ಅರ್ಜುನ್ ತೆಂಡೂಲ್ಕರ್ ಅದೃಷ್ಟ ಮುಂಬೈ ಟೀಂನಿಂದ ಗೋವಾಕ್ಕೆ ಮರಳಿದ ನಂತರ ಖುಲಾಯಿಸಿದೆ. ಮುಂಬೈ ಟೀಂನಲ್ಲಿ ಅವಕಾಶ ಸಿಗದೆ ಪರದಾಡುತ್ತಿದ್ದ ಅರ್ಜುನ್ ತೆಂಡೂಲ್ಕರ್ ಗೋವಾಕ್ಕೆ ಶಿಫ್ಟ್ ಆಗಿದ್ದರು. ಈಗ ಗೋವಾ ತಂಡದ ವಿರುದ್ಧ ಆಡುತ್ತಿರುವ ಅರ್ಜುನ್ ತೆಂಡೂಲ್ಕರ್ ಕರಾಮತ್ತು ತೋರಿಸಿದ್ದಾರೆ. ದೇಸಿ ಕ್ರೀಡೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಲೀಗ್‍ನಲ್ಲಿ ಅದ್ಭುತ ಆಟವಾಡುತ್ತಿದ್ದಾರೆ. ಈವರೆಗೆ ಆಡಿದ 3 ಪಂದ್ಯಗಳಿಂದ ಒಟ್ಟು 6 ವಿಕೆಟ್ ಕಬಳಿಸಿದ್ದಾರೆ. ರನ್ ಕೊಡುವುದಕ್ಕೆ ಜಿಪುಣತನ ತೋರಿಸಿರುವ ಅರ್ಜುನ್ ಬೌಲಿಂಗ್ ಎದುರು ಎದುರಾಳಿ ತಂಡಗಳು ರನ್ ಗಳಿಸುವುದಕ್ಕೆ ಪರದಾಡುತ್ತಿವೆ.


ಶುಕ್ರವಾರ ಹೈದರಾಬಾದ್ ವಿರುದ್ಧ ಪಂದ್ಯ ನಡೆದಿತ್ತು. ಆ ಪಂದ್ಯಲ್ಲಿ 4 ಓವರ್ ಬೌಲ್ ಮಾಡಿದ ಅರ್ಜುನ್ ತೆಂಡೂಲ್ಕರ್ ಕೊಟ್ಟಿದ್ದು ಕೇವಲ 10 ರನ್. ಪಡೆದಿದ್ದು 4 ವಿಕೆಟ್. 4ರಲ್ಲಿ ಒಂದು ಮೇಡನ್ ಓವರ್ ಎನ್ನುವುದು ವಿಶೇಷ. ಹೊಸ ಬಾಲ್‍ನಲ್ಲಿ ಅದ್ಭುತ ಪ್ರದರ್ಶನ ತೋರಿಸುತ್ತಿರುವ ಅರ್ಜುನ್ ತೆಂಡೂಲ್ಕರ್ ಅಪಾಯಕಾರಿಯಾಗಿ ಆಡುತ್ತಿದ್ದ ತಿಲಕ್ ವರ್ಮಾ ಸೇರಿದಂತೆ ಒಟ್ಟು 4 ವಿಕೆಟ್ ಪಡೆದರು. ಪ್ರತೀಕ್ ರೆಡ್ಡಿ, ತಿಲಕ್ ವರ್ಮಾ, ಬುದ್ದಿ ರಾಹುಲ್ ಮತ್ತು ರವಿತೇಜಾ ವಿಕೆಟ್ ಪಡೆದರು. ಮಾಡಿದ 4 ಓವರ್‍ಗಳಲ್ಲಿ 17 ಡಾಟ್ ಬಾಲ್‍ಗಳು. ಅಮೋಘವಾಗಿ ಬೌಲ್ ಮಾಡಿದ ಅರ್ಜುನ್ ತೆಂಡೂಲ್ಕರ್ 2.5ರ ಸರಾಸರಿಯಲ್ಲಿ ಕೊಟ್ಟಿದ್ದು ಕೇವಲ 10 ರನ್. ಪಡೆದಿದ್ದು ಟ್ಟು 4 ವಿಕೆಟ್. ಆದರೆ ಬ್ಯಾಟಿಂಗ್‍ನಲ್ಲಿ 3 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿದರು. ಅರ್ಜುನ್ ಭರ್ಜರಿ ಬೌಲಿಂಗ್ ಹೊರತಾಗಿಯೂ ಹೈದರಾಬಾದ್ 177 ರನ್ ಗಳಿಸಿದರೆ ಗೋವಾ 144ಕ್ಕೆ ಔಟ್ ಆಗಿ ಸೋತಿತು.


ಇದಕ್ಕೂ ಮುನ್ನ ನಡೆದ ಪಂದ್ಯಗಳಲ್ಲೂ ಅರ್ಜುನ್ ತೆಂಡೂಲ್ಕರ್ ಉತ್ತಮ ಬೌಲಿಂಗ್ ಪ್ರದರ್ಶನ ತೋರಿಸಿದ್ದಾರೆ. ಟ್ರೋಫಿಯ ಮೊದಲ ಪಂದ್ಯದಲ್ಲಿ ಗೋವಾ ತ್ರಿಪುರಾ ವಿರುದ್ಧ ಗೆದ್ದಿತ್ತು. ಆ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಉತ್ತಮವಾಗಿ ಬೌಲಿಂಗ್ ಮಾಡಿದರಾದರೂ ವಿಕೆಟ್ ಸಿಕ್ಕಲಿಲ್ಲ. 3 ಓವರ್ ಬೌಲ್ ಮಾಡಿದ್ದ 20 ರನ್ ಬಿಟ್ಟುಕೊಟ್ಟಿದ್ದರು.
ಬುಧವಾರ ನಡೆದ ಮಣಿಪುರ ವಿರುದ್ಧದ ಪಂದ್ಯದಲ್ಲೂ ಉತ್ತಮ ಬೌಲಿಂಗ್ ತೋರಿದ್ದರು. 4 ಓವರ್ ಬೌಲ್ ಮಾಡಿ 20 ರನ್ ನೀಡಿ 2 ವಿಕೆಟ್ ಗಳಿಸಿದ್ದರು. ಈಗ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 10 ರನ್‍ಗೆ 4 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ. ಒಟ್ಟು 3 ಪಂದ್ಯಗಳಲ್ಲಿ 6 ವಿಕೆಟ್ ಕಡಿಮೆ ಸಾಧನೆಯೇನಲ್ಲ.
ಅರ್ಜುನ್ ತೆಂಡೂಲ್ಕರ್ ಐಪಿಎಲ್‍ನಲ್ಲಿ ಮುಂಬೈ ಪರ ಆಡುತ್ತಿದ್ದಾರೆ. ಆ ತಂಡಕ್ಕೆ ಸಚಿನ್ ತೆಂಡೂಲ್ಕರ್ ಬ್ರಾಂಡ್ ಅಂಬಾಸಿಡರ್. ಜೊತೆಗೆ ಅದೇ ತಂಡದ ಕ್ಯಾಪ್ಟನ್ ಕೂಡಾ ಆಗಿದ್ದವರು. ಅಲ್ಲದೆ ತಂಡದ ಮಾಲೀಕ ಅಂಬಾನಿ ಜೊತೆ ಉತ್ತಮ ಬಾಂಧವ್ಯವಿದೆ. ಕೋಚ್‍ಗಳಾದ ಜಹೀರ್ ಖಾನ್ ತೆಂಡೂಲ್ಕರ್ ಅವರನ್ನು ಗುರು ಎಂದೇ ಗೌರವಿಸುತ್ತಾರೆ. ನಾಯಕ ರೋಹಿತ್ ಶರ್ಮಾಗೂ ಅಷ್ಟೆ, ತೆಂಡೂಲ್ಕರ್ ಎಂದರೆ ಅಪರಿಮಿತ ಗೌರವ. ಈ ಎಲ್ಲ ಕಾರಣಗಳಿಂದ ಅರ್ಜುನ್ ತೆಂಡೂಲ್ಕರ್ ಅಯ್ಕೆಗೆ ನೆಪೋಟಿಸಂ ಕಾರಣ, ತೆಂಡೂಲ್ಕರ್ ತಮ್ಮ ಪ್ರಭಾವ ಬಳಸಿ ಮಗನಿಗೆ ತಂಡದಲ್ಲಿ ಅವಕಾಶ ಕೊಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಮುಂಬೈ ತಂಡದಲ್ಲಷ್ಟೇ ಅಲ್ಲ, ಮುಂಬೈ, ಮಹಾರಾಷ್ಟ್ರ ರಣಜಿ ತಂಡಗಳಲ್ಲೂ ತೆಂಡೂಲ್ಕರ್ ಆಪ್ತರೇ ಇದ್ದಾರೆ. ಜೊತೆಗೆ ತಂದೆ ಕ್ರಿಕೆಟ್ ಲೋಕದ ದೇವರು ಎಂಬ ಕಾರಣವೂ ಇದೆ. ಇಷ್ಟಿದ್ದರೂ ಮುಂಬೈ ಐಪಿಎಲ್ ತಂಡದಲ್ಲಾಗಲೀ, ಮುಂಬೈ ಅಥವಾ ಮಹಾರಾಷ್ಟ್ರ ರಣಜಿ ತಂಡದಲ್ಲಾಗಲೀ, ರಾಜ್ಯ ತಂಡದಲ್ಲಾಗಲೀ ಆಡುವ ಅವಕಾಶ ಸಿಕ್ಕಿರಲಿಲ್ಲ. ಬೆಂಚ್ ಕಾಯಿಸುತ್ತಿದ್ದ ಅರ್ಜುನ್ ಈ ವರ್ಷ ಗೋವಾ ತಂಡಕ್ಕೆ ಆಯ್ಕೆಗೊಂಡಿದ್ದು ಮುಂಬೈ ತಂಡವನ್ನು ತೊರೆದಿದ್ದಾರೆ. ಈಗ ಆಟದ ಮೂಲಕ ತಾನು ಪ್ರತಿಭೆಯಿಂದ ಗುರುತಿಸಿಕೊಂಡಿದ್ದೇನೆಯೇ ಹೊರತು ನೆಪೋಟಿಸಂನಿಂದಲ್ಲ ಎಂಬ ಉತ್ತರ ಕೊಟ್ಟಿದ್ದಾರೆ. ಇದೇ ರೀತಿಯ ಬೌಲಿಂಗ್ ಪ್ರದರ್ಶನ ಮುಂದುವರೆಸಿದರೆ ಅರ್ಜುನ್ ಆಯ್ಕೆದಾರರ ಗಮನೆ ಸೆಳೆಯುವುದೂ ಕಷ್ಟವಲ್ಲ. ಅಂದಹಾಗೆ ಅರ್ಜುನ್ ತೆಂಡೂಲ್ಕರ್ ಬೌಲರ್. ಮೀಡಿಯಂ ಫಾಸ್ಟ್ ಬೌಲರ್. ಬ್ಯಾಟಿಂಗ್ ಆಡುತ್ತಾರಾದರೂ ಬೌಲಿಂಗ್‍ನಲ್ಲಿಯೇ ಆಸಕ್ತಿ ತೋರಿಸುತ್ತಿದ್ದಾರೆ. ಆಲ್ ರೌಂಡರ್ ಆಗುವ ಸಾಮಥ್ರ್ಯವಂತೂ ಇದೆ.



