಿ ಅವರು ಕೇಳುತ್ತಿರುವುದು ಒಂದೇ ಪ್ರಶ್ನೆ ಆರ್‌ಎಸ್‌ಎಸ್ ತನ್ನ ಮೆರವಣಿಗೆ ಮತ್ತು ಸಭೆಗಳ ಬಗ್ಗೆ ಕಾನೂನಿನ ವ್ಯಾಪ್ತಿಗೆ ಒಳಪಡಲು ನೋಂದಣಿ ಮಾಡಿಕೊಳ್ಳಲು ಏಕೆ ಹೆದರುತ್ತಿದೆ?” ಎನ್ನುವುದು.
ಯತೀಂದ್ರ ಸಿದ್ದರಾಮಯ್ಯ : ಆರ್‌ಎಸ್‌ಎಸ್ ಎನ್ನುವುದು ದೇಶದಲ್ಲಿ ದ್ವೇಷ ಹರಡುವ ಸಾವಿರ ಹೆಡೆಯ ವಿಷ ಸರ್ಪವಿದ್ದಂತೆ” ಎಂದಿದ್ದಾರೆ ಯತೀಂದ್ರ. ಆರ್‌ಎಸ್ಎಸ್ ಎಂಬುದು 1 ಸಾವಿರ ಹೆಡೆಗಳಿರುವ ವಿಷಸರ್ಪ. ಅದರ ತುಂಬಾ ತುಂಬಿಕೊಂಡಿರುವಂತಹದ್ದು ಜಾತಿವಾದ, ಕೋಮುವಾದ, ಮನುವಾದ. ಇದು ಇಡೀ ಸಮಾಜಕ್ಕೆ ವಿಷ ತುಂಬುವಂತಹ, ವಿಷ ಕಕ್ಕುವಂತಹ ಒಂದು ನಾಗರ. ಇದನ್ನು ನಾವು ಹೀಗೆಯೇ ಬಿಟ್ಟರೆ ನಮ್ಮ ಸಮಾಜ ಹಾಳಾಗುತ್ತದೆ. ನಮ್ಮ ದೇಶ ಕೂಡ ಹಾಳಾಗುತ್ತದೆ. ಹೀಗಾಗಿ, ಯಾರ್‍ಯಾರು ಪ್ರಜ್ಞಾವಂತರು, ಯಾರು ಜಾತಿ ವ್ಯವಸ್ಥೆಯನ್ನು ಒಡೆದು ಹಾಕಬೇಕು ಅಂದುಕೊಂಡಿದ್ದಾರೋ ಅವರೆಲ್ಲ ಆರ್‌ಎಸ್ಎಸ್‌ನ ಹೀನ ಮನಸ್ಥಿತಿಯನ್ನು ಖಂಡಿಸಬೇಕು ಎಂದು ಕರೆ ನೀಡಿದ್ದಾರೆ ಯತೀಂದ್ರ.
ಸಂತೋಷ್ ಲಾಡ್ : ಆರ್‌ಎಸ್‌ಎಸ್‌ನವರಿಗೆ ಸ್ವಾತಂತ್ರ್ಯ ಸಿಕ್ಕಿ 50-60 ವರ್ಷಗಳವರೆಗೆ ನಾಗ್ಪುರ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಸಾಧ್ಯವಾಗಲಿಲ್ಲ, ಅವರಿಗೆ ರಾಷ್ಟ್ರಧ್ವಜದ ಮೇಲೆ ಗೌರವವೇ ಇರಲಿಲ್ಲ.
ವಿಜಯಾನಂದ ಕಾಶಪ್ಪನವರ್: ಆರ್‌ಎಸ್‌ಎಸ್ ನೋಂದಣಿ ಮಾಡಿಕೊಂಡರೆ ತಮಗೆ ಬರುವ ಕಳ್ಳ ಹಣದ (ಬ್ಲ್ಯಾಕ್ ಮನಿ) ಮೂಲ ಬಯಲಾಗುತ್ತದೆ ಎಂಬ ಭಯದಿಂದಲೇ ಅವರು ನೋಂದಣಿಗೆ ಹಿಂದೇಟು ಹಾಕುತ್ತಿದ್ದಾರೆ.
ಪ್ರದೀಪ್ ಈಶ್ವರ್: ವಿರೋಧ ಪಕ್ಷದ ನಾಯಕರಿಗೆ ತಾಕತ್ತಿದ್ದರೆ ಆರ್‌ಎಸ್‌ಎಸ್ ಸಂಘಟನೆಯ ಅಧಿಕೃತ ನೋಂದಣಿ ಪ್ರತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಿ.
ಲಕ್ಷ್ಮಣ್ ಸವದಿ: ಸಂಘಟನೆಯ ಹೆಸರಿನಲ್ಲಿ ಅಧಿಕಾರ ಚಲಾಯಿಸುವ ಆರ್‌ಎಸ್‌ಎಸ್, ಮೊದಲು ತನ್ನ ಆಸ್ತಿ ಮತ್ತು ಹಣಕಾಸಿನ ಲೆಕ್ಕಪತ್ರಗಳನ್ನು ಕಾನೂನಿನ ಪ್ರಕಾರ ಬಹಿರಂಗಪಡಿಸಲಿ.
ದಿನೇಶ್ ಗುಂಡೂರಾವ್: ಆರ್‌ಎಸ್‌ಎಸ್ ಎನ್ನುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಹಿಡನ್ ಅಜೆಂಡಾ ಹೊಂದಿರುವ ಸಂಘಟನೆ.
ಯು. ಟಿ. ಖಾದರ್: ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಆರ್‌ಎಸ್‌ಎಸ್‌ನ ಕೆಲವು ನಡೆಗಳು ಕರಾವಳಿ ಭಾಗದ ಶಾಂತಿಗೆ ಮಾರಕವಾಗಿವೆ
ಮಲ್ಲಿಕಾರ್ಜುನ ಖರ್ಗೆ: ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರ ವಹಿಸದ ಆರ್‌ಎಸ್‌ಎಸ್ ನಮಗೆ ದೇಶಭಕ್ತಿಯ ಪಾಠ ಮಾಡಬೇಕಾಗಿಲ್ಲ
ಬಿ. ಕೆ. ಹರಿಪ್ರಸಾದ್: ಆರ್‌ಎಸ್‌ಎಸ್ ಸಿದ್ಧಾಂತಗಳು ಮತ್ತು ಅದರ ನಡವಳಿಕೆಗಳು ತಾಲಿಬಾನ್ ಉಗ್ರಗಾಮಿ ಸಂಘಟನೆಯನ್ನು ಹೋಲುತ್ತವೆ
ಕೆ. ಸಿ. ವೇಣುಗೋಪಾಲ್: ಬ್ರಿಟಿಷರ ಜೊತೆ ಕೈಜೋಡಿಸಿ, ದೇಶದ ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ಸಂಘಟನೆಗೆ ಗೌರವ ನೀಡುವುದು ಇತಿಹಾಸಕ್ಕೆ ಮಾಡುವ ದ್ರೋಹ.
ರಾಹುಲ್ ಗಾಂಧಿ: ಆರ್‌ಎಸ್‌ಎಸ್ ಎನ್ನುವುದು ಭಾರತದ ಇತಿಹಾಸ ಮತ್ತು ತತ್ವಶಾಸ್ತ್ರದ ಜ್ಞಾನವೇ ಇಲ್ಲದ ಒಂದು ಜೋಕರ್ಸ್‌ಗಳ ಗುಂಪು ಪಟ್ಟಿ ಇನ್ನೂ ಇದೆ..



