Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Crime

ಭಾರತ ದ್ರೋಹಿಗೆ ವಿಶ್ವ ಕಪ್ನಲ್ಲಿ ರಾಜಮರ್ಯಾದೆ

SpeciallU by SpeciallU
November 21, 2022
in Crime, Politics
0 0
0
ಭಾರತ ದ್ರೋಹಿಗೆ ವಿಶ್ವ ಕಪ್ನಲ್ಲಿ ರಾಜಮರ್ಯಾದೆ

Related posts

ಗ್ಯಾರಂಟಿಯಿಂದ ಹೊರೆ : ಡಿಕೆ ಶಿವಕುಮಾರ್‌ ಒಪ್ಪಿಕೊಂಡ ಸತ್ಯ

ಈಗ ಮೀಡಿಯಾಗಳ ಮೇಲೆ ಮೋದಿಯದ್ದೂ ಟೀಕೆ..!

ಝಾಕಿರ್ ನಾಯ್ಕ್. ಧರ್ಮ ಪ್ರಚಾರಕನ ವೇಷದಲ್ಲಿದ್ದುಕೊಂಡು ಭಾರತಕ್ಕೆ ಬೆಂಕಿ ಹಚ್ಚಲು ಸಂಚು ಹೂಡಿದ್ದವನು. ಭಾರತದಲ್ಲಿ ಈತ ಮೋಸ್ಟ್ ವಾಂಟೆಡ್. ಭಾರತದಲ್ಲಿ ದ್ವೇಷ ಭಾಷಣ ಮತ್ತು ಅಕ್ರಮ ಹಣ ವರ್ಗಾವಣೆ ಕೇಸ್ನಲ್ಲಿ ಬೇಕಾಗಿರುವ ವ್ಯಕ್ತಿ. ಈತ ಈಗ ಕತಾರ್ನಲ್ಲಿ ಮೋಸ್ಟ್ ವಾಂಟೆಡ್ ಸೆಲಬ್ರಿಟಿ. ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿ ವೇಳೆ ಕತಾರ್ನ ಚೀಫ್ ಗೆಸ್ಟ್. ವಿಶ್ವಕಪ್ ನಡೆಯುವ ಅಷ್ಟೂ ದಿನಗಳ ಕಾಲ ಕತಾರ್ನಲ್ಲಿ ಧರ್ಮ ಭಾಷಣದ ಹೆಸರಲ್ಲಿ ಧರ್ಮದ ಉಪದೇಶ ಮಾಡಲಿದ್ದಾನೆ.
ಕತಾರ್ ಸ್ಪೋರ್ಟ್ಸ್ ಚಾನೆಲ್ ಅಲ್ಕಾಸ್ನ ನಿರೂಪಕ ಫೈಸಲ್ ಅಲ್ಹಜ್ರಿ ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ವಿಶ್ವಕಪ್ ನಡೆಯುವ ಅಷ್ಟೂ ಸಮಯ ಝಾಕಿರ್ ನಾಯ್ಕ್ ಕತಾರ್ನಲ್ಲಿರುತ್ತಾನೆ. ಇಡೀ ದೇಶದಲ್ಲಿ ತಮ್ಮ ಧರ್ಮೋಪದೇಶ ನೀಡಲಿದ್ದಾರೆ ಎಂದು ಬರೆದುಕೊಂಡಿದ್ದಾನೆ. ಮುಸಲ್ಮಾನರ ಅತಿ ದೊಡ್ಡ ಭೋದಕ ಝಾಕಿರ್ ನಾಯ್ಕ್ ಧಾರ್ಮಿಕ ಸಂದೇಶಗಳನ್ನು ನೀಡಲು ವಿಶ್ವಕಪ್ ವೇಳೆ ಕತಾರ್ಗೆ ಬರುತ್ತಿದ್ದಾನೆ ಎಂದು ಕತಾರ್ನ ಮ್ಯಾಗಜಿನ್ ಸ್ಕ್ರೀನ್ ಮಿಕ್ಸ್ ಕೂಡಾ ವರದಿ ಮಾಡಿದೆ.
ಝಾಕಿರ್ ನಾಯ್ಕ್ ಇಸ್ಲಾಂ ಧರ್ಮಪ್ರಚಾರಕ. ಕೆಲವೇ ತಿಂಗಳುಗಳ ಹಿಂದೆ ದೇಶಾದ್ಯಂತ ನೂಪುರ್ ಶರ್ಮಾ ಹೇಳಿಕೆ ಕೋಲಾಹಲ ಎಬ್ಬಿಸಿದ್ದು ನೆನಪಿದೆ ತಾನೇ. ಅದನ್ನು ಇದೇ ಝಾಕಿರ್ ನಾಯ್ಕ್ ಕೂಡಾ ಹೇಳಿದ್ದ. ಆದರೆ ಈತನನ್ನು ಅದೇ ಕತಾರ್ ಕರೆದು ರಾಜಮರ್ಯಾದೆ ನೀಡುತ್ತಿದೆ. ನೂಪುರ್ ಶರ್ಮಾ ಹೇಳಿಕೆ ಖಂಡಿಸಿ, ಭಾರತೀಯ ರಾಯಭಾರಿಗೆ ನೋಟಿಸ್ ನೀಡಿದ್ದ ಅದೇ ಕತಾರ್ ಸರ್ಕಾರ, ಈಗ ಜಾಕಿರ್ ನಾಯ್ಕ್ನನ್ನು ಸನ್ಮಾನ ಮಾಡುತ್ತಿದೆ.
ನೂಪುರ್ ಶರ್ಮಾ ವಿರುದ್ಧ ಕತಾರ್ ಸೇರಿದಂತೆ ಎಲ್ಲ ಇಸ್ಲಾಮಿಕ್ ರಾಷ್ಟ್ರಗಳೂ ಒಗ್ಗೂಡಿ ಖಂಡಿಸಿದ್ದವು. ಆದರೆ ಇದೇ ಹೇಳಿಕೆ ನೀಡಿದ್ದ, ಅದನ್ನು ಹದೀಸ್ಗಳಲ್ಲೇ ಇತ್ತು ಎಂದು ಹೇಳಿದ್ದ ಝಾಕಿರ್ ನಾಯ್ಕ್ಗೆ ಆಹ್ವಾನ ನೀಡಿರುವುದರ ಹಿಂದೆ ಸಂಚು ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಏಕೆಂದರೆ ಝಾಕಿರ್ ನಾಯ್ಕ್ ಭಾರತಕ್ಕೆ ಮೋಸ್ಟ್ ವಾಂಟೆಡ್ ಕೂಡಾ ಹೌದು. 2016ರಲ್ಲಿ ಮಲೇಷ್ಯಾಕ್ಕೆ ಓಡಿ ಹೋಗಿರುವ ಝಾಕಿರ್ ನಾಯ್ಕ್ ಈಗಲೂ ಇಂಡಿಯಾಗೆ ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿರೋ ಆರೋಪಿ. ಅಂತಹವನನ್ನು ತನ್ನ ದೇಶಕ್ಕೆ ಅದೂ ವಿಶ್ವಕಪ್ ಫುಟ್ ಬಾಲ್ ನಡೆಯುತ್ತಿರುವ ಸಮಯದಲ್ಲಿ ಧಾರ್ಮಿಕ ಉಪದೇಶ ನೀಡಲು ಅತಿಥಿಯಾಗಿ ಆಹ್ವಾನಿಸಿದೆ ಕತಾರ್.
ಝಾಕಿರ್ ನಾಯ್ಕ್ ವಿರುದ್ಧ ಕ್ರಮ ಕೈಗೊಳ್ಳಲು ಭಾರತ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುತ್ತಿದೆ. ಇತ್ತೀಚೆಗೆ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಅರೆಸ್ಟ್ ಆಗಿರುವ ಹಲವು ಉಗ್ರಗಾಮಿಗಳಿಗೆ ಈತನ ಭಾಷಣವೇ ಸ್ಫೂರ್ತಿ. ಆದರೆ ಮಲೇಷ್ಯಾ, ಕತಾರ್ ಸೇರಿದಂತೆ ಹಲವು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಈಗ ಜನಪ್ರಿಯ. ಧರ್ಮ ಭೋದಕ. ಇದರ ವಿರುದ್ಧ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿಯೆತ್ತಬೇಕು ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಕತಾರ್, ಭಾರತದಲ್ಲಿ ಧಾರ್ಮಿಕ ನಂಬಿಕೆ ಪ್ರಚೋದಿಸುವವರನ್ನು ಪ್ರೋತ್ಸಾಹಿಸುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಎಂ.ಎಫ್.ಹುಸೇನ್ ಅವರಿಗೂ ಕತಾರ್ ಆಶ್ರಯ ನೀಡಿತ್ತು. ಹಿಂದೂ ದೇವತೆಗಳ ನಗ್ನ ಚಿತ್ರ ಬರೆದು ಧಾರ್ಮಿಕ ನಂಬಿಕೆಗೆ ಘಾಸಿ ಮಾಡಿದ್ದವನನ್ನು ಕತಾರ್ ತನ್ನ ದೇಶದಲ್ಲಿ ಆಶ್ರಯ ಕಲ್ಪಿಸಿತ್ತು.
ಝಾಕಿರ್ ನಾಯ್ಕ್ಗೆ ಬ್ರಿಟನ್ ವೀಸಾ ನೀಡಲು ನಿರಾಕರಿಸಿದೆ. ಫುಟ್ ಬಾಲ್ ಆಡುವುದು ಹರಾಮ್ ಎಂದು ಹೇಳಿದ್ದವನು ಇದೇ ಝಾಕಿರ್. ಆದರೆ ಅದೇ ಫುಟ್ ಬಾಲ್ ವಿಶ್ವಕಪ್ ವೇಳೆ ಧರ್ಮ ಪ್ರಚಾರ ಮಾಡಲು ಬಂದಿದ್ದಾನೆ. ಅಷ್ಟೇ ಅಲ್ಲ, ಮುಸ್ಲಿಮರು ದೇವಸ್ಥಾನ ಕಟ್ಟುವುದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿಕೆ ನೀಡಿದ್ದವನು ಝಾಕಿರ್. ಆದರೆ ಕತಾರ್ ಮಾತ್ರ ವಿಚಿತ್ರ ಮನಸ್ಥಿತಿಯಲ್ಲಿದೆ. ಝಾಕಿರ್ ನಾಯ್ಕ್ನನ್ನು ಅತಿಥಿಯಾಗಿ ಆಹ್ವಾನಿಸಿರುವ ಕತಾರ್, ಆತನದ್ದೇ ಹೇಳಿಕೆ ನೀಡಿದ್ದ ನೂಪುರ್ ಶರ್ಮಾರನ್ನು ವಿರೋಧಿಸುತ್ತದೆ. ಫುಟ್ಬಾಲ್ ಹರಾಮ್ ಎಂದಿದ್ದ ಝಾಕಿರ್, ಅದೇ ಫುಟ್ ಬಾಲ್ ವಿಶ್ವಕಪ್ನಲ್ಲಿ ಧರ್ಮ ಪ್ರಚಾರ ಮಾಡುತ್ತಾನೆ. ದಟ್ ಈಸ್ ಇಂಟರ್ ನ್ಯಾಷನಲ್ ಪಾಲಿಟಿಕ್ಸ್ ಎನ್ನಬಹುದೇ..

ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.