ಪಾಕಿಸ್ತಾನ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸುತ್ತಿದ್ದಂತೆಯೇ ಸಂಭ್ರಮವೂ ಜೋರಾಗಿತ್ತು. ಭಾರತೀಯ ಕ್ರಿಕೆಟರ್ಸ್ ರಣರೋಚಕ ಪಂದ್ಯದಲ್ಲಿ ಗೆಲುವಿನ ಸ್ವಾತಿ ಮುತ್ತಿಗೆ ಪಪ್ಪಿ ಕೊಟ್ಟರು. ಗೆಲುವೊಂದನ್ನು ವಿರಾಟ್ ಈ ರೀತಿ ಸಂಭ್ರಮಿಸಿಯೂ ತುಂಬಾ ದಿನಗಳಾಗಿತ್ತು. ಗೆಲುವು ಬೇರೆ. ಪಾಕಿಸ್ತಾನ ವಿರುದ್ಧದ ಗೆಲುವು ಬೇರೆ. ಅದರಲ್ಲೂ ಕಳೆದ ವಿಶ್ವಕಪ್ ಪಂದ್ಯದಲ್ಲಿ ಸೋತ ನಂತರ ಹೊರಗೆ ಅದೆಷ್ಟೇ ಸ್ಪೋರ್ಟಿವ್ ಆಗಿದ್ದರೂ ಒಳಗಿನ ಕುದಿಯಂತೂ ಹಾಗೆಯೇ ಇತ್ತು. ನಾಯಕ ರೋಹಿತ್ ಶರ್ಮಾ ಅವರಂತೂ ಕೊಹ್ಲಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು. ವಿರಾಟ್ ಮತ್ತು ಕೊಹ್ಲಿ ಮಧ್ಯೆ ಏನೇನೋ ಇದೆ ಎಂದು ನಂಬದೇ ಇರುವವರು ಅದರಲ್ಲೂ ಹುಳುಕು ಹುಡುಕಬಹುದು. ಯಾಕೆಂದರೆ ಮ್ಯಾಚ್ ಅಷ್ಟೊಂದು ಟೆನ್ಷನ್‍ಗೆ ಹತ್ತಿದ್ದಕ್ಕೆ ರೋಹಿತ್ ಶರ್ಮಾ ವೈಫಲ್ಯವೂ ಕಾರಣ. ರೋಹಿತ್ ಕೇವಲ 4 ರನ್ ಗಳಿಸಿ ಔಟ್ ಆಗಿದ್ದರು. ಕೊಹ್ಲಿ ಜೊತೆ ಅಕ್ಷರ್ ಪಟೇಲ್ ಜೊತೆಗೂಡಿದರೂ ಕಣ್ಣು ಬಿಟ್ಟು ನೋಡುವಷ್ಟರಲ್ಲಿ ವಿಕೆಟ್ ಢಮಾರ್. ಆಗ ಪಂದ್ಯವನ್ನು ನಿಧಾನವಾಗಿ ಕೈಗೆ ತೆಗೆದುಕೊಂಡು ಗೆಲುವಿನತ್ತ ಕೊಂಡೊಯ್ದ ಕೊಹ್ಲಿ ಬಗ್ಗೆ ಯಾವುದೇ ಕ್ಯಾಪ್ಟನ್ ಆದರೂ ಇದೇ ರೀತಿ ಮಾಡುತ್ತಾರೆ. ಈ ಹಿಂದೆ ಕೊಹ್ಲಿ ವಿಫಲರಾಗಿದ್ದ ಪಂದ್ಯವೊಂದರಲ್ಲಿ ರೋಹಿತ್ ಆಡಿ ಗೆಲ್ಲಿಸಿದ್ದರು. ಆಗ ಕ್ಯಾಪ್ಟನ್ ಆಗಿದ್ದ ಕೊಹ್ಲಿ ಸಂಭ್ರಮವೂ ಇದೇ ರೀತಿ ಇತ್ತು.
ಆದರೆ ಕೊಹ್ಲಿಗೆ ಹೀಗೆ ಹೆಗಲ ಮೇಲೆ ಹೊತ್ತುಕೊಂಡ ಮೊದಲ ಆಟಗಾರ ರೋಹಿತ್ ಅಲ್ಲ. ಈ ಹಿಂದೆ ಕೊಹ್ಲಿಗಿಂತ ಸೀನಿಯರ್ ಆಟಗಾರರು ಕೊಹ್ಲಿಯನ್ನು ಹೆಗಲ ಮೇಲೆ ಎತ್ತಿ ಮೆರೆದಿದ್ದಾರೆ. ಇಬ್ಬರೂ ದಿಗ್ಗಜರೇ ಎನ್ನುವುದು ವಿಶೇಷ. ಒಬ್ಬರು ಯುವರಾಜ್ ಸಿಂಗ್ ಮತ್ತೊಬ್ಬರು ಹರ್ಭಜನ್ ಸಿಂಗ್.




ಮತ್ತೊಂದು ಪಂದ್ಯ 2016ರಲ್ಲಿ ನಡೆದ ಪಂದ್ಯದ್ದು. ಆ ಪಂದ್ಯದಲ್ಲಿ ಕೊಹ್ಲಿ ಆಸ್ಟ್ರೇಲಿಯಾ ಅಜೇಯ 82 ರನ್ ಸಿಡಿಸಿದ್ದರು.
ಇನ್ನೂ ಇನ್ನೂ ಇಂತಹ ಪಂದ್ಯಗಳು ಗೆಲ್ಲುತ್ತಿರಲಿ.ವಿಶ್ವಕಪ್‍ನ್ನೇ ಹೊತ್ತು ಬರಲಿ.



