20-20 ವಿಶ್ವಕಪ್ ಸೋಲು ಹಾಗೂ ಏಷ್ಯಾ ಕಪ್ ಸೋಲುಗಳ ಬಳಿಕೆ ಟೀಂ ಇಂಡಿಯಾವನ್ನು ಹೊಸದಾಗಿ ಕಟ್ಟುವ ಪ್ರಯತ್ನ ಶುರುವಾಗಿದೆ. ಅದರ ಮೊದಲ ಹಂತವಾಗಿಚೇತನ್ ಶರ್ಮಾ ನೇತೃತ್ವದ ನಾಲ್ವರು ಸದಸ್ಯರ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾಗೊಳಿಸಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ, ಚೇತನ್(ಉತ್ತರ ವಲಯ), ಹರ್ವಿಂದರ್ ಸಿಂಗ್ (ಕೇಂದ್ರ ವಲಯ), ಸುನಿಲ್ ಜೋಶಿ (ದಕ್ಷಿಣ ವಲಯ) ಮತ್ತು ದೇಬಶಿಶ್ ಮೊಹಂತಿ(ಪೂರ್ವ ವಲಯ) ಅವರನ್ನು ಹಿರಿಯ ರಾಷ್ಟ್ರೀಯ ಆಯ್ಕೆ ಸಮತಿಯಿಂದ ವಜಾಗೊಳಿಸಲಾಗಿದೆ. ಇವರಲ್ಲಿ ಕೆಲವರನ್ನು 2020ರಲ್ಲಿ ಮತ್ತು ಕೆಲವರನ್ನು 2021ರಲ್ಲಿ ನೇಮಕ ಮಾಡಲಾಗಿತ್ತು.
ಆದರೆ ಫ್ಯಾನ್ಸ್ ಅದರಲ್ಲೂ ವಿರಾಟ್ ಕೊಹ್ಲಿ ಫ್ಯಾನ್ಸ್ ಚೇತನ್ ಶರ್ಮಾರನ್ನು ಟ್ರೋಲ್ ಮಾಡಿ ಬಿಸಾಕುತ್ತಿದ್ದಾರೆ. ಅದಕ್ಕೆ ಕಾರಣ ನವೆಂಬರ್ 18. ಯೆಸ್, ನವೆಂಬರ್ 18, 2021ರಂದು ವಿರಾಟ್ರನ್ನು ಒನ್ ಡೇ ಕ್ಯಾಪ್ಟನ್ಸಿಯಿಂದ ಕೈಬಿಡಲಾಗಿತ್ತು. ನವೆಂಬರ್ 18, 2022ರಂದು ವಿರಾಟ್ಗೆ ಗೇಟ್ ಪಾಸ್ ಕೊಟ್ಟಿದ್ದ ಚೇತನ್ ಶರ್ಮಾರನ್ನು ಆಯ್ಕೆ ಸಮಿತಿಯಿಂದಲೇ ತೆಗೆದು ಹಾಕಲಾಗಿದೆ.
ಮೊದಲು ಗಂಗೂಲಿ ಈಗ ಚೇತನ್ ಶರ್ಮಾ ಇಬ್ಬರೂ ಹೋದರು. ವಿರಾಟ್ ಕೊಹ್ಲಿಗೆ ಕೆಟ್ಟದು ಮಾಡಲು ಟ್ರೈ ಮಾಡಿದರೆ ಯಾರೂ ಉಳಿಯಲ್ಲ .
ಸೌರವ್ ಬಿಸಿಸಿಐನಿಂದ ಹೊರಗೆ..ಚೇತನ್ ಶರ್ಮಾ ಆಯ್ಕೆ ಸಮಿತಿಯಿಂದ ಹೊರಕ್ಕೆ. ರೋಹಿತ್ ಶರ್ಮಾ 20-20 ಟೀಂನಿಂದಲೇ ಹೊರಕ್ಕೆ.
ಹೀಗೆ ಕೊಹ್ಲಿ ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ. ಕರ್ಮ ರಿಟರ್ನ್. ಪಾಪಕ್ಕೆ ಪ್ರಾಯಶ್ಚಿತ್ತ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು.. ಹೀಗೆ ಲೇವಡಿ ಮೇಲೆ ಲೇವಡಿ ಮಾಡುತ್ತಿದ್ದಾರೆ.
ಇದರ ನಡುವೆಯೇ ಹೊಸ ಕೋಚ್ ಹಾಗೂ ಅಯ್ಕೆ ಸಮಿತಿ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಬಿಸಿಸಿಐ ಹಿರಿಯರ ತಂಡದ ಆಯ್ಕೆ ಸಮಿತಿಗೆ ಸದಸ್ಯ ಹಾಗೂ ಮುಖ್ಯಸ್ಥ ಸ್ಥಾನಕ್ಕೆ ಅರ್ಜಿ ಹಾಕುವ ಅಭ್ಯರ್ಥಿಗಳು ಕನಿಷ್ಠ 7 ಟೆಸ್ಟ್ ಪಂದ್ಯ ಮತ್ತು 30 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯ ಅಥವಾ 10 ಏಕದಿನ ಹಾಗೂ 20 ಪ್ರಥಮ ದರ್ಜೆ ಪಂದ್ಯ ಆಡಿರಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ.
ಅರ್ಜಿ ಹಾಕುವ ಅಭ್ಯರ್ಥಿಗಳು ಕ್ರಿಕೆಟ್ನಿಂದ ನಿವೃತ್ತಿ ಹೊಂದಿ ಕನಿಷ್ಠ 5 ವರ್ಷಗಳಾಗಿರಬೇಕು. ಕ್ರಿಕೆಟ್ನ ಯಾವುದೇ ಕಮಿಟಿಯಲ್ಲಿ ಸ್ಥಾನ ಹೊಂದಿರಬಾರದು ಎಂದು ಬಿಸಿಸಿಐ ಹೇಳಿದೆ. ವಯಸ್ಸು 60 ವರ್ಷ ಮೀರಿರಬಾರದು. ಅರ್ಜಿ ಸಲ್ಲಿಸಲು ನವೆಂಬರ್ 28 ಕೊನೆಯ ದಿನವಾಗಿದೆ.



