ರಾತ್ರಿ 10 ಗಂಟೆಯ ಹೊತ್ತಿಗೆ ತೋಟದಲ್ಲಿ ಹೂ ಕೀಳೋದು ಅಂದ್ರೆ.. ಸಂಥಿಂಗ್ ಈಸ್ ರಾಂಗ್ ಅಂದ್ಕೊಂಡ್ರಂತೆ ರಾಘವೇಂದ್ರ. ತಮ್ಮನ ಮೊದಲ ಎಲೆಕ್ಷನ್ ಭರ್ಜರಿಯಾಗಿರಬೇಕು, ಗೆಲ್ಲಬೇಕು ಎಂದು ಹಠಕ್ಕೆ ಬಿದ್ದಿದ್ದ ರಾಘವೇಂದ್ರ, ಶಿವಮೊಗ್ಗ ಬಿಟ್ಟು ಕದಲಿರಲಿಲ್ಲ. ತೋಟಕ್ಕೆ ಹೋಗಿ ನೋಡಿದರೆ, ಏನನ್ನೋ ಮುಚ್ಚಿ ಸಮಾಧಿ ಮಾಡಿ, ಅದರ ಮೇಲೆ ಹೂಗಳನ್ನೂ ಹಾಕಿರೋ ಗುರುತು ಕಂಡಿದೆ. ತೆಗೆದು ನೋಡಿದರೆ ಕಣ್ಣಿಗೆ ಕಂಡಿದ್ದು ಪುನುಗು ಬೆಕ್ಕಿನ ಹೆಣ.



