20-20 ವಿಶ್ವಕಪ್ ಮುಗಿದಿದೆ. ಅದೃಷ್ಟ ಮತ್ತು ಆಟದ ಬಲದಿಂದ ಫೈನಲ್ ತಲುಪಿದ್ದ ಪಾಕಿಸ್ತಾನ ರನರ್ ಅಪ್ ಸ್ಥಾನಕ್ಕೇ ತೃಪ್ತಿ ಪಡಬೇಕಾಯಿತು. ಇಂಗ್ಲೆಂಡ್ ಗೆದ್ದು ಬೀಗಿತು. ಹಿರಿಯ ಆಟಗಾರರೆಲ್ಲ ಇಂಗ್ಲೆಂಡ್‍ಗೆ ಬಹುಪರಾಕ್ ಹೇಳಿದರು. ಸೋತ ಪಾಕಿಸ್ತಾನಕ್ಕೂ ವೆಲ್ ಪ್ಲೇಯ್ಡ್. ಚೆನ್ನಾಗಿ ಆಡಿದಿರಿ ಎಂಬ ಸಮಾಧಾನದ ಮಾತುಗಳಿದ್ದವು. ಭಾರತದಲ್ಲಿ ಇಂಗ್ಲೆಂಡ್ ಗೆದ್ದಿದ್ದಕ್ಕಿಂತ ಪಾಕಿಸ್ತಾನದ ಸೋಲನ್ನು ಸಂಭ್ರಮಮಿಸಿದವರೇ ಹೆಚ್ಚು. ಅದೆಲ್ಲದರ ಮಧ್ಯೆ ಟೀಂ ಇಂಡಿಯಾ ವೇಗದ ಬೌಲರ್ ಮಹಮ್ಮದ್ ಶಮಿ ಅವರ ಟ್ವೀಟ್ ಪಾಕಿಗಳನ್ನು ಕೆರಳಿಸಿದೆ.

ಪಾಕಿಸ್ತಾನ ಸೋತ ನಂತರ ಶಮಿ ಅವರು ಶೋಯೆಬ್ ಅಖ್ತರ್ ಅವರಿಗೆ ಸಾರಿ ಬ್ರದರ್, ಇಟ್ಸ್ ಕಾಲ್ ಕರ್ಮ ಎಂದು ಟ್ವೀಟ್ ಮಾಡಿದ್ದರು. ಒಬ್ಬ ಆಟಗಾರನಾಗಿ ಈ ರೀತಿ ಮಾಡುವುದು ಕ್ರೀಡಾ ಮನೋಭಾವಕ್ಕೆ ವಿರುದ್ಧ ಎಂದು ವಾದಿಸುವವರಿದ್ದಾರೆ. ಆದರೆ ಶೋಯೆಬ್ ಅಖ್ತರ್ ಹಾಗೂ ಇತ್ತೀಚೆಗೆ ಪಾಕ್ ಕ್ರಿಕೆಟ್ ಪ್ರೇಮಿಗಳು ಶಮಿಯನ್ನು ವಿನಾಕಾರಣ ವಿವಾದಕ್ಕೆ ಸಿಲುಕಿಸಿದ್ದು ಹಾಗೂ ವಿನಾಕಾರಣ ಶಮಿ ಉತ್ತರ ಕೊಡುವ ಪರಿಸ್ಥಿತಿ ಎದುರಾಗಿದ್ದನ್ನು ಖುದ್ದು ಶಮಿ ಮರೆತಿರಲಿಕ್ಕಿಲ್ಲ.

ಭಾರತ, ಪಾಕ್ ವಿರುದ್ದ ಗೆದ್ದಾಗ ಅಖ್ತರ್ ಬಿಸಿಸಿಐ ಫಿಕ್ಸ್ ಮಾಡಿದೆ ಎಂಬ ಅನುಮಾನ ಬರುವಂತೆಯೇ ಮಾತನಾಡಿದ್ದರು. ಈ ಸಾರಿ ಭಾರತವೇ ಕಪ್ ಗೆಲ್ಲುತ್ತೆ. ಬಿಸಿಸಿಐ ಗೆಲ್ಲಿಸಿಕೊಡುತ್ತೆ ಎಂದೆಲ್ಲ ಬಾಯಿಗೆ ಬಂದಂತೆ ಟೀಕಿಸಿದ್ದರು. ಶಮಿ ಮೇಲೆ ವಿನಾಕಾರಣ ಅನುಮಾನ ಬರುಂವಹ ಮಾತುಗಳು ಟೀಕೆಗಳು ಶಮಿಗೆ ಸಂಕಷ್ಟ ತಂದಿದ್ದವು. ಅಲ್ಲದೆ ಕಳೆದ ಬಾರಿ ವಿಶ್ವಕಪ್ ಸೋತಾಗ ಶಮಿ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ದಾಳಿಯಾಗಿತ್ತು. ಇದು ಕ್ರಿಕೆಟ್ ಪ್ರೇಮಿಗಳ ಆಕ್ರೋಶ, ಕೇವಲ ಶಮಿಯನ್ನು ಮುಸ್ಲಿಂ ಎಂಬ ಕಾರಣಕ್ಕೆ ಅಟ್ಯಾಕ್ ಮಾಡಲಾಗುತ್ತಿದೆ ಎಂಬ ಅರಿವಾಗಿದ್ದೇ ತಡ, ಖುದ್ದು ಸಚಿನ್ ಸೇರಿದಂತೆ ಹಿರಿಯ ಆಟಗಾರರೆಲ್ಲ ಶಮಿ ನೆರವಿಗೆ ಬಂದಿದ್ದರು. ಆದರೆ ನಂತರವಷ್ಟೇ ಅದು ಇಂಡಿಯಾದ್ದಲ್ಲ, ಪಾಕ್ ಕುತಂತ್ರಿಗಳ ಕೆಲಸ ಎಂದು ಗೊತ್ತಾಗಿತ್ತು. ಅದೆಲ್ಲ ನೋವನ್ನೂ ಶಮಿ ಈಗ ತೀರಿಸಿಕಕೊಂಡಿರುವಂತೆ ಕಾಣುತ್ತಿದೆ.

ಹಾಗಂತ ಶಮಿಯನ್ನು ಪಾಕಿಗಳು ಸುಮ್ಮನೇನೂ ಬಿಟ್ಟಿಲ್ಲ. ಶಮಿಯವರ ಧರ್ಮವನ್ನು ಹಾಗೂ ಇಡೀ ಕುಟುಂಬವನ್ನು ಎಳೆದು ತಂದಿದ್ದಾರೆ. ಸೊಂಟದ ಕೆಳಗಿನ ಭಾಷೆಯಲ್ಲಿ.. ಡ್ಯಾಷ್ ಡ್ಯಾಷ್ ಡ್ಯಾಷ್ ಭಾಷೆಯಲ್ಲಿ ಅಟ್ಯಾಕ್ ಮಾಡಿದ್ದಾರೆ. ಆದರೆ.. ಕರ್ಮ ಯಾರನ್ನೂ ಬಿಡುವುದಿಲ್ಲ.



