ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗುತ್ತಿರುವ ಬೆನ್ನಲ್ಲೇ ಈಗ ವಿವಾದವೊಂದು ಸ್ಪೋಟಿಸಿದೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ. ಟ್ವಿಟ್ಟರ್‍ನಲ್ಲಂತೂ ಈ ಬಗ್ಗೆ ಭಾರಿ ಚರ್ಚೆಗಳೇ ನಡೆಯುತ್ತಿವೆ. ಕಾಂಗ್ರೆಸ್ ಮುಖಂಡ ಶಶಿ ತರೂರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವುದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಈ ವಿವಾದವನ್ನು ಮೊದಲು ಆರಂಭಿಸಿದ್ದು ಯಾರು ಎಂಬ ಬಗ್ಗೆ ಸ್ಪಷ್ಟತೆಯಿಲ್ಲವಾದರೂ ವಾದ-ಪ್ರತಿವಾದ-ಚರ್ಚೆಗಳಂತೂ ಜೋರಾಗಿವೆ.
ಈ ಚರ್ಚೆಗೆ ಕಾರಣ ಇಷ್ಟು. ಬ್ರಿಟನ್‍ನಲ್ಲಿ ಶೇ.70ರಷ್ಟು ಕ್ರಿಶ್ಚಿಯನ್ನರಿದ್ದಾರೆ.ಅವರು ಈಗ ಒಬ್ಬ ಹಿಂದೂವನ್ನು ತಮ್ಮ ಪ್ರಧಾನಿ ಎಂದು ಒಪ್ಪಿಕೊಂಡಿದ್ದಾರೆ. ಅದನ್ನು ಹಿಂದೂಗಳೂ ಸಂಭ್ರಮಿಸುತ್ತಿದ್ದಾರೆ. ಭಾರತದಲ್ಲೂ ಈ ರೀತಿ ಆಗುವುದೇ. ಭಾರತೀಯರು ಒಬ್ಬ ಮುಸ್ಲಿಂನನ್ನು ಪ್ರಧಾನಿ ಎಂದು ಒಪ್ಪಿಕೊಳ್ಳುವರೇ. ಸದ್ಯದ ಮಟ್ಟಿಗೆ ಈ ಚರ್ಚೆಗೆ ಕಾವು ಕೊಟ್ಟಿದ್ದು ಶಶಿ ತರೂರ್ ಅವರೇ. ಬ್ರಿಟನ್‍ನ ಜಾರ್ಜ್ ಒಬ್ಸೋರ್ಮ್ ಎಂಬ ಚಿಂತಕ ಈ ಬಗ್ಗೆ ಟ್ವೀಟ್ ಮಾಡಿದ್ದರು. ರಿಷಿ ಸುನಕ್ ಬ್ರಿಟನ್‍ನ ಪ್ರಥಮ ಏಷ್ಯನ್ ಪ್ರಧಾನಿ. ಆತ ಸಮಸ್ಯೆಗಳಿಗೆಲ್ಲ ಅಂತ್ಯ ಹಾಡಬಲ್ಲ ಎಂಬ ನಂಬಿಕೆ ಇದೆ. ಅಲ್ಲದೆ ಈ ಪರಿಸ್ಥಿತಿಗೆ ಕಾರಣರಾದ ಹಲವರಲ್ಲಿ ಆತನೂ ಒಬ್ಬ. ನನ್ನ ದೇಶದಲ್ಲಿ ಇಂತಹುದು ಆಗುತ್ತಿವೆ ಎಂಬ ಬಗ್ಗೆ ಹೆಮ್ಮೆಯಿದೆ ಎಂದು ಟ್ವೀಟ್ ಮಾಡಿದ್ದರು.
https://twitter.com/ShashiTharoor/status/1584527502873333760
ಅಲ್ಪಸಂಖ್ಯಾತರಾಗಿರುವ ವ್ಯಕ್ತಿಯೊಬ್ಬ ದೇಶದ ಪ್ರಧಾನಿಯಾಗುತ್ತಿರುವುದು ಸಂತಸದ ವಿಷಯ. ಇದನ್ನು ಸಂಭ್ರಮಿಸುತ್ತಿದ್ದೇನೆ. ನಮ್ಮ ದೇಶದಲ್ಲಿ ಹೀಗಾಗಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದ್ದರು.
https://twitter.com/sunandavashisht/status/1584532297294172160
ತರೂರ್ ವಾದಕ್ಕೆ ರಾಜಕೀಯ ಅಂಕಣಕಾರ್ತಿ ಸುನಂದ ವಸಿಷ್ಠ ಪ್ರತಿಕ್ರಿಯೆ ನೀಡಿದ್ದು ಭಾರತ 2 ಬಾರಿ ಸಿಖ್ ಪ್ರಧಾನಿಗಳನ್ನು ಕಂಡಿದೆ. ಮುಸ್ಲಿಂ ರಾಷ್ಟ್ರಪತಿಗಳನ್ನು ನೋಡಿದೆ. ಮಹಿಳೆಯರು ಈ ದೇಶದ ಪ್ರಧಾನಿ ಹಾಗೂ ರಾಷ್ಟ್ರಪತಿ ಹುದ್ದೆಗೇರಿದ್ದಾರೆ. ನಮಗೆಲ್ಲ ಅದು ಸಾಮಾನ್ಯ. ನಾವು ಬ್ರಿಟಿಷರಂತಲ್ಲ. ಸಣ್ಣ ಮನಸ್ಸಿನವರಲ್ಲ. ಹೀಗಾಗಿ ಅವರಿಗೆ ಇದು ದೊಡ್ಡದು ಎನ್ನಿಸಿರಬಹುದು. ಅನಗತ್ಯ ವಿವಾದ ಸೃಷ್ಟಿಸಬೇಡಿ ಎಂದು ಟ್ವೀಟ್ ಮಾಡಿದ್ದಾರೆ.
https://twitter.com/Tushar15_/status/1584799627140030464
ಸ್ವರಾಜ್ ಮಾರ್ಗ್ ಪತ್ರಿಕೆಯ ಸಂಪಾದಕ ತುಷಾರ್ ಗುಪ್ತ ಟ್ವೀಟ್ ಮಾಡಿ ಅಲ್ಪಸಂಖ್ಯಾತರೆಂದರೆ ಮುಸ್ಲಿಮರೇ ಏಕೆ ನೆನಪಾಗುತ್ತಾರೆ. ಜೈನರು, ಬೌದ್ಧರು, ಪಾರ್ಸಿಗಳು, ಕ್ರೈಸ್ತರು ಏಕೆ ನೆನಪಾಗಲ್ಲ. ಮತ್ತೊಮ್ಮೆ ಸಿಖ್ ಪ್ರಧಾನಿಯೇ ಏಕೆ ಬೇಡ? 272 ಸಂಸದರ ಬೆಂಬಲ ತೆಗೆದುಕೊಳ್ಳುವ ಯಾವುದೇ ವ್ಯಕ್ತಿ ಭಾರತದ ಪ್ರಧಾನಿಯಾಗಬಹುದು. ಮುಸ್ಲಿಂ ವ್ಯಕ್ತಿಯೂ ಆಗಬಹುದು. ಕಾಂಗ್ರೆಸ್ಸೇ ಏಕೆ ಮುಸ್ಲಿಂ ವ್ಯಕ್ತಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿ 2024ರ ಚುನಾವಣೆಗೆ ಹೋಗಬಾರದು? ಕಾಂಗ್ರೆಸ್‍ನವರು ಬಿಜೆಪಿಯನ್ನು ಟೀಕಿಸೋಕೆ ಮುಸ್ಲಿಂ ಅಸ್ತ್ರ ಬಳಸುತ್ತಿದ್ದಾರೆ. ಇತ್ತೀಚೆಗೆ ಅವರಿಗೂ ಅವಕಾಶವಿತ್ತು. ಮುಸ್ಲಿಂ ನಾಯಕರೊಬ್ಬರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೇರಿಸಲು ಅವಕಾಶವಿತ್ತು ಎಂದಿದ್ದಾರೆ.
https://twitter.com/MehboobaMufti/status/1584545703069888512
ಇದು ಇಷ್ಟಕ್ಕೇ ನಿಂತಿಲ್ಲ. ಮೆಹಬೂಬಾ ಮುಫ್ತಿ ಅಲ್ಪಸಂಖ್ಯಾತ ಮೂಲದ ವ್ಯಕ್ತಿಯನ್ನು ಬ್ರಿಟನ್ ತನ್ನ ಪ್ರಧಾನಿಯಾಗಿ ಸ್ವೀಕರಿಸಿದ್ದರೂ, ಭಾರತವು ಇನ್ನೂ ಸಿಎಎ ಮತ್ತು ಎನ್ಆರ್ಸಿಯಂತಹ ವಿಭಜಕ ಕಾನೂನುಗಳಲ್ಲಿ ಸಿಲುಕಿಕೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಚರ್ಚೆಯಲ್ಲಿ ಹಲವು ವಾದ ವಿವಾದ ಚರ್ಚೆಗೂ ಬರುತ್ತಿವೆ. ಚರ್ಚೆ ಕಾವೇರುತ್ತಿದೆ.



