ಜಗತ್ತಿನ ಅತ್ಯಂತ ಬಡ ರಾಷ್ಟ್ರಗಳಲ್ಲೊಂದಾಗಿರುವ ಸೂಡಾನ್ನಲ್ಲಿ ನಮ್ಮ ರಾಜ್ಯದ ಹಕ್ಕಿಪಿಕ್ಕಿಗಳು ಹೋಗಿದ್ದಾದರೂ ಏಕೆ..? ಅದೊಂದು ಚೆಂದದ ಕಥೆ ಮತ್ತು ವಿಚಿತ್ರ ಕಥೆಯೂ ಹೌದು.
ಸೂಡಾನ್ ಅಷ್ಟೇ ಅಲ್ಲ, ಆಫ್ರಿಕಾ ರಾಷ್ಟ್ರಗಳಲ್ಲಿನ ಬಹುತೇಕ ಜನರ ಸಮಸ್ಯೆಯೆಂದರೆ ವಿದ್ಯೆ ಇಲ್ಲ. ವೈದ್ಯರೂ ಇಲ್ಲ. ರೋಗ ಜಾಸ್ತಿ. ಅಂತಹ ದೇಶದಲ್ಲಿ ಲೈಂಗಿಕ ಚಪಲವೂ ಜಾಸ್ತಿ.
ವಿಮಾನದಲ್ಲಿ ಮುಂಬಯಿ ಮೂಲಕ ಆಫ್ರಿಕಾ ತಲುಪಲು 60-70 ಸಾವಿರ ರೂ. ಇದ್ದರೆ ಸಾಕು. ಸುಮಾರು 20-25 ವರ್ಷಗಳ ಹಿಂದೆ ಕರ್ನಾಟಕದ ಹುಣಸೂರಿನಿಂದ ಒಂದಿಷ್ಟು ಜನ ಆಫ್ರಿಕಾಕ್ಕೆ ಹೋದರು. ಈ ಹಕ್ಕಿಪಿಕ್ಕಿಗಳ ಬಳಿ ಕೇರಳ, ಮದುಮಲೈ, ಬಂಡೀಪುರ, ನೇಪಾಳ, ಉತ್ತರಾಖಂಡದಂಥ ಕಾಡುಗಳಲ್ಲಿ ಸಂಗ್ರಹಿಸಿದ ಅಪರೂಪದ ಗಿಡಮೂಲಿಕೆಗಳಿದ್ದವು. ಯಾಪಾರ ಕುದುರಿತು. ಅಲ್ಲಿಂದ ಕೆಲವರು ಹುಟ್ಟೂರಿಗೆ ಮರಳಿದರು. ಬಂದವರು ಬರಿಗೈಲಿ ಬಂದಿರಲಿಲ್ಲ. ಲಕ್ಷ ಲಕ್ಷ ಹಣ ಇಟ್ಟುಕೊಂಡು ಶ್ರೀಮಂತರಾಗಿಯೇ ಬಂದರು. ಬಂಗಲೆ, ಕಾರು ಖರೀದಿಸಿ ವಿಲಾಸಿ ಜೀವನ ಕಾಣತೊಡಗಿದರು. ಅಲ್ಲಿಂದ ಬೇರೆಯವರಿಗೂ ಶುರುವಾಯ್ತು ಆಫ್ರಿಕನ್ ರಾಷ್ಟ್ರಗಳ ಪ್ರವಾಸ.



