Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Politics

ಸಿದ್ದು ವರುಣಾದಲ್ಲಿ ವಿಜಯೇಂದ್ರ ನಿಲ್ತಾರಾ? ಗೆಲ್ಲೋ ಚಾನ್ಸ್ ಇದೆಯಾ?

SpeciallU by SpeciallU
December 12, 2022
in Politics
Reading Time: 1 min read
0 0
0

ವರುಣಾ. ಇದ್ದಕ್ಕಿದ್ದಂತೆ ಸಿದ್ದರಾಮಯ್ಯನವರ ಡಾರ್ಲಿಂಗ್ ಕ್ಷೇತ್ರವಾಗಿ ಹೋಗಿದೆ. ಅಫ್‍ಕೋರ್ಸ್, ಇದು ಅವರದ್ದೇ ಕ್ಷೇತ್ರ. ಈ ಕ್ಷೇತ್ರದಿಂದ ಗೆದ್ದಾಗಲೇ ಸಿದ್ದು ಸಿಎಂ ಆಗಿದ್ದುದು. ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರಗಳನ್ನು ಸಿದ್ದರಾಮಯ್ಯ ಮರೆಯುವ ಹಾಗೇ ಇಲ್ಲ. ಚಾಮುಂಡೇಶ್ವರಿ, ಸಿದ್ದರಾಮಯ್ಯಗೆ ಪುನರ್ಜನ್ಮ ಕೊಟ್ಟಿದ್ದ ಕ್ಷೇತ್ರವೇ ಆದರೂ, ಕಳೆದ ಚುನಾವಣೆಯಲ್ಲಿ ಅದೇ ಚಾಮುಂಡೇಶ್ವರಿ ಸಿದ್ದುರನ್ನು ಸೋಲಿಸಿ ಕಳಿಸಿತ್ತು. ಕಳೆದ ಬಾರಿ ಸೋಲಿನ ವಾಸನೆ ಸಿಕ್ಕು ಎರಡು ಕಡೆ ಚುನಾವಣೆಗೆ ನಿಲ್ಲದೇ ಹೋಗಿದ್ದರೆ ಸಿದ್ದರಾಮಯ್ಯ, ವಿರೋಧಪಕ್ಷದ ನಾಯಕರಾಗುವುದಿರಲಿ, ಶಾಸಕರೂ ಆಗೋಕೆ ಆಗುತ್ತಿರಲಿಲ್ಲ ಅನ್ನೋದು ವಾಸ್ತವ. ಹಾಗೆಂದು ಬಾದಾಮಿ ಕೂಡಾ ಅವರಿಗೆ ಸೇಫಲ್ಲ. ಕಳೆದ ಬಾರಿ ಗೆದ್ದಿದ್ದಾರಾದರೂ ಗೆಲುವಿನ ಅಂತರ ಸಾವಿರದ ಚಿಲ್ಲರೆ. ತುಸು ಯಾಮಾರಿದ್ದರೆ ಅಲ್ಲಿಯೂ ಸೋಲುವ ಎಲ್ಲ ಲಕ್ಷಣಗಳೂ ಇದ್ದವು. ಈಗ ಮತ್ತೆ ವರುಣಾ ಫಿಕ್ಸ್ ಎಂಬ ಮಾತು ಕೇಳಿ ಬರುತ್ತಿದೆ.
ಬೇರೆ ಕ್ಷೇತ್ರಗಳನ್ನು ಕೈಬಿಟ್ಟಿದ್ದೇಕೆ?

ಕೋಲಾರ : ಕೋಲಾರದಲ್ಲಿ ರೌಂಡ್ಸ್ ಹೊಡೆದರಾದರೂ ಸಿದ್ದು ರಿಟರ್ನ್ ಆದ ಮೇಲೆ ನಡೆದ ಬೆಳವಣಿಗೆಗಳು ಸ್ವತಃ ಸಿದ್ದುಗೇ ಶಾಕ್ ಕೊಟ್ಟಿರುವುದು ದಿಟ. ಮುನಿಯಪ್ಪ ಬಣ, ರಮೇಶ್ ಕುಮಾರ್ ಬಣದ ಗುದ್ದಾಟದಲ್ಲಿ ಸೋಲಿನ ವಾಸನೆ ಹೊಡೆದಂತಿದೆ. ಅಲ್ಲದೆ, ಮುನಿಯಪ್ಪ-ಸಿದ್ದುರಾಮಯ್ಯ ಸಂಬಂಧವ ಅಷ್ಟಕ್ಕಷ್ಟೆ.

Related posts

ಗ್ಯಾರಂಟಿಯಿಂದ ಹೊರೆ : ಡಿಕೆ ಶಿವಕುಮಾರ್‌ ಒಪ್ಪಿಕೊಂಡ ಸತ್ಯ

ಈಗ ಮೀಡಿಯಾಗಳ ಮೇಲೆ ಮೋದಿಯದ್ದೂ ಟೀಕೆ..!

ಚಾಮರಾಜಪೇಟೆ : ಇನ್ನು ಚಾಮರಾಜಪೇಟೆಯಲ್ಲಿ ನಿಂತು ಗೆದ್ದರೂ ಕ್ರೆಡಿಟ್ ಹೋಗುವುದು ಜಮೀರ್ ಅಹ್ಮದ್ ಅವರಿಗೆ. ಸಿದ್ದು ಏನೇ ಚಾಮರಾಜಪೇಟೆ ಅಳಿಯ ಎಂದು ಹೇಳಿಕೊಂಡರೂ ಇಡೀ ಕ್ಷೇತ್ರದಲ್ಲಿ ಜಮೀರ್ ಹವಾ ಹಾಗಿದೆ.

ಕೊಪ್ಪಳ : ಕೊಪ್ಪಳದಲ್ಲಿ ಕುರುಬರ ಸಂಖ್ಯೆ ಹೆಚ್ಚು. ಸಿದ್ದು ರಾಜಕೀಯ ಜೀವನ ಶುರುವಾಗಿದ್ದೇ ಕೊಪ್ಪಳದಿಂದ. ಹೀಗಿದ್ದರೂ ಕೊಪ್ಪಳಕ್ಕೆ ಓಕೆ ಎನ್ನಲು ಮನಸ್ಸಿಲ್ಲ. ಬಾದಾಮಿ ದೂರ ಎಂಬ ಕಾರಣ ಕೊಟ್ಟು ದೂರ ಬಂದಿರೋ ಸಿದ್ದು, ಕೊಪ್ಪಳ ಆಯ್ಕೆ ಮಾಡಿಕೊಂಡರೆ ಎದುರಾಳಿಗಳಿಗೆ ಅಸ್ತ್ರ ಕೊಟ್ಟಂತಾಗುತ್ತದೆ ಎನ್ನುವುದೂ ಒಂದು ಕಾರಣ. ಏಕೆಂದರೆ ಕೊಪ್ಪಳವೂ ಬೆಂಗಳೂರಿಗೆ ಹೊಂದಿಕೊಂಡಿರೋ ಜಿಲ್ಲೆಯೇನೂ ಅಲ್ಲವಲ್ಲ.

ಚಾಮುಂಡೇಶ್ವರಿ : ಆಗಿದ್ದಾಗಲೀ.. ಇಲ್ಲೇ ಸೋತಿದ್ದೇನೆ, ಇಲ್ಲೇ ಗೆದ್ದೂ ತೋರಿಸುತ್ತೇನೆ ಎನ್ನವುದಕ್ಕೂ ಸೋಲಿನ ಭಯವಿದೆ. ಎರಡು ಕಡೆ ನಿಲ್ಲೋಕೆ ಆಗಲ್ಲ. ಅಕಸ್ಮಾತ್ ಸೋತರೆ, ಮತ್ತೆ ಸಿಎಂ ಆಗುವುದಕ್ಕೆ ಆಗಲ್ಲ ಎನ್ನುವುದೂ ಒಂದು ಕಾರಣ. ಹೀಗಾಗಿಯೇ..
ತಮ್ಮದೇ ಹಳೆಯ ಕ್ಷೇತ್ರ, ತಮ್ಮ ಮಗ ಶಾಸಕರಾಗಿರುವ ಕ್ಷೇತ್ರದಲ್ಲೇ ನಿಂತರೆ ಬೆಟರ್ ಎನ್ನವುದು ಸಿದ್ದು ಲೆಕ್ಕ. ಹಾಗಾದರೆ ಯತೀಂದ್ರ ಅವರ ರಾಜಕೀಯ ಭವಿಷ್ಯಕ್ಕೆ ಬ್ರೇಕ್ ಹಾಕುವ ಅನಿವಾರ್ಯತೆ ಎದುರಾಗುತ್ತದೆ ಇದರ ನಡುವೆಯೇ ಬಿಜೆಪಿಯಂದ ಮರಿ ರಾಜಾಹುಲಿಯ ಘರ್ಜನೆ ಮೊಳಗಿದೆ.


ವರುಣಾದಲ್ಲಿ ನಿಲ್ಲುವುದಕ್ಕೇನೂ ಸಮಸ್ಯೆ ಇಲ್ಲ. ನಾನು ಇಡೀ ರಾಜ್ಯಕ್ಕೆ ಪರಿಚಿತನಾಗಿದ್ದೇ ವರುಣಾದಿಂದ. ಅವಕಾಶ ಸಿಕ್ಕರೆ ಸ್ಪರ್ಧಿಸಲು ಸಿದ್ಧ. ಆದರೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಘೋಷಿಸಿದ್ದಾರೆ ವಿಜಯೇಂದ್ರ ಯಡಿಯೂರಪ್ಪ. ಕಳೆದ ಬಾರಿ ಕೂಡಾ ವಿಜಯೇಂದ್ರ ಅವರ ಹೆಸರು ವರುಣಾದಲ್ಲಿ ಕೇಳಿ ಬಂದಿತ್ತು. ವಿಜಯೇಂದ್ರ ನಿಂತಿದ್ದರೆ ಮೈಸೂರು ಭಾಗದ ಸಮರಕ್ಕೆ ಕಳೆಯೂ ಬರುತ್ತಿತ್ತು. ಆದರೆ ಆರ್.ಎಸ್.ಎಸ್.ನ ಕೆಲವು ನಾಯಕರು ಅದಕ್ಕೆ ಅಡ್ಡಗಾಲು ಹಾಕಿದರು. ಕಟ್ಟ ಕಡೆಯ ಕ್ಷಣದಲ್ಲಿ ಬಸವರಾಜು ಎಂಬುವವರನ್ನು ನಿಲ್ಲಿಸಿದರು. ಬಿಜೆಪಿಯ ಖಾಯಂ ಮತಗಳು ಎನ್ನಬಹುದಾದ 37 ಸಾವಿರ ಚಿಲ್ಲರೆ ವೋಟು ಬಂದವು. ಸಿದ್ದರಾಮಯ್ಯ ಮಗ ಯತೀಂದ್ರ 58 ಸಾವಿರ ಮತಗಳ ಅಂತರದಲ್ಲಿ ಭರ್ಜರಿಯಾಗಿ ಗೆದ್ದಿದ್ದರು. ಈ ಬಾರಿಯೂ ಹಾಗೆಯೇ ಆದರೆ.. ಈ ಕಾರಣಕ್ಕಾಗಿಯೇ ವಿಜಯೇಂದ್ರ ಹೈಕಮಾಂಡ್ ಹೆಗಲಿಗೆ ಹೊಣೆ ಹಾಕಿದ್ದಾರೆ.
ವರುಣಾ ಕ್ಷೇತ್ರದ ಜಾತಿ ಲೆಕ್ಕಾಚಾರ ನೋಡಿದರೆ ಲಿಂಗಾಯತರೂ ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. 70 ಸಾವಿರಕ್ಕಿಂತ ಹೆಚ್ಚಿದ್ದಾರೆ. ಒಕ್ಕಲಿಗರ ಸಂಖ್ಯೆಯೂ 20 ಸಾವಿರದ ಅಸುಪಾಸಿನಲ್ಲಿದೆ. ಪ.ಜಾತಿ ಮತ್ತು ಪ.ಪಂಗಡದ ಸುಮಾರು 75 ಸಾವಿರ ಮತಗಳಿವೆ. ಕುರುಬರ ಸಂಖ್ಯೆಯೂ ಆಜುಬಾಜು 40 ಸಾವಿರದಲ್ಲಿದೆ. ಇದು ಸಿದ್ದು ಟೆನ್ಷನ್ನಿಗೂ ಕಾರಣ. ಲಿಂಗಾಯತ ಮತಗಳು ಯಡಿಯೂರಪ್ಪ ಮಗ ಎಂಬ ಒಂದೇ ಕಾರಣಕ್ಕೆ ಶಿಫ್ಟ್ ಆಗಿಬಿಟ್ಟರೆ ಎಂಬ ಭಯ, ಒಕ್ಕಲಿಗರ ಮತಗಳು ಸಿದ್ದುಗೆ ಪ್ರಬಲ ಎದುರಾಳಿ ಎಂಬ ಕಾರಣಕ್ಕೇ ದೂರ ಹೋಗುವ ಭೀತಿ.. ಜೊತೆಗೆ ವಿಜಯೇಂದ್ರ ಅವರ ಚುನಾವಣಾ ತಂತ್ರಗಾರಿಕೆ. ವಿಜಯೇಂದ್ರ ರಾಜಕೀಯ ಹೆಜ್ಜೆಗಳನ್ನು ಫಾಲೋ ಮಾಡೋದು ಸುಲಭವಲ್ಲ. ಹೀಗಾಗಿಯೇ.. ಈಗ ಒಂದು ಪ್ರಶ್ನೆ ಎದುರಾಗಿದೆ.. ಸಿದ್ದುಗೀಗ ಹೊಸ ಟೆನ್ಷನ್ ಶುರುವಾಗುತ್ತಾ?

ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.