

ವಿಶ್ವೇಶ್ವರ ಜ್ಯೂತಿರ್ಲಿಂಗ (ಕಾಶಿ. ವಾರಾಣಸಿ)
ವೈದ್ಯನಾಥೇಶ್ವರ (ಸಂಥಾಲ್ ಜಿಲ್ಲೆ. ಜಾರ್ಖಂಡ್)
4ನೇ ಜ್ಯೋತಿರ್ಲಿಂಗವೇ ಈ ಮಹಾಕಾಳೇಶ್ವರ. ಉಜ್ಜಯಿನಿ (ಮಧ್ಯಪ್ರದೇಶ)
ನರ್ಮದಾ ನದಿ ತೀರದಲ್ಲಿರೋ ಓಂಕಾರೇಶ್ವರ (ಮಧ್ಯಪ್ರದೇಶ),ಸೋಮನಾಥೇಶ್ವರ (ಪ್ರಭಾಸ ಕ್ಷೇತ್ರ. ಗುಜರಾತ್), ನಾಗೇಶ್ವರ (ದ್ವಾರಕಾ, ಗುಜರಾತ್), ತ್ರ್ಯಂಬಕೇಶ್ವರ (ನಾಸಿಕ್, ಆಂಧ್ರಪ್ರದೇಶ),ಗೃಷ್ಣೇಶ್ವರ (ಮಹಾರಾಷ್ಟ್ರ, ಔರಂಗಾಬಾದ್), ಭೀಮಾಶಂಕರ (ಪುಣೆ, ಮಹಾರಾಷ್ಟ್ರ), ಮಲ್ಲಿಕಾರ್ಜುನ (ಶ್ರೀಶೈಲ, ಆಂಧ್ರಪ್ರದೇಶ) ಹಾಗೂ ರಾಮನಾಥೇಶ್ವರ (ತಮಿಳುನಾಡು) ಮಿಕ್ಕ ಜ್ಯೋತಿರ್ಲಿಂಗಗಳು. ಜ್ಯೋತಿರ್ಲಿಂಗಕ್ಕೆ ಪೂಜೆಯನ್ನು ಸಲ್ಲಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ. 12 ಜ್ಯೋತಿರ್ಲಿಂಗ ದೇವಾಲಯದಲ್ಲಿ ಉಜ್ಜಯಿನಿಯ ಮಹಾಕಾಳೇಶ್ವರದ ಕಥೆ ನೋಡೋಣ.
ಪುರಾಣ ಕಥೆ : ಉಜ್ಜಯನಿ ನಗರವನ್ನು ಅವಂತಿಕಾ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಚಂದ್ರಸೇನನೆಂಬ ಶಿವ ಭಕ್ತನ ಆಳ್ವಿಕೆಯಿತ್ತು. ಇವನಗೆ ಮಣಿಭದ್ರ ಎಂಬ ಸ್ನೇಹಿತನಿದ್ದ. ಇವನು ಚಂದ್ರಸೇನನಿಗೆ ಚಿಂತಾಮಣಿ ಎನ್ನುವ ಪವಿತ್ರ ಮಣಿಯನ್ನು ಉಡುಗೊರೆಯಾಗಿ ಕೊಟ್ಟ. ಈ ಮಣಿ ಎಷ್ಟು ಶಕ್ತಿಶಾಲಿಯಾಗಿತ್ತೆಂದರೆ ಈ ಮಣಿ ಧರಿಸಿದ ನಂತರ ಆತನ ಅರಮನೆ, ರಾಜ್ಯ ಹೊಳೆಯತೊಡಗಿತು. ಖ್ಯಾತಿಯೂ ಹೆಚ್ಚಿತ್ತು. ಸುಭಿಕ್ಷೆ ವ್ಯಾಪಿಸಿತು. ಇದು ಶತ್ರುಗಳ ಕಣ್ಣು ಕುಕ್ಕಿತು.
ಚಿಂತಾಮಣಿಯನ್ನು ಪಡೆದುಕೊಳ್ಳಲು ಹಲವರು ಯತ್ನಿಸಿದರಾದರೂ ಸೋತರು. ಬೇಡಿದರು. ಆದರೆ ಚಂದ್ರಸೇನ ಕೊಡಲಿಲ್ಲ. ಯುದ್ಧಕ್ಕೆ ನಿಂತರು. ಆಗ ಚಂದ್ರಸೇನ ಬೇಸರದಿಂದ ಭಗವಾನ್ ಮಹಾಕಾಳನ ಆಶ್ರಯದಲ್ಲಿ ಧ್ಯಾನ ಆರಂಭಿಸಿದ.
ರಾಜ ಚಂದ್ರಸೇನನು ಧ್ಯಾನದಲ್ಲಿದ್ದಾಗ ಗೋಪಿ ಎಂಬ ವಿಧವೆ ತನ್ನ 5 ವರ್ಷದ ಪುಟ್ಟ ಕಂದನನ್ನು ಕರೆದುಕೊಂಡು ದರ್ಶನಕ್ಕೆಂದು ಬಂದಳು. ಆ ಬಾಲಕ ಧ್ಯಾನದಲ್ಲಿದ್ದ ಚಂದ್ರಸೇನನನ್ನು ಕಂಡು ಪ್ರಭಾವಿತಗೊಂಡ. ಅಲ್ಲಿಯೇ ಒಂದು ಪುಟ್ಟ ಕಲ್ಲು ತೆಗೆದುಕೊಂಡು ಅದನ್ನೇ ಶಿವಲಿಂಗ ಎಂದು ಪೂಜಿಸೋಕೆ ಪ್ರಾರಂಭ ಮಾಡಿದ. ತಾಯಿ ಕರೆದರೂ ಕೇಳದಷ್ಟುಪೂಜೆಯಲ್ಲಿ ಮಗ್ನನಾಗಿದ್ದ ಮಗನನ್ನು ಕಂಡು ತಾಯಿ ಗೋಪಿ ಕೋಪಗೊಂಡಳು. ಪೂಜೆಯ ವಸ್ತುಗಳನ್ನೆಲ್ಲ ಹೊರಕ್ಕೆಸೆದಳು. ಧ್ಯಾನ ಬಿಟ್ಟು ಎದ್ದ ಬಾಲಕ ದುಃಖದಲ್ಲಿರುವಾಗ ಅಲ್ಲಿಯೇ ಶಿವನ ಕೃಪೆಯಿಂದ ದೇಗುಲವೊಂದು ನಿರ್ಮಾಣವಾಯಿತು.
ದೇವಾಲಯದ ಮಧ್ಯಭಾಗದಲ್ಲಿ ದೈವಿಕ ಶಕ್ತಿಯ ಶಿವಲಿಂಗವೊಂದು ಉದ್ಭವವಾಯಿತು. ಮಗು ಲಿಂಗವನ್ನು ನೋಡುತ್ತಿದ್ದಂತೆ ಮತ್ತೆ ಅದನ್ನು ಪೂಜಿಸಲು ಆರಂಭಿಸಿತು. ಇದೆಲ್ಲವನ್ನು ಕಂಡು ತಾಯಿ ಗೋಪಿ ಆಶ್ಚರ್ಯಚಕಿತಳಾದಳು
ರಾಜ ಚಂದ್ರಸೇನನು ಈ ಘಟನೆಯ ಬಗ್ಗೆ ತಿಳಿದುಕೊಂಡ. ಆ ಶಿವಭಕ್ತ ಮಗುವನ್ನು ನೋಡಲು ಹೋದ. ರಾಜ ಚಂದ್ರಸೇನನ ಜೊತೆ ಇತರ ರಾಜರು ಕೂಡ ಮಗುವನ್ನು ನೋಡಲು ಬಂದರು. ರಾಜನ ಕ್ಷಮೆ ಕೇಳಿದರು. ನಂತರ ರಾಜಚಂದ್ರಸೇನನ ಜೊತೆ ಅವರೂ ಆ ಶಿವಲಿಂಗಕ್ಕೆ ಪೂಜಿಸಲು ಶುರು ಮಾಡಿದರು.
ಸಿದ್ಧರಾದರು. ಎಲ್ಲಾ ರಾಜರು ಚಂದ್ರಸೇನನ ಬಳಿ ಕ್ಷಮೆಯನ್ನು ಯಾಚಿಸಿದರು ಹಾಗೂ ಎಲ್ಲಾ ರಾಜರು ಸೇರಿಕೊಂಡು ಮಹಾಕಾಳನನ್ನು ಪೂಜಿಸಲು ಆರಂಭಿಸಿದರು.
ಕವಿರತ್ನ ಕಾಳಿದಾಸನ ಮೇಘದೂತದಲ್ಲಿ ಇಲ್ಲಿ ನಡೆಯುವ ಪೂಜೆ, ಆಚರಣೆಗಳ ಪ್ರಸ್ತಾಪವಿದೆ. ನಾದ ಆರಾಧನೆ ನಡೆಯುತ್ತಿತ್ತಂತೆ.


ಇಲ್ಇಲ ಪ್ರತಿದಿನ ಬೆಳಗ್ಗೆ 4 ಗಂಟೆಗೆ ಭಸ್ಮಾರತಿ ಪೂಜೆ ಮಾಡುತ್ತಾರೆ. ಏಕೈಕ ಜ್ಯೋತಿರ್ಲಿಂಗ ಮಹಾಕಾಳೇಶ್ವರ. ಇಲ್ಲಿನ ಶಿವಲಿಂಗಕ್ಕೆ ಹಸುವಿನ ಸಗಣಿಯಿಂದ ತಯಾರಿಸಿದ ಬೆರಣಿಯನ್ನು ಸುಟ್ಟು ಅದರ ಭಸ್ಮವನ್ನು ಆರತಿ ಬೆಳಗುವ ಮಾಡುವಾಗ ಅರ್ಪಿಸುತ್ತಾರೆ. ನೈವೇದ್ಯ ಆರತಿ, ಅಭ್ಯಂಗ ಶೃಂಗಾರ, ಸಂಜೆ ಆರತಿ, ರಾತ್ರಿ ಆರತಿಯನ್ನು ಕೂಡ ಮಾಡಲಾಗುತ್ತದೆ. ರಾತ್ರಿ ಆರತಿ ಮಾಡಿದ ನಂತರ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ. ಉಜ್ಜಯನಿ ನಗರದ ವೈಭವದ ಬಗ್ಗೆ ಪುರಾಣಗಳಲ್ಲಿ ಮತ್ತು ಮಹಾಭಾರತದಲ್ಲೂ ಉಲ್ಲೇಖಿಸಲಾಗಿದೆ. ಶ್ರೀಕೃಷ್ಣ ಮತ್ತು ಆತನ ಸಹೋದರ ಬಲರಾಮರು ಇಲ್ಲಿನ ಸಂದೀಪನಿ ಆಶ್ರಮದಲ್ಲಿ ಅಧ್ಯಯನ ಮಾಡಿದರು ಎನ್ನುವುದು ನಂಬಿಕೆ.
ಕುಂಭಮೇಳ : ಗುರು ಸಿಂಹ ರಾಶಿಯನ್ನು ಪ್ರವೇಶಿಸಿದಾಗ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಇಲ್ಲಿ ಪ್ರಸಿದ್ಧ ಕುಂಭಮೇಳವನ್ನು ಹಮ್ಮಿಕೊಳ್ಳಲಾಗುತ್ತದೆ. ಇದನ್ನು ಸಿಂಹಸ್ಥಮೇಳವೆಂದೂ ಕರೆಯಲಾಗುತ್ತದೆ. ಸಲೀಲ ಕ್ಷಿಪ್ರ ನದಿ ಕೂಡ ಇದೇ ಸ್ಥಳದಲ್ಲಿದೆ. ಈ ನದಿಯನ್ನು ಗಂಗೆಯಷ್ಟೇ ಪವಿತ್ರ ನದಿಯೆಂದು ಹೇಳಲಾಗುತ್ತದೆ. ಉಜ್ಜಯನಿ ಮಹಾಕಾಳೇಶ್ವರ ದೇವಾಲಯವನ್ನು ನಾವು ವರ್ಷದ ಯಾವ ದಿನ ಬೇಕಾದರೂ ಭೇಟಿ ನೀಡಬಹುದು. ಇಲ್ಲಿ ಎಲ್ಲಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಇಲ್ಲಿ ಇರುವ ಶಿವಲಿಂಗವು ಉದ್ಭವ ಲಿಂಗವಾಗಿದೆ.



