ಟಾಟಾ ಎಂದರೆ ಭರವಸೆ. ಟಾಟಾ ಎಂದರೆ ಭರವಸೆ. ಟಾಟಾ ಎಂದರೆ ಭಾರತ. ಬಹುಶಃ ಭಾರತೀಯರು ಟಾಟಾ ಕಂಪೆನಿಯ ಮೇಲೆ ಭರವಸೆ, ನಂಬಿಕೆ ಇಟ್ಟಷ್ಟು ಬೇರೆ ಯಾವ ಉದ್ಯಮ, ಕಂಪೆನಿ ಮೇಲೆಯೂ ನಂಬಿಕೆ ಇಟ್ಟಿಲ್ಲ. ಅಂತಹ ಟಾಟಾ ಗ್ರೂಪ್ ಹೊಸ ದಾಖಲೆ ಬರೆದಿದೆ. ಟಾಟಾ ಗ್ರೂಪ್ ಸಮೂಹದ ಎಲ್ಲಾ ಕಂಪನಿಗಳು ಸೇರಿದಂತೆ ಅದರ ಮಾರುಕಟ್ಟೆ ಮೌಲ್ಯ ಫೆಬ್ರವರಿ 6 ರಂದು 30 ಲಕ್ಷ ಕೋಟಿಯ ಗಡಿ ದಾಟಿದೆ. ಅ ಮೂಲಕ, 30 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯದ ಗಡಿ ದಾಟಿದ ದೇಶದ ಮೊಟ್ಟಮೊದಲ ವಾಣಿಜ್ಯ ಸಮೂಹ ಇದಾಗಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಮೋಟಾರ್ಸ್ ಟಾಟಾ ಪವರ್ ಮತ್ತು ಇಂಡಿಯನ್ ಹೊಟೇಲ್ ಷೇರುಗಳನ್ನು ಷೇರುದಾರರು ಹೆಚ್ಚಿನ ಮಟ್ಟಿಗೆ ಖರೀದಿ ಮಾಡಿದ್ದು ಈ ದಾಖಲೆಗೆ ಕಾರಣವಾಗಿದೆ. 2024ರಲ್ಲಿ ಈವರೆಗೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ ಬೆಲೆಗಳಲ್ಲಿ ಶೇ.9ರಷ್ಟು ಏರಿಕೆ ಕಂಡಿದ್ದರೆ, ಟಾಟಾ ಮೋಟಾರ್ಸ್‌ನ ಷೇರುಗಳಲ್ಲಿ ಶೇ. 20ರಷ್ಟು ಏರಿಕೆಯಾಗಿದೆ. ಇನ್ನು ಟಾಟಾ ಪವರ್‌ನ ಷೇರುಗಳ ಬೆಲೆಯಲ್ಲಿ ಶೇ. 18ರಷ್ಟು, ಇಂಡಿಯನ್ ಹೋಟೆಲ್ಸ್ ಷೇರುಗಳಲ್ಲಿ ಶೇ. 16ರಷ್ಟು ಏರಿಕೆ ಕಂಡಿದೆ. ಟಾಟಾ ಗ್ರೂಪ್‌ನ ಒಟ್ಟು 24 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗಿವೆ. ಈ ನಡುವೆ, ತೇಜಸ್ ನೆಟ್‌ವರ್ಕ್, ಟಾಟಾ ಎಲಿಕ್ಸಿ ಮತ್ತು ಟಾಟಾ ಕೆಮಿಕಲ್ಸ್ ಈ ವರ್ಷ ಇಲ್ಲಿಯವರೆಗೆ ಶೇಕಡಾ 10 ಕ್ಕಿಂತ ಹೆಚ್ಚು ಕುಸಿದಿದ್ದರೆ ಉಳಿದ ಷೇರುಗಳು ಶೇಕಡಾ 1:5 ರ ವ್ಯಾಪ್ತಿಯಲ್ಲಿ ಗಳಿಸಿವೆ.
ಟಿಸಿಎಸ್ ಹೊಸ ಗರಿಷ್ಠ ಮಟ್ಟವನ್ನು ತಲುಪಿದ್ದು, ಶೇ. 4ರಷ್ಟು ಏರಿಕೆ ಕಂಡು, 15 ಲಕ್ಷ ಕೋಟಿಯ ಮಾರುಕಟ್ಟೆ ಮೌಲ್ಯ ಕಂಡಿದೆ. ಟಿಸಿಎಸ್ ಮಾರುಕಟ್ಟೆ ಮೌಲ್ಯವೇ ಟಾಟಾ ಗ್ರೂಪ್ʻನ ಅರ್ಧಕ್ಕಿಂತಲೂ ಹೆಚ್ಚು ಮೌಲ್ಯ ಹೊಂದಿದೆ. 2024ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪನಿ ಪ್ರಮುಖ ಒಪ್ಪಂದಗಳನ್ನು ಪಡೆದಿರುವುದು ಷೇರು ಬೆಲೆ ಏರಿಕೆಗೆ ಕಾರಣವಾಗಿದೆ. ಈವರೆಗೂ ಟಿಸಿಎಸ್ 8.1 ಬಿಲಿಯನ್ ಯುಎಸ್ ಡಾಲರ್ ಒಪ್ಪಂದವನ್ನು ಪಡೆದುಕೊಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 3.8ರಷ್ಟು ಏರಿಕೆಯಾಗಿದೆ. ಇನ್ನು ಕಂಪನಿಯ ಮ್ಯಾನೇಜ್‌ಮೆಂಟ್ ಕೂಡ ದೀರ್ಘಾವಧಿಯಲ್ಲಿ ಕಂಪನಿ ಬೆಳವಣಿಗೆ ಕಾಣುವ ವಿಶ್ವಾಸ ವ್ಯಕ್ತಪಡಿಸಿದ್ದು, ಸವಾಲಿನ ಸಣ್ಣ ಪುಟ್ಟ ಪರಿಸ್ಥಿತಿಗಳು ಕಡಿಮೆ ಆಗುತ್ತಿದ್ದಂತೆ ಕ್ಲೈಂಟ್ ಹೂಡಿಕೆಗಳು ಹೆಚ್ಚಾಗುವ ನಿರೀಕ್ಷೆ ಇದೆ.
ಇಂಧನ ವಿಭಾಗದ ಟ್ರೆಂಡ್‌ನ ಕಾರಣದಿಂದಾಗಿ ಇಂಧನ ವಿಭಾಗದ ಟ್ರೆಂಡ್‌ನ ಕಾರಣದಿಂದಾಗಿ ಟಾಟಾ ಪವರ್ ಕೂಡ 2024ರಲ್ಲಿ ಬೆಳವಣಿಗೆ ಕಂಡಿದೆ. ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ಕೂಡ ಸರ್ಕಾರ ಮರುಬಳಕೆಯ ಇಂಧನ ಕ್ಷೇತ್ರಗಳಲ್ಲಿ ದೊಡ್ಡ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿರುವುದರಿಂದ ಟಾಟಾ ಪವರ್ ಷೇರುಗಳು ಏರಿಕೆ ಕಂಡಿದೆ. 5500 ಮೆಗಾ ವ್ಯಾಟ್ ಎನರ್ಜಿ ಪೋರ್ಟ್‌ಫೋಲಿಯೋ ಹೊಂದಿರುವ ಟಾಟಾ ಪವರ್, ಸೋಲಾರ್, ವಿಂಡ್ ಹಾಗೂ ಹ್ರೈಡ್ರೋಪವರ್‌ಅನ್ನು ನಿಭಾಯಿಸಯತ್ತದೆ.
ಟಾಟಾ ಪವರ್ ಕೂಡ 2024ರಲ್ಲಿ ಬೆಳವಣಿಗೆ ಕಂಡಿದೆ. ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ಕೂಡ ಸರ್ಕಾರ ಮರುಬಳಕೆಯ ಇಂಧನ ಕ್ಷೇತ್ರಗಳಲ್ಲಿ ದೊಡ್ಡ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿರುವುದರಿಂದ ಟಾಟಾ ಪವರ್ ಷೇರುಗಳು ಏರಿಕೆ ಕಂಡಿದೆ. 5500 ಮೆಗಾ ವ್ಯಾಟ್ ಎನರ್ಜಿ ಪೋರ್ಟ್‌ಫೋಲಿಯೋ ಹೊಂದಿರುವ ಟಾಟಾ ಪವರ್, ಸೋಲಾರ್, ವಿಂಡ್ ಹಾಗೂ ಹ್ರೈಡ್ರೋಪವರ್‌ಅನ್ನು ನಿಭಾಯಿಸಯತ್ತದೆ. ಇದರ ಜೊತೆಗೆ ಸೆಮಿಕಂಡಕ್ಟರ್ ಉದ್ಯಮದಲ್ಲೂ ಟಾಟಾ ಬಂಡವಾಳ ಹೂಡುತ್ತಿದೆ.