Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Sports

ಕ್ರಿಕೆಟ್‍ನಲ್ಲಿ ಮೀಸಲಾತಿ : ಚೇತನ್ ಅಲ್ಲ.. ಬೆಂಕಿಯ ಮೂಲ ಆಸ್ಟ್ರೇಲಿಯನ್ ಪತ್ರಿಕೆ..

SpeciallU by SpeciallU
December 5, 2022
in Sports
Reading Time: 1 min read
0 0
0
ಕ್ರಿಕೆಟ್‍ನಲ್ಲಿ ಮೀಸಲಾತಿ : ಚೇತನ್ ಅಲ್ಲ.. ಬೆಂಕಿಯ ಮೂಲ ಆಸ್ಟ್ರೇಲಿಯನ್ ಪತ್ರಿಕೆ..

Related posts

ಗೌತಮ್‌ ಗಂಭೀರ್‌ ಅವಧಿಯಲ್ಲಿ ವಿಚಿತ್ರ ದಾಖಲೆಗಳ ಸುರಿಮಳೆ..!

ರೋಹಿತ್-ಕೊಹ್ಲಿಗೆ ವಿಲನ್‌ ಆಗುತ್ತಿರುವ ಗಂಭೀರ್..!‌

ಕ್ರಿಕೆಟ್‍ನಲ್ಲೂ ಮೀಸಲಾತಿ ಇರಬೇಕು. ಎಸ್‍ಸಿ/ಎಸ್‍ಟಿ ಆಟಗಾರರು ಇಷ್ಟು ಜನ ಇರಬೇಕು.
ಭಾರತೀಯ ಕ್ರಿಕೆಟ್ ತಂಡದಲ್ಲಿ ಶೇಕಡಾ 70 ರಷ್ಟು ಮೇಲ್ಜಾತಿಯವರೇ ತುಂಬಿಕೊಂಡಿದ್ದಾರೆ. ಮೇಲ್ಜಾತಿಯವರಿಗೆ ಅವಕಾಶಗಳು ಸಿಗುತ್ತಿದೆ. ಹೀಗಾಗಿ ಕ್ರಿಕೆಟ್ನಲ್ಲಿ ಮೀಸಲಾತಿ ಜಾರಿಯಾಗಬೇಕು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಕರಿಯರಿಗೆ ಮೀಸಲಾತಿ ನೀಡಲಾಗಿದೆ. 2016ರಿಂದ 6 ಮಂದಿ ಕರಿಯರಿಗೆ ಅವಕಾಶ ನೀಲಾಗುತ್ತದೆ. ಇದೇ ರೀತಿ ಭಾರತದಲ್ಲಿ ಎಸ್ಸಿ ಎಸ್ಟಿ ಸಮುದಾಯಕ್ಕೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಮೀಸಲಾತಿ ನೀಡಬೇಕು. ಇದರಿಂದ ಮತ್ತಷ್ಟು ಬಲಿಷ್ಠ ತಂಡ ಕಟ್ಟಲು ಸಾಧ್ಯವಿದೆ. ಭಾರತೀಯ ಕ್ರಿಕೆಟ್ ಶ್ರೀಮಂತವಾಗಿದೆ. ಮೀಸಲಾತಿಯನ್ನು ಜಾರಿಗೊಳಿಸಿದರೆ ಭಾರತೀಯ ಕ್ರಿಕೆಟ್ ವೈಶಾಲ್ಯತೆ ಶ್ರೀಮಂತವಾಗುತ್ತದೆ. ಆ ದಿನಗಳು ಖ್ಯಾತಿಯ ನಟ ಚೇತನ್ ಮಾತು ವಿವಾದದ ಕಿಡಿಯನ್ನೇ ಹೊತ್ತಿಸಿವೆ. ಸೋಷಿಯಲ್ ಮೀಡಿಯಾದಲ್ಲಂತೂ ಚೇತನ್ ಅವರನ್ನು ಹಿಗ್ಗಾಮುಗ್ಗಾ ಜಾಡಿಸಲಾಗುತ್ತಿದೆ. ಆದರೆ ಈ ಕ್ರಿಕೆಟ್‍ನಲ್ಲಿಯೂ ಮೀಸಲಾತಿ ಬೇಕು ಎಂಬ ವಿವಾದದ ಸೃಷ್ಟಿಕರ್ತ ಚೇತನ್ ಅಲ್ಲ. ಆತ ಕೇವಲ ಟೂಲ್ ಇರಬಹುದಾ ಎಂಬ ಪ್ರಶ್ನೆ ಮೂಡದೇ ಇರದು.
ಏಕೆಂದರೆ ಕ್ರಿಕೆಟ್‍ನಲ್ಲಿ ಮೀಸಲಾತಿ ವಿವಾದವನ್ನು ಇತ್ತೀಚೆಗೆ ಹುಟ್ಟುಹಾಕಿದ್ದು ಆಸ್ಟ್ರೇಲಿಯನ್ ಪತ್ರಿಕೆ. ಆರಂಭವಾಗಿದ್ದು 2018ರಲ್ಲಿ. ಆಸ್ಟ್ರೇಲಿಯದ ಪೊಲಿಟಿಕಲ್ & ಎಕನಾಮಿಕ್ ವೀಕ್ಲಿಯಲ್ಲಿ. ಅಂಕಣಕಾರನೊಬ್ಬ ಭಾರತದಲ್ಲಿ ಹಿಂದೂಗಳಲ್ಲಿ ದಲಿತರಿಗೆ ಅವಕಾಶಗಳೇ ಸಿಗುತ್ತಿಲ್ಲ ಎಂದು ಬೊಂಬ್ಡಾ ಹೊಡೆದಿದ್ದ. ಅದಾದ ಮೇಲೆ ತಮಿಳುನಾಡಿನ ಕೆಲವು ವೆಬ್ ಸೈಟ್‍ಗಳು ಭಾರತ ತಂಡದ ಪರ ಆಡಿದ್ದ 300ಕ್ಕೂ ಹೆಚ್ಚು ಆಟಗಾರರ ಜಾತಿ ಯಾವುದು.. ಧರ್ಮ ಯಾವುದು… ಎಂದು ಹುಡುಕಾಡಿದ್ದವು.
ಆ ವಿವಾದಕ್ಕೆ ಮತ್ತೆ ಬೆಂಕಿ ಸುರಿದದ್ದು ದಿ ಪ್ರಿಂಟ್ ವೆಬ್ ಸೈಟ್‍ನ ಕಾಲಮಿಸ್ಟ್ ದಿಲೀಪ್ ಮಂಡಲ್. ಇತ್ತೀಚೆಗೆ ಕ್ಯಾಸ್ಟಿಯೆಸ್ಟ್ ಬಿಸಿಸಿಐ, ಬ್ರಾಹ್ಮಿಣಿಸಂ ಬಿಸಿಸಿಐ, ಬ್ರಾಹ್ಮಣ್ ಕ್ರಿಕೆಟ್.. ಎಂಬ ಹ್ಯಾಷ್ ಟ್ಯಾಗ್‍ಗಳು ಇದ್ದಕ್ಕಿದ್ದಂತೆ ಟ್ರೆಂಡ್ ಆಗಿದ್ದವು. ಅದಕ್ಕೆ ಕಾರಣ ಈ ದಿಲೀಪ್ ಮಂಡಲ್ ಎಂಬ ಅಂಕಣಕಾರ.
ನವೆಂಬರ್ 24ರಂದು ಈತ ಟ್ವೀಟ್ ಮಾಡಿದ್ದ. ಬಾಂಗ್ಲಾದೇಶ ಪ್ರವಾಸಕ್ಕೆ ಸೂರ್ಯ ಕುಮಾರ್ ಯಾದವ್‍ಗೆ ರೆಸ್ಟ್ ಕೊಟ್ಟು, ಸಂಜು ಸ್ಯಾಮ್ಸನ್‍ರನ್ನು ಕೈಬಿಟ್ಟಾಗ ಈ ವಾದ ಹರಿಬಿಟ್ಟಿದ್ದ.
ಆತನ ವಾದ ಹೀಗಿತ್ತು. ತಂಡದ ಕೋಚ್ ರಾಹುಲ್ ದ್ರಾವಿಡ್ ಬ್ರಾಹ್ಮಣ. ನಾಯಕ ರೋಹಿತ್ ಶರ್ಮಾ ಬ್ರಾಹ್ಮಣ. ಆಡುತ್ತಿರುವವ 11 ಆಟಗಾರರ ಪೈಕಿ 7 ಮಂದಿ ಬ್ರಾಹ್ಮಣರು, ಮೇಲ್ಜಾತಿಯವರು. ಮಂಡಲ್ ಅವರು ಭಾರತೀಯ ಕ್ರಿಕೆಟ್ನಲ್ಲಿ ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯವನ್ನು ಮಾಡಲಾಗುತ್ತಿದೆ ಎಂದಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಅವರು ಪೋಸ್ಟ್ ಒಂದನ್ನು ಕೂಡ ಶೇರ್ ಮಾಡಿದ್ದು, ಅದರ ಪ್ರಕಾರ ಭಾರತ ಪರ ಟೆಸ್ಟ್ ಆಡಿರುವ 302 ಕ್ರಿಕೆಟಿಗರ ಪೈಕಿ ಶೇ.5ರಷ್ಟು ಮಾತ್ರ ಮುಸ್ಲಿಮರು. ಅದೇ ಸಮಯದಲ್ಲಿ, ಪರಿಶಿಷ್ಟ ಜಾತಿಗಳಿಗೆ ಕೇವಲ 8% ಪ್ರಾತಿನಿಧ್ಯ ಸಿಕ್ಕಿದೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಸುಮಾರು 15% ಮತ್ತು ಪರಿಶಿಷ್ಟ ಜಾತಿ ಜಾತಿಗಳ ಪಾಲು 25%. ಎಂಬ ವಾದ ಮಂಡಿಸಿದ್ದ.
ಇದೆಲ್ಲದರ ಪರಿಣಾಮ ಭಾರತೀಯ ಕ್ರಿಕೆಟ್ ಪ್ರೇಮಿಗಳು ಇಷ್ಟಪಡುವ ಕಪಿಲ್ ದೇವ್, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಗಂಗೂಲಿ, ಧೋನಿ, ಸೆಹ್ವಾಗ್, ವಿರಾಟ್ ಕೊಹ್ಲಿ.. ಎಲ್ಲರ ಜಾತಿಯನ್ನೂ ಹುಡುಕುವ ಪ್ರಯತ್ನವೂ ನಡೆದು ಹೋಯ್ತು. ಗೊತ್ತೇ ಇಲ್ಲದಿದ್ದ ಜಾತಿಯೂ ಗೊತ್ತಾಗಿ ಹೋಯ್ತು.
ಅಂದಹಾಗೆ ಒಂದಂತೂ ಸ್ಪಷ್ಟ. ಸಚಿನ್ ತೆಂಡೂಲ್ಕರ್ ಆಟದಿಂದ ಅಭಿಮಾನಿಗಳ ಸೈನ್ಯ ಕಟ್ಟಿಕೊಂಡವನೇ ಹೊರತು, ಜಾತಿಯಿಂದಲ್ಲ. ಧೋನಿಯ ಜಾತಿ ಯಾವನಿಗೆ ಬೇಕು, ಆತನ ಟೆಕ್ನಿಕ್ಕುಗಳೇ ತಂಡವನ್ನು ಗೆಲ್ಲಿಸುತ್ತಿರುವಾಗ.. ಬೂಮ್ರಾ ಇವತ್ತಿಗೆ ಜಗತ್ತಿನ ಶ್ರೇಷ್ಟ ವೇಗಿಯೇ ಇರಬಹುದು, ಭಾರತೀಯ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಜಹೀರ್ ಖಾನ್ ಮೂಡಿಸಿರೋ ಸ್ಥಾನವೇ ಬೇರೆ. ಬೆಟ್ಟಿಂಗ್, ಫಿಕ್ಸಿಂಗ್ ದ್ರೋಹವೊಂದು ಮಾಡದೇ ಇದ್ದರೆ ಅಜರುದ್ದೀನ್ ಇವತ್ತಿಗೂ ದಿಗ್ಗಜರ ಲಿಸ್ಟಿನಲ್ಲಿರುತ್ತಿದ್ದ. ಈಗ ಆಡುತ್ತಿರುವ ಕೊಹ್ಲಿ, ರೋಹಿತ್, ರಾಹುಲ್ ಜಾತಿ ಕಟ್ಟಿಕೊಂಡು ಯಾರಿಗೆ ಏನಾಗಬೇಕು..? ಅಭಿಮಾನಿಗಳು ಹೇಗಿರುತ್ತಾರೆ ಗೊತ್ತೇ.. ಚೆನ್ನಾಗಿ ಆಡದೇ ಇದ್ದಾಗ ತಮ್ಮ ಮೆಚ್ಚಿನ ಆಟಗಾರನನ್ನೂ ಕ್ಷಮಿಸುವುದಿಲ್ಲ. ಅಂಥಾದ್ದರಲ್ಲಿ ಜಾತಿ ನೋಡಿ ಆಟಗಾರರ ಆಯ್ಕೆ ನಡೆಯುತ್ತದೆ ಎಂದರೆ ಹೇಗೆ? ಇತ್ತೀಚೆಗೆ ಕ್ರಿಕೆಟ್‍ನ್ನು ಬ್ರಾಹ್ಮಣರೇ ಆಡುತ್ತಿರುವುದಕ್ಕೆ ಕಾರಣ ಅದು ಫುಟ್‍ಬಾಲ್‍ನಂತೆ ಒಬ್ಬರನ್ನೊಬ್ಬರು ಮುಟ್ಟಿಕೊಂಡು ಆಡುವ ಆಟವಲ್ಲ ಎಂದು ಪ್ರಕಾಂಡ ಪಂಡಿತನೊಬ್ಬ ವಾದ ಮಂಡಿಸಿದ್ದ. ಬಹುಶಃ ಆತನಿಗೆ ಮೊದನನೆಯದಾಗಿ ಕ್ರಿಕೆಟ್ ಗೊತ್ತಿಲ್ಲ. ಎರಡನೆಯದಾಗಿ ಜಾತಿಯೂ ಗೊತ್ತಿಲ್ಲ. ಮೂರನೆಯದಾಗಿ.. ಮೆದುಳಿನ ಸಮಸ್ಯೆ ಇರಬಹುದು.
ಇಂತಹವುಗಳನ್ನೆಲ್ಲ ನೋಡಿದಾಗ ಅಹಿಂಸಾ ಚೇತನ್ ಎಂಬ ನಟ ಮೊದಲು ತನ್ನ ಹೆಸರಿನ ಹಿಂದಿರುವ ಆಹಿಂಸಾದಲ್ಲಿರುವ ಅ ತೆಗೆಯಬೇಕು. ಏಕೆಂದರೆ ಆತನ ತಲೆಬುಡವಿಲ್ಲದ ಹೇಳಿಕೆಗಳು ಹಿಂಸೆಯನ್ನೇ ಹುಟ್ಟುಹಾಕುತ್ತಿವೆ.

Tags: #Chethan #Castiest-BCCI #Ahimsachethan #BCCI #Cricketreservation#ಚೇತನ್ #ಅಹಿಂಸಾಚೇತನ್ #ಕ್ರಿಕೆಟ್ #ಮೀಸಲಾತಿ #ರಿಸರ್ವೇಷನ್ #ಸಚಿನ್ #ಕೊಹ್ಲಿ #ರೋಹಿತ್ #ದ್ರಾವಿಡ್
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.