ವಿಶ್ವಕಪ್ ಕ್ರಿಕೆಟ್‍ನ ಮತ್ತೊಂದು ರೋಚಕ ಪಂದ್ಯದಲ್ಲಿ ದ.ಆಫ್ರಿಕಾ ಸೋತು ಹೋಗಿದೆ. ಎಂದಿನಂತೆ ಮಳೆರಾಯ ದ.ಆಫ್ರಿಕಾಗೆ ವಿಲನ್. ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಮಳೆ ಬಂದು ಪಾಯಿಂಟ್ಸ್ ಹೋಯ್ತು. ಈಗ ಪಾಕ್ ವಿರುದ್ಧದ ಪಂದ್ಯದಲ್ಲೂ ಸೋಲು. ಈ ಗೆಲುವಿನೊಂದಿಗೆ ಸೆಮಿಫೈನಲ್ ಹಾದಿ ಕನಸು ಕಠಿಣವಾಗಿದೆ. ಈಗ ಫ್ಯಾನ್ಸುಗಳೇ ಲೆಕ್ಕಾಚಾರ ಹಾಕುತ್ತಿದ್ದಾರೆ.
ಗ್ರೂಪ್ ಬಿನಲ್ಲಿ ಸದ್ಯಕ್ಕೆ ನಂ.1 ಭಾರತ. ಆಡಿರುವ 4 ಪಂದ್ಯಗಳಲ್ಲಿ 3 ಗೆದ್ದಿದೆ. ಒಂದನ್ನು ಸೋತಿದೆ. 6 ಅಂಕಗಳಿವೆ.
2ನೇ ಸ್ಥಾನದಲ್ಲಿರೋದು ದ.ಆಫ್ರಿಕಾ. 4 ಪಂದ್ಯಗಳಲಿ 2 ಗೆದ್ದಿದೆ. 1 ಸೋತಿದೆ. 1 ಪಂದ್ಯ ರದ್ದಾಗಿದೆ. ಟೋಟಲ್ ಆಗಿ 5 ಅಂಕಗಳಿವೆ.
3 & 4ನೇ ಸ್ಥಾನದಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳಿವೆ. ಎರಡೂ ಟೀಮುಗಳು ತಲಾ 2 ಪಂದ್ಯ ಗೆದ್ದಿವೆ. 2 ಸೋತಿವೆ. ತಲಾ 4 ಅಂಕಗಳಿವೆ.
ಈಗ ಕಡೆಯ ಪಂದ್ಯದಲ್ಲಿ ಭಾರತ, ಜಿಂಬಾಬ್ವೆ ವಿರುದ್ಧ ಗೆಲ್ಲಲೇಬೇಕು. ಗೆದ್ದರೆ ನಿರಾತಂಕವಾಗಿ ಸೆಮಿಫೈನಲ್‍ಗೆ ನಂ.1 ಸ್ಥಾನದಲ್ಲಿದ್ದುಕೊಂಡು ಹೋಗಬೇಕು. ಸೋತರೆ.. ಸೋತರೂ ಅವಕಾಶ ಇದೆ. ಸೆಮೀಸ್ ಚಾನ್ಸ್ ಮಿಸ್ ಆಗಲ್ಲ.
ಈಗ ಭಾರತ ಸೋತಾಗ ಅವಕಾಶ ಯಾರಿಗೆ ಹೆಚ್ಚು ಅನ್ನೋ ಪ್ರಶ್ನೆ ಇದೆಯಲ್ಲ. ಆಗ ಫೈಟ್ ಶುರುವಾಗುವುದು ದ.ಆಫ್ರಿಕಾ ಮತ್ತು ಪಾಕಿಸ್ತಾನ ಮಧ್ಯೆ.
ಆದರೆ ನೆದರ್‍ಲೆಂಡ್ ವಿರುದ್ಧ ದ.ಆಫ್ರಿಕಾ ಗೆದ್ದರೆ ದ.ಆಫ್ರಿಕಾ ನಿರಾತಂಕವಾಗಿ ಸೆಮೀಸ್ ತಲುಪಲಿದೆ. ಏಕೆಂದರೆ ದ.ಆಫ್ರಿಕಾ ಖಾತೆಯಲ್ಲಿ 5 ಅಂಕಗಳಿವೆ. ಗೆದ್ದರೆ 7 ಪಾಯಿಂಟ್ಸ್ ಆಗಲಿದೆ. ಆಗ ಪಾಕಿಸ್ತಾನಕ್ಕಾಗಲೀ, ಬಾಂಗ್ಲಾದೇಶಕ್ಕಾಗಲೀ ಅವಕಾಶಗಳಿರಲ್ಲ. ಏಕೆಂದರೆ ಯಾರೇ ಗೆದ್ದರೂ ಪಾಕ್ ಅಥವಾ ಬಾಂಗ್ಲಾ ಬಳಿ 6 ಅಂಕಗಳಷ್ಟೇ ಉಳಿಯಲಿವೆ.
ಅಕಸ್ಮಾತ್ ಭಾರತ ಜಿಂಬಾಬ್ವೆ ವಿರುದ್ಧ ಸೋತು, ಅತ್ತ ದ.ಆಫ್ರಿಕಾ ನೆದರ್‍ಲೆಂಡ್ ವಿರುದ್ಧ ಗೆದ್ದರೆ ಭಾರತಕ್ಕೆ ಒಂದಿಷ್ಟು ಟೆನ್ಷನ್ ಪಕ್ಕಾ. ಏಕೆಂದರೆ ಆಗ ರನ್‍ರೇಟ್ ನೋಡಲಿದ್ದಾರೆ. ರನ್ ರೇಟ್ ಭಾರತಕ್ಕಿಂತ ಪಾಕಿಸ್ತಾನದ್ದೇ ಚೆನ್ನಾಗಿದೆ. ಆದರೆ ಪಾಕ್ ವಿರುದ್ಧ ಭಾರತ ಗೆದ್ದಿದೆ ಎಂಬುದು ಕೂಡಾ ನೆನಪಿನಲ್ಲಿಟ್ಟುಕೊಳ್ಳಿ.
ಈ ಎಲ್ಲ ಕನ್‍ಫ್ಯೂಷನ್ ಕ್ಲಿಯರ್ ಆಗೋದು ಲೀಗ್ ಮ್ಯಾಚ್‍ಗಳು ಮುಗಿದ ನಂತರವೇ. ಅತ್ತ ಗ್ರೂಪ್ ಎನಲ್ಲೂ ಅಷ್ಟೆ. ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ 3 ತಂಡಗಳೂ ಸಮಾನ ಪಾಯಿಂಟ್ಸ್ ಹೊಂದಿಗೆ. ಐದು. ಮೂರೂ ತಂಡಗಳು ತಲಾ 4 ಪಂದ್ಯಗಳ್ನಾಡಿ ತಲಾ 2 ಸೋತಿವೆ. ತಲಾ ಒಂದೊಂದು ಪಂದ್ಯಗಳು ರದ್ದಾಗಿ ಅಂಕಗಳ ಹಂಚಿಕೆಯಾಗಿದೆ. ಈ ಪ್ರಕಾರ ಒಳ್ಳೆಯ ರನ್ ರೇಟ್ ಇರುವ 2 ತಂಡಗಳು ಸೆಮೀಸ್ ತಲುಪಲಿವೆ. 3 ತಂಡಗಳಿಗೂ ಚಾನ್ಸ್ ಇದೆ.
ಆದರೆ ಗೊಂದಲವಿರೋದು ಐಸಿಸಿ ಕನ್‍ಫ್ಯೂಷನ್ನುಗಳಲ್ಲಿ. ಇನ್ನೇನು ಸೆಮಿಫೈನಲ್ ಶುರುವಾಗಬೇಕು. ಆದರೆ ಎರಡು ಗುಂಪುಗಳಲ್ಲಿ ನಂ.1 ಮತ್ತು ನಂ.2 ತಂಡ ಇನ್ನೊಂದು ಗುಂಪಿನ ನಂ.1 ಅಥವಾ ನಂ.2 ತಂಡಗಳಲ್ಲಿ ಯಾವುದರ ವಿರುದ್ಧ ಆಡಬೇಕು ಎಂಬ ಬಗ್ಗೆ ಕ್ಲಾರಿಟಿಯೇ ಇಲ್ಲ. ಕೇವಲ ಸೆಮಿಫೈನಲ್ಸ್ ಎಂದಷ್ಟೇ ಇದೆ.
ಟೀಂ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ಈ ಬಗ್ಗೆ ಐಸಿಸಿಯ ಕಾಲೆಳೆದಿದ್ದಾರೆ. ಬಾಲಾಜಿ ವೆಡ್ಸ್ ರಾಜಲಕ್ಷ್ಮಿ ಅಥವಾ ಪವಿತ್ರ ಎನ್ನುವ ವೈರಲ್ ಆಗಿದ್ದ ಫೋಟೋ ಹಾಕಿದ್ದಾರೆ. ಅದು ನಿಜವೂ ಹೌದು.
ಈಗ ಭಾರತ ಗ್ರೂಪ್ 2ನಿಂದ ನಂ.1 ಆಗಿ ಸೆಮೀಸ್‍ಗೆ ತಲುಪಿತೆಂದುಕೊಳ್ಳಿ. ಆಗ ಭಾರತ ಗ್ರೂಪ್ 1ನಲ್ಲಿ ಸೆಮೀಸ್‍ಗೆ ಬಂದ ನಂ.1 ತಂಡವನ್ನೆದುರಿಸಬೇಕೋ.. ನಂ.2 ತಂಡವನ್ನೆದುರಿಸಬೇಕೋ.. ಅವರಿಗೂ ಗೊತ್ತಿಲ್ಲ.



