ಟೆನ್ನಿಸ್ ಲೋಕದ ಧ್ರುವತಾರೆ ಸಾನಿಯಾ ಮಿರ್ಜಾ ದಾಂಪತ್ಯದಲ್ಲಿ ಬಿರುಗಾಳೆಯೆದ್ದಿರುವುದು ಎಲ್ಲರಿಗೂ ಗೊತ್ತಿರೋ ಸತ್ಯ. 12 ವರ್ಷಗಳ ಹಿಂದೆ ಕೋಟಿ ಕೋಟಿ ಭಾರತೀಯರಿಗೆ ಶಾಕ್ ಕೊಟ್ಟು ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲಿಕ್‍ರನ್ನು ವರಿಸಿದ್ದರು ಸಾನಿಯಾ ಮಿರ್ಜಾ. ಎಂಗೇಜ್‍ಂಟ್ ಆಗಿದ್ದ ಬಾಲ್ಯದ ಗೆಳೆಯನ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು. ಅದಾದ ಮೇಲೂ ಭಾರತದ ಪರವೇ ಟೆನ್ನಿಸ್ ಆಡುತ್ತಿದ್ದ ಸಾನಿಯಾ, ಪಾಕಿಸ್ತಾನಕ್ಕೆ ಹೋಗಿದ್ದು ಅಷ್ಟಕ್ಕಷ್ಟೆ. ದುಬೈನಲ್ಲಿಯೇ ಸಂಸಾರ ನಡೆಸಿದ ಸಾನಿಯಾ ಮಿರ್ಜಾಗೆ ಇತ್ತೀಚೆಗೆ ಗಂಡು ಮಗುವಾಗಿತ್ತು. ಬೆನ್ನಲ್ಲೇ ದಾಂಪತ್ಯ ಕಲಹವೂ ಹೊರಬಿದ್ದಿತ್ತು.

ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಭಗ್ನಗೊಂಡ ಹೃದಯಗಳು ಎಲ್ಲಿಗೆ ಹೋಗುತ್ತವೆ. ಅಲ್ಲಾನ ಹುಡುಕಲು ಹೋಗುತ್ತವೆ.. ಎಂದು ಪೋಸ್ಟ್ ಹಾಕಿದ್ದರು ಸಾನಿಯಾ. ಅದಕ್ಕೂ ಮುನ್ನ ತಮ್ಮ ಮಗ ಇಜಾಂ ಮಲಿಕ್ ಜೊತೆ ಒಂದು ಫೋಟೋ ಹಾಕಿದ್ದ ಸಾನಿಯಾ ಕಡುಕಷ್ಟದ ದಿನಗಳಿಂದ ಹೊರಬರಲು ಸಹಾಯ ಮಾಡಿದ ಕ್ಷಣ ಎಂಬ ಪೋಸ್ಟ್ ಹಾಕಿದ್ದರು. ಅದಾದ ನಂತರ ಈ ಪೋಸ್ಟ್ ಹೊರಬಿದ್ದು, ಮದುವೆ ಮುರಿದುಬಿತ್ತಾ ಎಂಬ ಅನುಮಾನ ಮೂಡಿತ್ತು.
ಅತ್ತ ಶೋಯೆಬ್ ಮಲಿಕ್ ಕೂಡಾ ಅಷ್ಟೆ. ಮಗನ ಫೋಟೋದೊಂದಿಗೆ ನೀನು ಹುಟ್ಟಿದ ಮೇಲೆ ನಾವು ಇನ್ನಷ್ಟು ತಾಳ್ಮೆ ಪಡೆದುಕೊಂಡೆವು. ವಿನೀತರಾದೆವು. ನಿನ್ನ ಆಗಮನವೇ ವಿಶೇಷ ದಿನ. ನಾವಿಬ್ಬರೂ ಜೊತೆಗಿಲ್ಲದಿರಬಹುದು. ದಿನವೂ ಭೇಟಿಯಾಗದೆ ಇರಬಹುದು. ಆದರೆ ನಿನ್ನ ಅಪ್ಪನ ಹೃದಯ ನಿನ್ನ ನಗುವಿಗಾಗಿ ಸದಾ ಹಾರೈಸುತ್ತದೆ ಎಂದು ಬರೆದುಕೊಂಡಿದ್ದರು. ಆ ಮೂಲಕ ತಾವಿಬ್ಬರೂ ಜೊತೆಗಿಲ್ಲ ಎಂದು ಸ್ಪಷ್ಟವಾಗಿ ಸಾರಿದ್ದರು.
ಈ ಮಧ್ಯೆ ಇವರಿಬ್ಬರ ಮಧ್ಯೆ ಪಾಕಿಸ್ತಾನದ ಮಾಡೆಲ್ ಆಯೇಷಾ ಒಮರ್ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಟಿವಿ ಚಾನೆಲ್ಲೊಂದಕ್ಕಾಗಿ ಶೋಯೆಬ್ ಮಲಿಕ್ ಮತ್ತು ಆಯೇಷಾ ಒಮರ್ ಅವರ ಹಾಟ್ ಹಾಟ್ ಫೋಟೋಶೂಟ್ ನಡೆದಿತ್ತು. ಅದಾದ ನಂತರ ಪಾಕ್ ಟಿವಿ ಚಾನೆಲ್ ಆಂಕರ್‍ವೊಬ್ಬರು ಈ ಫೊಟೋ ಶೂಟ್ ನೋಡಿದರೆ ನಿಮ್ಮ ಪತ್ನಿ ಸಾನಿಯಾ ಯಾವ ರಿಯಾಕ್ಷನ್ ಕೊಡಬಹುದು ಎಂದು ಪ್ರಶ್ನಿಸಿದ್ದರು. ಆ ಪ್ರಶ್ನೆಗೆ ಉತ್ತರವನ್ನೇ ಕೊಡದೆ ಶೋಯೆಬ್ ನುಣುಚಿಕೊಂಡಿದ್ದರು. ಆದರೆ ಅದಕ್ಕೂ ಮುನ್ನವೇ ಸಾನಿಯಾ ಶೋಯೆಬ್‍ರಿಂದ ದೂರವಿರೋಕೆ ಆರಂಭಿಸಿದ್ದರು ಎಂದು ಮೂಲಗಳು ಹೇಳಿವೆ. ಆಂಕರ್ ಪ್ರಶ್ನೆಗೆ ಶೋಯೆಬ್ ಉತ್ತರ ಕೊಡದಿರುವ ಕಾರಣ ಇಟ್ಟುಕೊಂಡು ಪಾಕಿಸ್ತಾನದ ಮೀಡಿಯಾಗಳು ಆಯೆಷಾ ಒವರ್ ಅವರೇ ಈ ದಾಂಪತ್ಯ ಬಿರುಕಿಗೆ ಕಾರಣ ಎಂದು ವರದಿ ಮಾಡುತ್ತಿವೆ.

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಇಬ್ಬರಿಗೂ ಆಪ್ತರಾಗಿರುವ ಫ್ರೆಂಡ್ ಒಬ್ಬರು ಅವರು ಡೈವೋರ್ಸ್ ತೆಗೆದುಕೊಂಡು ಆಗಿದೆ. ಅದಕ್ಕಿಂತ ಹೆಚ್ಚು ಏನನ್ನೂ ಹೇಳೋಕೆ ಸಾಧ್ಯವಿಲ್ಲ ಎಂದು ಇಂಗ್ಲಿಷ್ ಪತ್ರಿಕೆಯೊಂದಕ್ಕೆ ಹೇಳಿದ್ದಾರಂತೆ.
ಆಯೇಷಾ ಒಮರ್ ಪಾಕಿಸ್ತಾನದ ನಟಿ ಹಾಗೂ ಮಾಡೆಲ್. ವಯಸ್ಸು 41. ಈಕೆಯೊಂದಿಗೆ ಅಫೇರ್ ಇದೆ ಎಂದುಕೊಂಡಿರುವ ಶೋಯೆಬ್ ಮಲಿಕ್‍ಗೆ 40 ವರ್ಷ. ಶೋಯೆಬ್‍ಗಿಂತ ಒಂದು ವರ್ಷ ದೊಡ್ಡವಳು ಆಯೆಷಾ. ಸಾನಿಯಾ ಮಿರ್ಜಾಗೆ 35 ವರ್ಷ. ಶೋಯೆಬ್‍ಗಿಂತ 5 ವರ್ಷ ಚಿಕ್ಕವಳು. ಆದರೆ.. ಸಂಸಾರದಲ್ಲಿ ಬಿರುಗಾಳಿಯಂತೂ ಎದ್ದಿದೆ.



