ವಿಜ್ಞಾನ ಲೇಖಕ, ಸಾಹಿತಿಯೂ ಆಗಿರುವ ರೋಹಿತ್ ಚಕ್ರತೀರ್ಥ ಅವರಿಗೀಗ ಬೆದರಿಕೆ ಕರೆ ಬರೋಕೆ ಶುರುವಾಗಿದೆ. ಇತ್ತೀಚೆಗೆ ಅಡ್ಡಂಡ ಕಾರ್ಯಪ್ಪನವರು ಬರೆದಿರುವ ಟಿಪ್ಪು ನಿಜ ಕನಸುಗಳು ನಾಟಕವನ್ನು ರೋಹಿತ್ ಚಕ್ರತೀರ್ಥ ಪಬ್ಲಿಷ್ ಮಾಡಿದ್ದರು. ರೋಹಿತ್ ಚಕ್ರತೀರ್ಥ ಅವರ ಅಯೋಧ್ಯಾ ಪ್ರಕಾಶನದ ಮೂಲಕ ಟಿಪ್ಪು ನಿಜ ಕನಸುಗಳು ನಾಟಕ ಪ್ರಕಟಗೊಂಡಿತ್ತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ 2ನೇ ಮುದ್ರಣಕ್ಕೆ ಹೋಗಿದೆ ಟಿಪ್ಪು ನಿಜ ಕನಸುಗಳು. ಇತ್ತೀಚೆಗೆ ಎಸ್.ಎಲ್.ಭೈರಪ್ಪ, ರೋಹಿತ್ ಚಕ್ರತೀರ್ಥ, ಪ್ರತಾಪ್ ಸಿಂಹ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿ ಕೃತಿಯನ್ನು ಲೋಕಾರ್ಪಣೆ ಮಾಡಿದ್ದರು. ಈಗ ರೋಹಿತ್ ಚಕ್ರತೀರ್ಥ ಅವರಿಗೆ ಬೆದರಿಕೆ ಕರೆ ಬರೋಕೆ ಶುರುವಾಗಿವೆ.
ಅಯೋಧ್ಯ ಪ್ರಕಾಶನದ ಕಚೇರಿ 9620916996 ನಂಬರ್ ಗೆ ಕರೆ ಮಾಡಿರುವ ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆ. 911205078322 ನಂಬರ್ ನಿಂದ ಕರೆ ಮಾಡಿದ್ದ ಕಿಡಿಗೇಡಿಗಳು ಸುಮಾರು 3 ನಿಮಿಷ ಮಾತನಾಡಿದ್ದಾರೆ. ಈ ಕುರಿತು ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರೋಹಿತ್ ಚಕ್ರತೀರ್ಥ ಅವರಿಗೆ ಬೆದರಿಕೆ ಕರೆಗಳು ಹೊಸದೇನೂ ಅಲ್ಲ. ಈ ಹಿಂದೆಯೂ ಹಲವು ಬಾರಿ ಬೆದರಿಕೆ ಕರೆಗಳನ್ನು ಎದುರಿಸಿದ್ದವರೇ..



