ಇಂತಹ ತಂಡಗಳು ಸೆಮಿಫೈನಲ್ ತಲುಪುತ್ತವೆ. ಇಂತಹ ತಂಡದ ಕ್ವಾಲಿಟಿ ಇಂಥದ್ದು… ಎಂದು ಬೇರೆಯವರು ಹೇಳೋದಕ್ಕೂ ಕ್ರಿಕೆಟ್ ಲೋಕದ ದೇವರು ಸಚಿನ್ ತೆಂಡೂಲ್ಕರ್ ಹೇಳುವುದಕ್ಕೂ ವ್ಯತ್ಯಾಸಗಳಿವೆ. ಅಂತಹ ತೆಂಡೂಲ್ಕರ್ ಈಗ ನಡೆಯುತ್ತಿರುವ ವಿಶ್ವಕಪ್ ಕುರಿತು ಮಾತನಾಡಿದ್ದಾರೆ. ಯಾವ್ಯಾವ ತಂಡಗಳು ಸೆಮಿಫೈನಲ್ ತಲುಪಬಹುದು ಎನ್ನುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಈಗಾಗಲೇ ಅರ್ಹತಾ ಸುತ್ತಿನಲ್ಲಿ ನಮೀಬಿಯಾ ತಂಡ ಏಷ್ಯಾ ಕಪ್ ಚಾಂಪಿಯನ್ ಶ್ರೀಲಂಕಾಗೆ ಮುಟ್ಟಿ ನೋಡಿಕೊಳೂವಂತಾ ಶಾಕ್ ಕೊಟ್ಟಿದೆ. ವೆಸ್ಟ್‍ಇಂಡೀಸ್ ಕೂಡಾ ಸ್ಕಾಟ್ಲೆಂಡ್ ತಂಡದ ಮಕಾಡೆ ಬಿದ್ದಿದೆ. ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳು ಇನ್ನೊಂದು ಪಂದ್ಯ ಗೆದ್ದರೆ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ವಿಶ್ವಕಪ್ ಕಥೆ ಕನಸು ಮುಗಿದಂತೆಯೇ. ಇಷ್ಟು ಅನಿರೀಕ್ಷಿತವಾಗುತ್ತಿರುವ ಕ್ರಿಕೆಟ್‍ನಲ್ಲಿ ಸೆಮಿಫೈನಲ್ ತಲುಪುವ ತಂಡಗಳು ಯಾವೆಲ್ಲ ಇರಬಹುದು.

ಆಸ್ಟ್ರೆಲಿಯಾದ ಪಿಚ್‍ಗಳು ಫ್ಲೆಕ್ಸಿಬಲ್ ಇವೆ. ವೇಗಕ್ಕೂ ನೆರವಾಗುತ್ತವೆ. ಸ್ಪಿನ್‍ಗೂ ಸಹಾಯ ಮಾಡುತ್ತವೆ. ಬ್ಯಾಟಿಂಗಿಗೂ ಸಹಾಯಕಾರಿ. ಆಡುವ ದಿನ ಪಿಚ್ ಯಾವ ರೀತಿ ಇರುತ್ತದೆ ಎಂದು ಜಡ್ಜ್ ಮಾಡಬೇಕು. ಆಸ್ಟ್ರೇಲಿಯಾದಲ್ಲಿ ಸಮ್ಮರ್ ಇನ್ನೂ ಶುರುವಾಗಿಲ್ಲ. ಆಟ ಶುರುವಾದಂತೆ ಪಿಚ್ ಬದಲಾಗುತ್ತ ಹೋಗುತ್ತದೆ ಎನ್ನುವುದು ಪಿಚ್ ಕುರಿತು ತೆಂಡೂಲ್ಕರ್ ಹೇಳಿರುವ ಮಾತು.

ನಮ್ಮ ಗ್ರೂಪಿನಿಂದ ಸೆಮಿಫೈನಲ್‍ಗೆ ಹೋಗುವ ತಂಡಗಳು ಭಾರತ ಮತ್ತು ಪಾಕಿಸ್ತಾನ. ಆದರೆ ದ.ಆಫ್ರಿಕಾ ಡಾರ್ಕ್ ಹಾರ್ಸ್. ಇನ್ನೊಂದು ಗುಂಪಿನಿಂದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್ ತಲುಪಬಹುದು. ಆದರೆ ಆ ಗುಂಪಿನಲ್ಲಿ ನ್ಯೂಜಿಲ್ಯಾಂಡ್ ಡಾರ್ಕ್ ಹಾರ್ಸ್ ಎನ್ನುವುದು ತೆಂಡೂಲ್ಕರ್ ಲೆಕ್ಕಾಚಾರ.
ಕಳೆದ ವಿಶ್ವಕಪ್‍ನಲ್ಲಿಯೂ ಭಾರತ ಸೆಮಿಫೈನಲ್ ತಲುಪುವುದು ಅನುಮಾನವೇ ಇಲ್ಲ ಎಂಬಂತೆ ಇತ್ತು. ಆದರೆ ಪಾಕ್ ವಿರುದ್ಧ ಐತಿಹಾಸಿಕವಾಗಿ ಸೋತು, ನ್ಯೂಜಿಲ್ಯಾಂಡ್ ವಿರುದ್ಧ ಹೀನಾಯವಾಗಿ ಸೋತು ಲೀಗ್ ಹಂತದಿಂದಲೇ ಹೊರಬಿದ್ದಿತ್ತು. ಈ ಬಾರಿ ಲೆಕ್ಕ ಹಾಕಿರೋದು ತೆಂಡೂಲ್ಕರ್. ತೆಂಡೂಲ್ಕರ್ ಲೆಕ್ಕಾಚಾರಗಳು ಸುಳ್ಳಾಗಲ್ಲ ಎನ್ನುವುದು ಅಭಿಮಾನಿಗಳ ನಂಬಿಕೆ. ಕಾದು ನೋಡೋಣ ಇರಿ.



