Tuesday, June 16, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಅಯೋಧ್ಯೆ ರಾಮನ ಹುಂಡಿ ಕಳ್ಳರು : ರಾಮರಾಜ್ಯದಲ್ಲಿ ಆಗಿದ್ದರೆ ಶಿಕ್ಷೆ ಏನಿರುತ್ತಿತ್ತು..?

SpeciallU by SpeciallU
June 16, 2026
in News
Reading Time: 1 min read
0 0
0
ಅಯೋಧ್ಯೆ ರಾಮನ ಹುಂಡಿ ಕಳ್ಳರು : ರಾಮರಾಜ್ಯದಲ್ಲಿ ಆಗಿದ್ದರೆ ಶಿಕ್ಷೆ ಏನಿರುತ್ತಿತ್ತು..?

ಅಯೋಧ್ಯೆ ರಾಮ. ಇಲ್ಲಿ ಒಂದು ದೇವಸ್ಥಾನ ಕಟ್ಟುವುದಕ್ಕೆ ನಡೆದದ್ದು ದಿನ, ತಿಂಗಳು ವರ್ಷಗಳ ಹೋರಾಟ ಅಲ್ಲ. ದಶಕಗಳ ಹೋರಾಟವೂ ಅಲ್ಲ. 5 ಶತಮಾನಗಳಿಗೂ ಹೆಚ್ಚು ಕಾಲ ನಡೆದ ಸುದೀರ್ಘ ಹೋರಾಟ. ಇದೊಂದು ರಾಮ ಮಂದಿರಕ್ಕಾಗಿ ಅದೆಷ್ಟು ಜನ ಜೀವ ಬಿಟ್ಟಿದ್ದಾರೋ.. ಲೆಕ್ಕ ಇಟ್ಟವರಿಲ್ಲ. ಇಂತಹ ಐತಿಹಾಸಿಕ ದೇವಸ್ಥಾನ ಆರಂಭವಾಗಿ 2 ವರ್ಷ ಕಳೆಯುವ ಹೊತ್ತಿಗೆ ಇದೇ ದೇವಸ್ಥಾನದಲ್ಲಿ ಕೋಟಿ ಕೋಟಿ ಲೂಟಿ ಮಾಡಿದ ಆರೋಪಿಗಳು ಸಿಕ್ಕು ಬಿದ್ದಿದ್ದಾರೆ. ಒಬ್ಬೊಬ್ಬರ ಮನೆಯಲ್ಲೂ ಕೋಟಿ ಕೋಟಿ ಆಸ್ತಿ. ಸಂಬಳ ಮಾತ್ರ ಜಸ್ಟ್‌ 14 ರಿಂದ 20 ಸಾವಿರ. ಅಂದಹಾಗೆ ಶ್ರೀರಾಮಚಂದ್ರನ ರಾಮರಾಜ್ಯದಲ್ಲಿ ಈ ತಪ್ಪು ಮಾಡಿದ್ದರೆ ಯಾವ ಶಿಕ್ಷೆ ಇರುತ್ತಿತ್ತು ಗೊತ್ತಾ..?

ಅಯೋಧ್ಯೆಯಲ್ಲಿ ಸ್ಥಾಪಿತವಾಗಿರುವ ರಾಮಲಲ್ಲಾನ ಆ ಸುಂದರ ರೂಪವನ್ನು ನೋಡಲೆಂದೇ ಇಲ್ಲಿಗೆ ಪ್ರತಿನಿತ್ಯ ಲಕ್ಷ ಲಕ್ಷ ಭಕ್ತರು ಬರ್ತಾರೆ. ಅದು ರಾಮನ ಮೇಲಿನ ನಂಬಿಕೆ.. ಆ ರಾಮಮಂದಿರವೇ ಈಗ ವಿವಾದದ ಕೇಂದ್ರ ಬಿಂದು. ರಾಮ ಮಂದಿರಕ್ಕೆ ಪ್ರತಿನಿತ್ಯ ಭೇಟಿ ನೀಡುವ ಭಕ್ತರ ಸಂಖ್ಯೆ ಮತ್ತು ಕಾಣಿಕೆಯ ಅಧಿಕೃತ ಲೆಕ್ಕಾಚಾರಗಳನ್ನ ನೋಡಿದರೇನೇ.. ಅಬ್ಬಾ ಎನಿಸುತ್ತೆ. ಎಂಥದ್ದೇ ದಿನ ಇರಲಿ.. ಅಲ್ಲಿಗೆ ಬರುವ, ಶ್ರೀರಾಮನ ದರ್ಶನ ಪಡೆಯುವ ಭಕ್ತರು ದಿನವೊಂದಕ್ಕೆ ಒಂದರಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು. ಹಬ್ಬಹರಿದಿನಗಳಾದರಂತೂ ಮುಗಿದೇ ಹೋಯ್ತು.. ಎರಡೂವರೆ, ಮೂರು ಲಕ್ಷ ದಾಟಿಬಿಡುತ್ತದೆ. ಹೀಗೆ ಬರುವ ಭಕ್ತರು ಹಾಕುವ ಕಾಣಿಕೆಯ ಮೇಲೆ ಖದೀಮರ ಕಣ್ಣು ಬಿದ್ದಿದೆ. ದಿನವೊಂದಕ್ಕೆ ಅಯೋಧ್ಯೆಯಲ್ಲಿ ಸಂಗ್ರಹವಾಗುವ ಕಾಣಿಕೆ ಹುಂಡಿಯ ಹಣದ ಅಂದಾಜು ಲೆಕ್ಕವೇ 10 ಲಕ್ಷಕ್ಕೂ ಹೆಚ್ಚು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಟ್ರಸ್ಟ್ನ ಒಟ್ಟು ವಾರ್ಷಿಕ ಆದಾಯ ಸುಮಾರು 327 ಕೋಟಿಯಾಗಿದ್ದರೆ, ಇದರಲ್ಲಿ ಕೇವಲ ಭಕ್ತರು ನೀಡಿದ ನೇರ ಕಾಣಿಕೆ ಮತ್ತು ಉಡುಗೊರೆಗಳ ಪಾಲು 153 ಕೋಟಿ ಇದೆ. ಇಷ್ಟೊಂದು ದುಡ್ಡು ಸಂಗ್ರಹವಾಗುವ ಜಾಗದಲ್ಲಿ ಒಂದಿಷ್ಟು ಕದ್ದರೆ.. ಯಾರಿಗೂ ಗೊತ್ತಾಗಲ್ಲ ಅಂದ್ಕೊಂಡು ಕದ್ದವರು.. ಈಗ ಸಿಕ್ಕುಬಿದ್ದಿದ್ದಾರೆ. ಆ ಕಳ್ಳರ ಮಾಹಿತಿಯನ್ನೊಮ್ಮೆ ನೋಡಿಕೊಂಡು ಬಿಡಿ. ಅಂದಹಾಗೆ ಒಬ್ಬ ಕಳ್ಳನ ಹೆಸರು ಲವಕುಶ. ಶ್ರೀರಾಮನ ಮಕ್ಕಳ ಹೆಸರು.

Related posts

ಸೈನಿಕ ಪತಿಗೆ ಆಸ್ಪತ್ರೆಯಲ್ಲೇ ವಿಷ ಹಾಕಿದ್ದ ಹೆಂಡತಿ : ಪೊಲೀಸರು ಬಯಲಿಗೆಳೆದದ್ದೇ ರೋಚಕ..!

ಬಾಗಲಕೋಟೆ ರೈತ ಅಧಿಕಾರಿಗೆ ಚಪ್ಪಲಿಯಲ್ಲಿ ಹೊಡೆದಿದ್ದು ಏಕೆ..?

ಅಯೋಧ್ಯೆಯಲ್ಲಿ ಸಿಕ್ಕಿಬಿದ್ದ ಕಳ್ಳ  ನಂ.1
=========================

ಲವಕುಶ ಮಿಶ್ರಾ : ಹುಂಡಿ ಎಣಿಕೆ ನೌಕರ. ಈತನ ಸಂಬಳ ಕೇವಲ  18 ಸಾವಿರ ರೂ. ಈತನ ಮನೆಯ ಗೊಬ್ಬರದ ರಾಶಿಯಲ್ಲಿ 10 ಲಕ್ಷ ಕ್ಯಾಷ್ ಸಿಕ್ಕಿದೆ. ಈತ 40 ಲಕ್ಷದ ಫ್ಲ್ಯಾಟ್ ಖರೀದಿಸಿದ್ದ. ಮತ್ತೊಂದು ಮನೆ ಖರೀದಿಸಿದ್ದ . ಕೆಲಸಕ್ಕೆ ಸೇರುವ ಮೊದಲು ಕಾರ್ ಮೆಕ್ಯಾನಿಕ್ ವೃತ್ತಿ ಮಾಡ್ತಿದ್ದವನು ಈಗ ಕೋಟಿಗೆ ಬಾಳುತ್ತಾನೆ.

ಅಯೋಧ್ಯೆಯಲ್ಲಿ ಸಿಕ್ಕಿಬಿದ್ದ ಕಳ್ಳ ನಂ.2
=====================

ಅನುಕಲ್ಪ್ ಮಿಶ್ರಾ  : ಈತನೂ ಹುಂಡಿ ಎಣಿಕೆ ನೌಕರ, ಸಂಬಳ 20 ಸಾವಿರ. ಆದರೆ ಇವನ ಮನೆಯಲ್ಲಿ ಸಿಕ್ಕ ಕ್ಯಾಷ್ 20 ಲಕ್ಷಕ್ಕೂ ಹೆಚ್ಚು. ಈತನ ಬಳಿ 65 ಲಕ್ಷದ ಮನೆ, ಹಳ್ಳಿಯಲ್ಲಿ ಫಾರ್ಮ್ ಹೌಸ್, 3 ಎಕರೆ ಜಮೀನು ಖರೀದಿಸಿದ್ದ. ಈಗ ಆರೋಪಿ ಲವ್ ಕುಶನ ಭಾವಮೈದುನ.

ಅಯೋಧ್ಯೆಯಲ್ಲಿ ಸಿಕ್ಕಿಬಿದ್ದ ಕಳ್ಳ ನಂ.3 
=====================

ರಾಮಶಂಕರ್ ಅಲಿಯಾಸ್ ಟಿನ್ನು ಯಾದವ್ . ಈತ ಟ್ರಸ್ಟ್ ಜನರಲ್ ಸೆಕ್ರಟರಿ ಚಂಪತ್ ರೈಗೆ ಪರಮಾಪ್ತ. ಮಂದಿರಕ್ಕೆ ಕೆಲಸಗಾರರನ್ನು ಕರೆತರುವುದು ಉದ್ಯೋಗ ಮಾಡ್ತಿದ್ದ ಇವನ ಬಳಿ ಅಯೋಧ್ಯೆ, ಲಖನೌನಲ್ಲಿ 50 ಕೋಟಿ ಮೌಲ್ಯದ ಆಸ್ತಿ ಸಿಕ್ಕಿದೆ. ಈತ 70 ರೂಂ ಇರುವ ಹಾಸ್ಟೆಲ್, 3 ರೆಸ್ಟೋರೆಂಟ್, ಬಂಗಲೆ ಮಾಲೀಕ. ಆಟೋ ಡ್ರೈವರ್ ಆಗಿದ್ದವನು ಈಗ ಫಾರ್ಚೂನರ್ ಮಾಲೀಕನಾಗಿದ್ಧಾನೆ.

ಅಯೋಧ್ಯೆಯಲ್ಲಿ ಸಿಕ್ಕಿಬಿದ್ದ ಕಳ್ಳರ ಸಂಖ್ಯೆ ದೊಡ್ಡದು. ಅವನೀಶ್ : 5 ಲಕ್ಷ ಕ್ಯಾಷ್ ಜಪ್ತಿ ಯಾಗಿದೆ. ಇನ್ನೊಬ್ಬ  ಕೆಡಿ ತಿವಾರಿ ಬಳಿಯೂ 20 ಲಕ್ಷ ಕ್ಯಾಷ್‌ ಸಿಕ್ಕಿದೆ. ಕರುಣ್, ರಾಜೇಶ್ ಪಾಠಕ್, ಟಿನ್ನು ಯಾದವ್ ಸಂಬಂಧಿಕ ಮನೀಶ್ ಯಾದವ್ ಹೀಗೆ ಇವರೆಲ್ಲರ ಕೆಲಸ ಏನ್ ಗೊತ್ತಾ.. ಪ್ರತಿದಿನ ಹುಂಡಿಗೆ ಬಿದ್ದ ಭಕ್ತರ ಕಾಣಿಕೆ ಹಣವನ್ನ ಲೆಕ್ಕ ಮಾಡೋದು. ಅದರಲ್ಲಿ ಸ್ವಲ್ಪ ಹಣವನ್ನ ತೆಗೆದುಕೊಳ್ಳೋದು.. ದಿನಕ್ಕೆ 8 ರಿಂದ 10 ಲಕ್ಷ ಅಧಿಕೃತವಾಗಿ ಲೆಕ್ಕಕ್ಕೆ ಕೊಟ್ಟಿದ್ಧಾರೆ ಎಂದರೆ.. ಇವರೆಲ್ಲ ಸೇರಿ ದಿನವೊಂದಕ್ಕೆ ಅದೆಷ್ಟು ಹಣವನ್ನ ಲೂಟಿ ಮಾಡಿರಬೇಕು ಲೆಕ್ಕ ಹಾಕಿ..

ಶ್ರೀರಾಮಚಂದ್ರನ ರಾಮ ರಾಜ್ಯದಲ್ಲಿ ಶಿಕ್ಷೆ ಏನು..?

ರಾಮಾಯಣದಲ್ಲಿ ಉಲ್ಲೇಖವಾಗಿರುವ ಪ್ರಕಾರ, ಕಳ್ಳತನ ಮಾಡಿದ ವ್ಯಕ್ತಿಯನ್ನು ರಾಜನ ಮುಂದೆ ಹಾಜರುಪಡಿಸಬೇಕಿತ್ತು. ರಾಜನು ಸ್ವತಃ ತನ್ನ ಕೈಯಲ್ಲಿ ದೊಣ್ಣೆ ಅಥವಾ ಗದೆಯಿಂದ ಹೊಡೆಯೇಕಿತ್ತು. ದೇವಸ್ಥಾನದ ಅಥವಾ ಸಾರ್ವಜನಿಕ ನಿಧಿಯ ದುಡ್ಡು ಕದ್ದರೆ ಮರಣದಂಡನೆಯೇ ಶಿಕ್ಷೆಯಾಗಿತ್ತು. ಕಳ್ಳನ ಕೈ ಅಥವಾ ಕಾಲಿನ ಅರ್ಧ ಭಾಗವನ್ನು ಕತ್ತರಿಸುವ ಶಿಕ್ಷೆ ಇರುತ್ತಿತ್ತು. ಕಳ್ಳತನ ಮಾಡಿದ್ದವರು ಸುಶಿಕ್ಷಿತರಾಗಿದ್ದರೆ ಅಂತಹವರಿಗೆ ಸಾಮಾನ್ಯ ಕಳ್ಳರಿಗೆ ವಿಧಿಸುತ್ತಿದ್ದ ಶಿಕ್ಷೆಗಿಂತ 100 ಪಟ್ಟು ಹೆಚ್ಚು ಶಿಕ್ಷೆ ವಿಧಿಸಲಾಗುತ್ತಿತ್ತು. ಅದು ರಾಮರಾಜ್ಯ. ಈಗಿನ ಕಾನೂನುಗಳಲ್ಲಿ ಕಳ್ಳತನಕ್ಕೆ ಮರಣ ದಂಡನೆಯನ್ನಂತೂ ನೀಡೋದಿಲ್ಲ. ಕೈ ಕಾಲು ಕಟ್ ಮಾಡೋಕೆ ಕಾನೂನು ಅವಕಾಶ ಕೊಡೋದಿಲ್ಲ. ಗರಿಷ್ಠ ಎಂದರೆ ಜೈಲು ಶಿಕ್ಷೆ.. ಅಷ್ಠೇ ಇರೋದು.

Tags: #ಅಯೋಧ್ಯೆ ರಾಮ #ಹುಂಡಿ ಕಳ್ಳರು #ಲವಕುಶ ಮಿಶ್ರಾ #ಅನುಕಲ್ಪ್ ಮಿಶ್ರಾ #ರಾಮಶಂಕರ್ #Ayodhya Ram #Hundi Thieves #Lavakush Mishra #Anukalp Mishra #Ramashankar
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಅಯೋಧ್ಯೆ ರಾಮನ ಹುಂಡಿ ಕಳ್ಳರು : ರಾಮರಾಜ್ಯದಲ್ಲಿ ಆಗಿದ್ದರೆ ಶಿಕ್ಷೆ ಏನಿರುತ್ತಿತ್ತು..?
  • ಸೈನಿಕ ಪತಿಗೆ ಆಸ್ಪತ್ರೆಯಲ್ಲೇ ವಿಷ ಹಾಕಿದ್ದ ಹೆಂಡತಿ : ಪೊಲೀಸರು ಬಯಲಿಗೆಳೆದದ್ದೇ ರೋಚಕ..!
  • ಮಜಾಭಾರತ ನಟ ಸಿದ್ಧಾರ್ಥ ಸಾವು ಸಹಜ ಸಾವಲ್ಲ..!

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಅಯೋಧ್ಯೆ ರಾಮನ ಹುಂಡಿ ಕಳ್ಳರು : ರಾಮರಾಜ್ಯದಲ್ಲಿ ಆಗಿದ್ದರೆ ಶಿಕ್ಷೆ ಏನಿರುತ್ತಿತ್ತು..?

ಅಯೋಧ್ಯೆ ರಾಮನ ಹುಂಡಿ ಕಳ್ಳರು : ರಾಮರಾಜ್ಯದಲ್ಲಿ ಆಗಿದ್ದರೆ ಶಿಕ್ಷೆ ಏನಿರುತ್ತಿತ್ತು..?

June 16, 2026
ಸೈನಿಕ ಪತಿಗೆ ಆಸ್ಪತ್ರೆಯಲ್ಲೇ ವಿಷ ಹಾಕಿದ್ದ ಹೆಂಡತಿ : ಪೊಲೀಸರು ಬಯಲಿಗೆಳೆದದ್ದೇ ರೋಚಕ..!

ಸೈನಿಕ ಪತಿಗೆ ಆಸ್ಪತ್ರೆಯಲ್ಲೇ ವಿಷ ಹಾಕಿದ್ದ ಹೆಂಡತಿ : ಪೊಲೀಸರು ಬಯಲಿಗೆಳೆದದ್ದೇ ರೋಚಕ..!

June 16, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.