ವಿಶ್ವಕಪ್ ಶುರುವಾದ ದಿನದಿಂದಲೂ ಭಾರತಕ್ಕೆ ಗಾಯಾಳುಗಳ ಸಮಸ್ಯೆ ಜೋರಾಗಿ ಕಾಡುತ್ತಿದೆ. ವಿಶ್ವಕಪ್‍ಗೆ ಅಭ್ಯಾಸ ಶುರುವಾಗುವ ಹೊತ್ತಿನಲ್ಲಿ ಕೆ.ಎಲ್. ರಾಹುಲ್ ಗಾಯಾಳುವಾದರು. ವಿಶ್ವಕಪ್ ಹೊತ್ತಿಗೆ ಗುಣಮುಖರಾಗಿ ಬಂದರೂ ಸರಿಯಾದ ಪ್ರಾಕ್ಟೀಸ್ ಇಲ್ಲದ ಕೊರತೆ ವಿಶ್ವಕಪ್‍ನಲ್ಲಿ ಕಾಡುತ್ತಿದೆ. ಬೌಲಿಂಗ್‍ನಲ್ಲಿ ಭಾರತದ ಟ್ರಂಪ್ ಕಾರ್ಡ್ ಎನಿಸಿದ್ದ ಜಸ್‍ಪ್ರೀತ್ ಬೂಮ್ರಾ ಮತ್ತು ಆಲ್‍ರೌಂಡರ್ ರವೀಂದ್ರ ಜಡೇಜಾ ಇಬ್ಬರೂ ಗಾಯಾಳುವಾಗಿ ವಿಶ್ವಕಪ್ ತಪ್ಪಿಸಿಕೊಂಡರು. ನಂತರ ಭಾರತದ ಪರ ಅದ್ಭುತ ಬೌಲಿಂಗ್ ಮಾಡಬಹುದು ಎಂದುಕೊಂಡಿದ್ದ ದೀಪಕ್ ಚಹರ್ ಕೂಡಾ ಬೆನ್ನು ನೋವಿಗೆ ತುತ್ತಾಗಿ ಇಂಡಿಯಾಗೆ ವಾಪಸ್ ಆದರು. ಈಗ ದಿನೇಶ್ ಕಾರ್ತಿಕ್.
ವಿಶ್ವಕಪ್‍ಗೂ ಮುನ್ನ ಪಂದ್ಯಗಳಲ್ಲಿ ರೋಚಕ ಆಟವಾಡಿ ಹಲವು ಪಂದ್ಯಗಳಲ್ಲಿ ಮ್ಯಾಚ್ ಫಿನಿಷರ್ ಆಗಿ ಮಿಂಚಿದ್ದ ದಿನೇಶ್ ಕಾರ್ತಿಕ್, ವಿಶ್ವಕಪ್‍ನ 3 ಪಂದ್ಯಗಳಲ್ಲಿ ಅದ್ಭುತ ಆಟವನ್ನೇನೂ ಪ್ರದರ್ಶನ ಮಾಡಿಲ್ಲ. ಪಾಕ್ ವಿರುದ್ಧ 1 ರನ್ ಹೊಡೆದಿದ್ದರಷ್ಟೇ. ನೆದರ್ಲೆಂಡ್ ವಿರುದ್ಧ ಬ್ಯಾಟಿಂಗ್ ಮಾಡಿರಲಿಲ್ಲ. ದ.ಆಫ್ರಿಕಾ ವಿರುದ್ಧವೂ ಗಳಿಸಿದ್ದು ಜಸ್ಟ್ 6 ರನ್. ಆಮೇಲೆ ಫೀಲ್ಡಿಂಗ್ ವೇಳೆ ದ.ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇನ್ನೂ 4 ಓವರ್ ಆಟ ಇರುವಂತೆಯೇ ಬೆನ್ನು ನೋವಿನಿಂದ ಮೈದಾನ ತೊರೆದಿದ್ದಾರೆ. ರಿಷಬ್ ಪಂತ್ ಉಳಿದ ಮ್ಯಾಚ್ ಕಂಪ್ಲೀಟ್ ಮಾಡಿದ್ದಾರೆ. ಟೀಂ ಇಂಡಿಯೋ ಫಿಸಿಷಿಯನ್ ಕಮಲೇಶ್ ಜೈನ್ ನೆರವಿನೊಂದಿಗೆ ಫೀಲ್ಡ್ ತೊರಿದಿದ್ದು, ಬಿಸಿಸಿಐ ದಿನೇಶ್ ಕಾರ್ತಿಕ್ ದೈಹಿಕ ಸ್ಥಿರತೆಯ ಮೇಲೆ ನಿಗಾ ಇಟ್ಟಿದೆ.
ದಿನೇಶ್ ಕಾರ್ತಿಕ್ ದ.ಆಫ್ರಿಕಾ ವಿರುದ್ದದ ಪಂದ್ಯಕ್ಕೂ ಮುನ್ನ ಪ್ರಾಕ್ಟೀಸ್ ಮಾಡುವಾಗಲೂ ಬೆನ್ನು ನೋವಿಗೆ ತುತ್ತಾಗಿದ್ದರು. ಇಂಜುರಿಯಿದ್ದರೂ ಪೂರ್ಣ ಸಾಮಥ್ರ್ಯವಿಲ್ಲದೆ ಅಡಿದರಾ ದಿನೇಶ್ ಕಾರ್ತಿಕ್ ಎಂಬ ಅನುಮಾನವೂ ಇದೆ. ಈಗ ದಿನೇಶ್ ಕಾರ್ತಿಕ್, ಬುಧವಾರದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಡುತ್ತಾರಾ ಎಂಬ ಬಗ್ಗೆ ಕುತೂಹಲ ಎದ್ದಿದೆ. ತಂಡ ಪಾರ್ಟ್ ಟೈಂ ಕೀಪರ್ ಕೆ.ಎಲ್.ರಾಹುಲ್‍ರನ್ನೇ ಕೀಪರ್ ಆಯ್ಕೆ ಮಾಡಿಕೊಳ್ಳಲಿದೆಯೋ.. ಅಥವಾ ರಿಷಬ್ ಪಂತ್‍ರನ್ನೇ ಆಯ್ಕೆ ಮಾಡಲಿದೆಯೋ.. ಎಂಬ ಬಗ್ಗೆ ಸ್ಪಷ್ಟ ತೀರ್ಮಾನ ಇನ್ನೂ ಕೈಗೊಂಡಿಲ್ಲ. ಪಂತ್ ಲೆಫ್ಟ್ ಹ್ಯಾಂಡ್ ಬ್ಯಾಟ್ಸ್‍ಮನ್ ಆಗಿರುವುದರಿಂದ ತಂಡದ ಬ್ಯಾಲೆನ್ಸ್ ಮಾಡಬಹುದು ಎಂಬ ನಿರೀಕ್ಷೆ ಇದೆ. ಆದರೆ ಪಂತ್ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ. ಹೀಗಾಗಿ ಟೀಂ ಇಂಡಿಯಾ ಕನ್‍ಫ್ಯೂಷನ್ ಕಂಟಿನ್ಯೂ ಆಗಿದೆ.



