ಯಾವುದೇ ಕ್ರಿಮಿನಲ್ ಕೇಸಿನಲ್ಲಿ ಅರೆಸ್ಟ್ ಆದ ರಾಜಕಾರಣಿಗಳಿಗೆ ಎದೆ ನೋವು ಬರುವುದು ಕಾಮನ್. ಅದರಲ್ಲೂ ರಾಜಕಾರಣಿಗಳಿಗೆ ಸಾಧಾರಣವಾಗಿ ಅರೆಸ್ಟ್ ಆದಾಗ ಬರುವ ಕಾಯಿಲೆಗಳಲ್ಲಿ ನಂಬರ್ ಒನ್ ಸ್ಥಾನ ಎದೆನೋವು. ಹೃದಯದಲ್ಲಿ ತೊಂದರೆ.. ಆದರೆ.. ರೇವಣ್ಣ ಅವರಿಗೆ ಹೊಟ್ಟೆನೋವು ಬಂದಿದೆ.
ಮಹಿಳೆ ಅಪಹರಣ ಆರೋಪದ ಪ್ರಕರಣ ಸಂಬಂಧ ಎಸ್‌ಐಟಿ ವಶದಲ್ಲಿರುವ ಆರೋಪಿ ಎಚ್.ಡಿ.ರೇವಣ್ಣ ಅವರಿಗೆ ಹೊಟ್ಟೆ ನೋವು ಮತ್ತು ಎದೆ ಉರಿ ಕಾಣಿಸಿಕೊಂಡ ಕಾರಣ, ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ವಿಚಾರಣೆಗೆ ಒಳಪಡಿಸಲು ಎಸ್ಐಟಿ ನಾಲ್ಕು ದಿನಗಳ ಕಾಲ ರೇವಣ್ಣನನ್ನು ವಶಕ್ಕೆ ಪಡೆದಿತ್ತು. ಈ ವೇಳೆ ಹೊಟ್ಟೆ ನೋವು ಮತ್ತು ಎದೆ ಉರಿ ಎಂದು ರೇವಣ್ಣ ಹೇಳಿದ್ದಾರೆ. ಕೂಡಲೇ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತಾದರೂ.. ಬಿಪಿ, ಶುಗರ್ ಲೆವೆಲ್ ನಾರ್ಮಲ್ ಇತ್ತಾದರೂ.. ಹೊಟ್ಟೆ ನೋವು ಕಡಿಮೆಯಾಗಿಲ್ಲ. ಹೀಗಾಗಿ ರೇವಣ್ಣನವರನ್ನು ವಿಕ್ಟೋರಿಯ ಆಸ್ಪತ್ರೆಗೆ ಸೇರಿಸಲಾಗಿದೆ.
ರೇವಣ್ಣ ಅವರು ಕಳೆದ ನಾಲ್ಕು ದಿನಗಳಿಂದ ಸರಿಯಾಗಿ ಊಟ, ತಿಂಡಿ ಸೇವಿಸುತ್ತಿಲ್ಲ. ಹೀಗಾಗಿ ಗ್ಯಾಸ್ಟ್ರಿಕ್ ಹೆಚ್ಚಾಗಿ ಹೊಟ್ಟೆನೋವು ಮತ್ತು ಎದೆ ಉರಿ ಕಾಣಿಸಿಕೊಂಡಿರುವ ಸಾಧ್ಯತೆಯಿದೆ. ಅಲ್ಲದೆ ರೇವಣ್ಣ ಎಸ್ʻಐಟಿ ಅಧಿಕಾರಿಗಳ ಪ್ರಶ್ನೆಗೆ ಸೂಕ್ತ ಉತ್ತರ ನೀಡುತ್ತಿಲ್ಲ. ನೀವೇ ಹುಡುಕಿ ತನ್ನಿ ಎನ್ನುತ್ತಿರುವ ರೇವಣ್ಣ, ತಮ್ಮ ಮೇಲಿರುವ ಆರೋಪಗಳನ್ನು ನಿರಾಕರಿಸುತ್ತಿದ್ಧಾರೆ.
ಇತ್ತ ಪ್ರಜ್ವಲ್ ರೇವಣ್ಣ ಅವರಿಗೆ ಇಂಟರ್ ಪೋಲ್ ಮೂಲಕ ಬ್ಲೂಕಾರ್ನರ್ ನೋಟಿಸ್ ನೀಡಲಾಗಿದೆ. ಕಳೆದ ಹನ್ನೆರಡು ದಿನಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿರುವ ಲೈಂಗಿಕ ಹಗರಣದ ಆರೋಪಿ, ಸಂಸದ ಪ್ರಜ್ವಲ್ ರೇವಣ್ಣ ಮೇ 15ಕ್ಕೆ ಭಾರತಕ್ಕೆ ಮರಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಹೋಗಿದ್ದ ಪ್ರಜ್ವಲ್ ಯೂರೋಪಿನ ಬೇರೆ ಬೇರೆ ನಗರಗಳ ನಡುವೆ ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ.
‘ಬ್ಲೂ ಕಾರ್ನರ್’ ನೋಟಿಸ್ ಹೊರಡಿಸಿರುವುದರಿಂದ ಆರೋಪಿಯ ಇರುವಿಕೆ, ಚಲನವಲನ, ಪ್ರಯಾಣದ ಬಗ್ಗೆ ಇಂಟರ್‌ಪೋಲ್‌ನಿಂದ ಸಿಬಿಐ ಮಾಹಿತಿ ಸಂಗ್ರಹಿಸುತ್ತಿದೆ ಎಂದು ತಿಳಿದು ಬಂದಿದೆ. ಆದರೆ.. ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿರುವ ಬಗ್ಗೆ ಸಿಬಿಐ ಯಾವುದೇ ಮಾಹಿತಿ ನೀಡಿಲ್ಲ.
ಮುಗ್ಧ ಹೆಣ್ಣುಮಕ್ಕಳನ್ನು ಬೆದರಿಸಿ, ಆಮಿಷ ಒಡ್ಡಿ ಲೈಂಗಿಕ ದೌರ್ಜನ್ಯ, ಶೋಷಣೆ, ಅತ್ಯಾಚಾರ ಮಾಡಿರುವ ಗಂಭೀರ ಸ್ವರೂಪದ ಆರೋಪಗಳು ಪ್ರಜ್ವಲ್ ವಿರುದ್ಧ ಕೇಳಿಬಂದಿವೆ. ಕೆಲವು ಮಹಿಳೆಯರು ಈಗಾಗಲೇ ಎಸ್ʻಐಟಿಯನ್ನು ಸಂಪರ್ಕಿಸಿದ್ದಾರೆ. ಆದರೆ.. ಪ್ರಕರಣದಲ್ಲಿ ಆರೋಪಿಸಿರುವ ಸಂಖ್ಯೆಯಲ್ಲಿರುವಷ್ಟು ಮಹಿಳೆಯರು ಎಸ್ʻಐಟಿ ಸಂಪರ್ಕಕ್ಕೆ ಬಂದಿಲ್ಲ.
ಸಂತ್ರಸ್ತರನ್ನು ಹುಡುಕಿ ಹುಡುಕಿ ಆಮಿಷವೊಡ್ಡಿ ಕರೆತರಲಾಗುತ್ತಿದೆ. ಹಣ ನೀಡಿ ಆರೋಪಿಸಲಾಗುತ್ತಿದೆ. ಎಸ್ʻಐಟಿ ಎಂಬುದು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಂ ಆಗಿದೆ ರೂಪುಗೊಂಡಿದೆ. ಪ್ರಕರಣದಲ್ಲಿ ಹೇಗಾದರೂ ಮಾಡಿ ದೇವೇಗೌಡರ ಕುಟುಂಬವನ್ನು ಸಂಪೂರ್ಣವಾಗಿ ಹಣಿಯಬೇಕು ಎಂದು ನಿರ್ಧರಿಸಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.